ಕಣ್ಣರಿಯದಿದ್ದರೆ ಕರುಳರಿಯದೇ... 3 ವರ್ಷದ ನಂತರ ವೇಷ ಮರೆಸಿ ಬಂದ ಮಗ
ಕೆಲಸಕ್ಕೆಂದು ದೂರದ ದುಬೈಗೆ ಹೋಗಿದ್ದ ಮಗ ಮೂರು ವರ್ಷಗಳ ನಂತರ ವೇಷ ಮರೆಸಿ ಅಮ್ಮನ ಬಳಿ ಬಂದಿದ್ದು, ಅಮ್ಮ ಕೂಡಲೇ ಮಗನನ್ನು ಗುರುತಿಸಿ ಭಾವುಕಳಾಗಿದ್ದಾಳೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮ್ಮ ಮಕ್ಕಳ ಸಂಬಂಧಕ್ಕೆ ಬೆಲೆ ಕಟ್ಟಲಾಗದು ಅದರಲ್ಲೂ ತಾಯಿ ಪ್ರೀತಿಯ ಬಣ್ಣಿಸಲಾಗದು. ಅದರಲ್ಲೂ ಮಕ್ಕಳಲ್ಲಿ ಸ್ವಲ್ಪ ಬದಲಾವಣೆಯಾದರೂ ಗಲಿಬಿಲಿ ಕಸಿವಿಸಿಗೊಳ್ಳುವ ಅಮ್ಮನಿಗೆ ವೇಷ ಬದಲಿಸಿದ ಕೂಡಲೇ ಗುರುತು ಸಿಗದಾಗುವುದೇ? ಸಾಧ್ಯವೇ ಇಲ್ಲ. ಕಣ್ಣರಿಯದೇ ಹೋದರೆ ಕರುಳರಿಯದೇ ಎಂಬ ಲೋಕರೂಢಿಯ ಮಾತಿನಂತೆ ಅಮ್ಮ ಮಕ್ಕಳನ್ನು ಪ್ರತಿಕ್ಷಣವೂ ಗಮನಿಸುತ್ತಾಳೆ. ಮಗುವಿನಲ್ಲಾಗುವ ಸಣ್ಣ ಬದಲಾವಣೆಯೂ ಆಕೆಯ ಗಮನಕ್ಕೆ ಬರುವುದು. ಹಾಗೆಯೇ ಇಲ್ಲಿ ಕೆಲಸಕ್ಕೆಂದು ದೂರದ ದುಬೈಗೆ ಹೋಗಿದ್ದ ಮಗ ಮೂರು ವರ್ಷಗಳ ನಂತರ ವೇಷ ಮರೆಸಿ ಅಮ್ಮನ ಬಳಿ ಬಂದಿದ್ದು, ಅಮ್ಮ ಕೂಡಲೇ ಮಗನನ್ನು ಗುರುತಿಸಿ ಭಾವುಕಳಾಗಿದ್ದಾಳೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳೂರು ಮೂಲದ ರೋಹಿತ್ ಮೂರು ವರ್ಷಗಳ ಹಿಂದೆ ಉದ್ಯೋಗ ಅರಸಿ ದುಬೈಗೆ ಹೋಗಿದ್ದ ಅವರು ಇತ್ತೀಚೆಗೆ ಊರಿಗೆ ಬರುವ ಯೋಚನೆ ಮಾಡಿದ್ದು, ಮೀನು ಮಾರುವ ಕೆಲಸ ಮಾಡುವ ತನ್ನ ಅಮ್ಮನಿಗೆ ಸರ್‌ಫ್ರೈಸ್ (Surprise) ನೀಡಲು ಮುಂದಾಗಿದ್ದರು. ಇದಕ್ಕಾಗಿ ಅಮ್ಮನಿಗೆ ಹೇಳದೇ ಅವರು ಊರಿಗೆ ಬಂದಿದ್ದರು. ಇತ್ತ ರೋಹಿತ್ ಅಮ್ಮ ಮೀನು ಮಾರಾಟ ಮಾಡುವ ವೃತ್ತಿ ಮಾಡುತ್ತಿದ್ದು, ಎಂದಿನಂತೆ ಅವರು ಈ ಕೆಲಸಕ್ಕೆ ಹೋಗಿದ್ದಾರೆ. ಈ ವೇಳೆ ಊರಿಗೆ ಬಂದಿದ್ದ ರೋಹಿತ್ ಅಮ್ಮನ ಬಳಿ ಮೀನು ಕೊಳ್ಳುವ ಗ್ರಾಹಕನಂತೆ ಹೋಗಿ ಮೀನು ಕೇಳಿದ್ದಾನೆ. ಈ ವೇಳೆ ತಲೆಗೆ ಟೋಪಿ ಧರಿಸಿದ್ದ ರೋಹಿತ್ (Rohit)ಮುಖಕ್ಕೆ ಟವೆಲ್ ಸುತ್ತಿಕೊಂಡು ಅಮ್ಮನ ಬಳಿ ಹೋಗಿ ಮೀನು ನೀಡುವಂತೆ ಕೇಳಿದ್ದಾರೆ. ಈ ವೇಳೆ ಅಮ್ಮ ಯಾರೊ ಗ್ರಾಹಕರು ಎಂಬಂತೆ ಮೀನನ್ನು ಪ್ಲಾಸ್ಟಿಕ್ ಕವರ್‌ಗೆ ತುಂಬಿಸಿ ಹುಡುಗನ ಮುಖ ಕ್ಷಣಕಾಲ ನೋಡಿದ ಅವರಿಗೆ ಇದು ತನ್ನ ಮಗನಂತೆ ಇರುವಂತೆ ಭಾಸವಾಗಿದೆ ಕೂಡಲೇ ಆತನ ಮುಖದ ಮೇಲಿದ್ದ ಟವೆಲ್ ಕಿತ್ತೆಸೆದ ಅವರು ಅಚ್ಚರಿಗೊಂಡಿದ್ದಲ್ಲದೇ. ಮಗನನ್ನು ತಬ್ಬಿಕೊಂಡು ಭಾವುಕರಾಗಿದ್ದಾರೆ.
'ಸ್ವರ್ಗದ ಮೆಟ್ಟಿಲಿ'ನಿಂದ ಬಿದ್ದು ಬ್ರಿಟಿಷ್ ಪ್ರವಾಸಿಗ ಸಾವು
ಅಮ್ಮ ಮಗನ ಈ ಭಾವುಕ ಕ್ಷಣಕ್ಕೆ ಮಂಗಳೂರಿನ ಮೀನು ಮಾರುಕಟ್ಟೆ (Fish Market) ಸಾಕ್ಷಿಯಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ(Social Media) ಕಾಮೆಂಟ್ ಮಾಡಿದ್ದು, ಅಮ್ಮನ ಹೃದಯಕ್ಕೆ ತಿಳಿಯದಿರುವುದು ಏನಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಮ್ಮ ತನ್ನ ಕಂದನನ್ನು ಉಸಿರಿನಲ್ಲೇ ಗುರುತಿಸುತ್ತಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ವೀಡಿಯೋ ಮಾಡಿ ನಮ್ಮನ್ನು ಅಳಿಸಿ ಬಿಟ್ಟಿರಿ ಎಂದಿದ್ದಾರೆ.
ಕೆಲವರು ಮಗ ದುಬೈನಲ್ಲಿದ್ದರೂ ಅಮ್ಮ ಮೀನು ಮಾರುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದರೆ, ಅದಕ್ಕೆ ನಮ್ಮ ಊರಿನ ಜನ ಹಾಗೆಯೇ ಕೋಟಿ ಇದ್ದರೂ ಸುಮ್ಮನೇ ಕೂರುವುದಿಲ್ಲ ದುಡಿಯುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ದುಬೈನಲ್ಲಿ ದುಡಿಯುವವರೆಲ್ಲಾ ಶ್ರೀಮಂತರೆನಲ್ಲಾ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಹುಡುಗನ ಖುಷಿಯ ಕ್ಷಣ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಅಮ್ಮ ಮಗನ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಚಿಕನ್ ಶವರ್ಮ ತಿಂದ ಬಾಲಕಿ ಸಾವು : ಶವರ್ಮ, ಗ್ರಿಲ್ಡ್ ಚಿಕನ್‌ಗೆ ತಾತ್ ...