Asianet Suvarna News Asianet Suvarna News
breaking news image

ಕಾಸ್ಟ್ಲಿ ಒಡವೆ ಸೇರಿ ಕೇಳಿದ್ದೆಲ್ಲ ಕೊಡ್ತಿದ್ದ ಬಾಯ್ ಫ್ರೆಂಡ್, ಹೇಗೆ ಅನ್ನೋ ಸತ್ಯ ಗೊತ್ತಾದ್ಮೇಲೆ ಹುಡುಗಿ ಶಾಕ್!

ಬಾಯ್ ಫ್ರೆಂಡ್ ಗಿಂತ ಆತ ನೀಡೋ ಗಿಫ್ಟ್ ಅನೇಕರಿಗೆ ವಿಶೇಷವಾಗಿರುತ್ತದೆ. ಅವ ನೀಡುವ ಉಡುಗೊರೆಗೆ ಮರುಳಾಗಿ ಪ್ರೀತಿಯಲ್ಲಿ ಬೀಳುವ ಮಹಿಳೆಯರಿದ್ದಾರೆ. ಅದ್ರಲ್ಲಿ ಈಕೆ ಕೂಡ ಒಬ್ಬಳು. ಕೊಟ್ಟ ಗಿಫ್ಟ್ ಎಲ್ಲ ಮನೆಗೆ ತಂದ್ಮೇಲೆ ಈಕೆಗೆ ಕಟು ಸತ್ಯವೊಂದು ಗೊತ್ತಾಗಿದೆ. ಅದನ್ನು ಎಲ್ಲರಿಗೂ ಹೇಳಿ ಬಾಯ್ ಫ್ರೆಂಡ್ ತಲೆ ಎತ್ತದಂತೆ ಮಾಡಿದ್ದಾಳೆ.
 

My Boyfriend Is A Thief Girlfriend Of Jewel Thief Revels Dirty Past Of Boyfriend roo
Author
First Published May 9, 2024, 3:21 PM IST

ಹಣವಿರುವ ಹುಡುಗನಿಗೆ ಹುಡುಗಿ ಬೀಳ್ತಾಳೆ ಅನ್ನೋದು ಸಾರ್ವಜನಿಕ ಸತ್ಯವಲ್ಲ. ಹಾಗಂತ ಈ ಲೀಸ್ಟ್ ನಲ್ಲಿ ಹುಡುಗಿಯರು ಇಲ್ಲವೇ ಇಲ್ಲ ಎಂದಲ್ಲ. ದುಬಾರಿ ಉಡುಗೊರೆ ನೀಡುವ ಹುಡುಗರಿಗೆ ಡಿಮ್ಯಾಂಡ್ ಜಾಸ್ತಿ. ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ರೀತಿ ಉಡುಗೊರೆ. ಜನರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಗಿಫ್ಟ್ ನೀಡ್ತಾರೆ. ಪ್ರೀತಿಸುವ ಹುಡುಗಿ ವಿಷ್ಯದಲ್ಲಿ ಹುಡುಗ್ರು ಒಂದು ಕೈ ಮುಂದಿರ್ತಾರೆ. ಎಲ್ಲಕ್ಕಿಂತ ಸ್ವಲ್ಪ ಸ್ಪೇಷಲ್ ಆಗಿರುವ ಹಾಗೂ ದುಬಾರಿ ಉಡುಗೊರೆಯನ್ನು ಹುಡುಗಿಗೆ ನೀಡಲು ಪ್ರಯತ್ನಿಸ್ತಾರೆ. ಈ ಮೂಲಕ ಪ್ರೇಯಸಿ ಮನಸ್ಸನ್ನು ತನ್ನತ್ತ ಸೆಳೆಯೋದು ಅವರ ಉದ್ದೇಶ. ಈ ಹುಡುಗಿ ಕೂಡ ಹುಡುಗ ದುಬಾರಿ ಗಿಫ್ಟ್ ನೀಡ್ತಿದ್ದಾನೆ ಅಂತ ಕೊಟ್ಟಿದ್ದೆಲ್ಲ ಬ್ಯಾಗ್ ಗೆ ಹಾಕಿಕೊಂಡಿದ್ದಳು. ಆದ್ರೆ ಈಗ ಆತನ ಸತ್ಯ ಗೊತ್ತಾಗಿದೆ. ಸಹವಾಸ ಬೇಡವೇ ಬೇಡ ಎಂದುಕೊಂಡ ಹುಡುಗಿ ಆತನ ಎಲ್ಲ ವಿಷ್ಯ ಬಿಚ್ಚಿಟ್ಟು ಅವನನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದ್ದಾಳೆ. 

