ಮಕ್ಕಳ್ ಮಾಡ್ಕೊ ಅಂತಾ ಅತ್ತೆ ಹಿಂದೆ ಬಿದ್ದಿದ್ದಾಳೆ ಏನ್ ಮಾಡ್ಲಿ?ಸೊಸೆಗೆ ಸಲಹೆ ಕೊಡಿ ಪ್ಲೀಸ್
ಮದುವೆಯಾದ್ಮೇಲೆ ಮುಗಿತು ಕಥೆ. ಕಂಡ ಕಂಡವರೆಲ್ಲ, ಮಕ್ಕಳಾಗಿಲ್ವಾ? ಬೇಗ ಮಕ್ಕಳನ್ನು ಮಾಡಿಕೊಳ್ಳಿ ಎನ್ನಲು ಶುರು ಮಾಡ್ತಾರೆ. ಹೊರಗಿನವರು ಹೋಗ್ಲಿ, ಮನೆಯಲ್ಲಿರೋ ಅತ್ತೆ, ಸಂಬಂಧಿಕರೇ ಮಾತು ಶುರು ಮಾಡಿದ್ರೆ ಉಸಿರುಗಟ್ಟೋದು ಗ್ಯಾರಂಟಿ.
ತಾಯಿಯಾಗುವುದು ಮಹಿಳೆಗೆ ಮರುಜನ್ಮ ಎನ್ನುತ್ತಾರೆ. ಪ್ರತಿಯೊಬ್ಬ ಮಹಿಳೆ ಕೂಡ ಮಡಿಲಲ್ಲೊಂದು ಮಗು ಇರಬೇಕೆಂದು ಬಯಸ್ತಾಳೆ. ಆದ್ರೆ ಮದುವೆಯಾದ ತಕ್ಷಣ ಮಕ್ಕಳನ್ನು ಪಡೆಯಲು ಈಗಿನ ಜನರು ಸಿದ್ಧರಿರೋದಿಲ್ಲ. ವೃತ್ತಿ ಜೀವನ, ದಾಂಪತ್ಯ ಜೀವನ, ಆರ್ಥಿಕ ಸ್ಥಿತಿ ಎಲ್ಲವನ್ನೂ ನೋಡಿ ನಂತ್ರ ಮಕ್ಕಳನ್ನು ಪಡೆಯಲು ಈಗಿನ ಜನರು ಮುಂದಾಗ್ತಾರೆ. ಹಿಂದಿನ ಕಾಲದಲ್ಲಿ ಮದುವೆಯಾದ ವರ್ಷದೊಳಗೆ ದಂಪತಿ ಕೈನಲ್ಲಿ ಮಗು ಇರ್ತಾಯಿತ್ತು. ಇಷ್ಟ, ಕಷ್ಟದ ಬಗ್ಗೆ ಅವರು ಆಲೋಚನೆ ಮಾಡ್ತಿರಲಿಲ್ಲ. ಆದ್ರೆ ಮಕ್ಕಳನ್ನು ಪಡೆಯುವ ಮೊದಲು ಪಾಲಕರ ಭಾವನೆ ಮುಖ್ಯವಾಗುತ್ತದೆ. ಮಕ್ಕಳ ಬಗ್ಗೆ ಯಾವುದೇ ಭಾವನೆಯಿಲ್ಲದೆ, ಬೇರೆಯವರ ಒತ್ತಾಯಕ್ಕೆ ಗರ್ಭಧರಿಸಿದ್ರೆ ಅದು ಪಾಲಕರು ಹಾಗೂ ಮಕ್ಕಳು ಇಬ್ಬರ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳ ಪಾಲನೆ ಸರಿಯಾಗಿ ಆಗೋದಿಲ್ಲ. ಹಾಗೆ ತಾಯಿ ಮನಸ್ಸು ಮೊದಲಿನಂತೆ ಇರೋದಿಲ್ಲ. ಈ ಮಹಿಳೆ ಕೂಡ ಈಗ ಅದೇ ಇಕ್ಕಟ್ಟಿಗೆ ಸಿಲುಕಿದ್ದಾಳೆ. ಆಕೆಗೆ ಮಗು ಪಡೆಯಲು ಇಷ್ಟವಿಲ್ಲ. ಆದ್ರೆ ಅತ್ತೆ ಬಿಡ್ತಾ ಇಲ್ಲ.
