Asianet Suvarna News Asianet Suvarna News

ಅನುಚಿತವಾಗಿ ವರ್ತಿಸುತ್ತಾಳಂತೆ ಅತ್ತೆ, ತಡೆಯುವುದಕ್ಕೇನು ಮದ್ದು?

ಅತ್ತೆ ಹಾಗೂ ಅಳಿಯನ ಸಂಬಂಧ ಮುಖ್ಯವಾದ ಸಂಬಂಧಗಳಲ್ಲಿ ಒಂದು. ಎಲ್ಲ ವಿಷ್ಯಕ್ಕೂ ಅತ್ತೆ ತಲೆ ಹಾಕಿದ್ರೆ ಕೆಂಡದಂತ ಕೋಪ ಬರೋದು ಸಹಜ. ಹಾಗಂತ ಬಾಯಿ ಬಿಟ್ಟರೆ ಪತ್ನಿ ದೂರವಾಗೋದು ಸತ್ಯ. 
 

Men Hate Mother In Law
Author
First Published Nov 21, 2022, 4:11 PM IST

ಮದುವೆಯಾದ್ಮೇಲೆ ಅನೇಕ ಸಂಬಂಧಗಳನ್ನು ಒಂದೇ ಬಾರಿ ನಿಭಾಯಿಸಬೇಕಾಗುತ್ತದೆ. ಆಗ ಕೆಲ ಸಮಸ್ಯೆಗಳು ಎದುರಾಗುತ್ತವೆ. ಪತ್ನಿ, ಅಮ್ಮ, ಅಪ್ಪ, ಅತ್ತೆ, ಮಾವ ಹೀಗೆ ಪ್ರತಿಯೊಬ್ಬರ ಆಲೋಚನೆ, ಮನಸ್ಸು ಭಿನ್ನವಾಗಿರುತ್ತದೆ. ಅವರೆಲ್ಲರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ತಾಳ್ಮೆಯಿಂದ ಎಲ್ಲವನ್ನೂ, ಎಲ್ಲರನ್ನೂ ಸಂಭಾಳಿಸಬೇಕಾಗುತ್ತದೆ. ಸ್ವಲ್ಪ ತಾಳ್ಮೆ ಕಳೆದುಕೊಂಡ್ರೂ ಮದುವೆ ಎಂಬ ಸೂಕ್ಷ್ಮ ಸಂಬಂಧ ಮುರಿದು ಬೀಳುತ್ತದೆ. ಈ ವ್ಯಕ್ತಿ ಕೂಡ ಈಗ ಉಭಯ ಸಂಕಟದಲ್ಲಿದ್ದಾನೆ. ಆ ಕಡೆ ಪತ್ನಿ ಈ ಕಡೆ ಅತ್ತೆ. ಇವರಿಬ್ಬರ ಮಧ್ಯೆ ಈತ ಸಿಕ್ಕಿ ಬಿದ್ದಿದ್ದಾನೆ. 

ಆತ ವಿವಾಹಿತ (Married) ವ್ಯಕ್ತಿ. ಮದುವೆಯಾಗಿ ತುಂಬಾ ವರ್ಷಗಳಾಗಿಲ್ಲ. ದಾಂಪತ್ಯದಲ್ಲಿ ಯಾವುದೇ ತೊಂದರೆಯಿಲ್ಲ. ಪ್ರೀತಿ (Love) ಸುವ ಮಡದಿ ಸಂಸಾರ ಸುಖವನ್ನು ಹೆಚ್ಚಿಸಿದ್ದಾಳೆ. ಇಷ್ಟು ದಿನ ಅತ್ತೆ ಕೂಡ ದೂರ ಇರ್ತಿದ್ದಳಂತೆ. ಆಕೆ ಕೆಲ ತಿಂಗಳ ಹಿಂದೆ ಇವನ ಮನೆ ಹತ್ತಿರವೇ ಅತ್ತೆ ವಾಸ ಶುರು ಮಾಡಿದ್ದಾಳಂತೆ. ಅತ್ತೆ ಮನೆ ಹತ್ತಿರವಾಗ್ತಿದ್ದಂತೆ ಪತ್ನಿ ಮುಖದಲ್ಲಿ ನಗು (Smile) ಮೂಡಿತ್ತಂತೆ. ಆಕೆಗೆ ಒಂದು ಸಪೋರ್ಟ್ ಸಿಸ್ಟಂ ಸಿಕ್ತು ಅಂತಾ ಈತ ಕೂಡ ಖುಷಿಯಾಗಿದ್ದನಂತೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಬರ್ತಾ ಬರ್ತಾ ಯಾಕೋ ಹಿಂಸೆಯಾಗ್ತಿದೆ ಎನ್ನುತ್ತಾನೆ ಈತ.