ಘಟನೆ ನಡೆದಿರೋದು ಅಮೆರಿಕಾದ (America) ನ್ಯೂಯಾರ್ಕ್ ನಗರದಲ್ಲಿ. ವ್ಯಾಸ್ ಎಂಬ ಹುಡುಗನ ಕಥೆ ಇದು. ಲಾಸ್ ಏಂಜಲೀಸ್ (Los Angeles) ಪ್ರವಾಸದ ಸಮಯದಲ್ಲಿ ವ್ಯಾನ್ ಒಂದು ಹುಡುಗಿಯನ್ನು ಭೇಟಿಯಾಗಿದ್ದಾನೆ. ವ್ಯಾಸ್ ತನ್ನ ಹೆಸರನ್ನು ವೇಯ್ನ್ ಸ್ಯಾನ್ ಎಂದು ಹೇಳಿದ್ದ. ಅದನ್ನು ಹುಡುಗಿ ನಂಬಿದ್ದಳು. ಮೊದಲ ಭೇಟಿ ನಂತ್ರ ಇಬ್ಬರು ಒಟ್ಟಿಗೆ ವಾಸ ಶುರು ಮಾಡಿದ್ದರು. ವ್ಯಾನ್ ಮನೆ ಬಾಡಿಗೆಯನ್ನು ನೀಡಿರಲಿಲ್ಲ. ಆದ್ರೆ ಹುಡುಗಿಗೆ ದುಬಾರಿ ಉಡುಗೊರೆ (Gift) ಯನ್ನು ನೀಡುತ್ತಿದ್ದ. ಲಕ್ಷಾಂತರ ಬೆಲೆಯ ಆಭರಣಗಳನ್ನು ಆಕೆಗೆ ನೀಡುತ್ತಿದ್ದ. ವ್ಯಾನ್ ನೀಡ್ತಿದ್ದ ಆಭರಣಕ್ಕೆ ಹುಡುಗಿ ಮರುಳಾಗಿದ್ದಳು. ಆತ ತನ್ನ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿದ್ದ, ನನ್ನನ್ನು ಪ್ರೀತಿಸುತ್ತಿದ್ದ. ಹಾಗಾಗಿ ಆತನನ್ನು ನಾನು ಸಂಪೂರ್ಣ ನಂಬಿದ್ದೆ ಎನ್ನುತ್ತಾಳೆ ಹುಡುಗಿ.

ಇದೇ ಫಸ್ಟ್ ಟೈಮ್ ಹೋದ ಸ್ಥಳದಲ್ಲಿ ಮಗನ ಪೇಂಟಿಂಗ್, ನೋಡಿ ಬೆಚ್ಚಿದ ದಂಪತಿ! ಪುನರ್ಜನ್ಮ ಇದೇನಾ?

ಯಲಾಯ್ತು ವ್ಯಾನ್ ಸತ್ಯ : ಮೊದಲ ಭೇಟಿಯಲ್ಲಿಯೇ ಹುಡುಗಿಯನ್ನು ಸೆಳೆದಿದ್ದ ವ್ಯಾನ್ ಉತ್ತಮ ವ್ಯಕ್ತಿ ಎಂದು ಹುಡುಗಿ ಭಾವಿಸಿದ್ದಳು. ಹಾಗಾಗಿಯೇ ಆತನನ್ನು ಪ್ರೀತಿಸಲು ಶುರು ಮಾಡಿದ್ದಳು. ಆತ ಎಲ್ಲಿಂದ ಆಭರಣ ತರ್ತಾನೆ ಎಂಬ ಪ್ರಶ್ನೆ ಕೂಡ ಮಾಡಿದ್ದಳು. ಅದಕ್ಕೆ ವ್ಯಾನ್, ಪ್ರಾಮಾಣಿಕನಂತೆ, ಖರೀದಿ ಮಾಡಿ ತರ್ತಿರೋದಾಗಿ ಹೇಳಿದ್ದ. ಆದ್ರೆ ಸತ್ಯವೇ ಬೇರೆ ಇದೆ.

