ಹಾಸಿಗೆಯಲ್ಲಿ ಪತ್ನಿ ಈ ಡ್ರೆಸ್ ಧರಿಸಬೇಕೆಂದು ಬಯಸ್ತಾರೆ ಪುರುಷರು
ಸೆಕ್ಸ್ ಬಗ್ಗೆ ತಿಳಿಯೋದು ಸಾಕಷ್ಟಿದೆ. ಈಗ್ಲೂ ಮಡಿವಂತಿಕೆ ಕಾರಣಕ್ಕೆ ಜನರು ಅದ್ರ ಬಗ್ಗೆ ಮಾತನಾಡುವುದಿಲ್ಲ. ಆದ್ರೆ ಸಂಗಾತಿ ಪರಸ್ಪರ ಅದ್ರ ಬಗ್ಗೆ ಅರಿತಿರಬೇಕು. ಪತಿಯಾದವನು ಹಾಸಿಗೆಯಲ್ಲಿ ಏನು ಬಯಸ್ತಾನೆ ಎನ್ನುವುದು ಪತ್ನಿಗೆ ಗೊತ್ತಿರಬೇಕು.
ಲೈಂಗಿಕತೆಗೆ ಸಂಬಂಧಿಸಿದಂತೆ ಪುರುಷ (Male) ರ ಕಲ್ಪನೆ, ಆಸೆ, ಕನಸು (Dream)ಗಳು ಭಿನ್ನವಾಗಿರುತ್ತವೆ. ಪ್ರತಿಯೊಬ್ಬ ಮನುಷ್ಯನು ತನ್ನ ಸಂಗಾತಿ (Partner)ಯು ಹಾಸಿಗೆಯ ಮೇಲೆ ತುಂಬಾ ಮಾದಕ ಮತ್ತು ಸುಂದರವಾಗಿ ಕಾಣಬೇಕೆಂದು ಬಯಸ್ತಾನೆ. ಮಹಿಳೆಯರು ಕೂಡ ಪತಿಯನ್ನು ತನ್ನತ್ತ ಸೆಳೆಯಲು ಬಯಸ್ತಾರೆ. ತಮ್ಮ ಕಡೆ ಪುರುಷರನ್ನು ಆಕರ್ಷಿಸಲು ಮಾದಕ ಬಟ್ಟೆಗಳನ್ನು ಧರಿಸುತ್ತಾರೆ. ಈ ಬಟ್ಟೆ ಮಹಿಳೆಯನ್ನು ಮತ್ತಷ್ಟು ಸೆಕ್ಸಿಗೊಳಿಸುವುದಲ್ಲದೆ ಪುರುಷರನ್ನು ಸೆಳೆಯುತ್ತದೆ. ಅನೇಕರು ರಾತ್ರಿ ಧರಿಸುವ ಉಡುಪಿಗೆ ಹೆಚ್ಚು ಮಹತ್ವ ನೀಡುವುದಿಲ್ಲ. ಅದು ಸಂಗಾತಿಯನ್ನು ಸೆಳೆಯಬಲ್ಲದು ಎಂಬ ಸತ್ಯವೇ ಅವರಿಗೆ ತಿಳಿದಿರುವುದಿಲ್ಲ. ಮದುವೆಯಾಗಿ ವರ್ಷಗಳವರೆಗೆ ಇದಕ್ಕೆ ಮಹತ್ವ ನೀಡುವ ಮಹಿಳೆಯರು ನಂತ್ರ ಕೆಲಸದ ಒತ್ತಡಕ್ಕೆ ಎಲ್ಲವನ್ನೂ ಮರೆತಿರುತ್ತಾರೆ. ಮಹಿಳೆಯರ ಈ ನಿರ್ಲಕ್ಷ್ಯ ಪತಿಯನ್ನು ಬೇಸರಗೊಳಿಸುತ್ತದೆ. ಸೆಕ್ಸ್ ವಿಚಾರದಲ್ಲಿ ಸದಾ ಹೊಸತನ್ನು ಪುರುಷರು ಬಯಸ್ತಾರೆ. ಹಾಗಾಗಿಯೇ ಪತ್ನಿಯನ್ನು ಹೊಸ ಹೊಸ ರೂಪದಲ್ಲಿ ಬೆಡ್ ಮೇಲೆ ನೋಡಲು ಅವರು ಬಯಸ್ತಾರೆ. ಆದ್ರೆ ಪತ್ನಿಯಾದವಳು ಇದಕ್ಕೆ ಮಹತ್ವ ನೀಡದೆ ಹೋದಾಗ ಪತ್ನಿ ಮೇಲಿನ ಆಕರ್ಷಣೆ ಕಡಿಮೆಯಾಗುತ್ತದೆ. ಇದ್ರಿಂದ ದಾಂಪತ್ಯ ಬಿರುಕುಬಿಡಲು ಶುರುವಾಗುತ್ತದೆ. ಪತಿ ಸದಾ ನಿಮ್ಮನ್ನು ಬಯಸುತ್ತಿರಬೇಕು, ನಿಮ್ಮ ಸುತ್ತ ಸುತ್ತುತ್ತಿರಬೇಕೆಂದ್ರೆ ನೀವು ಅವರನ್ನು ಆಕರ್ಷಿಸಲೇಬೇಕು. ಅವರನ್ನು ನಿಮ್ಮತ್ತ ಸೆಳೆಯಲು ರಾತ್ರಿ ನೀವು ಧರಿಸುವ ಉಡುಪು ಕೂಡ ಮಹತ್ವ ಪಡೆಯುತ್ತದೆ ಎಂಬುದು ನೆನಪಿರಬೇಕು. ಪತಿ ಯಾವ ರೀತಿಯ ಬಟ್ಟೆ ಇಷ್ಟಪಡ್ತಾನೆ ಎಂಬುದನ್ನು ತಿಳಿದಿರಬೇಕು. ಇಂದು ನಾವು ಪುರುಷರು ರಾತ್ರಿ ತಮ್ಮ ಸಂಗಾತಿಯನ್ನು ಯಾವ ರೀತಿಯ ಡ್ರೆಸ್ ನಲ್ಲಿ ನೋಡಲು ಇಷ್ಟಪಡ್ತಾರೆ ಎಂಬುದನ್ನು ಹೇಳ್ತೇವೆ.
ಪತಿಯ ಡ್ರೆಸ್ : ಪತಿಯ ಟೀ ಶರ್ಟ್ ಅಥವಾ ಶರ್ಟ್ ಹಾಕಿದ್ರೆ ನಾವು ಅವರನ್ನು ನೋಡಿ ನಗ್ತೇವೆ. ಆದ್ರೆ ಪತಿಯ ಶರ್ಟ್ ಅಥವಾ ಟೀ ಶರ್ಟನ್ನು ರಾತ್ರಿ ಧರಿಸಬೇಕು. ಪತಿ ತನ್ನ ಬಟ್ಟೆಯಲ್ಲಿ ತನ್ನ ಸಂಗಾತಿಯನ್ನು ನೋಡಲು ಇಷ್ಟಪಡ್ತಾನೆ. ಆಕೆ ಆತನಿಗೆ ಮಾದಕವಾಗಿ ಕಾಣ್ತಾಳೆ. ಶರ್ಟ್ ನಿಂದ ಬರುವ ಸಂಗಾತಿಯ ದೇಹದ ವಾಸನೆ ಪುರುಷರನ್ನು ತುಂಬಾ ಪ್ರಚೋದಿಸುತ್ತದೆ.
