Asianet Suvarna News Asianet Suvarna News

Family Finance: ತಿಂಗಳ ಕೊನೇಲಿ ಪರ್ಸಲ್ಲಿ ಕಾಸಿರಬೇಕಂದ್ರೆ ಹೀಗಿರಲಿ ಪ್ಲ್ಯಾನ್!

ಕುಟುಂಬ ನಿರ್ವಹಣೆಗೆ ಹಣಕಾಸು ಬಹಳ ಮುಖ್ಯ. ಒಂದೊಂದು ಪೈಸೆಯನ್ನೂ ಎಚ್ಚರಿಕೆಯಿಂದ ಖರ್ಚು ಮಾಡಿದ್ರೆ ಮಾತ್ರ ಭವಿಷ್ಯ ಚೆನ್ನಾಗಿರಲು ಸಾಧ್ಯ. ದಾಂಪತ್ಯದಲ್ಲಿ ಹಣ ಶತ್ರುವಾಗಬಾರದು ಅಂದ್ರೆ ಕೆಲ ಟಿಪ್ಸ್ ಪಾಲನೆ ಮಾಡ್ಬೇಕು.
 
Money Is The Reason For Your Fight Then Follow These Four Easy Tips
Author
Bangalore, First Published Jul 6, 2022, 4:03 PM IST

ಪತಿ – ಪತ್ನಿ ಮಧ್ಯೆ ಪ್ರೀತಿ (Love) ಹೆಚ್ಚಾದಂತೆ, ಸಂಬಂಧ (Relationship) ಗಾಢವಾದಂತೆ ಇತರ ವಿಷ್ಯಗಳೂ ಮಹತ್ವ ಪಡೆಯಲು ಶುರುವಾಗುತ್ತವೆ. ಜವಾಬ್ದಾರಿ (Responsibility) ಗಳ ಬಗ್ಗೆ ಮೊದಲಿಗಿಂತ ಹೆಚ್ಚು ಗಂಭೀರವಾಗುತ್ತಾರೆ. ಕುಟುಂಬ ದೊಡ್ಡದಾಗ್ತಿದ್ದಂತೆ ಖರ್ಚು ಹೆಚ್ಚಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆದಾಯ ಕಡಿಮೆ ಖರ್ಚು ಹೆಚ್ಚು ಎನ್ನುವ ಸ್ಥಿತಿಯಿದೆ. ಮನೆ (Home) ಯಲ್ಲಿ ಒಬ್ಬರು ದುಡಿದು ನಾಲ್ವರು ಊಟ ಮಾಡಲು ಸಾಧ್ಯವಾಗದ ಸ್ಥಿತಿಯಿದೆ. ಹಾಗಿರುವಾಗ ಮನೆಯ ಇಬ್ಬರೂ ದುಡಿಯಬೇಕು. ಒಬ್ಬರೇ ದುಡಿಯುವುದು ಅನಿವಾರ್ಯವೆಂದಾಗ ಖರ್ಚಿನ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಅನೇಕ ದಂಪತಿ (Couple) ಮಧ್ಯೆ ಗಲಾಟೆಗೆ ಇದೇ ಹಣ ಕಾರಣವಾಗುತ್ತದೆ. ಹಣದ ವಿಷ್ಯ ದಂಪತಿ ಕಲಹಕ್ಕೆ ಕಾರಣವಾಗಬಾರದು ಎಂದಾದ್ರೆ ಕೆಲವು ಸಲಹೆಗಳನ್ನು ದಂಪತಿ ಪಾಲನೆ ಮಾಡ್ಬೇಕಾಗುತ್ತದೆ. ಆಗ ಮಾತ್ರ ಸುಖ ಸಂಸಾರ ಸಾಧ್ಯವಾಗುತ್ತದೆ. 

