ಗಂಡ ಹೀಗೆಲ್ಲಾ ಮಾಡೋದ್ರಿಂದ ಹೆಂಡ್ತಿಗೆ ಸಿಕ್ಕಾಪಟ್ಟೆ ಕೋಪ ಬರುತ್ತಂತೆ!
ಮದುವೆ (Marriage)ಯಾದ ಮೇಲೆ ಗಂಡು-ಹೆಣ್ಣು ಇಬ್ಬರ ಜೀವನ ಸಹ ಸಂಪೂರ್ಣವಾಗಿ ಬದಲಾಗುತ್ತದೆ. ಮದುವೆಯ ಮೊದಲಿದ್ದಂತೆ ವರ್ತಿಸಿದರೆ ಅಗುವುದಿಲ್ಲ. ಹಲವಾರು ವಿಚಾರದಲ್ಲಿ ಇಬ್ಬರೂ ಹೊಂದಾಣಿಕೆ (Compramise) ಮಾಡಬೇಕಾಗುತ್ತದೆ. ಆದರೆ ಕೆಲವೊಮ್ಮೆ ಎಷ್ಟೇ ಸರ್ಕಸ್ ಮಾಡಿದರೂ ಇಬ್ಬರ ಒಬ್ಬರ ಸ್ವಭಾವ ಇನ್ನೊಬ್ಬರನ್ನು ಸಿಟ್ಟಿಗೇಳಿಸಿಬಿಡುತ್ತದೆ. ಹಾಗಿದ್ರೆ ಪತ್ನಿ (Wife)ಗೆ ಕೋಪ ತರಿಸುವ ಪತಿ (Husband)ಯ ವರ್ತನೆಗಳು ಯಾವೆಲ್ಲಾ ?
ಪತಿ-ಪತ್ನಿಯರ (Husband-wife) ಸಂಬಂಧದಲ್ಲಿ ಸಣ್ಣಪುಟ್ಟ ವಿಚಾರಗಳ ಬಗ್ಗೆ ಕಾಳಜಿ (Care) ವಹಿಸುವುದು ಬಹಳ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಸಣ್ಣದೊಂದು ತಪ್ಪಾದರೂ ಇಬ್ಬರೂ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಗಳು ದೊಡ್ಡದಾಗಿ ಇಬ್ಬರೂ ದೂರವಾಗಲು ಕಾರಣವಾಗಬಹುದು. ಅದರಲ್ಲೂ ದಾಂಪತ್ಯ ಜೀವನ (Married Life)ದಲ್ಲಿ ಹೊಂದಾನಿಕೆಯೆಂಬುದು ತುಂಬಾ ಮುಖ್ಯ. ಮದುವೆಯ (Marriage) ನಂತರ, ಪಾಲುದಾರರಿಬ್ಬರೂ ತಮ್ಮನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕು, ಆಗ ಮಾತ್ರ ಅವರ ನಡುವೆ ಆರಾಮದಾಯಕ ವಾತಾವರಣವನ್ನು ಸೃಷ್ಟಿಸಬಹುದು. ಅದು ಪ್ರೇಮ ವಿವಾಹವಾಗಲಿ ಅಥವಾ ಅರೇಂಜ್ಡ್ ಮ್ಯಾರೇಜ್ ಆಗಿರಲಿ. ದಾಂಪತ್ಯದಲ್ಲಿ ಪತಿ-ಪತ್ನಿಯರಿಬ್ಬರೂ ಅನುಸರಿಸಬೇಕಾದ ವಿಧಾನವಿದು.
ಅದರಲ್ಲೂ ಬ್ಯಾಚುಲರ್ ಲೈಫ್ ನಲ್ಲಿ ಸಂಪೂರ್ಣ ವಿಭಿನ್ನವಾಗಿ ಬದುಕುವ ಅಭ್ಯಾಸವಿದ್ದ ಹುಡುಗರು, ವೈವಾಹಿಕ ಜೀವನಕ್ಕೆ ಕಾಲಿಟ್ಟಾಗ ಅವರ ಹಲವು ಅಭ್ಯಾಸಗಳನ್ನು ಮುಂದುವರಿಸುತ್ತಾರೆ. ಇದು ಪತ್ನಿಗೆ ಕಿರಿಕಿರಿಯೆನಿಸಬಹುದು. ಇದು ನಿಮ್ಮ ಹೊಸದಾಗಿ ಮದುವೆಯಾದ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಮದುವೆಯ ಬಳಿಕ ಜೀವನ ಹಂಚಿಕೊಂಡ ಮೇಲೆ ಎಲ್ಲ ವಿಚಾರಗಳೂ ಇಬ್ಬರಿಗೂ ಸಂಬಂಧಿಸಿದ್ದಾಗಿರುತ್ತದೆ. ಹೀಗಾಗಿ ಸಂವಹವನ ಅತೀ ಮುಖ್ಯವಾಗಿರುತ್ತದೆ. ಹೆಣ್ಣು ಮಾತ್ರವಲ್ಲ, ಪುರುಷ ಕೂಡ ಹೆಂಡತಿಗೆ ಹೊಂದಿಕೊಳ್ಳುವ ಮನಸ್ಥಿತಿಯನ್ನು ಹೊಂದಿರಬೇಕು. ಇಲ್ಲವಾದರೆ ಪತಿಯ ನಡವಳಿಕೆಗಳು ಪತ್ನಿಗೆ ಇಷ್ಟವಾಗದೆ ಇಬ್ಬರ ನಡುವೆ ಮಾತಾಗಬಹುದು. ಹಾಗಾದರೆ ಪತಿಯ ಯಾವೆಲ್ಲ ನಡವಳಿಕೆಗಳು ಪತ್ನಿಗೆ ಹಿಡಿಸುವುದಿಲ್ಲ ಎನ್ನುವ ಬಗ್ಗೆ ಇಲ್ಲಿದೆ ನೋಡಿ.
