ನ್ಯೂಜಿಲ್ಯಾಂಡ್‌ ಸೇರಿದಂತೆ ಹಲವು ಪಾಶ್ಚಿಮಾತ್ಯ ದೇಶಗಳಲ್ಲಿ ಪೋರ್ನ್‌ ಒಂದು ವರವೂ ಹೌದು, ಶಾಪವೂ ಹೌದು. ಶಾಪ ಯಾಕೆಂದರೆ ಮಕ್ಕಳು, ಹದಿಹರೆಯದವರು ಇತ್ತೀಚೆಗೆ ಪೋರ್ನನ್ನು ಹೆಚ್ಚು ಹೆಚ್ಚಾಗಿ ನೋಡುತ್ತಿದ್ದಾರೆ. ಮಕ್ಕಳಿಗೆ ಅದರ ಬಗ್ಗೆ ಕೆಟ್ಟ ಕುತೂಹಲ. ಆದರೆ ಪೋರ್ನ್‌ನಲ್ಲಿ ಕಾಣುವುದೆಲ್ಲ ನಿಜವೇ ಅಂದುಕೊಂಡುಬಿಡುವುದರಿಂದ ಅಪಾಯವಿದೆ.

ಸದ್ಯ ನ್ಯೂಜಿಲ್ಯಾಂಡ್‌ನಲ್ಲಿ ಒಂದು ಬಗೆಯ ಅಭಿಯಾನ ಶುರುವಾಗಿದೆ. ಮಕ್ಕಳನ್ನು ಪೋರ್ನ್‌ನಿಂದ ದೂರ ಇಡಿ ಅಂತ. ಅದಕ್ಕೆ ಅವರು ಮಾಡಿದ ಕ್ರಿಯೇಟಿವ್‌ ಉಪಾಯ ಅಂದರೆ ಒಂದು ಜಾಹೀರಾತು. ಅದೇನು ಅಂದರೆ, ಇಬ್ಬರು ಪೋರ್ನ್‌ ನಟ- ನಟಿಯರು ಪೂರ್ತಿ ಬೆತ್ತಲೆಯಾಗಿ ಒಂದು ಮನೆಯ ಕರೆಗಂಟೆ ಒತ್ತುತ್ತಾರೆ. ಬಾಗಿಲು ತೆರೆದರೆ ಹೊರಗೆ ಇವರ ಸಂಪೂರ್ಣ ಅವತಾರ ದರ್ಶನ. ಮಕ್ಕಳು ಮನೆಯಲ್ಲಿದ್ದರೆ ಆಗ ಹೆತ್ತವರು ಹೇಗೆ ವರ್ತಿಸುತ್ತಾರೆ. ಸ್ವತಃ ಹೆತ್ತವರು ಅದನ್ನು ನೋಡಿ ಏನು ಮಾಡುತ್ತಾರೆ? ಈ ಶಾಕಿಂಗ್‌ ಎಕ್ಸ್‌ಪ್ರೆಶನ್‌ ಅನ್ನು ಜಾಹೀರಾತು ಮಾಡಿ ಟಿವಿ ವಾಹಿನಿಗಳಲ್ಲಿ ಬಿಡಲಾಗಿದೆ. ಸತಕತ್‌ ವೈರಲ್‌ ಆಗಿ ಓಡ್ತಿದೆ ಅದು. ತುಂಬಾ ಜನ ಅದನ್ನು ಮೆಚ್ಚಿಕೊಂಡಿದ್ದಾರೆ.

