ಗಂಡ ಬೇಡ, ಅವನೇ ಬೇಕು ಅನ್ನೋ ಮಹಿಳೆಯರು ಬೆಂಗಳೂರಲ್ಲೇ ಜಾಸ್ತಿಯಂತೆ !
ಅನೈತಿಕ ಸಂಬಂಧ (Relationship) ಎಂಬುದು ಮದುವೆಯೆಂಬ ಪವಿತ್ರ ಅನುಬಂಧವನ್ನೆ ಹಾಳುಮಾಡುತ್ತಿದೆ. ಅದರಲ್ಲೂ ಮಹಿಳೆ (Women)ಯರು ಹೆಚ್ಚು ಪರಪುರುಷನ ಹಿಂದೆ ಹೋಗುತ್ತಾರೆ ಎಂಬುದು ಅಧ್ಯಯನ (Study)ದಿಂದ ಬಯಲಾಗಿದೆ. ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ ಈ ರೀತಿ ಗಂಡ ಬೇಡ, ಅವನೇ ಬೇಕು ಅನ್ನೋ ಮಹಿಳೆಯರು ಬೆಂಗಳೂರಲ್ಲೇ ಜಾಸ್ತಿಯಿದ್ದಾರಂತೆ.
ಇವತ್ತಿನ ಸಮಾಜ (Society)ದಲ್ಲಿ ಅನೈತಿಕತೆ ಎಂಬುದು ಅಚ್ಚರಿಪಡುವ ವಿಷಯವಾಗಿ ಉಳಿದಿಲ್ಲ. ಎಲ್ಲರೂ ಇದನ್ನು ಸಾಮಾನ್ಯವಾಗಿ ಕಾಣುತ್ತಿದ್ದಾರೆ. ಮೊದಲ್ಲೆಲ್ಲಾ ಸಂಬಂಧ (Relatioship)ಗಳಿಗೆ ಅತಿ ಹೆಚ್ಚು ಮೌಲ್ಯವಿತ್ತು. ಆದರೆ ಇವತ್ತಿನ ದಿನಗಳಲ್ಲಿ ಯಾವ ಸಂಬಂಧವೂ ನಿಜವಾದ ಅರ್ಥವನ್ನು ಉಳಿಸಿಕೊಂಡಿಲ್ಲ. ಮದುವೆ ಎಂಬ ಪವಿತ್ರ ಬಂಧನವೂ ಅರ್ಥಹೀನವಾಗುತ್ತಿದೆ. ಹೆಂಡತಿ, ಗಂಡನ ಸ್ನೇಹಿತನ ಜೊತೆ ಸಂಬಂಧ ಇಟ್ಟುಕೊಳ್ಳುವುದು, ಗಂಡ, ಹೆಂಡತಿಯ ತಂಗಿಯ ಮೇಲೆಯೇ ಕೆಟ್ಟ ದೃಷ್ಟಿ ಬೀರುವುದು ಎಲ್ಲವೂ ಸಾಮಾನ್ಯವಾಗಿದೆ. ಅನೈತಿಕ ಸಂಬಂಧದಿಂದಲೇ ಅದೆಷ್ಟೋ ಮದುವೆಗಳು ಮುರಿದು ಬೀಳುತ್ತಿವೆ. ಕೆಲವೊಬ್ಬರು ಇದನ್ನೇ ಒಪ್ಪಿಕೊಂಡು ಗೊತ್ತಾಗಿಯೂ ಗೊತ್ತಾಗದಂತೆ ಹೊಂದಾಣಿಕೆಯ ಜೀವನ ನಡೆಸುತ್ತಾ ಹೋಗುತ್ತಿದ್ದಾರೆ.
