ನನ್ನದು ಅತ್ಯಂತ ಚಿಕ್ಕ ಪ್ರೈವೇಟ್ ಪಾರ್ಟ್: ಗಿನ್ನಿಸ್ ದಾಖಲೆಗೆ ಸೇರಿಸಿಕೊಳ್ಳಿ ಎಂದ ವ್ಯಕ್ತಿ
ಇಲ್ಲೋರ್ವ ವ್ಯಕ್ತಿ ತನ್ನದು ಅತ್ಯಂತ ಚಿಕ್ಕ ಪ್ರೈವೇಟ್ ಪಾರ್ಟ್ ಎಂದು ಹೇಳಿಕೊಂಡಿದ್ದಾನೆ. ಇದರಿಂದ ತನ್ನ ಲೈಂಗಿಕ ಜೀವನದ ಮೇಲೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಲಂಡನ್: ಇಂದಿನ ಸಮಾಜದಲ್ಲಿ ಯಾವ ವಿಷಯಗಳು ರಹಸ್ಯವಾಗಿ ಉಳಿದಿಲ್ಲ. 80-90ರ ದಶಕದಲ್ಲಿ ಗುಪ್ತ ವಿಷಯಗಳಾಗಿದ್ದವು, ಇಂದು ಜನರು ಮುಕ್ತವಾಗಿ ಹಂಚಿಕೊಳ್ಳುತ್ತಿರುತ್ತಾರೆ. ಮಹಿಳೆಯರು ತಮ್ಮ ದೇಹದಲ್ಲಾದ ಬದಲಾವಣೆಗಳ ಬಗ್ಗೆಯೂ ಮುಕ್ತವಾಗಿ ಮಾತನಾಡುತ್ತಿರುತ್ತಾರೆ. ಸೆಕ್ಸ್ ಎಂಬಂತಹ ವಿಷಯಗಳ ಬಗ್ಗೆಯೂ ಯಾವುದೇ ಹಿಂಜರಿಕೆ ಇಲ್ಲದೇ ಮಾತನಾಡುವ ಕಾಲ ಇದಾಗಿದೆ. ಇಲ್ಲೋರ್ವ ವ್ಯಕ್ತಿ ತನ್ನದು ಅತ್ಯಂತ ಚಿಕ್ಕ ಪ್ರೈವೇಟ್ ಪಾರ್ಟ್ ಎಂದು ಹೇಳಿಕೊಂಡಿದ್ದಾನೆ. ಉತ್ತರ ಕ್ಯಾರೊಲಿನಾದ ನಿವಾಸಿಯಾಗಿರುವ ಮೈಕಲ್ ಫಿಲಿಪ್ಸ್ (Michael Phillips) ತುಂಬಾ ಮರ್ಮಾಂಗ ಚಿಕ್ಕದಾಗಿರುವ ಕಾರಣ ಹಲವು ವರ್ಷಗಳಿಂದ ಚಿಂತಿತನಾಗಿದ್ದಾರೆ.,
ಪ್ರೈವೇಟ್ ಪಾರ್ಟ್ ಗಾತ್ರದಲ್ಲಿ ಚಿಕ್ಕದಾಗಿರುವ ಕಾರಣ ಡೇಟಿಂಗ್ ಮತ್ತು ಸೆಕ್ಸ್ ಲೈಫ್ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಆದರೆ ಇದಕ್ಕೆ ಬಗ್ಗೆ ನಾಚಿಕೊಳ್ಳದೇ ಯಾವುದೇ ಹಿಂಜರಿಕೆ ಅಳುಕಿಲ್ಲದೇ ಜಗತ್ತಿನ ಮುಂದೆ ತನ್ನ ಮರ್ಮಾಂಗ ಚಿಕ್ಕದು ಎಂದು ಮೈಕಲ್ ಹೇಳಿಕೊಂಡಿದ್ದಾರೆ. ಇದನ್ನೇ ಗಿನ್ನಿಸ್ ದಾಖಲೆಯಲ್ಲಿ ದಾಖಲಿಸಲು ಮೈಕಲ್ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್‌ನಲ್ಲಿ ಪುರುಷರ ಲಿಂಗ ಸರಿ ಸುಮಾರು ಅಂದಾಜು 3.5ರಿಂದ 5.8 ಇಂಚು ಇರುತ್ತದೆ. ಆದರೆ ಮೈಕಲ್, ನಾರ್ಥ್ ಕ್ಯಾರೊಲಿನಾದಲ್ಲಿದ್ದು, ಇವರ ಪ್ರೈವೇಟ್ ಪಾರ್ಟ್ ಸಾಮಾನ್ಯರಿಗಿಂತ ಒಂದು ಇಂಚು ಚಿಕ್ಕದಾಗಿದೆ.
