ಜೆನ್‌ ಝೀಯ (gen z) ಹೊಸ ಹೊಸ ಟ್ರೆಂಡ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ. ಭಜನೆ ಕ್ಲಬ್‌ ಆಯ್ತು. ಈಗ ಸ್ಕ್ರೀಮ್‌ ಕ್ಲಬ್‌ ಸರದಿ. ಏನಿದು ಕಿರುಚಾಟದ ಕ್ಲಬ್?‌ ಏನಿದರ ಉದ್ದೇಶ? ಭಾರತದಲ್ಲೂ ಬಂತಾ? ವಿವರ ಇಲ್ಲಿದೆ ನೋಡಿ. 

ಇಂದಿನ ಫಾಸ್ಟ್ ಲೈಫ್‌ನಲ್ಲಿ ಸ್ಟ್ರೆಸ್ ಅನ್ನೋದು ಈಗ ಸಾಮಾನ್ಯವಾಗಿದೆ. ಅದನ್ನು ಹೊರಹಾಕೋಕೆ ಜನ ಹೊಸ ಹೊಸ ಮಾರ್ಗಗಳನ್ನು ಹುಡುಕ್ತಾ ಇದ್ದಾರೆ. ಈಗ ನಗರಗಳಲ್ಲಿ ಸೈಲೆಂಟ್ ಆಗಿ ಟ್ರೆಂಡ್ ಆಗ್ತಾ ಇರುವ ಒಂದು ಹೊಸ ಐಡಿಯಾ ಏನು ಗೊತ್ತಾ? — ʼಸ್ಕ್ರೀಮ್ ಕ್ಲಬ್ʼ ಅಥವಾ ʼಕಿರುಚಾಟದ ಕ್ಲಬ್‌ʼ! ಹೌದು, ಹೆಸರು ಕೇಳಿದ್ರೆ ವಿಚಿತ್ರ ಅನ್ನಿಸಬಹುದು. ಇದು ಯಾವುದೋ ಒಂದು ಬ್ರಾಂಡ್ ಅಲ್ಲ. ಸರಳವಾಗಿ ಹೇಳ್ಬೇಕಂದ್ರೆ, ಜನ ಒಟ್ಟಿಗೆ ಸೇರಿ… ಜೋರಾಗಿ ಕೂಗೋದು ಅಥವಾ ಕಿರುಚಾಡೋದು!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಟರಿ ಕ್ಲಬ್‌, ಭಜನೆ ಕ್ಲಬ್‌, ಪುಸ್ತಕ ಓದುವ ಕ್ಲಬ್, ರನ್ ಕ್ಲಬ್ — ಇವೆಲ್ಲಾ ನಾವು ಕೇಳಿದ್ದೀವಿ. ಆದರೆ ಈಗ ಯಂಗ್ ಜನ, ವಿಶೇಷವಾಗಿ Gen Z, ತಮ್ಮ ಮನದ ಒತ್ತಡ ಹೊರಹಾಕೋಕೆ ಈ ಸ್ಕ್ರೀಮ್ ಕ್ಲಬ್‌ಗಳಿಗೆ ಹೋಗ್ತಿದ್ದಾರೆ. ನಿಮಗೂ ಹೋಗಬೇಕು ಅನ್ನಿಸ್ತಿದೆಯಾ?

ಹಾಗಾದ್ರೆ ಏಕೆ ಇದು ಇಷ್ಟು ಆಸಕ್ತಿಕರವಾಗಿದೆ ಅನ್ನೋದನ್ನ ನೋಡೋಣ. Gen Zಗೆ “ಬರ್ನೌಟ್ ಆಗಬಾರದು” ಅನ್ನೋ ಭಯ ಇಲ್ಲ. ಏಕೆಂದರೆ ಹಲವರು ಈಗಾಗಲೇ ಬರ್ನೌಟ್ ಆಗಿದ್ದಾರೆ. ಕೆಲಸದ ಒತ್ತಡ, ಫೋನ್ ನೋಟಿಫಿಕೇಶನ್‌ಗಳು, ಕೆರಿಯರ್ ಟೆನ್ಷನ್, ಲೈಫ್‌ನಲ್ಲಿ ಏನು ಮಾಡ್ತಿದ್ದೀಯಾ ಎಂಬ ಪ್ರಶ್ನೆಗಳು… ಇವೆಲ್ಲಾ ಸೇರಿ ಮನಸ್ಸು ಕದಡಿ ಹೋಗಿದೆ. ಈ ಫೀಲಿಂಗ್ಸ್ ಹೊರಗೆ ಬರೋಕೆ ಜಾಗವೇ ಇಲ್ಲ. ಅವು ಒಳಗೇ ಇರುತ್ತವೆ, ಬೆಳೆಯುತ್ತವೆ… ಮನಸ್ಸು ಕೆಡುತ್ತದೆ.