ಗಂಡ ಬೇಡ, ಅವನೇ ಬೇಕು ಅನ್ನೋ ಮಹಿಳೆಯರು ಬೆಂಗಳೂರಲ್ಲೇ ಜಾಸ್ತಿಯಂತೆ !
ಹೆಂಡತಿಗಾಗಿ ಸಮಯ ಕೊಡದಿರುವುದು: ಕೆಲವೊಬ್ಬರು ಮದುವೆಯಾದ ಬಳಿಕವೂ ವೈವಾಹಿಕ ಜೀವನದ ಮಹತ್ವವನ್ನು ತಿಳಿದುಕೊಳ್ಳಲು ಹೋಗುವುದಿಲ್ಲ. ಮದುವೆಯ ಮೊದಲಿದ್ದಂತೆ ಆರಾಮವಾಗಿ ತಿರುಗಾಡಿಕೊಂಡು ಹೊತ್ತಲ್ಲದ ಹೊತ್ತಿನಲ್ಲಿ ಮನೆಗೆ ಬರುತ್ತಾರೆ. ಇಂಥಾ ಬೇಜವಾಬ್ದಾರಿ ನಡವಳಿಕೆಯನ್ನು ಪತ್ನಿ ಇಷ್ಟಪಡುವುದಿಲ್ಲ. ಕೆಲವೊಬ್ಬರು ಕಚೇರಿಯಲ್ಲೂ ಕೆಲಸ, ಮನೆಯಲ್ಲೂ ಕೆಲಸ ಎಂದು ಮೂರೂ ಹೊತ್ತು ಕೆಲಸದಲ್ಲಿ ಮುಳುಗಿರುತ್ತಾರೆ. ಹೀಗೆ ಮಾಡಬೇಡಿ. ದಾಂಪತ್ಯ ಎಂಬುದು ಗಂಡ-ಹೆಂಡತಿ ಇಬ್ಬರೂ ಮುಖ್ಯ. ಹಿಗಾಗಿ ಹೆಂಡತಿಗಾಗಿ ಸಮಯ ಮೀಸಲಿಡುವುದನ್ನು ಅಭ್ಯಾಸ ಮಾಡಿ. ಜೊತೆಯಾಗಿ ಹೆಚ್ಚು ಸಮಯ ಕಳೆದಾಗ ದಾಂಪತ್ಯ ಜೀವನ ಸುಭದ್ರವಾಗುತ್ತದೆ.
ಬೇಜವಾಬ್ದಾರಿಯಾಗಿ ವರ್ತಿಸುವುದು: ಮದುವೆ ಮೊದಲು ಹೇಗೇ ಇದ್ದರೂ ಹುಡುಗರು ಮದುವೆಯಾದ ಮೇಲೆ ಜವಾಬ್ದಾರಿಯಿಂದ ವರ್ತಿಸಬೇಕು. ಮನೆಗೆ ಬೇಕಾದ ಸಾಮಗ್ರಿ, ಲೈಟ್ ಬಿಲ್, ವಾಟರ್ ಬಿಲ್ ಮೊದಲಾದವುಗಳ ಬಗ್ಗೆ ಗಮನ ಕೊಡಬೇಕು. ಹೀಗೆ ಮಾಡದಿದ್ದಾಗ ಈ ಎಲ್ಲಾ ಕೆಲಸವನ್ನು ಪತ್ನಿಯೇ ಮಾಡಬೇಕಾಗಿ ಬಂದಾಗ ಅವಳು ಸಹಜವಾಗಿ ಸಿಟ್ಟಿಗೇಳುತ್ತಾಳೆ. ಎಲ್ಲವನ್ನೂ ನನ್ನಿಂದ ನಿಭಾಯಿಸಲು ಸಾಧ್ಯವಿಲ್ಲ ಎಂದು ಜಗಳ ಶುರು ಮಾಡುತ್ತಾಳೆ.
