Asianet Suvarna News Asianet Suvarna News

ತ್ರಿವಳಿ ತಲಾಕ್‌ ಆಘಾತ, ಮುಸ್ಲಿಂ ಧರ್ಮವನ್ನೇ ತೊರೆದು ಹಿಂದು ಯುವಕರ ಮದುವೆಯಾದ ಮಹಿಳೆಯರು!


ಪ್ರೇಮಿಗಳ ದಿನದ ಸಮಯದಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿರುವ ಎರಡು ಮದುವೆಗಳು ಸಾಕಷ್ಟು ಸುದ್ದಿಯಾಗಿವೆ. ತ್ರಿವಳಿ ತಲಾಕ್‌ನಂಥ ಕೆಟ್ಟ ಪದ್ಧತಿಯಿಂದ ಬೇಸತ್ತಿದ್ದ ಇಬ್ಬರು ಮುಸ್ಲಿಂ ಮಹಿಳೆಯರು, ಮುಸ್ಲಿಂ ಧರ್ಮವನ್ನೇ ತೊರೆದು ಹಿಂದು ಧರ್ಮ ಸೇರಿ ತಮ್ಮ ಪ್ರೇಮಿಗಳನ್ನು ಮದುವೆಯಾಗಿದ್ದಾರೆ.

muslim girls Naseema Khatoon and shahana converted to hindu religion and married lovers in bareilly san
Author
First Published Feb 17, 2024, 5:09 PM IST

ನವದೆಹಲಿ (ಫೆ.17): ಉತ್ತರ ಪ್ರದೇಶದಲ್ಲಿ ಮತ್ತೆರಡು ವಿವಾಹಗಳು ದೇಶಾದ್ಯಂತ ಸುದ್ದಿಯಾಗಿವೆ. ದೇಶದಲ್ಲಿ ತ್ರಿವಳಿ ತಲಾಕ್‌ಗೆ ನಿಷೇಧವಿದೆ. ಹಾಗಿದ್ದರೂ ಮುಸ್ಲಿಮರಲ್ಲಿ ಬಹುತೇಕ ಕಡೆ ಈ ಪದ್ಧತಿ ಜೀವಂತವಾಗಿದೆ. ಇದೇ ರೀತಿ ತ್ರಿವಳಿ ತಲಾಕ್‌ನಿಂದ ಬೇಸತ್ತಿದ್ದ ಇಬ್ಬರು ಮುಸ್ಲಿಂ ಮಹಿಳೆಯರು ಪ್ರೇಮಿಗಳ ದಿನದಂದು ತಮ್ಮ ಧರ್ಮವನ್ನು ತೊರೆದು ಹಿಂದು ಧರ್ಮ ಸೇರಿದ್ದು ಮಾತ್ರವಲ್ಲದೆ ತಮ್ಮ ಪ್ರೇಮಿಗಳನ್ನು ವಿವಾಹವಾಗಿದ್ದಾರೆ. ಬಿಹಾರದ ಪೂರ್ನಿಯಾದ ನಿವಾಸಿಯಾಗಿದ್ದ ನಸೀಮಾ ಖಾತೂನ್‌, ಬರೇಲಿಯಲ್ಲಿ ಆಚಾರ್ಯ ಕೆಕೆ ಶಂಖಾದರ್‌ ಅವರ ಸಮ್ಮುಖದಲ್ಲಿ ಮೀನಾಕ್ಷಿ ಶರ್ಮ ಎನ್ನುವ ಹೊಸ ಹೆಸರನ್ನು ಪಡೆದುಕೊಂಡಿದ್ದು. ಅವರು ತಮ್ಮ ಪ್ರೇಮಿ ಮಹೇಶ್‌ ಶರ್ಮ ಅವರನ್ನು ವಿವಾಹವಾಗಿದ್ದಾರೆ. ಇನ್ನು ಬುಲಂದ್‌ಶೇರ್‌ನ ನಿವಾಸಿಯಾಗಿದ್ದ ಶಹಾನಾ ಮುಸ್ಲಿಂ ಧರ್ಮವನ್ನು ತ್ಯಜಿಸಿ ಶ್ರದ್ಧಾ ಆಗಿ ಬದಲಾಗಿದ್ದಾರೆ. ಅವರೂ ಕೂಡ ಬರೇಲಿಯಲ್ಲಿ ಓಂ ಪ್ರಕಾಶ್‌ ಎನ್ನುವ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ನಸೀಮಾ ಖಾತೂನ್‌ ಹಾಗೂ ಶಹಾನಾ ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದ ಪತಿಯಿಂದ ತ್ರಿವಳಿ ತಲಾಕ್‌ಗೆ ಒಳಗಾಗಿದ್ದರು.

