Asianet Suvarna News Asianet Suvarna News

ಕಸಿನ್ ಮದ್ವೆಯಾದ್ರೆ ಮಕ್ಕಳು ಅಂಗವೈಕಲ್ಯ ಆಗೋದಷ್ಟೇ ಅಲ್ಲ, ಗರ್ಭಪಾತವೂ ಹೆಚ್ಚು!

ರಕ್ತ ಸಂಬಂಧಿಗಳ ಜೊತೆ ಮದುವೆ ಭಾರತದಲ್ಲಿ ಸಾಮಾನ್ಯ. ಸಹೋದರ – ಸಹೋದರಿ ಮಕ್ಕಳ ಜೊತೆ ಮದುವೆಯಾಗುವ ಜನರು ಆಸ್ತಿ ಜೊತೆ ಸುರಕ್ಷತೆ ಅನುಭವಿಸುತ್ತಾರೆ. ಆದ್ರೆ ಇದು ಅವರ ಮಕ್ಕಳ ಮೇಲೆ ಪ್ರಭಾವ ಬೀರುತ್ತೆ. 
 

marrying with cousins might cause missacarriage blood relationship marriages better to be avoided roo
Author
First Published Mar 23, 2024, 4:05 PM IST

ಭಾರತ ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಸಹೋದರ ಸಂಬಂಧಿ ಮದುವೆಯಾಗುವ ಪದ್ಧತಿ ಇದೆ. ರಕ್ತ ಸಂಬಂಧ ಹೊಂದಿರುವ ಇಬ್ಬರು ವ್ಯಕ್ತಿಗಳು ಇದರಲ್ಲಿ ಎರಡನೇ ಸೋದರಸಂಬಂಧಿಗಳು ಅಥವಾ ರಕ್ತ ಸಂಬಂಧಿಗಳು ಮದುವೆಯಾಗುವುದು ಸಾಮಾನ್ಯ. ಅಂತಹ ವಿವಾಹಗಳಿಂದ ಜನಿಸಿದ ಶಿಶುಗಳು ರಕ್ತಸಂಬಂಧವಲ್ಲದ ವಿವಾಹಗಳಿಂದ ಜನಿಸಿದ ಮಕ್ಕಳಿಗಿಂತ ಜನ್ಮ ದೋಷಗಳ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಇದಕ್ಕೆ ವೈದ್ಯರ ಜೀವನದಲ್ಲಿ ನಡೆದ ಘಟನೆಯೊಂದು ಸಾಕ್ಷ್ಯವಾಗಿದೆ. ಡಾಕ್ಟರ್ ಪಳನಿಯಪ್ಪನ್ ಮಾಣಿಕ್ಕಂ ಅವರ ಪತ್ನಿಗೆ ಐದು ಬಾರಿ ಗರ್ಭಪಾತವಾದ ನೋವಿನ ವಿಷಯವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ರಕ್ತ ಸಂಬಂಧಿ ಮದುವೆಯಾಗಿರುವುದೇ ಕಾರಣ ಎಂದೂ ಅವರು ಹೇಳಿದ್ದಾರೆ. ಅಜ್ಞಾನಿಯಾಗಿರುವುದು ಬಹಳ ಕಷ್ಟ ತರಬಹುದು ಎಂದೂ ಅವರು ಹೇಳಿದ್ದಾರೆ.  