ಈ ತಪ್ಪುಗಳನ್ನು ಮಾಡಿದ್ರೆ ನೀವು ಯಾವಾಗ್ಲೂ ಸಿಂಗಲ್ ಆಗೇ ಇರ್ತೀರಿ
ಟ್ಯಾಂಕ್ ಟಾಪ್ ಮತ್ತು ಬಾಯ್ ಶಾರ್ಟ್ಸ್ : ಪುರುಷರ ನೆಚ್ಚಿನ ಉಡುಗೆ ಟ್ಯಾಂಕ್ ಟಾಪ್ ಮತ್ತು ಬಾಯ್ ಶಾರ್ಟ್ಸ್ ಆಗಿದೆ. ಬಿಗಿಯಾದ ಬಟ್ಟೆಯಲ್ಲಿ ಹಾಸಿಗೆಗೆ ಬರುವ ಸಂಗಾತಿಗಿಂತ ಆರಾಮದಾಯಕವಾಗಿರಲು ಬಟ್ಟೆ ಧರಿಸುವ ಪತ್ನಿಯನ್ನು ಅವರು ಇಷ್ಟಪಡ್ತಾರೆ. ಪುರುಷರಿಗೆ ಸಡಿಲ ಡ್ರೆಸ್ ಧರಿಸಿರುವ ಸಂಗಾತಿ ಆಕರ್ಷಕವಾಗಿ ಕಂಡ್ರೆ ಮಹಿಳೆಯರಿಗೆ ಇಂಥ ಡ್ರೆಸ್ ಸುಖ ನಿದ್ರೆ ನೀಡುತ್ತದೆ.
ಉತ್ತಮ ಒಳ ಉಡುಪು : ಕೆಲ ಮಹಿಳೆಯರು ಒಳ್ಳೊಳ್ಳೆ ಬ್ರಾಂಡ್ ನ ಒಳ ಉಡುಪು ಧರಿಸಿದ್ರೆ ಮತ್ತೆ ಕೆಲವರು ಒಳಗಿರೋದಕ್ಕೇಕೆ ಖರ್ಚು ಮಾಡೋದು ಎನ್ನುತ್ತಾರೆ. ನೀವು ನಿಮ್ಮ ಪತಿಯನ್ನು ಸೆಳೆಯಬೇಕೆಂದ್ರೆ ಒಳ ಉಡುಪಿಗೂ ಮಹತ್ವ ನೀಡ್ಲೇಬೇಕು. ಕೆಂಪು, ಕಪ್ಪು, ಗುಲಾಬಿ ಬಣ್ಣ ಪುರುಷರನ್ನು ಉತ್ತೇಜಿಸುತ್ತದೆ. ನೀವು ಸುಂದರವಾದ ಮತ್ತು ಮಾದಕ ಒಳಉಡುಪುಗಳನ್ನು ಧರಿಸಿದಾಗ ಅವರು ಅದನ್ನು ಇಷ್ಟಪಡುತ್ತಾರೆ. ನಿಮ್ಮ ಸಂಗಾತಿ ಬಳಿ ಹೋಗುವಾಗ ರಾತ್ರಿ ನೀವು ಯಾವಾಗಲೂ ಸುಂದರವಾದ ಮತ್ತು ಮಾದಕ ಒಳಉಡುಪುಗಳನ್ನು ಧರಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಈ ಉಡುಗೆ ನಿಮಗೆ ಚೆನ್ನಾಗಿ ಹೊಂದುತ್ತದೆ ಮತ್ತು ನಿಮ್ಮ ಸಂಗಾತಿಯನ್ನು ಉತ್ತೇಜಿಸುತ್ತದೆ.
Manage Anxiety: ಆತಂಕವಿರುವ ಸಂಗಾತಿ ಜತೆ ರೊಮ್ಯಾಂಟಿಕ್ ಜೀವನ ನಡೆಸಲು ಸಾಧ್ಯ
ಸ್ವೆಟ್ ಶರ್ಟ್ : ಬ್ರಾ ಇಲ್ಲದೆ ಸ್ವೆಟ್‌ಶರ್ಟ್ ಧರಿಸುವುದನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ. ಹೆಚ್ಚಿನ ಪುರುಷರು ತಮ್ಮ ಸಂಗಾತಿ ಬ್ರಾ ಇಲ್ಲದೆ ಸ್ವೆಟ್‌ಶರ್ಟ್‌ಗಳನ್ನು ಧರಿಸಿ ತಮ್ಮ ಪಕ್ಕದಲ್ಲಿ ಮಲಗಲಿ ಎಂದು ಬಯಸ್ತಾರೆ. ಬ್ರಾ ಇಲ್ಲದ ಬಟ್ಟೆ ಧರಿಸುವ ಪತ್ನಿ, ಪತಿಯನ್ನು ಹೆಚ್ಚು ಆಕರ್ಷಿಸುತ್ತಾಳೆ.