Asianet Suvarna News Asianet Suvarna News

Watch: ಟಿವಿ ಲೈವ್‌ನಲ್ಲೇ ನಟ ರಾಜ್‌ ತರುಣ್‌ ಸ್ನೇಹಿತನಿಗೆ ಚಪ್ಪಲಿಯಲ್ಲಿ ಹೊಡೆದ ನಟಿ ಲಾವಣ್ಯ!

ಟಾಲಿವುಡ್‌ ನಟಿ ಲಾವಣ್ಯ ಹಾಗೂ ಮಾಜಿ ಗೆಳೆಯ ಹಾಗೂ ನಟ ರಾಜ್‌ ತರುಣ್‌ ನಡುವಿನ ಗಲಾಟೆ ಬೀದಿರಂಪವಾಗಿದೆ. ಇತ್ತೀಚೆಗೆ ಟಿವಿ ಲೈವ್‌ ಶೋನಲ್ಲಿ ರಾಜ್‌ ತರುಣ್‌ ಸ್ನೇಹಿತನ ಮೇಲೆಯೇ ಲಾವಣ್ಯ ಚಪ್ಪಲಿ ಎಸೆದಿದ್ದಾಳೆ.

On Live TV Tollywood Actress Lavanya Throws Sandal At ExBoyfriend Actor Raj Tarun Friend san
Author
First Published Aug 2, 2024, 9:53 PM IST | Last Updated Aug 2, 2024, 9:53 PM IST

ಹೈದರಾಬಾದ್‌ (ಆ.2): ಟಾಲಿವುಡ್‌ ನಟ ರಾಜ್‌ ತರುಣ್‌ ಹಾಗೂ ನಟಿ ಲಾವಣ್ಯ ನಡುವಿನ ಭಿನ್ನಾಭಿಪ್ರಾಯವೀಗ ವಿಕೋಪಕ್ಕೆ ತಿರುಗಿದೆ. ಹೆಚ್ಚೂ ಕಡಿಮೆ ಇದು ಗುರುವಾರ ಬೀದಿರಂಪವಾಗಿದೆ. ರಾಜ್‌ ತರುಣ್‌ ಅವರ ಮಾಜಿ ಗೆಳತಿ ಆಗಿರುವ ಲಾವಣ್ಯ ಇತ್ತೀಚೆಗೆ ನಟ ನನಗೆ ಮೋಸ ಮಾಡಿದ್ದಾನೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಗುರುವಾರ ಖಾಸಗಿ ಟಿವಿಯ ಸಂದರ್ಶನದಲ್ಲಿ ಆಕೆ ಭಾಗಿಯಾಗಿದ್ದರು. ಇಲ್ಲಿ ರಾಜ್‌ ತರುಣ್‌ ಪರವಾಗಿ ಮಾತನಾಡಲು ಅವರ ಸ್ನೇಹಿತ ಶೇಖರ್‌ ಬಾಷಾ ಬಂದಿದ್ದರು. ಲೈವ್‌ ಡಿಬೇಟ್‌ನಲ್ಲಿ ವಾದ ವಿವಾದ ಯಾವ ಮಟ್ಟಕ್ಕೆ ಹೋಗಿತ್ತೆಂದರೆ, ಒಂದು ಹಂತದಲ್ಲಿ ಶೇಖರ್‌ ಬಾಷಾ ಮಾತಿಗೆ ಸಿಟ್ಟಾದ ಲಾವಣ್ಯಾ ಆನ್‌ ಕ್ಯಾಮೆರಾದಲ್ಲಿಯೇ ಶೇಖ್‌ ಪಾಶಾಗೆ ಕಾಲಲ್ಲಿದ್ದ ಚಪ್ಪಲಿ ತೆಗೆದು ಹೊಡೆದಿದ್ದರು. ಈ  ವಿಡಿಯೋವಿಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಝೀ ತೆಲುಗು ನ್ಯೂಸ್‌ನಲ್ಲಿ ನಡೆದ ಆಕ್ರೋಶದ ಡಿಬೇಟ್‌ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ, ಕಳೆದೆರಡು ವಾರಗಳಿಂದ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ತರುಣ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಬಾಷಾ ಅವರನ್ನು ಲಾವಣ್ಯ ಅವರ ಪ್ರತಿ ಮಾತಿಗೂ ಉತ್ತರ ನೀಡುತ್ತಿದ್ದರು.

ವಿಡಿಯೋದಲ್ಲಿ ಬಾಷಾ ಟಿವಿ ನಿರೂಪಕನ ಜತೆ ಮಾತನಾಡುತ್ತಿರುವಾಗಲೇ, ಲಾವಣ್ಯ ತನ್ನ ಕಾಲಿನಲ್ಲಿರುವ ಚಪ್ಪಲಿಯನ್ನು ತೆಗೆಯುತ್ತಿರುವುದು ಗೊತ್ತಾಗಿದೆ. ನೋಡ ನೋಡುತ್ತಿದ್ದಂತೆ, ಲಾವಣ್ಯ ಚಪ್ಪಲಿಯನ್ನು ಆತನ ಮೇಲೆ ಎಸೆದಿದ್ದಾರೆ. ಈ ವೇಳೆ ಚರ್ಚೆಗೆ ಬಂದಿದ್ದ ಮೂರನೇ ವ್ಯಕ್ತಿ ಶಾಕ್‌ ಆಗಿದ್ದಾರೆ. ಚಪ್ಪಲಿ ಎಸೆದ ಬೆನ್ನಲ್ಲಿಯೇ ತನ್ನ ಕುರ್ಚಿಯಿಂದ ಮೇಲೆದ್ದ ಬಾಷಾ, ಮತ್ತೊಮ್ಮೆ ಚಪ್ಪಲಿಯಲ್ಲಿ ಹೊಡೆಯುವಂತೆ ಲಾವಣ್ಯಗೆ ಸವಾಲ್‌ ಎಸೆದಿದ್ದಾರೆ. ಲೈವ್ ಟೆಲಿವಿಷನ್‌ನಲ್ಲಿ ನಡೆದ ವಾಗ್ವಾದವು ನಂತರ ವೈರಲ್ ಆಗಿದೆ.

ನಟಿ ಮಾಳವಿ ಮಲ್ಹೋತ್ರಾಗಾಗಿ ರಾಜ್‌ ತರುಣ್‌ ತನ್ನನ್ನು ತೊರೆದಿದ್ದಾನೆ ಎಂದು ನಟಿ ಲಾವಣ್ಯ ದೂರಿದ್ದಾರೆ. ಆದರೆ ರಾಜ್‌ ತರುಣ್‌ ಕಡೆಯ ವಾದವೇನೆಂದರೆ, ಲಾವಣ್ಯ ಅತಿಯಾಗಿ ಮಾದಕ ದ್ರವ್ಯ ಸೇವನೆ ಮಾಡುತ್ತಾರೆ. ಇದರಿಂದ ಅನೇಕ ಬಾರಿ ಕಾನೂನಿನ ಸಮಸ್ಯೆಗೂ ಒಳಗಾಗಿದ್ದಾರೆ. ಆ ಕಾರಣದಿಂದ ಆಕೆಯಿಂದ ದೂರವಾಗಿದ್ದಾಗಿ ತಿಳಿಸಿದ್ದಾರೆ. ರಾಜ್‌ ತರುಣ್‌ ಸ್ನೇಹಿತನ ಈ ಮಾತಿನಿಂದ ಸಿಟ್ಟಾದಂತೆ ಲಾವಣ್ಯ ಕಂಡಿದ್ದರು. ಲಾವಣ್ಯ ಯುವಕರಲ್ಲಿ ಮಾದಕ ವಸ್ತು ಸೇವನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಬಾಷಾ ಆರೋಪ ಮಾಡಿದಾಗ, ಲಾವಣ್ಯ ಸಿಟ್ಟು ನೆತ್ತಿಗೇರಿದೆ. ತಕ್ಷಣವೇ ಕಾಲಲ್ಲಿದ್ದ ಚಪ್ಪಲಿಗೆ ಕೈಗೆ ಬಂದಿದ್ದು ಮಾತ್ರವಲ್ಲ, ಸೀದಾ ಶೇಖರ್‌ ಬಾಷಾನತ್ತ ಎಸೆದಿದ್ದಾರೆ.

ನೇರಪ್ರಸಾರದಲ್ಲಿಯೇ ನಡೆದ ಈ ಘಟನೆಯ ಬಳಿಕ ಸನ್ನಿವೇಶ ಮತ್ತಷ್ಟು ಹೀಟ್‌ಅಪ್‌ ಆಗಿತ್ತು. ತರುಣ್ ಅವರನ್ನು ಸಮರ್ಥಿಸಿಕೊಳ್ಳಲು ಚರ್ಚೆಗಳು ಮತ್ತು ಸಂದರ್ಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಬಾಷಾ, ಲಾವಣ್ಯ ಅವರ ಹೇಳಿಕೆಗಳನ್ನು ಎದುರಿಸಲು ಈ ಹಿಂದೆ ಕರೆ ದಾಖಲೆಗಳು ಮತ್ತು ಸಂದೇಶಗಳನ್ನು ಪ್ರದರ್ಶಿಸಿದ್ದರು. ಇನ್ನೊಂದಡೆ ಈ ವಿಚಾರದಲ್ಲಿ ಮಾಧ್ಯಮಗಳ ಎದುರು ಮಾತನಾಡಲು ನಿರಾಕರಿಸಿರುವ ರಾಜ್‌ ತರುಣ್‌, ಆಕೆ ಮಾದಕವಸ್ತು ಸೇವನೆ ಮಾಡುತ್ತಾಳೆ. ಅದಲ್ಲದೆ, ಮಸ್ತಾನ್‌ ಸಾಯಿ ಎನ್ನುವ ವ್ಯಕ್ತಿಯೊಂದಿಗೆ ಆಕೆಗೆ ಕಾನೂನು ತೊಡಕುಗಳಿವೆ ಎನ್ನುವ ಮಾಹಿತಿ ನೀಡಿ ಸುಮ್ಮನಾಗಿದ್ದಾರೆ. ಈ ವಿಚಾರದಲ್ಲಿ ಮಾಧ್ಯಮಗಳ ಎದುರು ಮಾತನಾಡಲು ನಿರಾಕರಿಸಿರುವ ರಾಜ್‌ ತರುಣ್‌, ಕಾನೂನಿನ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಗರ್ಲ್‌ಫ್ರೆಂಡ್‌ ಜೊತೆ ಚಕ್ಕಂದವಾಡಿ ಎಸ್ಕೇಪ್‌ ಆದ ಪ್ರಖ್ಯಾತ ನಟ, ದೂರು ದಾಖಲಿಸಿದ ಪ್ರೇಯಸಿ!

ಈ ವಿವಾದ ಟಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದ್ದು, ಲಾವಣ್ಯ ಅವರ ಆರೋಪಗಳು ಮತ್ತು ನಂತರದ ಸಾರ್ವಜನಿಕ ಆಕ್ರೋಶಗಳು ಬೆಂಕಿಗೆ ತುಪ್ಪ ಸುರಿಯುತ್ತಿವೆ. ಮಾಳವಿ ಮಲ್ಹೋತ್ರಾ ಒಳಗೊಂಡ ತರುಣ್ ಅವರ ಚಲನಚಿತ್ರ "ತಿರಗಬ್ಯಾಡರ ಸಾಮಿ" ಮುಂಬರುವ ಬಿಡುಗಡೆಯು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.

ಹಿಟ್ ಆ್ಯಂಡ್ ರನ್ ಮಾಡಲು ಹೋಗಿ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ನಟ!

 

Latest Videos
Follow Us:
Download App:
  • android
  • ios