ಈ ಜಾಹೀರಾತಿನಲ್ಲಿ ಏನಪ್ಪಾ ಅಂಥ ವಿಶೇಷ ಅಂತೀರಾ? ಇದೊಂದು ಸಾಂಕೇತಿಕ. ಈಗ ಮನೆ ಮನೆಗಳಲ್ಲಿ ಆಗ್ತಿರೋದೂ ಅದೇ ತಾನೆ? ನೀವು ಇಂಟರ್‌ನೆಟ್‌ ಬಳಸುತ್ತೀರಿ. ನಿಮ್ಮ ಮಕ್ಕಳ ಕೈಗೂ ಮೊಬೈಲ್‌ ಸ್ಮಾರ್ಟ್‌ಫೋನ್‌ಗಳು ಸಿಗುತ್ತಿವೆ. ಒಂದಲ್ಲ ಒಂದು ದಿನ ನಿಮ್ಮ ಮಗು ನೀವಿರುವಾಗೇ ಅಥವಾ ನೀವು ಇಲ್ಲದ ಹೊತ್ತಿನಲ್ಲಿ ವಯಸ್ಕರು ನೋಡುವಂಥ ಕಾರ್ಯಕ್ರಮಗಳಿಗೆ ದಿಡೀರನೆ ಎಡತಾಕುತ್ತದೆ. ಇದರಲ್ಲಿ ಮಕ್ಕಳ ತಪ್ಪೇನೂ ಇಲ್ಲ. ನಮ್ಮ ಸೋಶಿಯಲ್‌ ತಾಣಗಳ ಅಥವಾ ಗೂಗಲ್‌ನ ಆಲ್ಗಾರಿದಂ ಹೇಗಿದೆ ಅಂದ್ರೆ ಒಂದಲ್ಲ ಒಂದು ಹೊತ್ತಿನಲ್ಲಿ ಮಕ್ಕಳು ಪೋರ್ನ್ ಅಥವಾ ಅಡಲ್ಟ್‌ ಕಂಟೆಂಟ್‌ಗೆ ಮುಖಾಮುಖಿ ಆಗಲೇಬೇಕು. ಅದು ಏನು ಎಂಬುದು ಮಕ್ಕಳಿಗೆ ಆ ಕ್ಷಣಕ್ಕೆ ಗೊತ್ತಾಗದೆ ಹೋಗಬಹುದು. ಆದರೆ ಒಂದು ಆಘಾತವನ್ನಂತೂ ಉಳಿಸಿ ಹೋಗುತ್ತದೆ. ಅಥವಾ ಹಲವು ಪ್ರಶ್ನೆಗಳನ್ನು ಮೂಡಿಸುತ್ತದೆ. ಬಾಗಿಲಲ್ಲಿ ಬೆತ್ತಲೆ ಜೋಡಿಯನ್ನು ನೋಡಿದ ಹಾಗೆಯೇ ಅದು. ಈ ಜಾಹೀರಾತು ಹೇಳಲು ಯತ್ನಿಸಿರುವುದೇ ಅದನ್ನು.

#Feelfree: ಗರ್ಭಿಣಿಯರು ಸೆಕ್ಸ್ ಮಾಡಬಹುದಾ? 

ಅದು ಸರಿ, ಮಕ್ಕಳು ಇದ್ದಕ್ಕಿದ್ದಂತೆ ಪೋರ್ನ್‌ ಕಂಟೆಂಟ್‌ ನೋಡಿಬಿಟ್ಟರೆ, ಅವರು ನೋಡಿದರು ಎಂದು ನಿಮಗೆ ಗೊತ್ತಾದರೆ, ಅದರ ಬಗ್ಗೆ ಮಕ್ಕಳು ಪ್ರಶ್ನೆ ಕೇಳಿದರೆ ನೀವು ಹೇಗೆ ರಿಯಾಕ್ಟ್‌ ಮಾಡುತ್ತೀರಿ? ಇದರ ಮೇಲೆ ಮುಂದೆ ನಿಮ್ಮ ಮಗು ಪೋರ್ನ್‌ ವಿಷಯದಲ್ಲಿ ಹೇಗೆ ವರ್ತಿಸುತ್ತದೆ ಎಂಬುದು ನಿಂತಿದೆ. ನೀವು ಆ ವಿಚಾರವನ್ನು ಮಗುವಿನ ಮನಸ್ಸಿನಿಂಧ ಓಡಿಸಲು ಬೇರೇನೋ ವಿಚಾರದತ್ತ ಗಮನ ಸೆಳೆಯಬಹುದು ಅಥವಾ ಪ್ರಶ್ನೆಯನ್ನು ಹಾರಿಸಬಹುದು. ಆದರೆ ಅದರಿಂದ ಏನೂ ಲಾಭವಿಲ್ಲ. ಮಗುವಿನ ಮನಸ್ಸಿನಲ್ಲಿ ಗೊಂದಲ ಉಳಿಯುತ್ತದೆ. ಅದರ ಬದಲು ಮಗುವಿನ ಮನಸ್ಸಿನಲ್ಲಿ ಏನಿದೆ ಎಂದು ಸರಿಯಾಗಿ ಅರ್ಥ ಮಾಡಿಕೊಂಡು, ಅದಕ್ಕೆ ತಕ್ಕನಾಗಿ ನಿಮ್ಮ ಉತ್ತರಗಳನ್ನು ರೂಪಿಸಿಕೊಳ್ಳುತ್ತ ಹೋಗಿ.

