Extra Marital Affairs : ಲವ್ವರ್ ಪತ್ನಿಗೆ ಗೊತ್ತಾಗಿದೆ ಅನೈತಿಕ ಸಂಬಂಧ.. ಮುಂದೇನ್ ಮಾಡ್ಲಿ..?
ಪ್ರೀತಿ ಹೇಳಿ ಕೇಳಿ ಬರುವಂತಹದ್ದಲ್ಲ ನಿಜ. ಆದ್ರೆ ಪ್ರೀತಿಗೆ ಬೀಳುವ ಮೊದಲು ಸ್ವಲ್ಪ ಆಲೋಚನೆ ಮಾಡ್ಬೇಕು. ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯವಿರುತ್ತದೆ. ಇಲ್ಲವೆಂದ್ರೆ ಪ್ರೀತಿ ಹೆಸರಲ್ಲಿ ಜೀವನ ಹಾಳಾಗುತ್ತದೆ.
ವಿವಾಹಿತ (Married) ವ್ಯಕ್ತಿ ಜೊತೆ ಸಂಬಂಧ (Relationship) ಬೆಳೆಸುವುದು ಅಪರಾಧವೇ ಸರಿ. ಯಾಕೆಂದ್ರೆ ಈ ಸಂಬಂಧಕ್ಕೆ ಯಾವುದೇ ಭವಿಷ್ಯ (Future) ವಿಲ್ಲ. ಮುಂದಿನ ದಿನಗಳ ಬಗ್ಗೆ ಊಹಿಸಲು ಸಾಧ್ಯವಿಲ್ಲ. ಹಾಗಿರುವಾಗ ಅಂತವರ ಪ್ರೀತಿ (Love) ಗೆ ಬಿದ್ದು, ಜೀವನ ಹಾಳುಮಾಡಿಕೊಳ್ಳುವ ಬದಲು ಸಂಬಂಧದಿಂದ ಹೊರಗೆ ಬರುವುದು ಬುದ್ಧಿವಂತರ (Clever) ಲಕ್ಷಣ. ದಂಪತಿ ಮಧ್ಯೆ ಇನ್ನೊಬ್ಬರು ಬಂದಾಗ ಅದನ್ನು ಸ್ವೀಕರಿಸೋದು ಸುಲಭವಲ್ಲ. ಬೇರೆ ಹುಡುಗಿ ಜೊತೆ ಪತಿಯ ಅಕ್ರಮ ಸಂಬಂಧವಿದೆ ಎಂಬುದು ತಿಳಿದಾಗ ಯಾವುದೇ ಮಹಿಳೆ ಉಗ್ರರೂಪ ತಾಳ್ತಾಳೆ. ಪ್ರೇಮಿಯ ಪತ್ನಿಯಿಂದ ಧಮಕಿ ಬರ್ತಿದೆ ಎಂಬ ಕಾರಣಕ್ಕೆ ಇಲ್ಲೊಬ್ಬ ಹುಡುಗಿ ಚಿಂತಿತಳಾಗಿದ್ದಾಳೆ.
ಆಕೆಗೆ ಇನ್ನೂ ಮದುವೆಯಾಗಿಲ್ಲ. ಆದ್ರೆ ವಿವಾಹಿತ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಾಳೆ. ಇಬ್ಬರ ಮಧ್ಯೆ ಎಲ್ಲವೂ ಸರಿ ಇತ್ತು. ಕೆಲ ದಿನಗಳ ಹಿಂದೆ ಪರಿಸ್ಥಿತಿ ಬಿಗಡಾಯಿಸಿದೆ. ಪ್ರೇಮಿಗೆ ಕೊರೊನಾ ಆಗಿ ಆಸ್ಪತ್ರೆ ಸೇರಿದ್ದನಂತೆ. ಪ್ರಿಯತಮೆಗೆ ಈ ವಿಷ್ಯ ಗೊತ್ತಿರಲಿಲ್ಲ. ಎಂದಿನಂತೆ ಪ್ರೇಮಿಗೆ ಪ್ರೇಮ ಸಂದೇಶ ರವಾನೆ ಮಾಡಿದ್ದಾಳೆ. ಎರಡು ದಿನ ಯಾವುದಕ್ಕೂ ಉತ್ತರ ಬರಲಿಲ್ಲ. ಮೂರನೇ ದಿನದ ನಂತ್ರ ಉತ್ತರ ಬರಲು ಶುರುವಾಗಿತ್ತು. ಆದ್ರೆ ಐದಾರು ದಿನದ ನಂತ್ರ ಕರೆ ಬಂದಿದೆ. ಫೋನ್ ರಿಸೀವ್ ಮಾಡ್ತಿದ್ದಂತೆ ಪ್ರೇಮಿಯ ಪತ್ನಿ ಬೈಗುಳ ಶುರು ಮಾಡಿದ್ದಾಳೆ. ಧಮಕಿ ಹಾಕಿದ್ದಾಳೆ. ಇಷ್ಟು ದಿನ ಉತ್ತರ ನೀಡ್ತಿದ್ದಿದ್ದು ಪ್ರೇಮಿಯಲ್ಲ ಆತನ ಪತ್ನಿ ಎಂಬುದು ಆಕೆಗೆ ಗೊತ್ತಾಗಿದೆ. ಮುಂದೇನು ಮಾಡ್ಬೇಕೆಂದು ತಜ್ಞರನ್ನು ಕೇಳಿದ್ದಾಳೆ.
ಇದನ್ನೂ ಓದಿ: Surprise Gift: ಹೆಂಡ್ತೀನ ಖುಷಿ ಪಡಿಸಬೇಕಂತ ಈ ತಪ್ಪೆಲ್ಲಾ ಮಾಡ್ಲೇಬೇಡಿ!