ನಗರ, ಹಳ್ಳಿ ಎಂಬ ಬೇಧವಿಲ್ಲದೆ ಎಲ್ಲೆಡೆ ಅನೈತಿಕ ಸಂಬಂಧ ಎಂಬುದು ಸಾಮಾನ್ಯವಾಗುತ್ತಿದೆ. ಅದರಲ್ಲೂ ನಗರಗಳಲ್ಲಿ ಎಕ್ಸಾಟ್ರಾ ಮೆರಿಟಲ್ ಅಫೇರ್ ಇಲ್ಲದವರು ವಿರಳ. ಭಾರತದಲ್ಲಿ 10ರಲ್ಲಿ 7 ಮಹಿಳೆಯರು ತನ್ನ ಗಂಡನಿಗೆ ಮೋಸ ಮಾಡುವುದರಲ್ಲಿ ಎತ್ತಿದ ಕೈ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. ಈ ಪೈಕಿ ಬೆಂಗಳೂರಿನಲ್ಲೇ ಇಂತಹ ಕೇಸ್‌ಗಳು ಹೆಚ್ಚಾಗಿದೆ ಎನ್ನುತ್ತದೆ ಸರ್ವೆ ರಿಪೋರ್ಟ್. ಸರ್ವೆಯ ಫಲಿತಾಂಶದ ಪ್ರಕಾರ, ಬೆಂಗಳೂರು, ಮುಂಬೈ ಹಾಗೂ ಕೋಲ್ಕತಾದಲ್ಲಿ ಮಹಿಳೆಯರು ತಮ್ಮ ಪತಿಗೆ ಅತಿಹೆಚ್ಚು ವಂಚನೆ ಮಾಡುತ್ತಾರೆ ಎಂದು ಹೇಳಲಾಗಿದೆ.
ಅಮ್ಮ ಮಗ, ಅಪ್ಪ ಮಗಳ ನಡುವೆ ಹೆಚ್ಚುತ್ತಿರುವ ಅನೈತಿಕ ಸಂಬಂಧ, ಯಾಕೆ ಹೀಗಾಗುತ್ತೆ?
ವಿವಾಹೇತರ ಸಂಬಂಧದ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಏನಿದೆ ?
ಗ್ಲೀಡೆನ್ ಎಂಬ ಫ್ರೆಂಚ್ ಮೂಲದ ವಿವಾಹೇತರ ಸಂಬಂಧದ ಡೇಟಿಂಗ್ ಅಪ್ಲಿಕೇಷನ್ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದೆ. ಭಾರತೀಯ ಮಹಿಳೆಯರು ಏಕೆ ಗಂಡನಿಗೆ ವಂಚಿಸಲು ಬಯಸುತ್ತಾರೆ ಎನ್ನುವುದನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಡೇಟಿಂಗ್ ಅಪ್ಲಿಕೇಷನ್ ಭಾರತದಲ್ಲೇ 5 ಲಕ್ಷಕ್ಕೂ ಹೆಚ್ಚು ಸಬ್ ಸ್ಕೈಬರ್ಸ್ ಅನ್ನು ಹೊಂದಿದೆ.ಇನ್ನೊಂದು ವಿಶೇಷ ಅಂಶವೆಂದರೆ ಇದೇ ಅಪ್ಲಿಕೇಷನ್ ಅನ್ನು ಬಳಸುತ್ತಿರುವ ಶೇ.20ರಷ್ಟು ಭಾರತೀಯ ಪುರುಷರು ಹಾಗೂ ಶೇ.13ರಷ್ಟು ಮಹಿಳೆಯರು ತಮ್ಮ ಸಂಗಾತಿಗೆ ವಂಚಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರಂತೆ.
ಮಹಿಳೆಯರು ಗಂಡನನ್ನು ವಂಚಿಸುವುದ್ಯಾಕೆ ?