ಹೈಸ್ಕೂಲ್‌ನಲ್ಲಿದ್ದಾಗ ನನ್ನ ಪ್ರೈವೇಟ್ ಪಾರ್ಟ್ ಚಿಕ್ಕದಾಗಿದೆ ಎಂಬುವುದು ನನ್ನ ಅರಿವಿಗೆ ಬಂತು. ಒಮ್ಮೆ ಯುವತಿ ಮುಂದೆ ತಮ್ಮ ಲಿಂಗದ ಆಕಾರದ ಬಗ್ಗೆ ಮಾತನಾಡಿದ್ದಾಗ ಆಕೆ ತಮಾಷೆ ಮಾಡಿದಳು. ಇದರಿಂದ ಅಂದು ಮೈಕಲ್ ಮುಜುಗರಕ್ಕೆ ಒಳಗಾಗಿದ್ದನು. ಅಂದಿನಿಂದ ಮೈಕಲ್ ಡೇಟಿಂಗ್ ಹೋಗುವುದನ್ನೇ ನಿಲ್ಲಿಸಿದೆ. ಎಲ್ಲರಂತೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರಕ್ಕೆ ಹೋಗಲು ನನಗೆ ಕಷ್ಟವಾಗುತ್ತದೆ. ಒಮ್ಮೆ ಸಿನಿಮಾ ವೀಕ್ಷಣೆಗೆ ಹೋದಾಗ ಅಲ್ಲಿಯ ಟಾಯ್ಲೆಟ್‌ನಲ್ಲಿ ನಿಂತುಕೊಂಡು ಮೂತ್ರ ಮಾಡುವ ಸ್ಥಳ ಇತ್ತು. ಇದರಿಂದ ನಾನು ಮಾನಸಿಕವಾಗಿ ಕುಗ್ಗಿದ್ದೆ ಎಂದು ಮೈಕಲ್ ಹೇಳಿಕೊಳ್ಳುತ್ತಾರೆ.
ಈ ಸಮಸ್ಯೆಯಿಂದಾಗಿ ಮೈಕಲ್‌ಗೆ ಲೈಂಗಿಕ ಸಂಬಂಧ ಬೆಳೆಸಲು ಸಹ ಕಷ್ಟವಾಗುತ್ತದೆ. ಅಷ್ಟು ಮಾತ್ರವಲ್ಲದೇ ಕುಳಿತು ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಪದೇ ಪದೇ ಮೂತ್ರಕ್ಕೆ ಹೋಗಲು ಸಮಸ್ಯೆಯಾಗುತ್ತದೆ. ಪುರುಷರಂತೆ ನಿಂತು ಮೂತ್ರ ಮಾಡಲು ಆಗಲ್ಲ. ಲಿಂಗ ಚಿಕ್ಕದಾಗಿರೋದರ ಬಗ್ಗೆ ಮೈಕಲ್ ವೈದ್ಯರನ್ನು ಸಂಪರ್ಕಿಸಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಡಾಕ್ಟರ್ ಇನ್ನು 'ಮೈಕ್ರೋಪೆನ್ನಿಸ್' ಎಂದು ಕರೆದಿದ್ದಾರೆ. ನನ್ನ ಮರ್ಮಾಂಗ ಚಿಕ್ಕದು ಎಂಬ ವಿಷಯ ಪ್ರೌಢಾವಸ್ಥೆಯಲ್ಲಿಯೇ ಗೊತ್ತಾಗಿತ್ತು. ಆದ್ರೆ ಇದು ಒಂದು ಸಮಸ್ಯೆ ಆಗುತ್ತೆ ಎಂದು ಗೊತ್ತಿರಲಿಲ್ಲ ಎಂದು ಮೈಕಲ್ ಹೇಳಿಕೊಳ್ಳುತ್ತಾರೆ.
