Asianet Suvarna News Asianet Suvarna News

ಹೊಡೀತೀನ್ ನೋಡು ಅಂತ ಮಗುವಿಗೆ ಗದರೋ ಮುನ್ನ ಇವಿಷ್ಟನ್ನು ತಿಳ್ಕೊಂಡಿರಿ

ಮಕ್ಕಳು (Children) ಗೊತ್ತಲ್ಲ. ಹೇಳಿದ ಮಾತು ಒಂದನ್ನೂ ಕೇಳುವುದಿಲ್ಲ. ವಿಪರೀತ ಹಠ, ಅಳುವುದು, ಕಿರುಚಾಡುವುದು ಮಾಡ್ತಾರೆ. ಪೋಷಕರು (Parents) ಕೆಲವೊಮ್ಮೆ ಅವ್ರನ್ನು ಪುಸಲಾಯಿಸಿ ಸಮಾಧಾನ ಮಾಡಲು ಯತ್ನಿಸಿದರೂ, ಇನ್ನು ಕೆಲವೊಮ್ಮೆ ಸಿಟ್ಟು (Angry) ಬಂದು ರೇಗಿಬಿಡುತ್ತಾರೆ. ಆದ್ರೆ ಮಕ್ಕಳ ಮೇಲೆ ರೊಚ್ಚಿಗೇಳೋ ಮುನ್ನ ಇವಿಷ್ಟನ್ನು ತಿಳ್ಕೊಂಡಿರಿ. 

Mistakes Parents Make When Reprimanding Their Children
Author
Bengaluru, First Published Apr 20, 2022, 4:37 PM IST

ಪ್ರತಿ ಪೋಷಕರೂ (Parents) ತಮ್ಮ ಮಗುವನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಬೇಕು ಎಂದು ಶ್ರಮಿಸುತ್ತಾರೆ. ಹೀಗಾಗಿಯೇ ಮಕ್ಕಳನ್ನು (Children) ಬೆಳೆಸುವಾಗ ಪ್ರತಿಯೊಂದು ವಿಚಾರಗಳ ಬಗ್ಗೆ ಗಮನ ಹರಿಸುತ್ತಾರೆ. ಆದ್ರೆ ಮಕ್ಕಳು ಗೊತ್ತಲ್ಲ ಎಲ್ಲಾ ವಿಚಾರದಲ್ಲಿ ಹಠ ಮಾಡುವುದು, ಸೋಮಾರಿತನ, ಸುಮ್ಮನೆ ಕಿರುಚಾಡುವುದು ಮೊದಲಾದ ಅಭ್ಯಾಸ (Habit)ವನ್ನು ರೂಢಿಸಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಗದರಿಸುವುದು ಸಾಮಾನ್ಯವಾಗಿದೆ. ಹಲವಾರು ಸಂದರ್ಭಗಳಲ್ಲಿ ಮಕ್ಕಳೊಂದಿಗೆ ವ್ಯವಹರಿಸುವಾಗ ಕೋಪವನ್ನು (Angry) ನಿಯಂತ್ರಿಸಲು ಕಷ್ಟವಾಗಬಹುದು. ಯಾವುದೇ ಪೋಷಕರು ಅಂತಹ ಪರಿಸ್ಥಿತಿಯಲ್ಲಿ ಕಿರುಚಾಡುವುದು ಮತ್ತು ದೈಹಿಕ ಹಿಂಸೆ ಮಾಡಲು ಬಯಸುವುದಿಲ್ಲ. ಆದರೆ ಹಾಗೆ ಹೇಳಿಬಿಡುತ್ತಾರೆ. ಇದ್ರಿಂದ ಅದೆಷ್ಟು ತೊಂದ್ರೆಯಾಗುತ್ತೆ ನೋಡಿ.