ಸ್ಕ್ರೀಮ್‌ ಕ್ಲಬ್‌ನಲ್ಲಿ ಏನಾಗುತ್ತೆ?

ಈ ಅಂತರವನ್ನೇ ತುಂಬಿಸಲು ಸ್ಕ್ರೀಮ್ ಕ್ಲಬ್ ಮುಂದಾಗಿದೆ. ಅಲ್ಲಿ ಏನು ಆಗುತ್ತೆ ಗೊತ್ತಾ? ತುಂಬಾ ಸಿಂಪಲ್. ಜನ ಪಾರ್ಕ್ ಅಥವಾ ಓಪನ್ ಸ್ಪೇಸ್‌ನಲ್ಲಿ ಸೇರುತ್ತಾರೆ. ಮೊದಲು ಸ್ವಲ್ಪ ಉಸಿರಾಟದ ವ್ಯಾಯಾಮ ಮಾಡ್ತಾರೆ. ನಂತರ ಸ್ವಲ್ಪ ಮೌನ. ಆಮೇಲೆ ಎಲ್ಲರೂ ಒಟ್ಟಿಗೆ ಜೋರಾಗಿ ಕೂಗ್ತಾರೆ, ಕಿರುಚುತ್ತಾರೆ. ಇಲ್ಲಿ ಯಾರೂ ಯಾರನ್ನೂ ಜಡ್ಜ್ ಮಾಡೋದಿಲ್ಲ. ಯಾವುದೇ ನಿಯಮ ಇಲ್ಲ. ಬೊಬ್ಬಿಡುವುದು ಮಾತ್ರ.

ಆದರೆ ಇಂಟರೆಸ್ಟಿಂಗ್ ವಿಷಯ ಇರೋದು ನಂತರ. ಕೆಲವರು ನಗ್ತಾರೆ, ಕೆಲವರು ಅಳ್ತಾರೆ, ಕೆಲವರು ಒಬ್ಬರನ್ನೊಬ್ಬರು ನೋಡಿ ಸಹಜವಾಗುತ್ತಾರೆ. ಆದರೆ ಕೊನೆಯಲ್ಲಿ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಕನೆಕ್ಟ್ ಆಗ್ತಾರೆ. ಕೆಲವರು ಮಾತಾಡ್ತಾರೆ, ತಮ್ಮ ಫೀಲಿಂಗ್ಸ್ ಹಂಚಿಕೊಳುತ್ತಾರೆ. ಒಂದು ರಿಲೀಫ್ ಫೀಲಿಂಗ್ ಬರುತ್ತದೆ. ಹೀಗಾಗಿ ಇದು ಕೇವಲ ಕೂಗುವ ಜಾಗ ಅಲ್ಲ. ನೀನು ಹೇಗಿದ್ದೀಯೋ ಹಾಗೆ ಇರೋಕೆ ಒಪ್ಪಿಕೊಂಡ ಜಾಗ ಎಂಬ ಫೀಲಿಂಗ್.

ಇದರಲ್ಲಿರುವ ಮುಖ್ಯ ವಿಷಯ ಅಂದರೆ ಒಟ್ಟು ಸೇರುವಿಕೆ. ಇಂದಿನ ವೆಲ್‌ನೆಸ್ ಟ್ರೆಂಡ್‌ಗಳು ತುಂಬಾ ಫಿಲ್ಟರ್ ಆಗಿರುತ್ತವೆ, ಪರ್ಫೆಕ್ಟ್ ಆಗಿರುತ್ತವೆ. ಆದರೆ ಸ್ಕ್ರೀಮ್ ಕ್ಲಬ್‌ನಲ್ಲಿ ಯಾವುದೇ ತೋರುವಿಕೆ ಇಲ್ಲಿ ನೀನು ನಿನ್ನ ಸ್ಟ್ರೆಸ್ ಅನ್ನು ವಿವರಿಸಬೇಕಾಗಿಲ್ಲ. ದೊಡ್ಡ ದೊಡ್ಡ ಪದಗಳು ಬೇಕಾಗಿಲ್ಲ. ಮಾತುಗಳೇ ಬೇಕಾಗಿಲ್ಲ.