ಇನ್ನು ನಸೀಮಾ ಖಾತೂನ್‌ಗೆ ಮೊದಲ ಪತಿಯಿಂದ ಒಂದೂ ವರ್ಷದ ಮಗಳೂ ಇದ್ದಾರೆ. ಬಿಹಾರದಿಂದ ಹೊರಡುವಾಗ ಆಕೆ ತನ್ನೊಂದಿಗೆ ಮಗಳನ್ನೂ ಕರೆದುಕೊಂಡು ಬಂದಿದ್ದಳು. ಮಗಳನ್ನು ತಾವೇ ಸಾಕುವುದಾಗಿ ಮಹೇಶ್‌ ಶರ್ಮ ಹೇಳಿದ್ದಾರೆ. ನಸೀಮಾ ಖಾತೂನ್‌ಗೆ ಮತಿ ತಲಾಖ್‌ ನೀಡಿದ್ದರು. ಈ ವೇಳೆ, ಬಿಹಾರದ ಕ್ಯೋಲಾಡಿಯ ಸಾಹೇಬ್‌ಗಂಜ್ ದಲೇಲ್‌ನಗರ ಗ್ರಾಮದ ಮಹೇಶ್ ಅವರ ಪರಿಚಯವಾಗಿತ್ತು. ಆರಂಭದಲ್ಲಿ ಇದ್ದ ಸ್ಬೇಹ ಬಳಿಕ ಪ್ರೀತಿಯಾಗಿ ಬದಲಾಗಿದ್ದರಿಂದ ಮದುವೆಯಾಗಲು ನಿರ್ಧರಿಸಿದರು. ಇದಾದ ನಂತರ ನಸೀಮಾ ಖಾತೂನ್ ತನ್ನ ಮಗಳೊಂದಿಗೆ ಬರೇಲಿಗೆ ಬಂದಿದ್ದರು. ಇಲ್ಲಿ ಆಕೆ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮ ಸ್ವೀಕರಿಸಿ, ಮೀನಾಕ್ಷಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ.  ಆಚಾರ್ಯ ಕೆಕೆ ಶಂಖಧರ್ ಅವರ ಬರೇಲಿಯ ಅಗಸ್ತ್ಯ ಮುನಿ ಆಶ್ರಮದಲ್ಲಿ ಹಿಂದೂ ಪದ್ಧತಿಯಂತೆ ಮಹೇಶ್ ಅವರನ್ನು ವಿವಾಹವಾದರು.

ಮಗಳನ್ನು ಆಕೆಯ ಸ್ವಂತ ತಂದೆಯಂತೇ ನಾನು ಸಾಕುತ್ತೇನೆ ಎಂದು ಮಹೇಶ್‌ ಹೇಳಿದ್ದಾರೆ. ಇನ್ನು ಅವರ ಕುಟುಂಬ ಕೂಡ ಮದುವೆಯ ಬಗ್ಗೆ ಖುಷಿ ಹೊಂದಿದೆ. ಮೀನಾಕ್ಷಿ ತಾನು ವಯಸ್ಕಳಾಗಿದ್ದು, ಕೂಲಂಕುಷವಾಗಿ ಆಲೋಚಿಸಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ. ಅಫಿಡವಿಟ್ ನೀಡುವಾಗ ಮೀನಾಕ್ಷಿ ಹಿಂದೂ ಧರ್ಮದಲ್ಲಿ ನನ್ನ ನಂಬಿಕೆ ಇದೆ ಎಂದಿದ್ದು, ಹಿಂದೂ ದೇವತೆಗಳನ್ನು ಪೂಜಿಸುವುದಾಗಿ ತಿಳಿಸಿದ್ದಾರೆ. 

