ಜೋಡಿ ಬೇಕೆಂಬ ಹಾತೊರೆತ, ಆ ಕುರಿತ ಕಲ್ಪನೆ, ಕನಸುಗಳು, ಪ್ರೀತಿ- ಇವೆಲ್ಲದರಲ್ಲೂ ಅಕ್ಕಿಯ ಮಧ್ಯೆ ತೌಡಿರುವಂತೆ ಸತ್ಯದ ನಡುವೆ ಕೆಲವು ಸುಳ್ಳುಗಳು ನುಸುಳಿರುತ್ತವೆ. ಅವೆಲ್ಲ ಎಷ್ಟು ಆಳವಾಗಿ ಬೇರು ಬಿಟ್ಟಿರುತ್ತವೆ ಎಂದರೆ ಸತ್ಯ ಯಾವುದು ಸುಳ್ಳು ಯಾವುದು ಎಂಬುದನ್ನು ಬೇರ್ಪಡಿಸಿ ನೋಡುವುದೇ ಕಷ್ಟ. ಹಾಗೆ ಲವ್ ಆ್ಯಂಡ್ ರೊಮ್ಯಾನ್ಸ್ ಕುರಿತು ಹಬ್ಬಿರುವ ಸುಳ್ಳುಗಳಿವು.

ವಿವಾಹ

ಲವ್ ಹಾಗೂ ರೊಮ್ಯಾನ್ಸ್ ಕುರಿತ ಅತಿ ಸಾಮಾನ್ಯ ಮೂಢನಂಬಿಕೆ ಎಂದರೆ ಅವಕ್ಕೂ ಹಾಗೂ ವಿವಾಹಕ್ಕೂ ಇರುವ ಸಂಬಂಧ. ಪ್ರೀತಿಯನ್ನು ಶಾಶ್ವತಗೊಳಿಸಲು ವಿವಾಹ ಮಾಡಲಾಗುತ್ತದೆ ಎಂದು ಜನರನ್ನು ನಂಬಿಸಲಾಗುತ್ತದೆ. ಆದರೆ, ರೊಮ್ಯಾನ್ಸ್ ಅಥವಾ ಲವ್ ಎಂಬುದು ಸಂಪೂರ್ಣವಾಗಿ ಫೀಲಿಂಗ್ಸ್‌ಗೆ ಸಂಬಂಧಿಸಿದ್ದಾದರೆ, ವಿವಾಹವು ಸಾಮಾಜಿಕವಾದ ಒಂದು ಒಪ್ಪಂದವಷ್ಟೇ. ವಿವಾಹವಾದ ಕೂಡಲೇ ಪ್ರೀತಿ ಹುಟ್ಟಬೇಕು, ಅದು ಶಾಶ್ವತವಾಗುಳಿಯಬೇಕು ಎಂಬುದೇನೂ ಇಲ್ಲ. ಅವೆರಡನ್ನೂ ಬೇರೆಬೇರೆಯಾಗಿಯೇ ನೋಡಬೇಕು. 

24*7 ಜತೆಗೇ ಇರುವುದು ಹೇಗೆ? ಪ್ರೀತಿ ಇಲ್ಲದೆ ಹೂವು ಅರಳೀತು ಹೇಗೆ?

ಪ್ರೇಮ ಪೂರ್ತಿ ಕುರುಡಲ್ಲ

ನಿಜವಾದ ಪ್ರೀತಿ ಕುರುಡು ಎಂಬ ಮಾತಿದೆ. ಹೌದು, ಪ್ರೀತಿಯಿದ್ದಾಗ ಸಂಗಾತಿಯನ್ನು ಅವರು ಹೇಗಿದ್ದಾರೋ ಹಾಗೆಯೇ ಒಪ್ಪಿಕೊಳ್ಳುತ್ತೇವೆ. ಆದರೆ ಆಗಲೂ ಅವರ ಕೆಲವೊಂದು ಗುಣ, ಸ್ವಭಾವ, ನಡೆಗಳು ಕಿರಿಕಿರಿ ತರುತ್ತಿರುತ್ತವೆ. ಪ್ರೀತಿಯ ಅಮಲಲ್ಲಿ ಆ ಸ್ವಭಾವಗಳೆಲ್ಲ ವರ್ಣಮಯವಾಗುವುದು ಸಾಧ್ಯವಿಲ್ಲ.

ದೂರವಿದ್ದಷ್ಟೂ ಪ್ರೀತಿ ಹೆಚ್ಚಾ?

