Parenting Tips : ಅಣ್ಣ – ತಂಗಿಯ ಕಿತ್ತಾಟಕ್ಕೆ ಬೇಸತ್ತಿರುವ ಪಾಲಕರೇ ಇದನ್ನೋದಿ
Patenting tips in Kannada: ಮಕ್ಕಳೆಂದ್ಮೇಲೆ ಜಗಳ, ಗಲಾಟೆ ಇದ್ದಿದ್ದೆ. ಅದ್ರಲ್ಲೂ ಇಬ್ಬರು ಮಕ್ಕಳಿರುವ ಮನೆಯಲ್ಲಿ ಸದಾ ಕೂಗಾಟ ಕೇಳ್ತಿರುತ್ತದೆ. ಒಡಹುಟ್ಟಿದವರ ಜಗಳ ಬಿಡಿಸಿ ಪಾಲಕರು ಸುಸ್ತಾಗಿರ್ತಾರೆ. ಕೆಲ ಐಡಿಯಾ ಮೂಲಕ ಅವರನ್ನು ಸುಧಾರಿಸಬಹುದು.
ಅಣ್ಣ (Brother )– ತಂಗಿ (Sister) ಸಂಬಂಧ ತುಂಬಾ ಸುಂದರವಾಗಿರುತ್ತದೆ. ಪ್ರೀತಿ (Love ) ಇರುವಲ್ಲಿ ಜಗಳಗಳು ಇದ್ದೇ ಇರುತ್ವೆ. ಎಷ್ಟೇ ಕಿತ್ತಾಟ ನಡೆಸಿದ್ರೂ ಪರಸ್ಪರ ಕಾಳಜಿ ವಹಿಸುವುದುನ್ನು ಅವರು ಮರೆಯುವುದಿಲ್ಲ. ಇಬ್ಬರೇ ಇದ್ದಾಗ ಖುಷಿ (Enjoy) ಯಾಗಿರುವ ಅಣ್ಣ –ತಂಗಿ ಪೋಷಕರ ಮುಂದೆ ಕಿತ್ತಾಟ ನಡೆಸುತ್ತಾರೆ. ಮಕ್ಕಳು ಸ್ಪರ್ಧೆಗಿಳಿಯುವುದು ಪಾಲಕರ ತಲೆನೋವಿಗೆ ಕಾರಣವಾಗುತ್ತದೆ. ಮಕ್ಕಳು ಚಿಕ್ಕವರಿದ್ದಾಗ ಅವರ ಕಿತ್ತಾಟ, ಸಮಸ್ಯೆ ಬಗೆಹರಿಸುವುದು ಸುಲಭ. ಆದ್ರೆ ದೊಡ್ಡವರಾದಂತೆ ಕಷ್ಟವಾಗುತ್ತದೆ. ಸಣ್ಣ ವಿಷ್ಯಗಳಿಗೆ ಸಹೋದರ – ಸಹೋದರಿ ಜಗಳ ಶುರು ಮಾಡಿದ್ರೆ ಯಾರಿಗೆ ಬುದ್ದಿ ಹೇಳುವುದು ಎಂಬ ತಲೆಬಿಸಿ ಮಕ್ಕಳಿಗೆ ಕಾಡುತ್ತದೆ.