ಮಹಿಳೆಗೆ ಮದುವೆ (Marriage) ಯಾಗಿ ತುಂಬಾ ದಿನವಾಗಿಲ್ಲ. ಆದ್ರೆ ಈಗ್ಲೇ ಅತ್ತೆ (Mother In Law) ಮಗು ಪಡೆಯುವಂತೆ ಒತ್ತಾಯ ಶುರು ಮಾಡಿದ್ದಾಳಂತೆ. ವೃತ್ತಿ ಹಾಗೂ ದಾಂಪತ್ಯದ ಬಗ್ಗೆ ಹೆಚ್ಚು ಗಂಭೀರವಾಗಿರುವ ಮಹಿಳೆಗೆ ಈಗ್ಲೇ ಗರ್ಭಧರಿಸಲು ಸಾಧ್ಯವಿಲ್ಲವಂತೆ.
ಮಾತು ಮಾತಿಗೂ ಮಕ್ಕಳ (Children) ಬಗ್ಗೆ ಮಾತನಾಡುವ ಅತ್ತೆ, ಕೊಂಕು ಮಾತನಾಡ್ತಾಳಂತೆ. ಮಗು ಈಗ್ಲೇ ಬೇಡವೆಂದ್ರೆ ಜಗಳವಾಡ್ತಾಳಂತೆ. ಮಕ್ಕಳನ್ನು ಪಡೆಯಲು ಇದು ಸರಿಯಾದ ಸಮಯ ಎನ್ನುವ ಅತ್ತೆ, ಪತಿ ಬಳಿ ಚಾಡಿ ಹೇಳ್ತಾಳಂತೆ. ಗಂಡ – ಹೆಂಡತಿ ಮಧ್ಯೆ ಯಾವುದೇ ಗಲಾಟೆಯಿಲ್ಲ. ಇಬ್ಬರೂ ಪ್ರೀತಿಯಿಂದ ಇದ್ದೇವೆ. ಆದ್ರೆ ಅತ್ತೆ ಮಾತಿಗೆ ತಲೆಯಾಡಿಸುವ ಪತಿ ಒಮ್ಮೊಮ್ಮೆ ನನ್ನ ಜೊತೆ ಜಗಳವಾಡ್ತಾನೆ ಎನ್ನುತ್ತಾಳೆ ಮಹಿಳೆ. ಅತ್ತೆಯ ಈ ಕಾಟದಿಂದ ತಪ್ಪಿಸಿಕೊಳ್ಳೋದು ಹೇಗೆ ತಿಳಿತಿಲ್ಲ. ಮಾನಸಿಕ ಹಿಂಸೆಯಾಗ್ತಿದೆ. ನಾನು ಒಂಟಿ ಎಂಬ ಭಾವನೆ ಬರ್ತಿದೆ ಎನ್ನುತ್ತಾಳೆ ಮಹಿಳೆ.
ತಜ್ಞರ ಸಲಹೆ : ಮಕ್ಕಳನ್ನು ಪಡೆಯುವುದು ಪ್ರತಿಯೊಬ್ಬ ಮಹಿಳೆ ಸೌಭಾಗ್ಯವೆಂದು ಭಾರತ (India) ದಲ್ಲಿ ಭಾವಿಸಲಾಗಿದೆ. ಆದಷ್ಟು ಬೇಗ ಮೊಮ್ಮಕ್ಕಳನ್ನು ಪಡೆಯಬೇಕೆಂಬ ಬಯಕೆ ಹಿರಿಯರಿಗಿರುತ್ತದೆ. ಆದ್ರೆ ಮನಸ್ಸಿಲ್ಲದೆ ಗರ್ಭಧರಿಸುವುದು ಒಳ್ಳೆಯ ನಡೆಯಲ್ಲ. ನೀವು ಯಾವ ಕಾರಣಕ್ಕೆ ಮಕ್ಕಳನ್ನು ಪಡೆಯಲು ಮನಸ್ಸು ಮಾಡ್ತಿಲ್ಲ ಎಂಬುದನ್ನು ಮೊದಲು ಪತ್ತೆ ಮಾಡಿ.