ಡಾ. ಪಳನಿಯಪ್ಪನ್ ಮಾಣಿಕ್ಕಂ ಕಥೆ ಏನು? : ಡಾಕ್ಟರ್ ಪಳನಿಯಪ್ಪನ್ 2012ರಲ್ಲಿ ಪ್ರಿಯಾರನ್ನು ಮದುವೆ (Marriage) ಯಾದ್ರು. ಪ್ರಿಯಾ, ಪಳನಿಯಪ್ಪನ್ ಅವರ ಸಹೋದರ ಸಂಬಂಧಿ ಅಲ್ಲ. ಇಬ್ಬರ ಮಧ್ಯೆ ಯಾವುದೇ ರಕ್ತ (Blood) ಸಂಬಂಧವಿಲ್ಲ. ಆದ್ರೆ ಸಮಸ್ಯೆ ಇದ್ದದ್ದು ವೈದ್ಯ ಪಳನಿಯಪ್ಪನ್ ಅವರಿಗೆ. ಪಳನಿಯಪ್ಪನ್ ಅವರು ಬ್ರಾಡಿಡಾಕ್ಟಿಲಿ ಸಮಸ್ಯೆಯಿಂದ ಬಳಲುತ್ತಿದ್ದರು. ಬ್ರಾಡಿಡಾಕ್ಟಿಲಿ ಅಂದ್ರೆ ಚಿಕ್ಕ ಬೆರಳುಗಳು. ಪಳನಿಯಪ್ಪನ್ ತಂದೆ ಬೆರಳು, ಚಿಕ್ಕಮ್ಮಂದಿರ ಬೆರಳು ಕೂಡ ಹೀಗೆ ಇತ್ತು. ಇದನ್ನು ಕುಟುಂಬಸ್ಥರು ಅದೃಷ್ಟ ಎಂದುಕೊಂಡಿದ್ದರು. ಆದ್ರೆ ಇದು ಜೆನೆಟಿಕ್ಸ್ ಸಮಸ್ಯೆಯಾಗಿತ್ತು. ಪಳನಿಯಪ್ಪನ್ ತಂದೆ ಸಹೋದರಿ ಮಗಳನ್ನು ಮದುವೆಯಾಗಿದ್ದರು. ಪಳನಿಯಪ್ಪನ್ ಪತ್ನಿ ಪ್ರಿಯಾಗೆ ಯಾವುದೇ ಸಮಸ್ಯೆ ಇರಲಿಲ್ಲ. ಮದುವೆಯ ನಂತರ, 2012 ಮತ್ತು 2016 ರ ನಡುವೆ ಆರು ಬಾರಿ ಗರ್ಭಪಾತಕ್ಕೊಳಗಾದ್ರು. ಏಳನೇ ಗರ್ಭಧಾರಣೆ 2016 ರಲ್ಲಿ ಆಯ್ತು, ಮೂರು ತಿಂಗಳವರೆಗೆ ಪ್ರಿಯಾ ಗರ್ಭದಲ್ಲಿ ಭ್ರೂಣವಿದ್ದ ಕಾರಣ ಎಲ್ಲರೂ ಸಂತೋಷಗೊಂಡಿದ್ದರು. ಆದ್ರೆ ಆರನೇ ತಿಂಗಳಲ್ಲಿ ಆಘಾತಕಾದಿತ್ತು. ಅಸ್ಥಿಪಂಜರದ ಅಸಹಜತೆ ಮತ್ತು ಹೃದಯದ ಸಮಸ್ಯೆಯಿಂದ ಅವರು ಮಗುವನ್ನು ಕಳೆದುಕೊಳ್ಳಬೇಕಾಯ್ತು.

ರೋಗಕ್ಕೆಲ್ಲಿ ಬಡ-ಸಿರಿವಂತ ವ್ಯತ್ಯಾಸ? ಬ್ರಿಟನ್ ರಾಣಿಗೂ ಒಕ್ಕರಿಸಿದೆ ಕ್ಯಾನ್ಸರ್

ಆರು ತಿಂಗಳ ನಂತ್ರ ನಾರ್ಮಲ್ ಹೆರಿಗೆ ಮೂಲಕ ಮಗು ಪಡೆದ್ರು. ಆದ್ರೆ ಮಗು ಬದುಕುಳಿಯಲಿಲ್ಲ. ಆ ನಂತ್ರ ಪಳನಿಯಪ್ಪನ್, ಅಸ್ಥಿಪಂಜರದ ಡಿಸ್ಪ್ಲಾಸಿಯಾ ಬಗ್ಗೆ ಹೆಚ್ಚು ಅಧ್ಯಯನ ನಡೆಸಿದ್ರು. ಲಾಸ್ ಏಂಜಲೀಸ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ ಅವರಿಂದ ಹೆಚ್ಚಿನ ಮಾಹಿತಿ ಪಡೆದ್ರು. ಪಳನಿಯಪ್ಪನ್ ಹಾಗೂ ಪ್ರಿಯಾ ಅವರ ದೋಷಪೂರಿತ ಜೀನ್ಸ್ ಅವರ ಮಗುವಿಗೆ ಸಮಸ್ಯೆಯಾಗ್ತಿದೆ ಎಂಬ ಸಂಗತಿ ಗೊತ್ತಾಯ್ತು. ಆದ್ರೀಗ ಪಳನಿಯಪ್ಪನ್ ಆರೋಗ್ಯಕರ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ.

