Asianet Suvarna News Asianet Suvarna News

ನನ್ನ ಪತಿ ರಾಕ್ಷಸ, ಬಿಯರ್ ಕುಡಿಸಿ, ಮೊಳೆ ಬಿಸಿ ಮಾಡಿ ಗುಪ್ತಾಂಗ ಸುಡ್ತಾನೆ: ಆಸ್ಪತ್ರೆಗೆ ದಾಖಲಾದ ಪೊಲೀಸಪ್ಪನ ಹೆಂಡತಿ!

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ, ಪತ್ನಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ನನ್ನ ಪತಿ ನರ ರಾಕ್ಷಸ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ.

police husband brutally beaten wife and having unnatural sex mrq
Author
First Published Aug 19, 2024, 5:43 PM IST | Last Updated Aug 19, 2024, 5:43 PM IST

ಲಕ್ನೋ: ಉತ್ತರ ಪ್ರದೇಶದ ಮುರದಾಬಾದ್ ಜನಪದ್ ಕ್ಷೇತ್ರದ ಪಕ್ಬಾಡ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಹೃದಯ ವಿದ್ರಾವಕ ಪ್ರಕರಣ ಬೆಳಕಿಗೆ ಬಂದಿದೆ. ಮುರದಾಬಾದ್ ಮೂಲದ ಪೊಲೀಸನೋರ್ವ ಪತ್ನಿಗೆ ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ಪತಿಯಿಂದ ಹಲ್ಲೆಗೊಳಗಾದ ಪತ್ನಿ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಓರ್ವ ಪೊಲೀಸ್ ಪತ್ನಿಗೆ ಈ ರೀತಿ ಕಿರುಕುಳ ನೀಡಿರುವ ವಿಷಯ ಕೇಳಿ ಪೊಲೀಸರೇ ಒಂದು ಕ್ಷಣ  ಶಾಕ್ ಆಗಿದ್ದಾರೆ. ಪತಿ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸುತ್ತಾನೆ. ವಿರೋಧಿಸಿದ್ರೆ ಹಲ್ಲೆ ನಡೆಸುತ್ತಾನೆ ಎಂದು ದೇಹದ ಮೇಲಾಗಿರುವ ಗಾಯದ ಗುರುತುಗಳನ್ನು ಮಹಿಳೆ ತೋರಿಸುತ್ತಾರೆ. 

ಮದ್ಯ ಸೇವಿಸಿದ ಬಳಿಕ ಪತಿ ರಾಕ್ಷಸನ ರೀತಿಯಲ್ಲಿ ನನ್ನ ಜೊತೆ ನಡೆದುಕೊಳ್ಳುತ್ತಾನೆ. ನನ್ನ ಪತಿ ಮನುಷ್ಯ  ಅಲ್ಲ, ಆತ ಮೃಗ ಎಂದು ಮಹಿಳೆ ಕಣ್ಣೀರು ಹಾಕುತ್ತಾರೆ. ಹಲ್ಲೆಯಿಂದ ನಾನು ನರಳಾಡುತ್ತಿದ್ದರೂ ಅನೈಸರ್ಗಿಕವಾಗಿ ಲೈಂಗಿಕ ಸಂಬಂಧವನ್ನು ಬೆಳೆಸುತ್ತಾನೆ. ಅಷ್ಟು ಮಾತ್ರವಲ್ಲದೇ ಸೆಕ್ಸ್ ವೇಳೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಪತಿ ಎಷ್ಟು ಕ್ರೂರಿ ಅಗಿದ್ದ ಅಂದ್ರೆ ಪತ್ನಿಯ ಕಾಲುಗಳ ಉಗರು ಸಹ ಕಿತ್ತು ಹಾಕಿದ್ದಾನೆ. ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದ ಪತಿ ಮೊಳೆಯನ್ನು ಬಿಸಿ ಮಾಡಿ ಗುಪ್ತಾಂಗ ಸುಡುತ್ತಿದ್ದನು. ಬೇಡ ಅಂದರೂ ಹೆದರಿಸಿ ಮದ್ಯ ಕುಡಿಸಿ, ಸಿಗರೇಟ್‌ನಿಂದ ದೇಹವನ್ನು ಸುಡುತ್ತಿದ್ದನು. ನಿರಂತರವಾಗಿ ಪತಿಯಿಂದ ಮಾನಸಿಕ, ದೈಹಿಕ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆ ಸದ್ಯ ಮುರದಾಬಾದ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