ಮಹಿಳೆಯರು ಗಂಡನನ್ನು ಬಿಟ್ಟು ಬೇರೆ ಗಂಡಸರ ಬೆನ್ನು ಬೀಳುವುದಕ್ಕೆ ಕಾರಣವೂ ಇದೆ. ಭಾರತದಲ್ಲಿ 10ರಲ್ಲಿ 7 ಮಹಿಳೆಯರು ತಮ್ಮ ಪತಿ ತಮಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡುವುದಿಲ್ಲ ಎಂಬ ಕಾರಣಕ್ಕೆ ವಂಚನೆ ಮಾಡುತ್ತಾರಂತೆ. ಅಷ್ಟೇ ಸಂಖ್ಯೆಯ ಮಹಿಳೆಯರು ತಮ್ಮ ಏಕಾಂತದ ಸಮಯವನ್ನು ಕಳೆಯುವ ಸಲುವಾಗಿ ಪತಿಗೆ ವಂಚನೆ ಮಾಡುತ್ತಾರೆ ಎನ್ನಲಾಗಿದೆ. ಶೇ.77ರಷ್ಟು ಮಹಿಳೆಯರು ಏಕಾಂತದ ಸಮಯದಿಂದ ರೋಸಿಹೋಗಿರುತ್ತಾರೆ. ಇಲ್ಲವೇ ವಿವಾಹೇತರ ಸಂಬಂಧದಿಂದ ಬದುಕಿನ ಎಕ್ಸೈಟ್ ಮೆಂಟ್ ಹೆಚ್ಚಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಫ್ಲರ್ಟ್ ಮಾಡುವುದಕ್ಕಾಗಿ ಬಾಹ್ಯ ಸಂಬಂಧವನ್ನು ಹೊಂದಿರುವುದಾಗಿ 10ರಲ್ಲಿ 4 ಮಹಿಳೆಯರು ಹೇಳಿದ್ದಾರೆ.
ರಾತ್ರಿ ವಿಚಿತ್ರವಾಗಿ ಆಡುವ ಪತಿಯಿಂದ ಹಾಳಾಯ್ತು ಮಹಿಳೆ ಸೆಕ್ಸ್ ಲೈಫ್
ಮಹಿಳೆಯರು ಗಂಡಂದಿರಿಗೆ ಮೋಸ ಮಾಡಿದ್ಬೇಗೆ ?
ಮಹಿಳೆಯರು ಗಂಡಂದಿರಿಗೆ ಮೋಸ ಮಾಡಿದ್ಬೇಗೆ ಅನ್ನೋ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶೇ.57ರಷ್ಟು ಪುರುಷರು, ಶೇ.52ರಷ್ಟು ಮಹಿಳೆಯರು ತಮ್ಮ ಸಂಗಾತಿ ವ್ಯಾಪಾರಕ್ಕಾಗಿ ಊರು ಬಿಟ್ಟು ಹೋದಾಗ ಮೋಸ ಮಾಡುವುದಾಗಿ ಹೇಳಿದ್ದಾರೆ. ಪತಿಗೆ ವಂಚಿಸುವ ಶೇ.31ರಷ್ಟು ಮಹಿಳೆಯರು ತಾವು ಅಕ್ಕಪಕ್ಕದ ಮನೆಯವರೊಡನೆ ಸಂಬಂಧ ಹೊಂದಿರುವುದಾಗಿ ಹೇಳಿದ್ದಾರೆ.
ಮಾಜಿ ಪ್ರೇಮಿಗಳ ಬಗ್ಗೆ ಮರಳಿ ಮನಸ್ಸಾಗುತ್ತದೆ
ಭಾರತದಲ್ಲಿ 10ರಲ್ಲಿ 7 ಮಹಿಳೆಯರು ತಮ್ಮ ಗಂಡನ ಹೊರತಾಗಿ ಮತ್ತೊಂದು ಸಂಬಂಧವನ್ನು ಇಟ್ಟುಕೊಳ್ಳುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗುತ್ತಿದೆ. ಅದಕ್ಕಾಗಿ ಗಂಡನಿಗೆ ಸುಳ್ಳು, ವಂಚನೆ, ಮೋಸದ ಮಾತುಗಳನ್ನು ಆಡುತ್ತಾರೆ. ಅದರಲ್ಲಿ ಬಹುತೇಕ ಮಹಿಳೆಯರು ತಮ್ಮ ಹಳೆಯ ಗೆಳೆಯನ ಕಡೆ ವಾಲುತ್ತಾರೆ ಎಂದು ಸರ್ವೇಯಿಂದ ತಿಳಿದುಬಂದಿದೆ.