ಅತ್ತೆ ತನ್ನ ಮಿತಿ ಮೀರಿ ಅಸಭ್ಯವಾಗಿ ವರ್ತಿಸುತ್ತಿದ್ದಾಳಂತೆ. ಅನೇಕ ಬಾರಿ ಇದನ್ನು ನಿರ್ಲಕ್ಷ್ಯಿಸಿದ್ದೇನೆ ಎನ್ನುತ್ತಾನೆ ಆತ. ಅವಳು ಅಳಿಯನ (Son-in-Law) ಕೆಲಸದ ಮೇಲೆ ಕಣ್ಣಿಡುವುದು ಮಾತ್ರವಲ್ಲದೆ ಜೀವನದ (Life) ಮೇಲೆ ನನಗಿರುವ ನಂಬಿಕೆ ಬಗ್ಗೆ ಅಸಹ್ಯವಾಗಿ ಮಾತನಾಡ್ತಾಳಂತೆ. ಆರಂಭದಲ್ಲಿ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅತ್ತೆ ವರ್ತನೆ (Behaviour) ಮಿತಿ ಮೀರಿದ ಕಾರಣ ನನಗೆ ಹಿಂಸೆಯಾಗ್ತಿದೆ ಎನ್ನುತ್ತಾನೆ ಆತ. ಅತ್ತೆ ಮಾತಿಗೆ ವಿಪರೀತ ಕೋಪ ಬರುತ್ತದೆ. ಆದ್ರೆ ಪತ್ನಿಗೆ ಇದ್ರಿಂದ ದುಃಖವಾಗುತ್ತದೆ ಎಂಬ ಕಾರಣಕ್ಕೆ ಕೋಪವನ್ನು ನಿಯಂತ್ರಿಸಿಕೊಳ್ತೇನೆ. ನನ್ನ ಕೋಪ ಪತ್ನಿಗೆ ಇಷ್ಟವಾಗುವುದಿಲ್ಲ. ಹಾಗಂತ ಅತ್ತೆ ಮಾತನ್ನು ಸಹಿಸಿಕೊಳ್ಳಲು ಆಗ್ತಿಲ್ಲ. ಇಬ್ಬರ ಮಧ್ಯೆ ನಾನು ಚಟ್ನಿಯಾಗಿದ್ದೇನೆ ಎನ್ನುತ್ತಾನೆ ಆತ. 

ತಜ್ಞರ ಸಲಹೆ : ವಿವಾಹ ಸಂಬಂಧ (Married Relationship) ಸೂಕ್ಷ್ಮವಾದದ್ದು. ಒಂದು ಎಳೆ ಹರಿದ್ರೂ ಇಡೀ ಹೊಲಿಗೆ ಬಿಡುತ್ತದೆ. ಹಾಗಾಗಿ ಎಲ್ಲವನ್ನೂ ಆದಷ್ಟು ಎಚ್ಚರಿಕೆಯಿಂದ ನಿಭಾಯಿಸಿ ಎನ್ನುತ್ತಾರೆ ತಜ್ಞರು. ಅಳಿಯನಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಆಕೆ ನಿಮ್ಮ ಕೆಲಸದ ಮೇಲೆ ಕಣ್ಣಿಡುತ್ತಾಳೆ, ನಿಮ್ಮ ಆಲೋಚನೆಗಳನ್ನು ತಮಾಷೆ ಮಾಡ್ತಾಳೆ ಎಂದಾಗ ನಿಮಗೆ ಕೋಪ ಬರುವುದು ಸಹಜ. ಆದ್ರೆ ಆತುರಪಡಬೇಡಿ. ನಿಮ್ಮ ಅತ್ತೆ ಜೊತೆ ಖಾಸಗಿಯಾಗಿ ಮಾತನಾಡಿ ಎನ್ನುತ್ತಾರೆ ತಜ್ಞರು.ಅವರ ಮಾತಿನಿಂದ ನಿಮಗೆಷ್ಟು ನೋವಾಗ್ತಿದೆ ಎಂಬುದನ್ನು ಅವರಿಗೆ ತಿಳಿಸುವ ಪ್ರಯತ್ನ ನಡೆಸಿ. ಅತ್ತೆ ಮತ್ತು ಅಳಿಯನ ಮಧ್ಯೆ ಯಾವ ಗಡಿಯಿದೆ, ಇಬ್ಬರ ಸಂಬಂಧ ಯಾವುದರ ಮೇಲೆ ನಿಂತಿದೆ ಎಂಬುದನ್ನು ಅವರಿಗೆ ತಿಳಿಸಿ ಹೇಳಿ ಎನ್ನುತ್ತಾರೆ ತಜ್ಞರು. ಹಾಗೆಯೇ ಹೆಂಡತಿಯ ಬಳಿಯೂ ಈ ಸಮಸ್ಯೆಯನ್ನು ತಿಳಿಸಿ ಎನ್ನುತ್ತಾರೆ ತಜ್ಞರು.

ನಿಮ್ಮ ಅತ್ತೆ ನಿಮ್ಮೊಂದಿಗೆ ಯಾವ ರೀತಿ ಮಾತನಾಡುತ್ತಾರೆ ಎಂಬುದನ್ನು ಉದಾಹರಣೆ ಸಹಿತ ಅವರಿಗೆ ತಿಳಿಸಿ. ಹಾಗೆಯೇ ಅದು ನನಗೆ ಇಷ್ಟವಾಗುತ್ತಿಲ್ಲ, ಹಿಂಸೆಯಾಗ್ತಿದೆ ಎಂದು ನಿಮ್ಮ ಪತ್ನಿಗೆ ಹೇಳಿ. ನಿಮ್ಮ ಸಮಸ್ಯೆ ಅರಿತು ಪತ್ನಿಯೇ ಅವರ ಅಮ್ಮನ ಜೊತೆ ಮಾತನಾಡಬಹುದು. ಅಥವಾ ಬೇರೆ ಯಾವುದಾದ್ರೂ ದಾರಿ ಹುಡುಕಬಹುದು ಎಂಬುದು ತಜ್ಞರ ಸಲಹೆ. ನಿಮ್ಮ ಮತ್ತು ಅತ್ತೆ ಸಂಬಂಧದಲ್ಲಿ ಬಿರುಕು ಮೂಡಿದ್ರೆ ಅದು ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಈ ಎಲ್ಲ ಸಂದರ್ಭದಲ್ಲಿ ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು ಎನ್ನುತ್ತಾರೆ ತಜ್ಞರು.
 

Follow Us:
Download App:
  • android
  • ios