ಇಂದು ಅಮೆರಿಕದ #KissingDay- ಮುತ್ತು ನಿಮಗೆಷ್ಟು ಗೊತ್ತು?
ಸಂಗಾತಿಗಳು ಮುತ್ತಿಟ್ಟುಕೊಂಡೇ ಇರುತ್ತೀರಿ. ಆದರೆ ಮುತ್ತಿನ ಬಗ್ಗೆ ನಿಮಗೆ ಈ ಕೆಳಗಿನ ಸ್ವಾರಸ್ಯಕರ ಸಂಗತಿಗಳು ಗೊತ್ತಿದೆಯಾ?
ಇಂದು ಅಮೆರಿಕದಲ್ಲಿ ನ್ಯಾಷನಲ್ ಕಿಸ್ಸಿಂಗ್ ಡೇ ಅಂತೆ. ಜೂನ್ ೨೨ನ್ನು ಯುವಪ್ರೇಮಿಗಳೆಲ್ಲ ಹಾಗೆ ಸಂಭ್ರಮಿಸುತ್ತಾರೆ. ವಿಶ್ವಾದ್ಯಂತ ಜುಲೈ ೬ನ್ನು ಜಾಗತಿಕ ಚುಂಬನ ದಿನವಾಗಿ ಆಚರಿಸಲಾಗುತ್ತದಾದರೂ, ಅಮೆರಿಕಕ್ಕೆ ಮಾತ್ರ ಬೆಕ್ಕಿನ ಬಿಡಾರ ಬೇರೇ ಎಂಬ ಹಾಗೆ, ಇಂದು ರಾಷ್ಟ್ರೀಯ ಚುಂಬನ ದಿನ. ಯುವಪ್ರೇಮಿಗಳು ಸಿಕ್ಕಿದ್ದೇ ಸೀರುಂಡೆ ಎಂದು ತಮ್ಮ ಸಂಗಾತಿಯನ್ನು ಇಂಪ್ರೆಸ್ ಮಾಡಲು ನಾನಾ ವಿಧದ ಕಿಸ್ ವೆರೈಟಿಗಳನ್ನೆಲ್ಲಾ ಕಲಿತುಕೊಂಡು ಬಂದು, ಅದನ್ನು ಸಂಗಾತಿಯ ಜೊತೆ ಪ್ರಾಕ್ಟೀಸ್ ಮಾಡುತ್ತಾರೆ. ಅದಿರಲಿ.
ಕಿಸ್ಸಿಂಗ್ ಬಗ್ಗೆ ನಿಮಗೆ ಎಷ್ಟು ಗೊತ್ತು? ನಿಮಗೆ ಗೊತ್ತಿರದ ವಿಷಯಗಳು ಚುಂಬನದ ಬಗ್ಗೆ ಸುಮಾರು ಇವೆ. ಇಲ್ಲಿ ಬನ್ನಿ ತಿಳಿಯೋಣ.
- ಒಂದು ನಿಮಿಷ ಕಾಲ ಸುದೀರ್ಘವಾಗಿ ನಿಮ್ಮ ಸಂಗಾತಿಯ ತುಟಿಗಳ ಮೇಲೆ ನಿಮ್ಮ ತುಟಿಯಿಟ್ಟು ಬಿಡದೇ ಚುಂಬಿಸಿದರೆ, ನಿಮ್ಮ ದೇಹದಲ್ಲಿ ಸುಮಾರು 27 ಕ್ಯಾಲೊರಿ ಖರ್ಚಾಗುತ್ತದೆ. ಇದನ್ನು ಪ್ರತಿದಿನ ಮಾಡಿದರೆ ನಿಮ್ಮ ಆಯುಷ್ಯಕ್ಕೆ ಇನ್ನೊಂದಷ್ಟು ವರ್ಷಗಳೇ ಹೆಚ್ಚಿಗೆ ಸೇರಬಹುದು.
#Feelfree: ಫೋರ್ ಪ್ಲೇ ಅಥವಾ ಮುನ್ನಲಿವು ಎಂದರೆ ಏನು? ...
