Manage Anxiety: ಆತಂಕವಿರುವ ಸಂಗಾತಿ ಜತೆ ರೊಮ್ಯಾಂಟಿಕ್‌ ಜೀವನ ನಡೆಸಲು ಸಾಧ್ಯ

ಖಿನ್ನತೆ (Anxiety), ಆತಂಕದಂತಹ ಸಮಸ್ಯೆಗಳು ಸಂಬಂಧಗಳ (Relationship) ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ನಿಮ್ಮ ಸಂಗಾತಿಯೂ ಆತಂಕದ ಸಮಸ್ಯೆ ಎದುರಿಸುತ್ತಿದ್ದರೆ ಅವರನ್ನು ಪ್ರೀತಿಯಿಂದ, ಕರುಣೆಯಿಂದ, ತಾಳ್ಮೆಯಿಂದ ನಿಭಾಯಿಸಿ. ಆಗ ಮಾತ್ರ ನಿಮ್ಮ ಸಂಬಂಧ ರೊಮ್ಯಾಂಟಿಕ್‌ (Romantic) ಆಗಿರಲು, ಸುಖಮಯವಾಗಿರಲು ಸಾಧ್ಯ.
 

Support your romantic partner suffering from anxiety

ಸಂಬಂಧಗಳಲ್ಲಿ (Relation) ಏರಿಳಿತಗಳು ಸಹಜ. ಎಲ್ಲ ಸಮಯದಲ್ಲೂ ಒಂದೇ ರೀತಿ ವರ್ತಿಸಲು ಮನುಷ್ಯನಿಂದ ಸಾಧ್ಯವಿಲ್ಲ. ಹೀಗಾಗಿ, ಇನ್ನೊಬ್ಬರಿಗೆ ಬೇಸರವಾಗುವಂತೆಯೂ ಕೆಲವೊಮ್ಮೆ ವರ್ತಿಸಬಹುದು. ಸಾಮಾನ್ಯರಿಗೇ ಹೀಗಾದರೆ ಮಾನಸಿಕ (Mental) ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಇನ್ನಷ್ಟು ಸಮಸ್ಯೆಯಾಗುತ್ತದೆ. ಆತಂಕದಿಂದ ಬಳಲುತ್ತಿರುವವರು ಸಂಬಂಧಗಳನ್ನು ಹಾಳು ಮಾಡಿಕೊಳ್ಳುವುದು ಹೆಚ್ಚು. ಈ ಕುರಿತು ಅವರೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗೆಯೇ ಅವರೊಂದಿಗೆ ಸದಾಕಾಲ ಇರುವಂಥವರೂ ಅವರ ಸಮಸ್ಯೆಯನ್ನು ಅರಿತು ವರ್ತಿಸಬೇಕಾಗುತ್ತದೆ. ವೈವಾಹಿಕ ಜೀವನದಲ್ಲಿ ರೊಮ್ಯಾನ್ಸ್‌ (Romance) ಅಗತ್ಯ. ಇಲ್ಲವಾದಲ್ಲಿ ಇದೇ ಕಾರಣದಿಂದ ಸಂಗಾತಿಗಳ (Partner) ನಡುವೆ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ, ಆತಂಕದಿಂದ ಇರುವವರಿಗೆ ರೋಮ್ಯಾಂಟಿಕ್‌ ಬದುಕು ಕಷ್ಟವಾಗಬಹುದು. ನಿಮ್ಮ ಸಂಗಾತಿಗೂ ಆತಂಕದ ಸಮಸ್ಯೆ ಇದ್ದರೆ ಅವರೊಂದಿಗೆ ನೀವು ಬೇರೆಯದೇ ರೀತಿಯಲ್ಲಿ ವ್ಯವಹರಿಸಬೇಕಾಗುತ್ತದೆ.  

