ಸಿಚುಯೇಷನ್‌ಶಿಪ್ ಅಂದ್ರೆ ಏನು? Gen Z ಕಾಲದ ಹೊಸ ಲವ್ ಸ್ಟೋರಿ ಇದು!
ಕಾಲ ಬದಲಾದಂತೆ ಸಂಬಂಧಗಳ ಸ್ವರೂಪವೂ ಬದಲಾಗುತ್ತಿದೆ. ಮೊದಲು ಪ್ರೀತಿ, ಮದುವೆ ಅಂತ ಸ್ಪಷ್ಟವಾದ ಸಂಬಂಧಗಳು ಹೆಚ್ಚಾಗಿದ್ದವು. ಆದರೆ ಈಗ 'ಸಿಚುಯೇಷನ್‌ಶಿಪ್' (Situationship) ಅನ್ನೋ ಹೊಸ ಬಗೆಯ ಸಂಬಂಧದ ಬಗ್ಗೆ ಹೆಚ್ಚು ಕೇಳಿಬರುತ್ತಿದೆ. ಹಾಗಿದ್ರೆ ಏನಿದು?
15

Image Credit : Gemini AI
ಸಿಚುಯೇಷನ್‌ಶಿಪ್ ಅಂದ್ರೆ ಏನು?
ಸಿಚುಯೇಷನ್‌ಶಿಪ್ ಅಂದ್ರೆ ಇಬ್ಬರ ನಡುವೆ ಒಂದು ಸಂಬಂಧ ಇರುತ್ತೆ, ಆದರೆ ಅದಕ್ಕೊಂದು ಸ್ಪಷ್ಟವಾದ ಬದ್ಧತೆ ಇರೋದಿಲ್ಲ. ಇಬ್ಬರೂ ಮಾತಾಡ್ತಾರೆ, ಭೇಟಿಯಾಗ್ತಾರೆ, ಹತ್ತಿರವೂ ಇರ್ತಾರೆ. ಆದರೆ 'ನಾವು ರಿಲೇಷನ್‌ಶಿಪ್‌ನಲ್ಲಿದ್ದೇವೆ' ಅಂತ ಹೇಳಿಕೊಳ್ಳುವ ಹಂತಕ್ಕೆ ಹೋಗಿರುವುದಿಲ್ಲ. ಈ ಸಂಬಂಧ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅನ್ನೋ ಗೊಂದಲ ಇರುತ್ತೆ. ಇದು ಪ್ರೀತಿಯಂತೆ ಕಂಡರೂ, ಸಂಬಂಧಕ್ಕೆ ಸ್ಪಷ್ಟವಾದ ಹೆಸರಿರುವುದಿಲ್ಲ.
25
Image Credit : Gemini AI
ಕಮಿಟೆಡ್ ರಿಲೇಷನ್‌ಶಿಪ್‌ಗೂ ಇದಕ್ಕೂ ವ್ಯತ್ಯಾಸವೇನು?
ಒಂದು ಕಮಿಟೆಡ್ ಸಂಬಂಧದಲ್ಲಿ ಇಬ್ಬರಿಗೂ ಸ್ಪಷ್ಟತೆ, ನಂಬಿಕೆ ಮತ್ತು ಭವಿಷ್ಯದ ಬಗ್ಗೆ ಯೋಚನೆಗಳಿರುತ್ತವೆ. ಆದರೆ ಸಿಚುಯೇಷನ್‌ಶಿಪ್‌ನಲ್ಲಿ ಪರಿಸ್ಥಿತಿ ಬೇರೆಯೇ ಇರುತ್ತೆ. ಸಂಬಂಧಕ್ಕೆ ಒಂದು ಹೆಸರಿರುವುದಿಲ್ಲ. ಒಂದು ದಿನ ತುಂಬಾ ಹತ್ತಿರವಿದ್ದಂತೆ, ಇನ್ನೊಂದು ದಿನ ದೂರವಾದಂತೆ ವರ್ತಿಸುತ್ತಾರೆ. ಈ ರೀತಿ ಸಿಗುವ ಮಿಶ್ರ ಸಂಕೇತಗಳು (mixed signals) ಹಲವರಲ್ಲಿ ಗೊಂದಲ ಸೃಷ್ಟಿಸುತ್ತವೆ.
35
Image Credit : Gemini AI
ನಿಮ್ಮ ಸಂಬಂಧ ಯಾವುದು ಎಂದು ತಿಳಿಯುವುದು ಹೇಗೆ?
