ಸೇಡು ಅಂದ್ರೆ ಇದು, ಹೆಂಡ್ತಿ ಓಡಿಸ್ಕೊಂಡು ಹೋದ ವ್ಯಕ್ತಿ ಪತ್ನಿಗೆ ಗಾಳ !

ಬಿಹಾರದಲ್ಲಿ ಅಚ್ಚರಿ ಘಟನೆ ನಡೆದಿದೆ. ನಾಲ್ಕು ಮಕ್ಕಳ ತಾಯಿ ತನ್ನ ಹಳೆ ಬಾಯ್ ಫ್ರೆಂಡ್ ಜೊತೆ ಓಡಿ ಹೋಗಿದ್ದಾಳೆ. ಆಕೆ ಮೇಲೆ ಸೇಡು ತೀರಿಸಿಕೊಳ್ಳೋಕೆ ಪತಿ ಮಾಡಿದ ಕೆಲಸ ಸದ್ಯ ವೈರಲ್ ಆಗಿದೆ. 
 

mother of 4 children ran away with her lover  husband married lover wife

ವಿವಾಹೇತರ ಸಂಬಂಧ (Extramarital affair) ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಪ್ರೇಮಿ (lover)ಗಾಗಿ ತನ್ನ ಪತಿ, ಪತ್ನಿಯನ್ನೇ ಹತ್ಯೆ ಮಾಡುತ್ತಿರುವ ಪ್ರಕರಣ ದಿನಕ್ಕೊಂದು ಬೆಳಕಿಗೆ ಬರ್ತಿದೆ.  ಆದ್ರೆ ಬಿಹಾರದಲ್ಲಿ ನಡೆದ ಘಟನೆ ಸ್ವಲ್ಪ ಭಿನ್ನವಾಗಿದೆ. ಪತ್ನಿ ಮೋಸ ಮಾಡಿದ್ಲು ಎನ್ನುವ ಕಾರಣಕ್ಕೆ ಆಕೆ ಜೀವನ ಹಾಳು ಮಾಡೋಕೆ ಪತಿ ಮುಂದಾಗಿಲ್ಲ. ಯಾರ ಹತ್ಯೆಯನ್ನೂ ಮಾಡಿಲ್ಲ. ಎಲ್ಲ ಮುಗೀತು ಅಂತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಲಿಲ್ಲ. ತನಗೆ ಮೋಸ ಮಾಡಿದ ಪತ್ನಿ ಹಾಗೂ ಆಕೆ ಪ್ರೇಮಿ ವಿರುದ್ಧ ಪತಿ ಭಿನ್ನವಾಗಿ ಸೇಡು ತೀರಿಸಿಕೊಂಡಿದ್ದಾನೆ. ಆತನ ಕಥೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗ್ತಿದೆ.

ನಾಲ್ಕು ಮಕ್ಕಳಾದ್ಮೇಲೆ ಹಳೆ ಪ್ರೇಮಿ ಜೊತೆ ಹೋದ ಪತ್ನಿ : ಮದುವೆಯಾಗಿ ನಾಲ್ಕು ಮಕ್ಕಳಾದ್ಮೇಲೆ ಪತ್ನಿ ತನ್ನ ಹಳೆ ಬಾಯ್ ಫ್ರೆಂಡ್ ಜೊತೆ ಓಡಿ ಹೋಗಿದ್ದಾಳೆ. ಇದ್ರಿಂದ ನೊಂದ ಪತಿ, ಪತ್ನಿಯ ಬಾಯ್ ಫ್ರೆಂಡ್ ಪತ್ನಿ ಜೊತೆ ಸಂಬಂಧ ಬೆಳೆಸಿದ್ದಾನೆ. ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದಾರೆ. ಘಟನೆ ಬಿಹಾರದ ಖಗಾರಿಯಾದಲ್ಲಿ ನಡೆದಿದೆ. ಚೌತಮ್ ಪೊಲೀಸ್ ಠಾಣೆ ವ್ಯಾಪ್ತಿಯ ಹಾರ್ದಿಯಾ ಗ್ರಾಮದಲ್ಲಿ 16 ವರ್ಷಗಳ ಹಿಂದೆ ಮದುವೆ ನಡೆದಿತ್ತು. ಹಾರ್ದಿಯಾ ಗ್ರಾಮದ ನೀರಜ್ ಕುಮಾರ್ ಸಿಂಗ್, ಖಗಾರಿಯಾ ಜಿಲ್ಲೆಯ ಪಸ್ರಾಹಾ ಗ್ರಾಮದ ರೂಬಿ ದೇವಿಯನ್ನು ಮದುವೆ ಆಗಿದ್ದ. ಇಬ್ಬರಿಗೂ ನಾಲ್ಕು ಮಕ್ಕಳಿವೆ. ಮದುವೆಗೂ ಮುನ್ನವೇ ರೂಬಿ ದೇವಿ ತನ್ನದೇ ಊರಿನ ಮುಖೇಶ್ ಕುಮಾರ್ ಸಿಂಗ್ ಎಂಬುವವನನ್ನು ಪ್ರೀತಿ ಮಾಡುತ್ತಿದ್ದಳು. ಮದುವೆಯಾಗಿ ಮಕ್ಕಳಾದ್ಮೇಲೂ ಆತನ ಜೊತೆ ಸಂಬಂಧ ಮುಂದುವರೆಸಿದ್ದಳು. ಇತ್ತ ಮುಖೇಶ್ ಕುಮಾರ್ ಸಿಂಗ್ ಗೂ ಮದುವೆ ಆಗಿತ್ತು. ಆತನೂ ರೂಬಿ ಹೆಸರಿನ ಹುಡುಗಿಯನ್ನು ಮದುವೆ ಆಗಿದ್ದ. ಆದ್ರೆ ಮದುವೆ ಆದ್ಮೇಲೆ ಪ್ರೀತಿ ಮಾತ್ರ ಇರಲಿಲ್ಲ. ರೂಬಿ ತನ್ನ ಹಳೆ ಪ್ರೇಮಿ ಮುಖೇಶ್ ಕುಮಾರ್ ನೆನಪಿನಲ್ಲಿದ್ದಳು. ಅಂತಿಮವಾಗಿ ಆತನ ಜೊತೆ ಜೀವನ ನಡೆಸುವ ನಿರ್ಧಾರಕ್ಕೆ ಬಂದಿದ್ದಾಳೆ. ಮಕ್ಕಳನ್ನು ಕರೆದುಕೊಂಡು ಮುಖೇಶ್ ಕುಮಾರ್ ಜೊತೆ ಮನೆ ಬಿಟ್ಟಿದ್ದಾಳೆ. 