ಗಂಡನ ಸ್ನೇಹಿತ ರಾತ್ರಿಯಾದರೆ ಸಾಕು ರೋಮ್ಯಾಂಟಿಕ್ ಮೆಸೇಜ್ ಕಳಿಸ್ತಾನೆ. ಏನ್ಮಾಡ್ಲಿ ?
ಬೇರೆ ಮಹಿಳೆಯರ ಜೊತೆ ಫ್ಲರ್ಟ್ ಮಾಡುವುದು: ಮದುವೆಯ ನಂತರವೂ, ಕೆಲ ಗಂಡಸರು ಇತರ ಮಹಿಳೆಯರೊಂದಿಗೆ ಚೆಲ್ಲಾಟವಾಡುವುದನ್ನು ಮಾಡುತ್ತಾರೆ. ಇದನ್ನು ನಿಲ್ಲಿಸದಿದ್ದರೆ, ನಿಮ್ಮ ಈ ನಡವಳಿಕೆಯು ಹೆಂಡತಿಯನ್ನು ನೋಯಿಸಬಹುದು. ಯಾವುದೇ ಹೆಂಡತಿ ತನ್ನ ಪತಿ ಬೇರೆ ಮಹಿಳೆಯೊಂದಿಗೆ ಹತ್ತಿರವಾಗುವುದನ್ನು ನೋಡಲು ಇಷ್ಟಪಡುವುದಿಲ್ಲ. ಮದುವೆಯಾದ ಮೇಲೆ ಬೇಡವೆಂದರೂ ಪತಿಯ ಮೇಲೆ ಒಂದು ರೀತಿಯ ನನ್ನವನು ಎನ್ನುವ ಸ್ವಾರ್ಥದ ಮನೋಭಾವನೆ ಬರುತ್ತದೆ. ಹೀಗಿದ್ದಾಗ ಪತಿ ಬೇರೆ ಹುಡುಗಿಯರೊಂದಿಗೆ ಕ್ಲೋಸ್ ಆಗಿ ಮಾತನಾಡುತ್ತಿದ್ದಾರೆ ಎಂದರೆ ಕೋಪ ಸಹಜ. ಅಲ್ಲದೆ ಅದು ತಪ್ಪು ಕೂಡ ಹೌದು.ಪತ್ನಿಯ ನೆಚ್ಚಿನ ಪತಿಯಾಗಬೇಕಾದರೆ ಫ್ಲರ್ಟಿಂಗ್ ಹವ್ಯಾಸವಿದ್ದರೆ ಬಿಟ್ಟುಬಿಡಿ. ಇಲ್ಲವಾದರೆ ನಿಮ್ಮ ಹೆಂಡತಿಯ ಕೋಪ ನೆತ್ತಿಗೇರಬಹುದು.
ಸುಳ್ಳು ಹೇಳುವುದು: ಪತಿ-ಪತ್ನಿಯರ ನಡುವೆ ಯಾವುದನ್ನೂ ಮುಚ್ಚಿಡಬಾರದು. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಹೆಂಡತಿಗೆ ಸುಳ್ಳು ಹೇಳಿದರೆ ಅದು ದೊಡ್ಡ ತಪ್ಪಾಗುತ್ತದೆ. ಸುಳ್ಳಿನ ಮೇಲೆ ಕಟ್ಟಿದ ಸಂಬಂಧಗಳು ಹೆಚ್ಚು ಕಾಲ ಉಳಿಯುವುದಿಲ್ಲ. ನೀವು ಎಂದಾದರೂ ತಪ್ಪು ಮಾಡಿದರೆ, ಅದನ್ನು ಮರೆಮಾಡಲು ಮತ್ತು ಸುಳ್ಳನ್ನು ಆಶ್ರಯಿಸುವ ಬದಲು ನಿಮ್ಮ ಹೆಂಡತಿಯ ಬಳಿ ಕ್ಷಮೆಯಾಚಿಸಿ. ಸಂಬಂಧ ನಿಂತಿರುವುದೇ ನಂಬಿಕೆಯ ಆಧಾರದ ಮೇಲೆ. ಹೀಗಿದ್ದಾಗ ನಂಬಿಕೆಯ ಗೋಡೆ ಕುಸಿದ ಮೇಲೆ ಪ್ರೀತಿಗೆ ಅರ್ಥವಿರುವುದಿಲ್ಲ. ಯಾವಾಗ ಪತಿ ಸುಳ್ಳು ಹೇಳುತ್ತಿದ್ದಾರೆ ಎನ್ನಿಸುವುದೇ ಅಲ್ಲಿಗೆ ಸಂಬಂಧ ಅರ್ಧಕೆಟ್ಟಂತೆ. ಪತಿಯ ಸುಳ್ಳು ಹೇಳುವ ಅಭ್ಯಾಸ ಪತ್ನಿಗೆ ಹಿಡಿಸದ ವರ್ತನೆಯಾಗಿದೆ.