- ಕಿಸ್ಸಿಂಗ್ ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ನಮ್ಮ ಹಲ್ಲುಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ. ಲಾಲಾರಸದ ಖನಿಜ ಅಯಾನುಗಳು ಹಲ್ಲಿನ ಕವಚದಲ್ಲಿನ ಸಣ್ಣ ಗಾಯಗಳ ದುರಸ್ತಿಗೆ ಉತ್ತೇಜನ ನೀಡುತ್ತವಂತೆ. ಆದರೆ ಚುಂಬಿಸಿಕೊಳ್ಳುವ ಮುನ್ನ ನಿಮ್ಮ ಬಾಯಿ ದುರ್ವಾಸನೆ ಹೊಂದಿಲ್ಲ ಎಂದು ಗ್ಯಾರಂಟಿ ಮಾಡಿಕೊಳ್ಳಬೇಕು.
- ಜಗತ್ತಿನ ಜನ ಸರಾಸರಿ ತಮ್ಮ ಜೀವನದಲ್ಲಿ 336 ಗಂಟೆ ಅಥವಾ 3 ವಾರಗಳನ್ನು ಕಿಸ್ ಮಾಡುತ್ತಾ ಕಳೆಯುತ್ತಾರಂತೆ.
- ಮಧ್ಯಯುಗದಲ್ಲಿ ಜನ ಎಕ್ಸ್ ಮಾರ್ಕ್ ಮಾಡಿ, ಅದನ್ನು ಚುಂಬಿಸಿ ತಮ್ಮ ಪ್ರಾಮಾಣಿಕತೆ, ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದರಂತೆ.
- 1966ರವರೆಗೂ ಎರಡು ವರ್ಣಗಳ ನಡುವಿನ ಚುಂಬನವನ್ನು ಟಿವಿ, ಸಿನಿಮಾದಲ್ಲಿ ತೋರಿಸುವಂತಿರಲಿಲ್ಲ. 1966ರಲ್ಲಿ ಸ್ಟಾರ್ ಟ್ರೆಕ್ ಧಾರಾವಾಹಿಯ ಎಪಿಸೋಡ್‌ನಲ್ಲಿ ಅಂತರ್ವರ್ಣೀಯ ಚುಂಬನದ ದೃಶ್ಯವನ್ನು ತೋರಿಸಲಾಯಿತು.
- ಲ್ಯಾಟಿನ್ ಅಮೆರಿಕದಲ್ಲಿ ನೀವು ಹೊಸದಾಗಿ ಭೇಟಿ ಆಗುತ್ತಿರುವವರನ್ನು ಕಿಸ್ ಮಾಡಿ ಸ್ವಾಗತಿಸಬಹುದು; ಫ್ರಾನ್ಸ್‌ನಲ್ಲಿ ಕಿಸ್ ಮಾಡುವುದು ಪ್ಯಾಶನ್‌ನ ಸೂಚನೆ; ಇಟಲಿಯಲ್ಲಿ ಹೆಲೋ ಹೇಳಲು ಚುಂಬಿಸುತ್ತಾರೆ. ಆಫ್ರಿಕದಲ್ಲಿ ತಮ್ಮ ನಾಯಕ ನಡೆದುಹೋಗುವಾಗ ನೆಲವನ್ನು ಚುಂಬಿಸುತ್ತಾರೆ.
#Feelfree: ಅರವತ್ತರ ಅಂಕಲ್, ಇಪ್ಪತ್ತೈದರ ಯುವಕ, ಯಾರು ಹಿತವರು ನನಗೆ? ...