ಅವಳು ದೂರವಾದ ಮೇಲೆ ದೊಡ್ಡ ಕುಡುಕನಾಗಿದ್ದೆ, ಫುಲ್ ಬಾಟಲ್​ ಕುಡೀತಿದ್ದೆ: ಅಂದಿನ ದಿನ ನೆನೆದ ಆಮೀರ್​ ಖಾನ್​

ಭಿನ್ನವಾಗಿ ಸೇಡು ತೀರಿಸಿಕೊಂಡ ಪತಿ : ರೂಬಿ ಮನೆ ಬಿಟ್ಟ ಮೇಲೆ ನೀರಜ್ ಕುಮಾರ್ಗೆ ಅವಮಾನವಾಗಿತ್ತು. ಊರಿನವರೆಲ್ಲ ಆತನನ್ನು ಟೀಕಿಸಲು ಶುರು ಮಾಡಿದ್ದರು. ಒಂಟಿಯಾಗಿ ವಾಸಿಸಲು ಶುರು ಮಾಡಿದ್ದ ನೀರಜ್ ಕುಮಾರ್, ಮುಖೇಶ್ ಪತ್ನಿ ರೂಬಿಯನ್ನು ಪರಿಚಯ ಮಾಡಿಕೊಂಡ. ಇತ್ತ ಮುಖೇಶ್ ಮಾಡಿದ ಮೋಸಕ್ಕೆ ರೂಬಿ ನೊಂದಿದ್ದಳು. ಆಕೆಗೂ ಆಸರೆ ಬೇಕಿತ್ತು.  ಮುಖೇಶ್ ಹಾಗೂ ರೂಬಿ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದ್ರು. ವರ್ಷದ ಹಿಂದೆ ಇಬ್ಬರೂ ಮದುವೆಯಾಗಿದ್ದಾರೆ. 

ಸೈಲೆಂಟ್ ಸೇಡು : ಸೋಶಿಯಲ್ ಮೀಡಿಯಾದಲ್ಲಿ ಅವ್ರ ಸುದ್ದಿ ಈಗ್ಲೂ ಹರಿದಾಡ್ತಿದೆ. ಅನೇಕರು ಇದಕ್ಕೆ ಕಮೆಂಟ್ ಮಾಡ್ತಿದ್ದಾರೆ. ಸೇಡು ತೀರಿಸಿಕೊಳ್ಳೋದು ಅಂದ್ರೆ ಇದು ಎಂದು ಒಬ್ಬರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇನ್ನೊಬ್ಬರು ಇದನ್ನು ತಟಸ್ಥೀಕರಣ ಎಂದು ಕರೆದಿದ್ದಾರೆ. 

ಖ್ಯಾತ ನಟನಿಂದ ಗರ್ಭಿಣಿಯಾದ ನಟಿ; 2 ಕೋಟಿ ರೂ ಕೊಟ್ಟು ಕೈತೊಳೆದುಕೊಂಡ ದೊಡ್ಡಮನೆತನದ

ಮದುವೆಯಾಗಿ 15 -16 ವರ್ಷವಾದ್ಮೇಲೆ ದಂಪತಿ ವಿಚ್ಛೇದನ ಪಡೆಯುವ ಹಾಗೂ ಅಕ್ರಮ ಸಂಬಂಧ ಬೆಳೆಸುವ ಪ್ರಕರಣ ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರೂ ಇದಕ್ಕೆ ಬಲಿಯಾಗ್ತಿದ್ದಾರೆ. ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ಎರಡು ಮಕ್ಕಳಾದ್ಮೇಲೆ ತನ್ನ ಅಕ್ಕನ ಗಂಡನ ಜೊತೆ ಓಡಿ ಹೋದ ಘಟನೆ ಬೆಳಕಿಗೆ ಬಂದಿತ್ತು.  

Latest Videos
Follow Us:
Download App:
  • android
  • ios