ವಾಸ್ತವವಾಗಿ, ಹಿರಿಯ ಮಗುವಿಗೆ, ಪೋಷಕರು ಕಿರಿಯ ಸಹೋದರ ಅಥವಾ ಸಹೋದರಿಯ ಬಗ್ಗೆ ಪಾಲಕರು ಹೆಚ್ಚು ಗಮನ ಹರಿಸುತ್ತಾರೆ ಎಂಬ ಭಾವನೆಯಿರುತ್ತದೆ. ಚಿಕ್ಕವರು ಪ್ರತಿಯೊಂದು ಅಗತ್ಯಕ್ಕೂ ಪೋಷಕರ ಮೇಲೆ ಅವಲಂಬಿತರಾಗುವ ಕಾರಣ ಪಾಲಕರು ಚಿಕ್ಕ ಮಗುವಿಗೆ ಹೆಚ್ಚು ಗಮನ ನೀಡುತ್ತಾರೆ. ಆದ್ರೆ ವಯಸ್ಸಾದ ಮಕ್ಕಳನ್ನು ಅವರು ಪ್ರೀತಿಸುವುದಿಲ್ಲವೆಂದಲ್ಲ. ಸಹೋದರ-ಸಹೋದರಿ ಸಂಬಂಧವನ್ನು ಬೆಸೆಯುವಲ್ಲಿ ಮತ್ತು ಬಲಪಡಿಸುವಲ್ಲಿ ಪೋಷಕರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ ಮಕ್ಕಳ ನಡುವೆ ಉತ್ತಮ ಸಂಬಂಧ ಮತ್ತು ಬಲವಾದ ಬಾಂಧವ್ಯವನ್ನು ಕಾಪಾಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. ನಿಮ್ಮ ಮಕ್ಕಳ ಮಧ್ಯೆ ಪ್ರೀತಿ, ಗೌರವವಿರಬೇಕೆಂದ್ರೆ ಮಕ್ಕಳ ಜೊತೆ ಸಕಾರಾತ್ಮಕ ಕ್ಷಣಗಳನ್ನು ಕಳೆಯಬೇಕು. ಒಡಹುಟ್ಟಿದವರ ಮಧ್ಯೆ ಬಾಂಧವ್ಯ ಬೆಸೆಯಲು ಕೆಲವು ಟ್ರಿಕ್ಸ್ ಬಳಸಬಹುದು. ಇಂದು ನಾವು ಒಡಹುಟ್ಟಿದವರ ಮಧ್ಯೆ ಬಾಂಧವ್ಯವನ್ನು ಹೇಗೆ ಗಟ್ಟಿಗೊಳಿಸಬೇಕೆನ್ನುವ ಬಗ್ಗೆ ಹೇಳ್ತೇವೆ.
RELATIONSHIP TIPS : ತಕ್ಷಣ ಪತಿ ಮೂಡ್ ಸರಿ ಮಾಡ್ಬೇಕಾ?
ಮಕ್ಕಳನ್ನು ಪರಸ್ಪರ ಹೋಲಿಕೆ ಮಾಡಬೇಡಿ : ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಬಲಪಡಿಸಲು ಉತ್ತಮ ಮಾರ್ಗವೆಂದರೆ ಅವರನ್ನು ಪರಸ್ಪರ ಹೋಲಿಕೆ ಮಾಡದಿರುವುದು. ಯಾವಾಗಲೂ ಇಬ್ಬರನ್ನೂ ಸಮಾನವಾಗಿ ಪರಿಗಣಿಸಿ. ಅವರಿಬ್ಬರನ್ನೂ ಇನ್ನೊಬ್ಬರಿಗಿಂತ ಕೀಳೆಂದು ಭಾವಿಸಬೇಡಿ. ಕೆಲವೊಮ್ಮೆ ಪೋಷಕರು ಹಿರಿಯ ಮಗುವನ್ನು ನಿರ್ಲಕ್ಷಿಸುತ್ತಾರೆ ಮತ್ತು ಕಿರಿಯ ಮಗುವಿನ ಮೇಲೆ ಹೆಚ್ಚು ಮುದ್ದಿಸುತ್ತಾರೆ. ಇದರಿಂದ ಮಕ್ಕಳ ನಡುವೆ ದ್ವೇಷ ಹುಟ್ಟುತ್ತದೆ ಹಾಗೂ ಬೆಳೆದು ದೊಡ್ಡವರಾದ ಮೇಲೂ ಅವರ ನಡುವೆ ಪ್ರೀತಿ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಮೊದಲಿನಿಂದಲೂ ಮಕ್ಕಳನ್ನು ಪರಸ್ಪರ ಹೋಲಿಕೆ ಮಾಡದಂತೆ ನೋಡಿಕೊಳ್ಳಬೇಕು. ಇಬ್ಬರಿಗೂ ಸಮಾನ ಪ್ರೀತಿ ನೀಡಿ.
ಇಬ್ಬರನ್ನು ಒಟ್ಟಿಗೆ ಕೆಲಸಕ್ಕೆ ಬಿಡಿ : ಟೀಂ ವರ್ಕ್ ಇಲ್ಲಿ ಕೆಲಸ ಮಾಡುತ್ತದೆ. ಇಬ್ಬರ ಮಧ್ಯೆ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಒಟ್ಟಿಗೆ ಕುಳಿತು ಪೇಟಿಂಗ್,ಡ್ರಾಯಿಂಗ್,ಡಾನ್ಸ್ ಹೀಗೆ ಅವರಿಗೆ ಆಸಕ್ತಿಯಿರುವ ಕೆಲಸ ಮಾಡಲು ಹೇಳಿ. ಮನೆ ಕೆಲಸವನ್ನು ಕೂಡ ಹಂಚಿಕೊಂಡು ಮಾಡಲು ಕಲಿಸಿ. ಆಗ ಇಬ್ಬರೂ ಸೇರಿ ಒಟ್ಟಿಗೆ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ.