ಆತಂಕದ (Anxiety) ಸಮಸ್ಯೆಯಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಅನುಮಾನ (Doubt) ಹಾಗೂ ಗೊಂದಲದಲ್ಲಿ ನರಳುತ್ತಾರೆ. ಆಗ ಸುಲಭವಾಗಿ ನಿಮ್ಮಿಬ್ಬರ ನಡುವೆ ಮನಸ್ತಾಪ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗೆಂದು ಆತಂಕದ ಸಮಸ್ಯೆಯೊಂದೇ ಸಂಬಂಧವನ್ನು ಹಾಳು ಮಾಡುವುದಿಲ್ಲ ಎನ್ನುವುದು ನಿಜ. ಆದರೆ, ಅದರಿಂದ ಉಂಟಾಗುವ ಇತರೆ ಬೇರೆ ಬೇರೆ ಪರಿಣಾಮಗಳಿಂದ ಸಂಬಂಧ ಮುರಿದುಬೀಳಲು ಸಾಧ್ಯವಿದೆ. ಹಾಗಾಗದಂತೆ ನೀವು ಎಚ್ಚರಿಕೆ ವಹಿಸಬೇಕು. ಕೆಲವು ಮಾರ್ಗಗಳನ್ನು ಅನುಸರಿಸಿದರೆ ನಿಮ್ಮ ಪ್ರೀತಿಪಾತ್ರ ಸಂಗಾತಿಯ ಸಮಸ್ಯೆ ಕೊನೆಗಾಣಿಸಲು ಹಾಗೂ ಅವರೊಂದಿಗೆ ನೆಮ್ಮದಿಯ ಜೀವನ ನಡೆಸಲು, ರೊಮ್ಯಾಂಟಿಕ್‌ ಆಗಿಯೂ ಸಕ್ರಿಯವಾಗಿರಲು ಸಾಧ್ಯ.

Relationship Tips: ಏನು ಬೇಕಾದ್ರೂ ಆಗ್ಲಿ, ಗಂಡಂದಿರು ಈ ಗುಟ್ಟು ಮಾತ್ರ ಬಿಟ್ಟುಕೊಡಲ್ಲ

•    ಮುಕ್ತವಾಗಿ ಮಾತನಾಡಿ (Open Communication)
ಸಂಬಂಧದಲ್ಲಿ ಮುಕ್ತ ಮಾತುಕತೆ ಯಾವತ್ತಿಗೂ ಸಫಲವಾಗುವಂತದ್ದು. ಉತ್ತಮ ಸಂಬಂಧಕ್ಕೆ ಇದುವೇ ಮೂಲ. ಊಹೆ ಮಾಡುವುದು ಅರ್ಥಾತ್ ಹೀಗಿರಬಹುದು ಎಂದು ಅಂದುಕೊಳ್ಳುವುದು ಇದರ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಿಮ್ಮ ಸಂಗಾತಿ ಅವರ ಸಮಸ್ಯೆಯನ್ನು ನಿಮ್ಮಲ್ಲಿ ಹೇಳಿಕೊಳ್ಳಲು ಹಿಂಜರಿಯಬಹುದು. ಅಥವಾ ಹೇಳಿಕೊಳ್ಳಲು ಇಷ್ಟವಿಲ್ಲದೆಯೂ ಇರಬಹುದು. ಅಂತಹ ಸಮಯದಲ್ಲಿ ನೀವೇ ಮುಂದಾಗಿ ಅವರೊಂದಿಗೆ ಮಾತನಾಡಿ. ಅವರು ಹೇಳಿಕೊಳ್ಳದಿದ್ದರೂ ಅವರ ನೋವು ನಿಮ್ಮನ್ನು ತಟ್ಟದೆ ಇರದು. ನಿಮ್ಮ ಪ್ರೀತಿಪಾತ್ರರು ನೋವುಣ್ಣುವಾಗ ನೀವು ಅದನ್ನು ನಿರ್ಲಕ್ಷಿಸುವುದು ತರವಲ್ಲ. ಅವರಿಗೆ ಯಾವಾಗ ಹಿತವೆನಿಸುತ್ತದೆ, ಯಾವಾಗ ನೋವಾಗುತ್ತದೆ, ಸಮಸ್ಯೆ ಆಗುತ್ತದೆ ಎನ್ನುವುದರ ಕುರಿತು ಮುಕ್ತವಾಗಿ ಮಾತನಾಡಿ ತಿಳಿದುಕೊಳ್ಳಿ. ಆಗ ಅಂತಹ ಸನ್ನಿವೇಶಗಳನ್ನು ಅವಾಯ್ಡ್‌ ಮಾಡಲು ಸಾಧ್ಯವಾಗುತ್ತದೆ.