ಲೈಂಗಿಕ ಸಂಬಂಧದ ವೇಳೆ ಮಹಿಳಾ ಸಂಗಾತಿಗೆ ಇಷ್ಟವಾಗೋದೇನು?
ಒಮ್ಮೆ ನಾನು ಪ್ರಪಂಚದ ಎಲ್ಲಾ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬಗ್ಗೆ ತಿಳಿದುಕೊಳ್ಳಲು ಮುಂದಾದೆ. ಈವರೆಗೂ ಯಾರೂ ಅತಿ ಚಿಕ್ಕ ಪುರುಷ ಲಿಂಗ ಹೊಂದಿರುವ ಬಗ್ಗೆ ದಾಖಲೆ ಬರೆದಿಲ್ಲ. ಆಗ ನಾನ್ಯಾಕೆ ಈ ಬಗ್ಗೆ ದಾಖಲೆ ದಾಖಲಿಸಬಾರದು ಎಂದು ಅನ್ನಿಸಿತು. ನನ್ನ ದೌರ್ಬಲ್ಯವನ್ನು ಪಾಸಿಟಿವ್ ಆಗಿ ಬದಲಾಯಿಸಿಕೊಂಡೆ ಎಂದು ಮೈಕಲ್ ಹೇಳುತ್ತಾರೆ.
ಸರ್ಜರಿ ಮೂಲಕ ಒಂದರಿಂದ ಒಂದೂವರೆ ಇಂಚನಷ್ಟು ಮರ್ಮಾಂಗ ಉದ್ದವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಕೆಲ ವೈದ್ಯರು ಸಲಹೆ ನೀಡಿದ್ದಾರೆ. ಈ ಬಗ್ಗೆಯೂ ನಾನು ಯೋಚಿಸುತ್ತಿದ್ದೇನೆ. ಒಂದು ವೇಳೆ ಶಸ್ತ್ರಚಿಕಿತ್ಸೆ ಮೂಲಕ ಲಿಂಗದ ಉದ್ದ ಬೆಳೆಸಿಕೊಂಡ್ರೆ ಮೈಕ್ರೋಪೆನ್ನಿಸ್ ಹೊಂದಿರುವ ಪಟ್ಟಿಯಿಂದ ನಾನು ಹೊರಗೆ ಬರಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ನಂತರದ ಜೀವನದ ಬಗ್ಗೆಯೂ ನನಗೆ ಸ್ಪಷ್ಟತೆ ಇಲ್ಲ. ಹಾಗಾಗಿ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೈಕಲ್ ಹೇಳುತ್ತಾರೆ.
ನನ್ನ ಪತಿ ರಾಕ್ಷಸ, ಬಿಯರ್ ಕುಡಿಸಿ, ಮೊಳೆ ಬಿಸಿ ಮಾಡಿ ಗುಪ್ತಾಂಗ ಸುಡ್ತಾನೆ: ಆಸ್ಪತ್ರೆಗೆ ದಾಖಲಾದ ಪೊಲೀಸಪ್ಪನ ಹೆಂಡತಿ!