ಶವದ ಜೊತೆ ಸಂಭೋಗ ನಡೆಸಿದ ವಿಕೃತ ಕಾಮಿ: ಇಂಥವರೂ ಇರ್ತಾರಾ? 

ಉದಾಹರಣೆಗೆ, ಚಿಕ್ಕ ಮಗು, ಅವರಿಬ್ಬರೂ ಬೆತ್ತಲೆಯಾಗಿ ಏನು ಮಾಡ್ತಾ ಇದ್ದರು ಎಂಬ ಪ್ರಶ್ನೆಯನ್ನು ಕೇಳಬಹುದು. ಅದು ದೊಡ್ಡವರಿಗಷ್ಟೇ ಅರ್ಥವಾಗುವ ವಿಚಾರ. ಅದನ್ನು ಅರ್ಥ ಮಾಡಿಕೊಳ್ಳಲು ನೀನು ಇನ್ನೂ ದೊಡ್ಡವಳಾಗಬೇಕು. ಈ ಬಗ್ಗೆ ಯಾವುದೇ ಸಂಶಯ ಬಂದರೂ ನೀನು ನಮ್ಮ ಜೊತೆ ಕೇಳು. ಇದರ ಬಗ್ಗೆ ಅಂಜಿಕೆ ಬೇಡ. ನಿನಗೆ ಅದೆಲ್ಲ ಅರ್ಥವಾಗುತ್ತದೆ ಎನ್ನುವ ಪ್ರಾಯ ಬಂದಾಗ ನಿನಗೆ ಅದನ್ನು ವಿವರಿಸಿ ಹೇಳುತ್ತೇವೆ ಎನ್ನಬಹುದು. ತುಸು ದೊಡ್ಡ ಮಗು ಈ ಪ್ರಶ್ನೆ ಕೇಳಿದರೆ, ಅದು ಸಿನಿಮೀಯವಾಗಿ ಚಿತ್ರಿಸಿದ ಒಂದು ಘಟನೆ ಎಂದೂ, ಅದರಲ್ಲಿ ಕಾಣುವುದೆಲ್ಲ ನಿಜವಲ್ಲ ಎಂದೂ ಹೇಳಬಹುದು. ಹಾಗೆಯೇ ಮಗು ಜನಿಸುವುದಕ್ಕಾಗಿ ನಡೆಸುವ ಲೈಂಗಿಕ ಕ್ರಿಯೆ ಅದೆಂದು ಹೇಳಲು ಅಡ್ಡಿಯಿಲ್ಲ. ಆದರೆ ಇದರ ಜೊತೆಗೆ ಬರುವ ಹೆಚ್ಚುವರಿ ಪ್ರಶ್ನೆಗಳನ್ನು ಉತ್ತರಿಸಲು ರೆಡಿಯಾಗಿರಬೇಕು.

ದಾಂಪತ್ಯಕ್ಕೆ ಧಮ್ ನೀಡೋ ಅಭ್ಯಾಸಗಳು ಯಾವುವು ಗೊತ್ತಾ? ..