- 2010ರಲ್ಲಿ ಬಂದ ಎಲೆನಾ ಅನ್‌ಡನ್ ಎಂಬ ಸಿನಿಮಾದಲ್ಲಿ ನಾಯಕ ಹಾಗೂ ನಾಯಕಿ ಸುದೀರ್ಘ 3 ನಿಮಿಷ 23 ಸಕೆಂಡ್ ತೆರೆಯ ಮೇಲೆ ಚುಂಬಿಸಿಕೊಂಡರು. ಇದೊಂದು ಆನ್‌ಸ್ಕ್ರೀನ್ ದಾಖಲೆ. ಅತಿದೀರ್ಘ ಸಮಯದ ಚುಂಬನದ ದಾಖಲೆ ಮಾಡಿರುವುದು ಥಾಯ್ಲೆಂಡ್‌ನ ಜೋಡಿ. ಎಕ್ಕಾಚಾಯ್ ಮತ್ತು ಲಕ್ಸಾನಾ ತಿರನರತ್ ಎಂಬ ಜೋಡಿ 58 ಗಂಟೆ, 35 ನಿಮಿಷ, 58 ಸೆಕೆಂಡ್ ಮುತ್ತಿಟ್ಟುಕೊಂಡರು.
- ಚುಂಬಿಸಿದಾಗ ಮುಖಕ್ಕೆ ರಕ್ತ ನುಗ್ಗಿ ಬರುತ್ತದೆ. ನಿಮ್ಮ ಮುಖಕ್ಕೆ ಹೆಚ್ಚಿನ ರಕ್ತದ ಹರಿವು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಈ ಕಾಲಜೆನ್ ಹಾರ್ಮೋನ್ ಇದೆಯಲ್ಲ, ಇದು ವಯಸ್ಸಾಗುವುದನ್ನು ತಡೆಯುವಂಥ ಹಾರ್ಮೋನ್. ಹೆಚ್ಚಿನ ರಕ್ತದ ಹರಿವು, ರಕ್ತನಾಳಗಳ ಹಿಗ್ಗುವಿಕೆಯ ವೇಳೆ ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆ ಹೆಚ್ಚಾಗುತ್ತದೆ.
- ನಾವು 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಚುಂಬಿಸಿದಾಗ, ಸುಮಾರು 80 ಮಿಲಿಯ ಬ್ಯಾಕ್ಟೀರಿಯಾಗಳು ನಮ್ಮ ಮತ್ತು ನಮ್ಮ ಸಂಗಾತಿಯ ನಡುವೆ ವರ್ಗಾವಣೆಯಾಗುತ್ತವೆ, ಇದು ಹೊಸ ಮತ್ತು ಕೆಲವೊಮ್ಮೆ ಒಳ್ಳೆಯ ಬ್ಯಾಕ್ಟೀರಿಯಾವನ್ನು ನಮ್ಮ ಬಾಯಿಗೆ ಪರಿಚಯಿಸುತ್ತದೆ.
- ಮೂಗಿನ ಅಥವಾ ಚರ್ಮದ ಅಲರ್ಜಿ, ತುರಿಕೆಯನ್ನು ಕಡಿಮೆ ಮಾಡುತ್ತದೆ. ಇದನ್ನು 2006ರಲ್ಲಿ ಅಲರ್ಜಿಸ್ಟ್ ಹಜೀಮ್ ಕಿಮಾಟಾ ಎಂಬವರು 24 ರೋಗಿಗಳನ್ನು ಅಧ್ಯಯನ ಮಾಡಿ ಕಂಡುಕೊಂಡರು. ಸಾಮಾನ್ಯವಾಗಿ ಅಲರ್ಜಿ ಇದ್ದಾಗ, ನಿರ್ದಿಷ್ಟ ಅಲರ್ಜಿಕಾರಕಕ್ಕೆ ಆ್ಯಂಟಿಬಾಡಿಯನ್ನು ದೇಹ ಉತ್ಪಾದಿಸುತ್ತೆ. ಚುಂಬನದ ನಂತರ, ಈ ಆ್ಯಂಟಿಬಾಡಿ ಕಡಿಮೆಯಾಗಿದ್ದು ಕಂಡುಬಂತು.
ನನ್ ಹುಡುಗಿ ಹಾಗಿರಬೇಕು, ಹೀಗಿರಬೇಕೆಂದು ಕನಸು ಕಾಣೋ ಹುಡಗರೇ ಇಲ್ ಕೇಳಿ! ...