ಸರ್ಕಾರವೇ ನಿಮ್ಮ ಮದುವೆ ಮಾಡುತ್ತೆ ! ಅರ್ಜಿ ಸಲ್ಲಿಸುವುದು ಹೇಗೆ ?
ಒಟ್ಟಿಗೆ ಆಡಲು ಅವಕಾಶ ನೀಡಿ : ಹುಡುಗರ ಆಟ ಬೇರೆ, ಹುಡುಗಿಯರ ಆಟ ಬೇರೆ. ಇಬ್ಬರು ಸಹೋದರರಾದ್ರೆ ಅವರು ಒಂದೇ ರೀತಿಯ ಆಟವಾಡ್ತಾರೆ. ಅದೇ ಸಹೋದರ – ಸಹೋದರಿ ಆದ್ರೆ ಆಟದಲ್ಲಿ ಭಿನ್ನಾಭಿಪ್ರಾಯ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇಬ್ಬರೂ ಒಂದೇ ಆಟವನ್ನು ಆಡುವ ಅಗತ್ಯವಿಲ್ಲ. ಅವರು ಒಟ್ಟಿಗೆ ಆಡಬಹುದಾದ ಕೆಲವು ಆಟಗಳನ್ನು ನೀವು ಅವರಿಗೆ ಕಲಿಸಬೇಕು. ಟೇಬಲ್ ಟೆನ್ನಿಸ್, ಸ್ನೂಕರ್, ಕೇರಂ ಬೋರ್ಡ್, ಸ್ನೇಕ್ ಲ್ಯಾಡರ್, ಲುಡೋದಂತಹ ಆಟಗಳನ್ನು ಆಡುವಂತೆ ಸಲಹೆ ನೀಡಬಹುದು. ಇದು ಅವರು ಹತ್ತಿರಬರಲು ನೆರವಾಗುತ್ತದೆ.
ಪರಸ್ಪರ ಕಾಳಜಿ ವಹಿಸಲು ಕಲಿಸಿ : ಮಕ್ಕಳಿಗೆ ಮೊದಲಿನಿಂದಲೂ ಪರಸ್ಪರ ಕಾಳಜಿಯನ್ನು ಕಲಿಸಬೇಕು. ಇಬ್ಬರ ಮಧ್ಯೆ ಅಸೂಯೆ ಭಾವ ಬರದಂತೆ ನೋಡಿಕೊಳ್ಳಿ. ಕಿರಿಯ ಸಹೋದರ ಅಥವಾ ಸಹೋದರಿಯನ್ನು ನೋಡಿಕೊಳ್ಳಲು ಹಿರಿಯರಿಗೆ ಹೇಳಿ. ಕಿರಿಯರಿಗೆ ಹಿರಿಯರನ್ನು ಗೌರವಿಸಬೇಕೆಂದು ಕಲಿಸಿ. ಇದರಿಂದ ಇಬ್ಬರ ನಡುವೆ ಪರಸ್ಪರ ಕಾಳಜಿ ಹೆಚ್ಚುತ್ತದೆ.
ಸಹಾಯ ಮಾಡಲು ಕಲಿಸಿ : ಒಡಹುಟ್ಟಿದವರ ಬಂಧವನ್ನು ಬಲಪಡಿಸಲು ಉತ್ತಮ ಮಾರ್ಗವೆಂದರೆ ಪೋಷಕರು ಪರಸ್ಪರ ಸಹಾಯ ಮಾಡಲು ಕಲಿಸುವುದು. ಅದು ಕೆಲವು ಮನೆಯ ಕೆಲಸವಾಗಲಿ ಅಥವಾ ಶಾಲೆಯ ಮನೆಕೆಲಸವಾಗಲಿ. ಪರಸ್ಪರ ಸಹಾಯ ಮಾಡುವುದರಿಂದ ಅವರ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ.