ಹೀಗೆಲ್ಲಾ ಮಾಡಿದ್ರೆ ಹೇಗೆ ಸಾರ್..ಮೊದಲ ಪತ್ನಿ ಇರುವಾಗ್ಲೇ ಶಾಲೆಯಲ್ಲೇ ಶಿಕ್ಷಕನ ಮರುಮದುವೆ!
ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಬೇಕಾದವರು ಶಿಕ್ಷಕರು. ಆದ್ರೆ ಇಲ್ಲೊಂದೆಡೆ ಮಕ್ಕಳನ್ನು ಸರಿಯಾದ ದಾರಿಗೆ ತರಬೇಕಾದ ಶಿಕ್ಷಕನೇ ತಪ್ಪು ದಾರಿ ಹಿಡಿದಿದ್ದಾನೆ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುಕೊಳ್ಳುವ ಮುನ್ನವೇ ಶಾಲೆಯಲ್ಲೇ ಮತ್ತೊಬ್ಬಳನ್ನು ಮದುವೆಯಾಗಿದ್ದಾನೆ.
ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುಕೊಳ್ಳುವ ಮುನ್ನವೇ ಶಿಕ್ಷಕನೊಬ್ಬ ಶಾಲೆಯಲ್ಲೇ ಮತ್ತೊಬ್ಬಳನ್ನು ಮರು ಮದುವೆಯಾದ ಘಟನೆ ಒಡಿಶಾದಲ್ಲಿ ನಡ್ದಿದೆ. ಫೋಟೋ ವೈರಲ್ ಆದ ನಂತರ ಮೊದಲ ಪತ್ನಿ ಎಫ್‌ಐಆರ್ ದಾಖಲಿಸಿದ್ದಾರೆ. ವಿಲಕ್ಷಣ ಘಟನೆಯೊಂದರಲ್ಲಿ, ಕಂಧಮಾಲ್ ಜಿಲ್ಲೆಯ ದರಿಗಿನಿಬಾಡಿ ಬ್ಲಾಕ್‌ನ ಸುಜಾಮಾಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಮೊದಲ ಹೆಂಡತಿಯೊಂದಿಗೆ ವಿಚ್ಛೇದನದ ಪ್ರಕರಣ ಬಾಕಿ ಇರುವಾಗಲೇ ಎರಡನೇ ಬಾರಿಗೆ ವಿವಾಹವಾದರು. ಶಾಲೆಯ ಆವರಣದಲ್ಲಿ ನಡೆದ ವಿವಾಹದ ಫೋಟೋಸ್ ಇಂಟರ್‌ನೆಟ್‌ನಲ್ಲಿ ಹರಿದಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಶಾಲೆಯ ಆವರಣದಲ್ಲೇ ಎರಡನೇ ಬಾರಿಗೆ ವಿವಾಹವಾದ ಶಿಕ್ಷಕ
ವ್ಯಕ್ತಿಯನ್ನು ಪ್ರಭಾರಿ ಮುಖ್ಯೋಪಾಧ್ಯಾಯ ಶ್ರೀಪತಿ ನಾಯಕ್ ಎಂದು ಗುರುತಿಸಲಾಗಿದೆ, ಮತ್ತೊಬ್ಬ ಮಹಿಳೆ (Women) 'ವರ್ಮಲಾ' ಜೊತೆಗೆ ಇತರ ಶಿಕ್ಷಕರ (Teacher) ಸಮ್ಮುಖದಲ್ಲಿ ಶಾಲೆಯ ಸ್ಟೋರ್ ರೂಂನಲ್ಲಿ ಕೇಕ್ ಕತ್ತರಿಸುತ್ತಿರುವುದನ್ನು ಕಾಣಬಹುದು. ಈ ಮಧ್ಯೆ ನಾಯಕ್ ಅವರ ಮೊದಲ ಪತ್ನಿ ನಿರುಪಮಾ ಡಾಕುವಾ ಅವರು ಈ ಬಗ್ಗೆ ಬಾಲಿಗುಡಾ ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ ಮತ್ತು ವಿಚ್ಛೇದನ ಪ್ರಕರಣವು (Divorce) ಇನ್ನೂ ನ್ಯಾಯಾಂಗದಲ್ಲಿರುವಾಗ ಶಿಕ್ಷಕಿ ಶಾಲೆಯ ಆವರಣದಲ್ಲಿ ಮರುಮದುವೆಯಾಗುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಮೂಲಗಳ ಪ್ರಕಾರ, ನಾಯಕ್ 2003 ರಲ್ಲಿ ನಿರುಪಮಾ ಅವರನ್ನು ವಿವಾಹ (Marriage)ವಾದರು ಮತ್ತು ಅವರಿಗೆ 12 ವರ್ಷದ ಮಗಳಿದ್ದಾಳೆ.
25 ವರ್ಷದಿಂದ ಒಂಟಿಯಾಗಿದ್ದ ತಾಯಿಗೆ 2ನೇ ಮದುವೆ ಮಾಡಿದ ಮಗಳು !