•    ನಿಮ್ಮ ಪ್ರತಿಕ್ರಿಯೆ (Reaction) ಬಗ್ಗೆ ಗಮನ ವಹಿಸಿ
ಆತಂಕದ ಸಮಸ್ಯೆಯಲ್ಲಿರುವ ಸಂಗಾತಿ ನೆಗೆಟಿವ್‌ ಆಗಿ ವರ್ತಿಸುವುದು ಸಹಜ. ಅದಕ್ಕೆ ತಕ್ಕಂತೆ ನೀವೂ ಪ್ರತಿಕ್ರಿಯಿಸಬೇಡಿ. ಅವರು ಇರಿಟೇಟ್‌ (Irritate) ಆಗುವಂತೆಯೂ ವರ್ತಿಸಬಹುದು. ನಿಮ್ಮನ್ನು ಕೆರಳಿಸಬಹುದು. ಆತಂಕವು ಎಷ್ಟೋ ಬಾರಿ ಸ್ವಾರ್ಥತನ, ತಿರಸ್ಕಾರ, ವಿಮುಖತೆಗಳಂತಹ ಹಲವಾರು ಭಾವನೆಗಳಲ್ಲೂ ವ್ಯಕ್ತವಾಗುತ್ತದೆ. ಇದನ್ನು ಅರಿತುಕೊಂಡು ವ್ಯವಹರಿಸಿ. ಅವರು ನೆಗೆಟಿವ್‌ ಆಗಿ ಮಾತನಾಡುತ್ತಿರುವಾಗ ನೀವು ಕ್ಷಣಕಾಲ ಯೋಚಿಸಿ, ನಾನೂ ಹೀಗೆಯೇ ವರ್ತಿಸುವುದರಲ್ಲಿ ಅರ್ಥವೇನಿದೆ ಎಂದು ಪ್ರಶ್ನಿಸಿಕೊಳ್ಳಿ. ಸಂಗಾತಿಯ ಅನುಮಾನಗಳಿಗೆ ನೆಗೆಟಿವ್‌ ಆಗಿ ಪ್ರತಿಕ್ರಿಯೆ ನೀಡುವುದನ್ನು ನೀವು ಗೆದ್ದರೆ ಅರ್ಧ ಸಮಸ್ಯೆಯೇ ಪರಿಹಾರವಾಗುತ್ತದೆ. ಅವರು ಕ್ರಮೇಣ ತಮ್ಮ ನೆಗೆಟಿವ್‌ ಧೋರಣೆಯನ್ನು ಕೈಬಿಡಲು ಆರಂಭಿಸುತ್ತಾರೆ. ಆಗ ಸಂಬಂಧವೂ ಚೆನ್ನಾಗಿರುತ್ತದೆ.

Relationship Tips : ಡಾನ್ಸ್ ಮಾಸ್ಟರ್ ಪ್ರೀತಿಗೆ ಬಿದ್ದು ಪತಿಗೆ ಕೈಕೊಟ್ಟ ಪತ್ನಿ..!

•    ಸುರಕ್ಷತೆಯ (Safety) ಭಾವನೆ ಮೂಡಿಸಿ
ಆತಂಕದ ಮನಸ್ಥಿತಿಯಲ್ಲಿ ಇರುವವರು ಅಸುರಕ್ಷತೆಯ ಭಾವನೆ ಅನುಭವಿಸುತ್ತಾರೆ. ತಾವು ಪ್ರೀತಿಗೆ ಯೋಗ್ಯರಲ್ಲ ಎನ್ನುವ ನೋವೂ ಇರುತ್ತದೆ. ಆದರೆ, ನೀವು ಅವರಲ್ಲಿ ಭರವಸೆ ತುಂಬಿ. “ನಾವು ಜತೆಗಿದ್ದೇವೆ. ಜತೆಗೇ ಇರುತ್ತೇವೆ. ನಾನು ನಿನ್ನ ಬಿಟ್ಟು ಎಲ್ಲೂ ಹೋಗುವುದಿಲ್ಲ, ನೀನೆಂದರೆ ನನಗೆ ಇಷ್ಟʼ ಎನ್ನುವ ಮಾತುಗಳನ್ನು ಹೇಳಿ. ವಿವಿಧ ರೀತಿಯ ಧನಾತ್ಮಕ (Positive) ಸಂದೇಶಗಳ ಮೂಲಕವೂ ಭರವಸೆ ತುಂಬಬಹುದು. 

Latest Videos
Follow Us:
Download App:
  • android
  • ios