Parenting Tips : ಅಣ್ಣ – ತಂಗಿಯ ಕಿತ್ತಾಟಕ್ಕೆ ಬೇಸತ್ತಿರುವ ಪಾಲಕರೇ ಇದನ್ನೋದಿ

ಮಕ್ಕಳನ್ನು ಕಂಟ್ರೋಲ್ ಮಾಡಲು ಹೊಡೆಯುವುದು ಮಾರ್ಗವಲ್ಲ !
ಪಾಲಕರು ಹೇಳಿದ್ದನ್ನೆಲ್ಲ ಮಕ್ಕಳು ಕೇಳುವುದಿಲ್ಲ. ಕೆಲ ಮಕ್ಕಳು ಆಹಾರ ಸರಿಯಾಗಿ ಸೇವನೆ ಮಾಡುವುದಿಲ್ಲ. ಮತ್ತೆ ಕೆಲ ಮಕ್ಕಳು ಶಾಲೆಗೆ ಹೋಗಲು ಅಳ್ತಾರೆ, ಇನ್ನು ಕೆಲ ಮಕ್ಕಳು  ಟಿವಿ ನೋಡ್ತಾರೆ. ಓದಿಲ್ಲದೆ ಕೆಲ ಮಕ್ಕಳು ಆಟವಾಡಿದ್ರೆ ಮತ್ತೆ ಕೆಲವರು ರಾತ್ರಿ ನಿದ್ದೆ ಮಾಡುವಾಗ ಅಳ್ತಾರೆ. ಹೀಗೆ ಮಕ್ಕಳ ಸ್ವಭಾವ ಭಿನ್ನವಾಗಿರುತ್ತದೆ. ಮಕ್ಕಳನ್ನು ಕಂಟ್ರೋಲ್ ಮಾಡಲು ಎಲ್ಲ ಪಾಲಕರು ಒಂದೇ ಮಾತು ಹೇಳ್ತಾರೆ. ಹೊಡೆದುಬಿಡ್ತೇನೆ ಅಂತಾ.

ಸಾಮಾನ್ಯವಾಗಿ ನಿಮ್ಮ ಪಾಲಕರೂ ನಿಮಗೆ ಈ ಮಾತು ಹೇಳಿರ್ತಾರೆ. ಅಥವಾ ನೀವು ಪಾಲಕರಾಗಿದ್ದರೆ ಹೊಡೆದ್ಬಿಡ್ತೇನೆ ನೋಡು ಅಂತಾ  ಹೇಳಿರ್ತೀರಿ.  ಅಮ್ಮಾ ನಾನು ಶಾಲೆಗೆ ಹೋಗೋದಿಲ್ಲ ಅಂತಾ ಮಗು ಹೇಳಿದ್ರೆ, ಗಲಾಟೆ ಮಾಡ್ಬೇಡ, ಸುಮ್ಮನೆ ಹೋಗ್ದೆ ಹೋದ್ರೆ ನಾಲ್ಕು ಬಾರಿಸ್ತೇನೆ ಎನ್ನುತ್ತಾರೆ ಅಮ್ಮಂದಿರು.   ಅಪ್ಪಾ, ನಾನು ಆಟಕ್ಕೆ ಹೋಗ್ಲಾ ಅಂತಾ ಕೇಳಿದ್ರೆ, ಪರೀಕ್ಷೆ ಹತ್ರಾ ಬಂತು. ಓದ್ಕೋ, ಇಲ್ಲ ಅಂದ್ರೆ ಬೀಳುತ್ತೆ ಒದೆ ಎನ್ನುತ್ತಾರೆ.  ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲೂ, ಪ್ರತಿಯೊಬ್ಬ ಪಾಲಕರ ಬಾಯಲ್ಲೂ ಈ ಮಾತನ್ನು ನಾವು ಕೇಳ್ತೇವೆ. ವಾಸ್ತವವಾಗಿ  ನೋಡಿದರೆ, ತಂದೆ-ತಾಯಿಗಳು ತಮ್ಮ ಮಕ್ಕಳು ತಮ್ಮ ಇಚ್ಛೆಯಂತೆ ನಡೆದುಕೊಳ್ಳಬೇಕೆಂದು ಬಯಸ್ತಾರೆ. ನಾವು ಹೇಳುವುದನ್ನು ನಮ್ಮ ಮಗು ಮಾಡಬೇಕೆಂದು ಅವರು ಬಯಸುತ್ತಾರೆ. ಅದನ್ನು ಮಾಡಿಸಲು ಭಯ ಹುಟ್ಟಿಸುತ್ತಾರೆ.

ಮಕ್ಕಳನ್ನು ಹದರಿಸಬೇಡಿ : ಪ್ರತಿಯೊಬ್ಬ ಭಾರತೀಯ ಪೋಷಕರಲ್ಲಿ ಮಕ್ಕಳನ್ನು ಬೆದರಿಸುವ ಸ್ವಭಾವನ್ನು ನೋಡ್ಬಹುದು. ಬಾಲ್ಯದಲ್ಲಿ ಮಕ್ಕಳಿಗೆ ಪಾಲಕರು ಅವಲಂಬಿತರಾಗುವುದನ್ನು  ಕಲಿಸುತ್ತಾರೆ. ಇದರಿಂದಾಗಿ ಅನೇಕ ಮಕ್ಕಳು ಬೆಳೆದ ನಂತರವೂ ಸ್ವತಂತ್ರರಾಗಲು ಸಾಧ್ಯವಾಗುವುದಿಲ್ಲ.