ಜನರು ಇದನ್ನು ತಿಳಿಯಬೇಕು : ಭಾರತದಲ್ಲಿ ಶೇಕಡಾ 11ರಷ್ಟು ಮದುವೆ ರಕ್ತಸಂಬಂಧದಲ್ಲಿ ನಡೆಯುತ್ತದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹೇಳಿದೆ. ಭಾರತದಲ್ಲಿನ ಪಾರ್ಸಿಗಳು ಮತ್ತು ಗೊಂಡರಂತಹ ಅನೇಕ ಸಮುದಾಯಗಳಲ್ಲಿ ಇಂತಹ ವಿವಾಹಗಳು ಅತ್ಯಂತ ಸಾಮಾನ್ಯವಾಗಿದೆ. ಭಾರತೀಯ ಮುಸ್ಲಿಮರಲ್ಲಿ  ಇದು ಶೇಕಡಾ 33ರಷ್ಟಿದ್ದರೆ  ಬೌದ್ಧರಲ್ಲಿ ಶೇಕಡಾ 22 ಇದೆ. ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಒಂದೇ ರೀತಿಯ ಅಂತರ್‌ಪತ್ನಿತ್ವವನ್ನು ಶೇಕಡಾ 11ರಷ್ಟು ಹೊಂದಿದ್ದಾರೆ. ಶಿಶುಗಳ ಆರೋಗ್ಯದ ಬಗ್ಗೆ ಜನರು ತಿಳಿಯುವ ಅಗತ್ಯವಿದೆ. ಥಲಸ್ಸೆಮಿಯಾ, ಸಮೀಪದೃಷ್ಟಿ ಅಥವಾ ನರವೈಜ್ಞಾನಿಕ ಅಸ್ವಸ್ಥತೆಗಳಂತಹ ಮಾರಣಾಂತಿಕ ಕಾಯಿಲೆಗಳೊಂದಿಗೆ ಮಕ್ಕಳು ಜನಿಸುತ್ತಾರೆ. ರಕ್ತಸಂಬಂಧಿ ವಿವಾಹಗಳಲ್ಲಿ ಶಿಶು ಮರಣ ಪ್ರಮಾಣ ಶೇಕಡಾ 80 ರಷ್ಟು ಹೆಚ್ಚು ಎನ್ನುತ್ತಾರೆ  ಪಳನಿಯಪ್ಪನ್. 

ಆರೋಗ್ಯ ಯಾರಿಗ್ ಬೇಡ ಹೇಳಿ, ಬೆಳಗ್ಗೆ ಇಷ್ಟು ಮಾಡಿ ಸಾಕು ಫಿಟ್ ಆಗಿರ್ತಿರಿ

ಈಗಿನ ದಿನಗಳಲ್ಲಿ ಜಾತಿ ಅಥವಾ ಧರ್ಮವನ್ನು ಜನರು ನೋಡುವುದಿಲ್ಲ ಎಂದ್ರೂ ಅನೇಕ ಜನರು ಇನ್ನೂ ಈ ಹಳೆಯ ಅಭ್ಯಾಸಗಳನ್ನು ನಂಬುತ್ತಾರೆ. ಆರೋಗ್ಯಕರ ಪೀಳಿಗೆಯನ್ನು ಉತ್ತೇಜಿಸಲು ಇಂದು ನಾವು ನಿಜವಾಗಿಯೂ ಇದರಿಂದ ಹೊರಗೆ ಬರಬೇಕು ಎಂದು ಪಳನಿಯಪ್ಪನ್ ಹೇಳುತ್ತಾರೆ. 

Follow Us:
Download App:
  • android
  • ios