ಬಜೆಟ್ (Budget) ತಯಾರಿ ಬಹಳ ಮುಖ್ಯ : ಮನೆಯಲ್ಲಿ ಇಬ್ಬರು ದುಡಿಯುತ್ತಿರಲಿ ಇಲ್ಲ ಒಬ್ಬರೇ ದುಡಿಯುತ್ತಿರಲಿ ಬಜೆಟ್ ತಯಾರಿ ಬಹಳ ಮುಖ್ಯ. ತಿಂಗಳ ಆರಂಭದಲ್ಲಿ ಬಜೆಟ್ ಸಿದ್ಧಪಡಿಸಬೇಕು. ಈ ತಿಂಗಳು (Month) ಯಾವುದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ಪಟ್ಟಿ ನಿಮ್ಮ ಕೈನಲ್ಲಿರಬೇಕು. ಹಾಗೆ ಉಳಿತಾಯ ಎಷ್ಟು ಮಾಡ್ಬೇಕು ಎನ್ನುವ ನಿರ್ಧಾರ ಮಾಡಿರ್ಬೇಕು. ಬಜೆಟ್ ತಯಾರಿಸಿದ್ರೆ ಸಾಲದು. ಅದರಂತೆ ನೀವು ನಡೆದುಕೊಳ್ಳಬೇಕಾಗುತ್ತದೆ. ಇಲ್ಲವೆಂದ್ರೆ ತಿಂಗಳ ಕೊನೆಯಲ್ಲಿ ನೀವು ಮತ್ತೆ ಸಂಗಾತಿ ಜೊತೆ ಗಲಾಟೆಗೆ ಇಳಿಯಬೇಕಾಗುತ್ತದೆ. ಇಬ್ಬರೂ ದುಡಿಯುತ್ತಿದ್ದರೆ ಒಬ್ಬರ ಆದಾಯವನ್ನು ಉಳಿತಾಯಕ್ಕೆ ಹಾಗೂ ಇನ್ನೊಬ್ಬರ ಆದಾಯ (income) ವನ್ನು ಖರ್ಚಿಗೆ ಬಳಸಬಹುದು. ಅದು ಸಾಧ್ಯವಿಲ್ಲವೆಂದ್ರೆ ಇಬ್ಬರೂ ಖರ್ಚಿನಲ್ಲಿ ಪಾಲು ಪಡೆಯಬಹುದು.

ಪ್ರಯಾಣ (Travel) ದ ವೆಚ್ಚ : ಸಾಮಾನ್ಯವಾಗಿ ವೀಕೆಂಡ್ ಮನೆಯಿಂದ ಹೊರ ಬಿದ್ರೆ ಖರ್ಚು ಹೆಚ್ಚಾಗುತ್ತದೆ. ವಾರಪೂರ್ತಿ ಕೆಲಸ ಮಾಡಿ ಸುಸ್ತಾಗಿರುವ ಜನರು ವೀಕೆಂಡ್ ನಲ್ಲಿ ಹೊರಗೆ ಹೋಗ್ತಾರೆ. ಆಗ ಮಿತಿ ಮೀರಿ ಹಣ ಖರ್ಚಾಗಿರುತ್ತದೆ. ಇದು ತಿಂಗಳ ಕೊನೆಯಲ್ಲಿ ಸಾಲ ಮಾಡುವ ಹಂತಕ್ಕೆ ತಂದು ನಿಲ್ಲಿಸುತ್ತದೆ. ಹಾಗಾಗಿ ತಿಂಗಳ ಆರಂಭದಲ್ಲಿಯೇ ಪ್ರವಾಸದ ಖರ್ಚನ್ನು ನೀವು ನಿಗದಿಪಡಿಸಬೇಕು. ವೀಕೆಂಡ್ ಸಂದರ್ಭದಲ್ಲಿ ಎಷ್ಟು ಹಣ ಖರ್ಚು ಮಾಡ್ಬೇಕೆನ್ನುವ ಬಗ್ಗೆ ಒಂದು ಪಟ್ಟಿ ಸಿದ್ಧವಾಗ್ಬೇಕ.