ನೀವು ಕೂಡ ಇಂಥದ್ದೇ ಸಂಬಂಧದಲ್ಲಿದ್ದೀರಾ ಎಂದು ತಿಳಿಯಲು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು. ನಿಮ್ಮಿಬ್ಬರ ನಡುವಿನ ಸಂಬಂಧಕ್ಕೆ ಸ್ಪಷ್ಟತೆ ಇದೆಯೇ? ಭೇಟಿಯಾಗುವ ಪ್ಲಾನ್‌ಗಳು ಯಾವಾಗಲೂ ಕೊನೆ ಕ್ಷಣದಲ್ಲಿ ಆಗುತ್ತವೆಯೇ? ತುಂಬಾ ದಿನಗಳಾದರೂ ನಿಮ್ಮ ಸಂಗಾತಿ ಅವರ ಸ್ನೇಹಿತರಿಗೆ ನಿಮ್ಮನ್ನು ಪರಿಚಯಿಸಿಲ್ಲವೇ? ಪ್ರೀತಿಯಿಂದ ಮಾತನಾಡಿದರೂ, 'ಗೆಳತಿ' ಅಥವಾ 'ಗೆಳೆಯ' ಎಂದು ಎಂದಿಗೂ ಕರೆದಿಲ್ಲವೇ? ಈ ಪ್ರಶ್ನೆಗಳಿಗೆ 'ಹೌದು' ಎನ್ನುವ ಉತ್ತರ ಹೆಚ್ಚಾಗಿದ್ದರೆ, ನೀವು ಸಿಚುಯೇಷನ್‌ಶಿಪ್‌ನಲ್ಲಿರುವ ಸಾಧ್ಯತೆ ಇದೆ.
45
Image Credit : Gemini AI
ಮಾನಸಿಕ ಆರೋಗ್ಯದ ಮೇಲೆ ಇದರ ಪರಿಣಾಮ
ಇಂತಹ ಸಂಬಂಧಗಳು ಆರಂಭದಲ್ಲಿ ಖುಷಿ ಕೊಡಬಹುದು, ಆದರೆ ನಂತರ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ತಜ್ಞರು ಇದನ್ನು ಜಂಕ್ ಫುಡ್‌ಗೆ ಹೋಲಿಸುತ್ತಾರೆ. ಆರಂಭದಲ್ಲಿ ಖುಷಿ ಎನಿಸಿದರೂ, ಕೊನೆಗೆ ತೃಪ್ತಿ ನೀಡುವುದಿಲ್ಲ. ಸಂಬಂಧದಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಅಸುರಕ್ಷಿತ ಭಾವನೆ, ಆತ್ಮವಿಶ್ವಾಸದ ಕೊರತೆ ಮತ್ತು ಭಾವನಾತ್ಮಕ ಗೊಂದಲದಂತಹ ಸಮಸ್ಯೆಗಳು ಎದುರಾಗಬಹುದು.
55
Image Credit : Gemini AI
ಇಂತಹ ಸಂದರ್ಭದಲ್ಲಿ ಏನು ಮಾಡಬೇಕು?
ಸಿಚುಯೇಷನ್‌ಶಿಪ್‌ನಲ್ಲಿ ಹೆಚ್ಚಾಗಿ ಒಬ್ಬರು ಮಾತ್ರ ಹೆಚ್ಚು ಬಾಂಧವ್ಯ ಬೆಳೆಸಿಕೊಂಡಿರುತ್ತಾರೆ. ಇನ್ನೊಬ್ಬರು ದೂರವಿದ್ದುಕೊಂಡು ತಮ್ಮ ಅಗತ್ಯಗಳಿಗೆ ಮಾತ್ರ ಆದ್ಯತೆ ನೀಡುತ್ತಾರೆ. ಹಾಗಾಗಿ, ಇಂತಹ ಸಂದರ್ಭಗಳಲ್ಲಿ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು. ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಹೇಳಿ, ಸಂಬಂಧದ ಬಗ್ಗೆ ಸ್ಪಷ್ಟತೆ ಕೇಳಿ, ಬದ್ಧತೆ ಇಲ್ಲದಿದ್ದರೆ ಮುಂದುವರಿಯುವ ಮುನ್ನ ಯೋಚಿಸಿ. ಯಾರಾದರೂ ಸಂಬಂಧಕ್ಕೆ ಸ್ಪಷ್ಟತೆ ನೀಡದಿದ್ದರೆ, ಅದೇ ಒಂದು ಉತ್ತರವೆಂದು ನೀವು ಅರ್ಥಮಾಡಿಕೊಳ್ಳಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