ಎರಡು ದಿನಗಳ ಹಿಂದೆ ನ್ಯೂಯಾರ್ಕ್ ನಲ್ಲಿರುವ ಬಿಗ್ ಆ್ಯಪಲ್ ಸ್ಟೋರ್ ನಲ್ಲಿ ಕಳ್ಳತನವಾಗಿದೆ. ಅಲ್ಲಿ ಎರಡು ದುಬಾರಿ ಆಭರಣವನ್ನು ಕದ್ದ ವ್ಯಕ್ತಿ ವ್ಯಾನ್ ಎಂಬುದನ್ನು ತಿಳಿದು ಹುಡುಗಿ ಕಂಗಾಲಾಗಿದ್ದಾಳೆ. 40 ವರ್ಷದ ವ್ಯಾನ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ (Red Corner Notice) ಜಾರಿ ಮಾಡಲಾಗಿದೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕೋರಿಯಾದ ಅತ್ಯಾಧುನಿಕ ಆಭರಣ ಮಳಿಗೆಗಳಿಗೂ ವ್ಯಾನ್ ಕನ್ನ ಹಾಕಿದ್ದ. ಲಂಡನ್ ಜ್ಯುವೆಲರ್ಸ್ (London Jewels) ನಿಂದ 17,000 ಡಾಲರ್ ಮೌಲ್ಯದ ವಾಚ್ ಕದ್ದಿದ್ದ. ರಾಕ್‌ಫೆಲ್ಲರ್ ಸೆಂಟರ್‌ನಲ್ಲಿರುವ ಟಿಫಾನಿ & ಕಂಪನಿಯಿಂದ ಕಾಲು ಮಿಲಿಯನ್ ಡಾಲರ್ ಮೌಲ್ಯದ ಉಂಗುರ ಮತ್ತು ಹಡ್ಸನ್ ಯಾರ್ಡ್‌ನಲ್ಲಿರುವ ಕಾರ್ಟಿಯರ್‌ನಿಂದ ಮತ್ತೊಂದು ಉಂಗುರವನ್ನು ವ್ಯಾನ್ ಕದ್ದಿದ್ದ. ಈ ಎಲ್ಲ ಮಾಹಿತಿ ವ್ಯಾನ್ ಪ್ರೇಯಸಿ ಹೃದಯ ಸೀಳಿದೆ. ವ್ಯಾನ್ ಬಣ್ಣ ಬಯಲಾಗ್ತಿದ್ದಂತೆ ತನಗೆ ತಿಳಿದ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.

ಸಾಯಿ ಪಲ್ಲವಿ ರೋಲ್ ಮಾಡೆಲ್ ಹುಡುಗನ ಸೀಕ್ರೆಟ್ ರಿವೀಲ್; ಅಬ್ಬಬ್ಬಾ, ಅಂಥವ್ನು ಸಿಗ್ತಾನಾ?

ವ್ಯಾನ್, ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣವನ್ನು ನನಗೆ ನೀಡಿ, ನನ್ನನ್ನು ಒಲಿಸುವ ಪ್ರಯತ್ನ ನಡೆಸಿದ್ದ. ಆತ ನನಗೆ ನೀಡಿದ ಆಭರಣ ಕಳ್ಳತನ ಮಾಡಿದ್ದು ಎಂಬುದು ನನಗೆ ತಿಳಿದಿರಲಿಲ್ಲ. ಈಗ ಈ ವಿಷ್ಯ ತಿಳಿಯುತ್ತಿದ್ದಂತೆ ಎಲ್ಲ ಆಭರಣವನ್ನು ನಾನು ಎಸೆದಿದ್ದೇನೆ. ಎಂದಿದ್ದಾಳೆ. 

Latest Videos
Follow Us:
Download App:
  • android
  • ios