ತಜ್ಞರ ಸಲಹೆ : ಮದುವೆ ಜನುಮಾಂತರದ ಸಂಬಂಧ ಎನ್ನುತ್ತಾರೆ. ಮದುವೆ ಬರೀ ಪ್ರೀತಿ ಮೇಲಲ್ಲ ವಿಶ್ವಾಸದ ಮೇಲೆ ನಿಂತಿರುತ್ತದೆ. ಯಾವುದೇ ವ್ಯಕ್ತಿ ಮೋಸ ಮಾಡಿದ್ರೂ ಸಹಿಸಿಕೊಳ್ಳುವುದು ಕಷ್ಟ. ದಾಂಪತ್ಯವನ್ನು ಸರಿದಾರಿಗೆ ತರಲು ಆಕೆ ಸಾಕಷ್ಟು ಪ್ರಯತ್ನ ಪಟ್ಟಿರುತ್ತಾಳೆ. ಆದ್ರೆ ಪತಿ ತನಗೆ ಮೋಸ ಮಾಡಿ ಬೇರೆಯವರ ಜೊತೆ ಸಂಬಂಧ ಬೆಳೆಸಿದ್ದಾನೆ ಎಂಬುದು ಗೊತ್ತಾದ್ರೆ ಆಕೆಗೆ ಆಘಾತವಾಗುವುದು ಸಹಜ. ನೋವು, ದುಃಖ ಸಾಮಾನ್ಯ. ಆಕೆ ಜಾಗದಲ್ಲಿ ನಿಂತಿ ನೋಡಿದ್ರೆ ನಿಮಗೆ ಪರಿಸ್ಥಿತಿ ಅರಿವಿಗೆ ಬರುತ್ತದೆ ಎನ್ನುತ್ತಾರೆ ತಜ್ಞರು.
ಒಮ್ಮೆ ಸಂಗಾತಿಯಿಂದ ಮೋಸ ಹೋದವರು ಮತ್ತೆ ಅವರನ್ನು ನಂಬುವುದು ಕಷ್ಟ. ಪ್ರೇಮಿಯ ಪತ್ನಿಗೆ ನಮ್ಮಿಬ್ಬರ ವಿಷ್ಯ ತಿಳಿದ್ರೆ ಏನಾಗುತ್ತೆ ಎಂಬುದನ್ನು ಸಂಬಂಧ ಬೆಳೆಸುವ ಮೊದಲೇ ನೀವು ಆಲೋಚನೆ ಮಾಡ್ಬೇಕಿತ್ತು ಎನ್ನುತ್ತಾರೆ ತಜ್ಞರು.
ಸಂಬಂಧದಿಂದ ದೂರವಿರಿ : ದಂಪತಿ ಮಧ್ಯೆ ಪ್ರವೇಶ ಮಾಡಿ ಅವರಿಬ್ಬರ ಪ್ರೀತಿಗೆ ಈಗಾಗಲೇ ಅಡ್ಡಿಯಾಗಿದ್ದೀರಿ. ಇನ್ಮುಂದೆ ಈ ಸಂಬಂಧದಿಂದ ದೂರವಿರುವುದು ಒಳ್ಳೆಯದು. ನಿಮಗಾಗಿ ತನ್ನ ಪತ್ನಿಗೆ ಮೋಸ ಮಾಡಿದ ವ್ಯಕ್ತಿ, ಬೇರೆ ಹುಡುಗಿಗಾಗಿ ನಿಮಗೆ ಮೋಸ ಮಾಡಲಾರ ಎಂಬುದಕ್ಕೆ ಯಾವ ಗ್ಯಾರಂಟಿಯಿದೆ ಎಂದು ತಜ್ಞರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Wedding Tips: ಮದುವೆಗೂ ಮುನ್ನವೇ ಸಂಗಾತಿಗಿದ್ಯಾ ಈ ಅಭ್ಯಾಸ ಗಮನಿಸಿ!
ನಿಮ್ಮನ್ನು ನೀವು ಸಂಭಾಳಿಸಿಕೊಳ್ಳಿ : ಅವರನ್ನು ಮರೆಯುವುದು ಸುಲಭವಲ್ಲ ನಿಜ. ಆದ್ರೆ ಈ ಸಂಬಂಧಕ್ಕೆ ಭವಿಷ್ಯವಿಲ್ಲ. ಹಾಗಾಗಿ ಈ ಸಂಬಂಧದಿಂದ ಸಂಪೂರ್ಣವಾಗಿ ಹೊರಗೆ ಬನ್ನಿ ಎನ್ನುತ್ತಾರೆ ತಜ್ಞರು. ಒಂದು ವೇಳೆ ಸಂಬಂಧ ಮುಂದುವರೆಸುತ್ತೇನೆಂಬ ಹುಂಬು ಧೈರ್ಯ ಮಾಡಿದ್ರೆ ಮುಂದಿನ ಜೀವನದ ಬಗ್ಗೆ ಆಲೋಚನೆ ಮಾಡಿ. ನಿಮಗಾಗಿ ಪ್ರೇಮಿ ತನ್ನ ಪತ್ನಿ, ಮಕ್ಕಳನ್ನು ಬಿಟ್ಟು ಬರ್ತಾನಾ ಎಂಬುದನ್ನು ನೋಡಿ. ಹಾಗೆಯೇ ನಿಮ್ಮ ಮನೆ, ಪಾಲಕರ ಬಗ್ಗೆಯೂ ಆಲೋಚನೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗ್ತಿಲ್ಲವೆಂದ್ರೆ ಆಪ್ತರ ಅಥವಾ ಕೌನ್ಸಿಲರ್ ಸಲಹೆ ಪಡೆಯಿರಿ ಎಂದಿದ್ದಾರೆ ತಜ್ಞರು.