ಜಪಾನೀ ಮಕ್ಕಳು ಅಷ್ಟು ಚುರುಕಾಗಿರುವುದು ಹೇಗೆ ? ಪೋಷಕರು ಏನೇನೆಲ್ಲಾ ಹೇಳಿ ಕೊಡ್ತಾರೆ ನೋಡಿ

ಮಗುವಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ : ಕಾಲಕ್ಕೆ ತಕ್ಕಂತೆ ಬದಲಾಗದ ಪೋಷಕರು ತಮ್ಮ ಮಗುವಿನ ಬೆಳವಣಿಗೆ ಕುಂಠಿತಗೊಳಿಸ್ತಾರೆ.  ಹೆತ್ತವರು ತಮ್ಮ ಆಸೆಗಳನ್ನು ಮಗುವಿನ ಮೇಲೆ ಹೇರಿದಾಗ ಆ ಮಗು ವಿರೋಧಿಸಲು ಕಲಿಯುತ್ತದೆ. ತಪ್ಪು ದಾರಿಯ ಹುಡುಕಾಟ ನಡೆಸುತ್ತದೆ. ಬಾಲ್ಯದಲ್ಲಿ ಮಕ್ಕಳನ್ನು ಬೆದರಿಸುವುದು ತಪ್ಪು. ಇದ್ರಿಂದ ಮಕ್ಕಳ ಪ್ರತಿಭೆ ಹೊರ ಬರುವುದಿಲ್ಲ. ಜೊತೆಗೆ ಒತ್ತಾಯಕ್ಕೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ.

ಪಾಲಕರ ಬೆದರಿಕೆ ಸ್ವಭಾವ ತಿರುಗು ಬಾಣವಾಗಬಹುದು : ಯಾವಾಗ ಪೋಷಕರು ಮಗುವನ್ನು ತುಂಬಾ ಬೈಯುತ್ತಾರೆ ಅಥವಾ ಅವರನ್ನು ಹೊಡೆಯುತ್ತಾರೆ, ಆಗ ಈ ಕೆಟ್ಟ ನೆನಪು  ಮಗುವಿನ ಹೃದಯದಲ್ಲಿ ದೀರ್ಘಕಾಲ ಉಳಿಯಬಹುದು. ಈ ಎಲ್ಲಾ ವಿಷಯಗಳು ಅತಿಯಾದರೆ, ಅದು ಮಗುವಿನ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಉತ್ತಮ ನೆನಪುಗಳಿಂದ ತುಂಬಿದ ಬಾಲ್ಯವನ್ನು ನೀಡುವುದು ಬಹಳ ಮುಖ್ಯ. ಬಾಲ್ಯದಲ್ಲಿ  ಮನಸ್ಸಿಗೆ ಗಾಯವಾದ್ರೆ  ಅದರ ಕೆಟ್ಟ ಪರಿಣಾಮ ಯೌವನದವರೆಗೂ ಇರುತ್ತದೆ ಮತ್ತು ಇದು ಮಗುವಿನ ಮಾನಸಿಕ ಆರೋಗ್ಯ ಹದಗೆಡಿಸುತ್ತದೆ.

ಪಾಲಕರು ಏನು ಮಾಡ್ಬೇಕು ?
ಮೊದಲನೇಯದಾಗಿ ಮಕ್ಕಳಿಗೆ ಹೊಡೆಯುತೇನೆ ಎಂದು ಹೇಳುವುದನ್ನು ಬಿಟ್ಟು ಬಿಡಿ. ಪ್ರತಿ ಮಾತಿಗೂ ಮಗುವನ್ನು ಹೊಡೆಯಬೇಡಿ. ಮಗುವಿನ ಭಾವನೆ ಮತ್ತು ಆಸೆಯನ್ನು ಆಲಿಸಿ. ಆಗ ಮಗು ಮುಕ್ತವಾಗಿ ತನ್ನ ಮನಸ್ಸಿನ ಆಸೆಯನ್ನು ಹೇಳುತ್ತದೆ. ಇದು ಮಗುವಿನ ಬೆಳವಣಿಗೆಗೆ ಒಳ್ಳೆಯದು. ಇದಲ್ಲದೆ ಇತರ ಹೆಚ್ಚು ಪರಿಣಾಮಕಾರಿ ಮಾರ್ಗಗಳಿವೆ ಮತ್ತು ಅವುಗಳಲ್ಲಿ ಒಂದು ಧನಾತ್ಮಕ ಶಿಸ್ತು. ಪೋಷಕರು ತಮ್ಮ ಮಕ್ಕಳೊಂದಿಗೆ ಸಕಾರಾತ್ಮಕ ಸಂಬಂಧಗಳನ್ನು ಬೆಳೆಸಲು ಮತ್ತು ಜವಾಬ್ದಾರಿ, ಸಹಕಾರ ಮತ್ತು ಸ್ವಯಂ-ಶಿಸ್ತಿನಂತಹ ಕೌಶಲ್ಯಗಳನ್ನು ಕಲಿಸಲು ಈ ವಿಧಾನವು ಸಹಾಯ ಮಾಡುತ್ತದೆ.

Follow Us:
Download App:
  • android
  • ios