ಸಂಗಾತಿಯು ದೂರ ಹೋದಾಗ, ಕೆಲ ದಿನ ಅಥವಾ ವರ್ಷಗಳು ಬೇರೆ ಕಡೆ ಹೋದಾಗ ಅವರ ಮೇಲೆ ಪ್ರೀತಿ ಹೆಚ್ಚುತ್ತದೆ ಎಂಬ ಮಾತಿದೆ. ಆದರೆ, ಪ್ರಾಕ್ಟಿಕಲಿ ನೋಡಿದಾಗ, ಸಂಗಾತಿಯು ಹೆಚ್ಚು ಕಾಲ ದೂರವಿದ್ದರೆ ಅವರಿಲ್ಲದೆ ಆರಾಮಾಗಿ ಬದುಕುವುದನ್ನು ಕಲಿಯುತ್ತೇವೆ. ಕಣ್ಣಿನಿಂದ ದೂರ ಎಂದರೆ ಮನಸ್ಸಿಂದಲೂ ದೂರ ಎಂಬ ಮಾತೇ ಇದೆಯಲ್ಲ... 

ಪ್ರೀತಿ ಹಾಗೂ ದೈಹಿಕ ಆಕರ್ಷಣೆ

ಪ್ರೀತಿಗೂ ದೈಹಿಕ ಆಕರ್ಷಣೆಗೆ ಸಂಬಂಧವಿದೆ ನಿಜ. ಹಾಗಂಥ ದೈಹಿಕ ಸಂಬಂಧದಲ್ಲಿ ಪ್ರೀತಿ ಹುಡುಕಿದರೆ ಸಿಗುವುದು ವೈಫಲ್ಯವಷ್ಟೇ. ದೈಹಿಕ ಆಕರ್ಷಣೆಗಾಗಿ ಸಂಬಂಧವೊಂದರೊಳಕ್ಕೆ ಹೋದರೆ, ಅದು ಕೂಡಾ ಫೇಲ್ ಆಗುತ್ತದೆ. ಪ್ರೀತಿಯಿಂದ ಹುಟ್ಟಿದ, ಮುಂದುವರಿದ ದೈಹಿಕ ಆಕರ್ಷಣೆ ಮಾತ್ರ ಹೆಚ್ಚು ಕಾಲ ಉಳಿಯಬಲ್ಲದು. 

ಪ್ರೀತಿ ಹಾಗೂ ಶ್ರೀಮಂತಿಕೆ

ಪ್ರೀತಿಯನ್ನು ಮೆಟೀರಿಯಲ್ ಹ್ಯಾಪಿನೆಸ್ ಜೊತೆ ತಳುಕು ಹಾಕಲಾಗುತ್ತದೆ.  ಆದರೆ, ಪ್ರೀತಿಯನ್ನು ದುಬಾರಿ ಉಡುಗೊರೆಗಳ ಮೂಲಕವೇ ವ್ಯಕ್ತಪಡಿಸುವ ಅಗತ್ಯವಿಲ್ಲ. ಪ್ರೀತಿಗೆ ಶ್ರೀಮಂತಿಕೆಯ  `ಹಂಗಿಲ್ಲ. ಕಾಳಜಿ, ಪ್ರೀತಿಯ ಮಾತುಗಳು, ಪ್ರೀತಿಯಷ್ಟೇ ಸಾಕು ಪ್ರೀತಿಯನ್ನು ಉಳಿಸಿಕೊಳ್ಳಲು. ಹಣದಿಂದಾಗಿ ಪ್ರೀತಿ ಹುಟ್ಟಲು, ಬೆಳೆಯಲು ಸಾಧ್ಯವಿಲ್ಲ. 

ಮದ್ವೆ ಬೇಡ, ಮಕ್ಕಳು ಬೇಡ ಅಂತಿದೆ ಹೊಸ ಜನರೇಶನ್

ಪ್ರಯತ್ನ

ಪ್ರೀತಿಗೆ ಹೆಚ್ಚು ಪ್ರಯತ್ನ ಹಾಗೂ ಸಮಯ ಹೊಂದಿಸಿಕೊಳ್ಳಬೇಕು ಎಂಬ ನಂಬಿಕೆ ಇದೆ. ಆದರೆ, ಪ್ರೀತಿಯನ್ನು ಹುಟ್ಟಿಸಲು ಅಥವಾ ವ್ಯಕ್ತಪಡಿಸಲು ಹೆಚ್ಚು ಪ್ರಯತ್ನ ಹಾಕಿದಷ್ಟೂ ಅದು ಆರ್ಟಿಫಿಶಿಯಲ್ ಎನಿಸುತ್ತದೆ. ಪ್ರೀತಿ ತಾನಾಗಿಯೇ ವ್ಯಕ್ತವಾಗಬೇಕು. ಸಮಯ, ಸಂದರ್ಭಕ್ಕನುಗುಣವಾಗಿ ಅದು ಹೊರ ಬರಬೇಕು. ಅದಕ್ಕಾಗಿ ಯಾವುದೇ ಪ್ರಯತ್ನ ಹಾಕುವುದು ಬೇಡ. ಅದನ್ನು ಮುಚ್ಚಿಡಲಾಗಲೀ, ಕಟ್ಟಿಹಾಕಲಾಗಲೀ ಸಾಧ್ಯವೂ ಇಲ್ಲ.