ಹಿಂದು ಹುಡುಗನನ್ನು ಮದುವೆಯಾಗಿದ್ದಕ್ಕೆ ನಮ್ಮ ಫ್ಯಾಮಿಲಿ ಖುಷಿಯಾಗಿಲ್ಲ. ಈಗ ನನ್ನ ಕುಟುಂಬಕ್ಕೆ ನನ್ನ ಮೂಲ ಕುಟುಂಬವೇ ವಿಲನ್‌ ಆಗಿದೆ. ನನ್ನ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದೇ ಇದ್ದಲ್ಲಿ ಅವರು ನನ್ನ ಮಾತ್ರವಲ್ಲ, ಮಹೇಶ್‌ ಹಾಗೂ ಅವರ ಕುಟುಂಬವನ್ನೂ ಕೊಲ್ಲುತ್ತಾರೆ ಎಂದು ತಿಳಿಸಿದ್ದಾರೆ. ಈ ಕುರಿತಾಗಿ ಭದ್ರತೆ ನೀಡುವಂತೆ ಎಸ್‌ಎಸ್‌ಪಿಗೆ ಅವರು ಮನವಿ ಸಲ್ಲಿಸಿದ್ದಾರೆ.

ಮಹಿಳೆಯರಿಗೆ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಿ: ಸುಪ್ರೀಂ'ಗೆ ಶೀಘ್ರ ಮನವಿ

ಓಂಪ್ರಕಾಶ್‌ರನ್ನು ವಿವಾಹವಾದ ಶ್ರದ್ಧಾ: ಇನ್ನು ಬರೇಲಿಯ ಇಜ್ಜತ್‌ ನಗರದಲ್ಲಿ ಶ್ರದ್ಧಾ ಆಗಿ ಬದಲಾದ ಶಹಾನಾ, ಓಂಪ್ರಕಾಶ್ ಅವರನ್ನು ವಿವಾಹವಾಗಿದ್ದಾರೆ. ಇದು ಶ್ರದ್ಧಾ ಅವರ 2ನೇ ವಿವಾಹವಾಗಿದೆ. ಮೊದಲ ಪತಿ ನನಗೆ ತೀವ್ರ ಹಿಂಸೆ ನೀಡಿದ್ದ. ಕೊನೆಗೆ ತಲಾಕ್‌ ನೀಡುವ ನಿರ್ಧಾರ ಮಾಡಿದ್ದ. ಈ ಹಂತದಲ್ಲಿ ನನಗೆ ಓಂಪ್ರಕಾಶ್‌ ಪರಿಚಯವಾಗಿದ್ದ. ಮೊಬೈಲ್‌ ಮೂಲಕ ಪರಿಚಯವಾಗಿದ್ದ ಈತನ ಮೇಲೆ ನನಗೆ ಪ್ರೀತಿ ಹುಟ್ಟಿತ್ತು ಎಂದು ಹೇಳಿದ್ದಾರೆ. ನನ್ನ ಮೊದಲ ಪತಿ ಏನೂ ಕೆಲಸವನ್ನೇ ಮಾಡುತ್ತಿರಲಿಲ್ಲ. ಪ್ರತಿದಿನ ನನ್ನ ಮೇಲೆ ಹಲ್ಲೆ ಮಾಡುವುದೇ ಆತನ ಕೆಲಸವಾಗಿತ್ತು. ಇದರಿಂದಾಗಿ ನಾನೇ ಖಾಸಗಿ ಕೆಲಸಕ್ಕೆ ಹೋಗಲು ತೀರ್ಮಾನಿಸಿದ್ದೆ. ಕೊನೆಗ ಆತನೇ ತಲಾಕ್‌ ನೀಡಿದ ಎಂದಿದ್ದಾರೆ. ನಾನು ನನ್ನ ಪೂರ್ತಿ ಒಪ್ಪಿಗೆಯೊಂದಿಗೆ ಹಿಂದೂ ಧರ್ಮವನ್ನು ಸ್ವೀಕಾರ ಮಾಡಿದ್ದೇನೆ. ಇದರಲ್ಲಿ ಯಾರ ಒತ್ತಾಯವೂ ಇಲ್ಲ ಎಂದಿದ್ದಾರೆ.

 

ಜನರ ಹೃದಯವೇ ಇವರಿಗೆ ಆಸ್ಥಾನ: ಮೋದಿಗಾಗಿ ಮುಸ್ಲಿಂ ಮಹಿಳೆಯರಿಂದ ದೇವಸ್ಥಾನ!

Follow Us:
Download App:
  • android
  • ios