ಆದರೆ ಒಂದು ಪ್ರಶ್ನೆ ಬರುತ್ತದೆ — ಇದು ನಿಜವಾಗಿಯೂ ಕೆಲಸ ಮಾಡುತ್ತಾ ಅಂತ. ತಜ್ಞರ ಪ್ರಕಾರ, ಕೂಗೋದ್ರಿಂದ ತಕ್ಷಣದ ರಿಲೀಫ್ ಸಿಗುತ್ತೆ. ಒಳಗಿನ ಟೆನ್ಷನ್ ಸ್ವಲ್ಪ ಕಡಿಮೆ ಆಗುತ್ತೆ. ಆದರೆ ಇದು ಲಾಂಗ್ ಟರ್ಮ್ ಸೊಲ್ಯೂಶನ್ ಅಲ್ಲ. ಇದು ಥೆರಪಿ ಅಥವಾ ಆಳವಾದ ಆತ್ಮಪರಿಶೀಲನೆಗೆ ಜಾಗ ಮಾಡಿಕೊಡುವ ಬದಲಾವಣೆ ಆಗೋದಿಲ್ಲ.

ಭಾರತದಲ್ಲಿ ಎಲ್ಲಿದೆ?

ಭಾರತದಲ್ಲಿ ಇದು ಇನ್ನೂ ದೊಡ್ಡ ಮಟ್ಟದಲ್ಲಿ ಶುರುವಾಗಿಲ್ಲ. ಆದರೆ ಇಲ್ಲಿ ಇರುವ ಸ್ಟ್ರೆಸ್, ಒಂಟಿತನ, ಮತ್ತು ಮೆಂಟಲ್ ಹೆಲ್ತ್ ಬಗ್ಗೆ ಹೆಚ್ಚುತ್ತಿರುವ ಅರಿವು ನೋಡಿದರೆ, ಇಂತಹ ಐಡಿಯಾ ಇಲ್ಲಿ ಕೂಡ ವರ್ಕ್ ಆಗಬಹುದು. ಆದರೆ ಇಲ್ಲಿ ಸ್ವಲ್ಪ ಪ್ರೈವೇಸಿ, ಸ್ಟ್ರಕ್ಚರ್ ಜೊತೆ ಇರಬಹುದು. ಏಕೆಂದರೆ ನಮ್ಮಲ್ಲಿ ಪಬ್ಲಿಕ್ ಪಾರ್ಕ್‌ನಲ್ಲಿ ಕೂಗಿದರೆ ಜನರು ವಿಚಿತ್ರವಾಗಿ ನೋಡುವ ಸಾಧ್ಯತೆ ಜಾಸ್ತಿ!

ಎಲ್ಲವೂ ತಲೆಯಲ್ಲಿ, ಮನದಲ್ಲಿ ತುಂಬಿಕೊಂಡು ಭಾರ ಆಗಿದೆ ಅನಿಸಿದರೆ, ಒಳಗೊಳಗೇ ಇಟ್ಟುಕೊಂಡು ಕಂಗೆಟ್ಟಿದ್ದೀನಿ ಅನಿಸಿದರೆ ಸ್ಕ್ರೀಮ್ ಕ್ಲಬ್ ಟ್ರೈ ಮಾಡಬಹುದು. ಅದು ಒಂದು ರಿಲೀಫ್ ಕೊಡಬಹುದು. ಆದರೆ ಇದು ಎಲ್ಲಾ ಸಮಸ್ಯೆಗಳ ಪರಿಹಾರ ಅಲ್ಲ. ಆದರೆ ಶುರು ಮಾಡೋಕೆ ಒಂದು ಸಿಂಪಲ್ ಸ್ಟೆಪ್ ಆಗಿರಬಹುದು.