ಪುರುಷರ VIRGINITY ಟೆಸ್ಟ್ ಮಾಡೋದು ಹೇಗೆ?
ವೃತ್ತಿ (Career) ಯಲ್ಲಿ ಹೆಚ್ಚು ಸಾಧನೆ ಮಾಡ್ಬೇಕು ಎಂಬ ಕಾರಣಕ್ಕೆ ಇಲ್ಲವೆ ಚಿಕ್ಕ ವಯಸ್ಸಿನಲ್ಲಿ ಮಗು ಬೇಡ ಎಂಬಂಥ ಕಾರಣ ನಿಮ್ಮದಾಗಿದ್ದರೆ ನೀವು ನಿಮ್ಮ ನಿರ್ಧಾರಕ್ಕೆ ಬದ್ಧವಾಗಿರಿ. ಈ ಬಗ್ಗೆ ಅತ್ತೆ ಬಳಿ ಮಾತನಾಡಿ ಎನ್ನುತ್ತಾರೆ ತಜ್ಞರು. ದೊಡ್ಡ ದೊಡ್ಡ ಸಮಸ್ಯೆ ಕೂಡ ಮಾತಿನಿಂದ ಬಗೆಹರಿಯುತ್ತದೆ. ನೀವು ಏಕೆ ಮಕ್ಕಳ ಪ್ಲಾನ್ ಮುಂದೂಡುತ್ತಿದ್ದೀರಿ ಎಂಬುದನ್ನು ಅತ್ತೆಗೆ ವಿವರಿಸಿ ಎನ್ನುತ್ತಾರೆ ತಜ್ಞರು. ಇದ್ರಿಂದ ಅವರಿಗೂ ಕ್ಲಾರಿಟಿ ಸಿಗುತ್ತೆ. ಹಾಗೆಯೇ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ ಎನ್ನುತ್ತಾರೆ ತಜ್ಞರು.
ಮದುವೆಯ ಮೊದಲ ವರ್ಷದಲ್ಲಿ ನವ ದಂಪತಿಗಳನ್ನು ಕಾಡುವ ಸಮಸ್ಯೆಗಳು
ಅತ್ತೆ ಜೊತೆ ಮಾತ್ರವಲ್ಲ ಪತಿ ಜೊತೆ ಕೂಡ ಮಾತನಾಡುವ ಅವಶ್ಯಕತೆಯಿದೆ. ಅವರು ಏನು ಬಯಸ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ಮಕ್ಕಳಾದ್ಮೇಲೆ ಏನೆಲ್ಲ ಸವಾಲುಗಳಿವೆ ಎಂಬುದನ್ನು ಅವರಿಗೆ ತಿಳಿಸಿ. ಹಾಗೆಯೇ ನೀವು ಯಾವಾಗ ಮಕ್ಕಳನ್ನು ಬಯಸ್ತೀರಿ ಎಂಬುದನ್ನು ಅವರಿಗೆ ಹೇಳಿ. ನಿಮ್ಮ ಕನಸುಗಳನ್ನು ಅವರ ಮುಂದಿಡಿ. ನಿಮ್ಮನ್ನು ಸಂಗಾತಿ ಅರ್ಥಮಾಡಿಕೊಂಡಲ್ಲಿ ನಿಮ್ಮ ಕೆಲಸ ಆದಂತೆ. ನಂತ್ರ ನೀವು ಪತಿ ಮೂಲಕ ಅತ್ತೆಗೆ ಸಮಾಧಾನ (Console) ಹೇಳಬಹುದು ಎನ್ನುತ್ತಾರೆ ತಜ್ಞರು.