Parenting Tips: ಮಕ್ಕಳು ಸೋಮಾರಿಯಾ? ಆ್ಯಕ್ಟಿವ್ ಮಾಡಲು ಹೀಗ್ ಮಾಡಿ

ಪತಿ – ಪತ್ನಿ ಮಧ್ಯೆ ಪ್ರೀತಿ (Love) ಹೆಚ್ಚಾದಂತೆ, ಸಂಬಂಧ (Relationship) ಗಾಢವಾದಂತೆ ಇತರ ವಿಷ್ಯಗಳೂ ಮಹತ್ವ ಪಡೆಯಲು ಶುರುವಾಗುತ್ತವೆ. ಜವಾಬ್ದಾರಿ (Responsibility) ಗಳ ಬಗ್ಗೆ ಮೊದಲಿಗಿಂತ ಹೆಚ್ಚು ಗಂಭೀರವಾಗುತ್ತಾರೆ. ಕುಟುಂಬ ದೊಡ್ಡದಾಗ್ತಿದ್ದಂತೆ ಖರ್ಚು ಹೆಚ್ಚಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆದಾಯ ಕಡಿಮೆ ಖರ್ಚು ಹೆಚ್ಚು ಎನ್ನುವ ಸ್ಥಿತಿಯಿದೆ. ಮನೆ (Home) ಯಲ್ಲಿ ಒಬ್ಬರು ದುಡಿದು ನಾಲ್ವರು ಊಟ ಮಾಡಲು ಸಾಧ್ಯವಾಗದ ಸ್ಥಿತಿಯಿದೆ. ಹಾಗಿರುವಾಗ ಮನೆಯ ಇಬ್ಬರೂ ದುಡಿಯಬೇಕು. ಒಬ್ಬರೇ ದುಡಿಯುವುದು ಅನಿವಾರ್ಯವೆಂದಾಗ ಖರ್ಚಿನ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಅನೇಕ ದಂಪತಿ (Couple) ಮಧ್ಯೆ ಗಲಾಟೆಗೆ ಇದೇ ಹಣ ಕಾರಣವಾಗುತ್ತದೆ. ಹಣದ ವಿಷ್ಯ ದಂಪತಿ ಕಲಹಕ್ಕೆ ಕಾರಣವಾಗಬಾರದು ಎಂದಾದ್ರೆ ಕೆಲವು ಸಲಹೆಗಳನ್ನು ದಂಪತಿ ಪಾಲನೆ ಮಾಡ್ಬೇಕಾಗುತ್ತದೆ. ಆಗ ಮಾತ್ರ ಸುಖ ಸಂಸಾರ ಸಾಧ್ಯವಾಗುತ್ತದೆ. 

ಬಜೆಟ್ (Budget) ತಯಾರಿ ಬಹಳ ಮುಖ್ಯ : ಮನೆಯಲ್ಲಿ ಇಬ್ಬರು ದುಡಿಯುತ್ತಿರಲಿ ಇಲ್ಲ ಒಬ್ಬರೇ ದುಡಿಯುತ್ತಿರಲಿ ಬಜೆಟ್ ತಯಾರಿ ಬಹಳ ಮುಖ್ಯ. ತಿಂಗಳ ಆರಂಭದಲ್ಲಿ ಬಜೆಟ್ ಸಿದ್ಧಪಡಿಸಬೇಕು. ಈ ತಿಂಗಳು (onth) ಯಾವುದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ಪಟ್ಟಿ ನಿಮ್ಮ ಕೈನಲ್ಲಿರಬೇಕು. ಹಾಗೆ ಉಳಿತಾಯ ಎಷ್ಟು ಮಾಡ್ಬೇಕು ಎನ್ನುವ ನಿರ್ಧಾರ ಮಾಡಿರ್ಬೇಕು. ಬಜೆಟ್ ತಯಾರಿಸಿದ್ರೆ ಸಾಲದು. ಅದರಂತೆ ನೀವು ನಡೆದುಕೊಳ್ಳಬೇಕಾಗುತ್ತದೆ. ಇಲ್ಲವೆಂದ್ರೆ ತಿಂಗಳ ಕೊನೆಯಲ್ಲಿ ನೀವು ಮತ್ತೆ ಸಂಗಾತಿ ಜೊತೆ ಗಲಾಟೆಗೆ ಇಳಿಯಬೇಕಾಗುತ್ತದೆ. ಇಬ್ಬರೂ ದುಡಿಯುತ್ತಿದ್ದರೆ ಒಬ್ಬರ ಆದಾಯವನ್ನು ಉಳಿತಾಯಕ್ಕೆ ಹಾಗೂ ಇನ್ನೊಬ್ಬರ ಆದಾಯ (Income) ವನ್ನು ಖರ್ಚಿಗೆ ಬಳಸಬಹುದು. ಅದು ಸಾಧ್ಯವಿಲ್ಲವೆಂದ್ರೆ ಇಬ್ಬರೂ ಖರ್ಚಿನಲ್ಲಿ ಪಾಲು ಪಡೆಯಬಹುದು.

ಸೆಕ್ಸ್ ಬಳಿಕ ಪುರುಷರ ತಲೇಲಿ ಏನೆಲ್ಲಾ ವಿಷ್ಯಗಳು ಓಡುತ್ತೆ?

Follow Us:
Download App:
  • android
  • ios