ಮೊದಲ ಪತ್ನಿಯಿಂದ ಪೊಲೀಸ್ ಠಾಣೆಯಲ್ಲಿ ದೂರು
'ಸುಜಾಮಾಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀಪತಿ ನಾಯಕ್ ನನ್ನ ಪತಿ (Husband). ಕಳೆದ ಏಳು ವರ್ಷಗಳಿಂದ ಆತ ನನಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು ಮತ್ತು ನಂತರ ಅದನ್ನು ಹಿಂತೆಗೆದುಕೊಂಡರು' ಎಂದು ನಿರುಪಮಾ ಹೇಳಿದರು. 'ನನ್ನ ಪತಿ ಫೆಬ್ರವರಿ 6 ರಂದು ಇನ್ನೊಬ್ಬ ಮಹಿಳೆಯನ್ನು ಮರುಮದುವೆ ಮಾಡಿಕೊಂಡರು ಮತ್ತು ಶಾಲೆಯ ಸ್ಟೋರ್ ರೂಂನಲ್ಲಿ ಅವಳೊಂದಿಗೆ ವಾಸಿಸುತ್ತಿದ್ದರು' ಎಂದು ನಿರುಪಮಾ ಆರೋಪಿಸಿದ್ದಾರೆ.
ಆದರೆ ನಾಯಕ್ ಮಾತ್ರ ಈ ಎಲ್ಲಾ ಆರೋಪವನ್ನು ತಳ್ಳಿ ಹಾಕಿದ್ದಾರೆ. ಇದು ಹುಟ್ಟುಹಬ್ಬದ ಆಚರಣೆಯ ಸಂದರ್ಭ ತೆಗೆದಿರುವ ಪೋಟೋಗಳು ಎಂದು ಸ್ಪಷ್ಟನೆ ನೀಡಿದ್ದಾರೆ. 'ಆರೋಪಗಳು ಆಧಾರರಹಿತವಾಗಿವೆ. ನಾನು ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಮತ್ತು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ವೈರಲ್ ಆಗಿರುವ ಫೋಟೋಗಳು ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ತೆಗೆದವು. ಶಾಲೆಯ ಸಮಯದ ನಂತರ ಹುಟ್ಟುಹಬ್ಬದಂದು ನಾನು ಸಿಬ್ಬಂದಿಗೆ ಊಟವನ್ನು ತರಿಸಿದ್ದೆ' ಎಂದು ನಾಯಕ್ ಹೇಳಿದರು.
ಇದೆಂಥಾ ವಿಚಿತ್ರ, ಈ ದೇಶದಲ್ಲಿ ಮಹಿಳೆಯರು ಗಂಡನನ್ನು ಎಕ್ಸ್‌ಚೇಂಜ್ ಮಾಡಿಕೊಳ್ಬೋದು!
ಗಂಡ ಹೆಂಡ್ತೀನ ಒಂದು ಮಾಡುತ್ತಂತೆ ಈ ಸ್ಲೀಪ್ ಡಿವೋರ್ಸ್!
ಮದುವೆಯ ನಂತರ ದಂಪತಿಗಳು ಹಾಸಿಗೆ ಹಂಚಿಕೊಳ್ಳುವುದು ತುಂಬಾ ಸಾಮಾನ್ಯವಾಗಿದೆ. ಇದು ಅವರ ರೋಮ್ಯಾಂಟಿಕ್ ಕ್ಷಣಗಳಲ್ಲಿ ಒಂದಾಗಿದೆ. ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಆದರೆ ಕೆಲವೊಮ್ಮೆ ಕೆಲವು ಸಂದರ್ಭಗಳಿಂದಾಗಿ ದಂಪತಿಗಳು ಪ್ರತ್ಯೇಕವಾಗಿ ಮಲಗಬೇಕಾಗುತ್ತದೆ. ನಿಮ್ಮ ಸಂಗಾತಿ ಜೋರಾಗಿ ಗೊರಕೆ ಹೊಡೆಯುತ್ತಾ ನಿದ್ರಿಸುತ್ತಿರುವಾಗ ಅಥವಾ ತುಂಬಾ ಹೊತ್ತು ಲೈಟ್ ಆನ್ ಆಗಿರುವಾಗ ಎಚ್ಚರದಿಂದಿರುವಾಗ ಇದು ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದಂಪತಿಗಳು ಪ್ರತ್ಯೇಕವಾಗಿ ಮಲಗಲು ಬಯಸುತ್ತಾರೆ. ಇದನ್ನೇ ಸ್ಲೀಪ್ ಡಿವೋರ್ಸ್ ಎನ್ನುತ್ತಾರೆ.
ದಂಪತಿಗಳು ಪ್ರತ್ಯೇಕವಾಗಿ ಮಲಗಿದರೆ, ಅದನ್ನು ನಿದ್ರೆ ವಿಚ್ಛೇದನ (Sleep divorce) ಎಂದು ಕರೆಯಲಾಗುತ್ತದೆ. ಹೀಗೆ ಮಾಡುವುದರಿಂದ ನಿದ್ರೆಯ ಸಮಸ್ಯೆ ದೂರವಾಗುತ್ತದೆ. ಅದೇ ಸಮಯದಲ್ಲಿ, ವಾದ ಮಾಡುವ ಬದಲು, ಅವನು ಪ್ರತಿದಿನ ಬೆಳಿಗ್ಗೆ ತುಂಬಾ ತಾಜಾತನವನ್ನು ಅನುಭವಿಸುತ್ತಾನೆ. ನಿದ್ರೆಯ ವಿಚ್ಛೇದನದಿಂದ ದಾಂಪತ್ಯ ಇನ್ನಷ್ಟು ಬಲವಾಗುತ್ತದೆ ಎಂದು ತಿಳಿದುಬಂದಿದೆ.