ಗರ್ಲ್ ಫ್ರೆಂಡ್ ಮೀಟ್ ಮಾಡೋದು ಅಗತ್ಯ ಸೇವೆಯಡಿ ಬರಲ್ವಲ್ಲಪ್ಪಾ!
ಹುಡುಗನ ವಿರಹ ವೇದನೆಗೆ ಪರಿಹಾರ ಕೊಟ್ಟ ಮುಂಬೈ ಪೊಲೀಸ್/ ಹೃದಯಗಳು ದೂರವಿದ್ದಷ್ಟೂ ಹತ್ತಿರವಾಗುತ್ತವೆ/ ಯಾವ್ ಸ್ಟಿಕರ್ ಅಂಟಿಸಿಕೊಳ್ಳಲಿ ಸ್ವಾಮಿ ಎಂದು ಕೇಳಿದ್ದ
ಮುಂಬೈ(ಏ. 22) ಕೊರೋನಾ ತಾಂಡವದ ಕತೆ ಕೇಳಿ ಕೇಳಿ ಸುಸ್ತಾಗಿದೆ.. ಸಾಕಾಗಿದೆ.. ಏನು ಮಾಡಲಿಕ್ಕೆ ಆಗಲ್ಲ.. ವೈರಸ್ ತನ್ನ ಆಟಾಟೋಪ ತೋರಿಸುತ್ತಲೇ ಇದೆ. ಈ ಹುಡುಗ ಅಲ್ಲ.. ಇಂಥ ಹುಡುಗರ ನೋವನ್ನು ಆಲಿಸಬೇಕಾಗುತ್ತದೆ..
ಏನ್ ಮಾಡ್ಲಿ ಸ್ವಾಮಿ.. ಪ್ರೀತಿಯಲ್ಲಿ ಬಿದ್ದಿದ್ದೇನೆ.. ನನ್ನ ಹುಡುಗಿ ಇವತ್ತು ನೀನು ಮೀಟ್ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಆಕೆಯನ್ನು ಭೇಟಿ ಮಾಡಲು ಹೋಗಲೇಬೇಕಿದೆ.. ನನ್ನ ಗಾಡಿಗೆ ಯಾವ ಸ್ಟಿಕರ್ ಅಂಟಿಸಿಕೊಳ್ಳಬೇಕು ಎಂದು ಪೊಲೀಸರ ಬಳಿಯೇ ಕೇಳಿಕೊಂಡಿದ್ದ. ಹುಡುಗನ ಹೆಸರು ಅಶ್ವಿನ್ ವಿನೋದ್..
ಕೊರೋನಾ ಕಾರಣ; ಕರ್ನಾಟಕ ಸರ್ಕಾರಕ್ಕೊಂದು ಬಹಿರಂಗ ಪತ್ರ
ಮುಂಬೈ ಪೊಲೀಸರು ಸಹ ಅಷ್ಟೇ ಸಾವಧಾನವಾಗಿ..ಸರಳವಾಗಿ ಉತ್ತರ ಕೊಟ್ಟಿದ್ದಾರೆ. ಹುಡುಗನಿಗೆ ವಿನಾಶಕಾರಿ ಪರಿಸ್ಥಿತಿಯಯನ್ನು ತಿಳಿಸಿಹೇಳಿದ್ದಾರೆ. ಯಾವ ಲವ್ ಗುರುಗೂ ಕಡಿಮೆ ಇಲ್ಲದಂತೆ ಉತ್ತರಿಸಿದ್ದಾರೆ.
'ನಮಗೆ ನಿಮ್ಮ ಅಗತ್ಯತೆಯ ಅರಿವಾಗುತ್ತಿದೆ, ದುರಾದೃಷ್ಟ ಎಂದರೆ ನಿಮ್ಮ ಸ್ನೇಹಿತೆಯನ್ನು ಭೇಟಿ ಮಾಡಬೇಕು ಎನ್ನುವ ವಿಚಾರ ಅಗತ್ಯ ಸೇವೆಗಳ ಅಡಿಯಲ್ಲಿ ಬರುವುದಿಲ್ಲ! ದೂರ ಇರುವುದು ಹೃದಯಗಳನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತದೆ. ನಿಮ್ಮ ಆರೋಗ್ಯಕ್ಕೂ ಒಳ್ಳೆಯದು!
ಇದೊಂದು ಹಂತ ಅಷ್ಟೆ.. ಮುಂದಕ್ಕೆ ಸಾಗಲು ಬಹಳಷ್ಟು ಕಾಲವಿದೆ. ಇಡೀ ಜೀವನ ನೀವಿಬ್ಬರು ಜತೆಯಾಗಿರಿ. ಮನೆಯಲ್ಲೇ ಸುರಕ್ಷಿತವಾಗಿರಿ' ಮುಂಬೈ ಪೋಲಿಸರು ಕೊಟ್ಟ ಉತ್ತರ ಮಾತ್ರ ಅದ್ಭುತ!
ವಿರಹ ವೇದನೆ ಸಹಜ, ಪ್ರೀತಿಸಿದವರನ್ನು ಭೇಟಿ ಮಾಡಬೇಕು, ಮಾತಾಡಬೇಕು, ಹರಟೆ ಹೊಡೆಯಬೇಕು ಎನ್ನೋದು ಅಷ್ಟೇ ಸಹಜ. ಹೃದಯಗಳು ದೂರ ಇದ್ದಷ್ಟೂ ಹತ್ತಿರವಾಗುತ್ತವೆ. ಪ್ರೇಮಿಗಳೇ ಒಂದಷ್ಟು ದಿನ ತಡೆದುಕೊಳ್ಳಿ! ಸೋಶಿಯಲ್ ಮೀಡಿಯಾದಲ್ಲಿಯೂ ಈ ಉತ್ತರ ಜೋರಾಗಿಯೇ ರನ್ ಮಾಡಿದೆ. ಎಂಥಾ ಸ್ವೀಟ್ ಪ್ರತಿಕ್ರಿಯೆ ಅಂದವರು ಇದ್ದಾರೆ.
ಮಹಾರಾಷ್ಟ್ರ ಮತ್ತು ದೆಹಲಿಯನ್ನು ಕೊರೋನಾ ಆವರಿಸಿದ್ದು ರಾಜ್ಯಗಳು ಲಾಕ್ ಡೌನ್ ಮೊರೆ ಹೋಗಿವೆ. ದೇಶದಲ್ಲಿ ಪ್ರತಿದಿನ ಎರಡು ಲಕ್ಷಕ್ಕೂ ಅಧಿಕ ಕೇಸ್ ದಾಖಲಾಗುತ್ತಿರುವುದು ಸದ್ಯದ ಲೆಕ್ಕ.