2021ರಲ್ಲಿ ಮಹಿಳೆ ಮದುವೆ ವಿಕಾಸ್ ಸಿಂಗ್ ಎಂಬಾತನ ಜೊತೆ ನಡೆದಿದೆ. ವಿಕಾಸ್ ಸಿಂಗ್ ಉತ್ತರ ಪ್ರದೇಶ ಪೊಲೀಸ್ ವಿಭಾಗದಲ್ಲಿ ಸಿಪಾಯಿ ಆಗಿ ಕೆಲಸ ಮಾಡಿಕೊಂಡಿದ್ದರಿಂದ ಕುಟುಂಬಸ್ಥರು ಮಗಳ ಮದುವೆ ಮಾಡಿಕೊಟ್ಟಿದ್ದರು. ಉನ್ನಾವ ಪೊಲೀಸ್ ಠಾಣೆಯಲ್ಲಿ ವಿಕಾಸ್ ಸಿಂಗ್ ಸೇವೆ ಸಲ್ಲಿಸುತ್ತಿದ್ದನು. ವಿಕಾಸ್ ಸಿಂಗ್ ತಂದೆ ಪಿಎಸ್‌ಸಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮದುವೆಯಾದ ಹೊಸತರಲ್ಲಿ ವಿಕಾಸ್ ಸಿಂಗ್ ಎಲ್ಲರಂತೆಯೇ ಇದ್ದನು. ಹೆಣ್ಣು ಮಗು ಜನಿಸಿದ ಬಳಿಕ ವಿಕಾಸ್ ಸಿಂಗ್ ನಡವಳಿಕೆಯಲ್ಲಿ ಸಂಪೂರ್ಣ ಬದಲಾವಣೆ ಆಯ್ತು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಮಗು ಜನಿಸಿದ ಬಳಿಕ ಪತ್ನಿ ಮೇಲೆ ಹಲ್ಲೆ ಮಾಡಲು ಶುರುಮಾಡಿದ್ದನು. 

ಪರೀಕ್ಷೆಯಲ್ಲಿ ನಕಲು ಮಾಡ್ತೀರಾ ಅಂತ ಏಳು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿ

ಆಗಸ್ಟ್ 13ರಂದು ಕೆಲಸ ಮುಗಿಸಿಕೊಂಡು  ಬಂದ ವಿಕಾಸ್ ಸಿಂಗ್ ಪತ್ನಿ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದಾನೆ. ಈ ವೇಳೆ ಪತಿಗೆ ಮಾವ ಸತ್ಯ ಪ್ರಕಾಶ್ ಮತ್ತು ಅತ್ತೆ ವಿನೋದಿ ದೇವಿ ಸಹ ಸಾಥ್ ನೀಡಿದರು. ಗಂಡನಿಂದ ತಪ್ಪಿಸಿಕೊಂಡು ಬರುವಲ್ಲಿ  ಮಹಿಳ ಯಶಸ್ವಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಕೆಯ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನನ್ನ ಪತಿ ನರ ರಾಕ್ಷಸ.  ನನ್ನ ಗಂಡನಿಗೆ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕು ಎಂದು ಮಹಿಳೆ ಆಗ್ರಹಿಸಿದ್ದಾರೆ. 

ಮಹಿಳೆಯ ಹೊಟ್ಟೆ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ವಿಕಾಸ್ ಸಿಂಗ್ ಪರಾರಿಯಾಗಿದ್ದಾನೆ. ಪೊಲೀಸರು ಮಹಿಳೆಯ ಅತ್ತೆ ಮತ್ತು ಮಾವನನ್ನು ಬಂಧಿಸಿದ್ದಾರೆ. ನಾಪತ್ತೆಯಾಗಿರುವ ವಿಕಾಸ್ ಸಿಂಗ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ಲೀಸ್, ಒಬ್ಬೊಬ್ಬರಾಗಿ ರೇಪ್ ಮಾಡಿ… ಬಾಂಗ್ಲಾದೇಶದ ಹಿಂದೂ ತಾಯಿಯ ಅಸಹಾಯಕತೆ ನಿಮಗೆ ಕಣ್ಣೀರು ತರಿಸುತ್ತೆ!

Latest Videos
Follow Us:
Download App:
  • android
  • ios