Asianet Suvarna News Asianet Suvarna News

ಮದ್ವೆಯಾಗೋಕೆ ಇಷ್ಟವಿಲ್ಲ, ಅಪ್ಪ-ಅಮ್ಮನ ಕಾಟ ತಡೆಯೋಕಾಗ್ತಿಲ್ಲಾ, ನಿಮ್ದೂ ಇದೇ ಸಮಸ್ಯೆನಾ ?

ಭಾರತದಲ್ಲಿ ಮದ್ವೆ ವಿಚಾರಕ್ಕೆ ಮನೆ ಮಂದಿ, ಸಂಬಂಧಿಕರು ಕಾಟ ಕೊಡೋದು ತಪ್ಪಲ್ಲ. 'ನೀನು ಮದುವೆಯ ವಯಸ್ಸಿನವಳು, 'ನೋಡು, ಅವಳಿಗೆ ಮದುವೆಯಾಗಿದೆ, ಆದರೆ ನೀನು? ಇನ್ನೂ ಮದ್ವೆ ಆಗಿಲ್ಲ. ನೀನು ಯಾವಾಗ ಮದುವೆಯಾಗುತ್ತೀಯಾ?" ಇದನ್ನೆಲ್ಲಾ ಕೇಳಿ ಕೇಳಿ ಈ ಅವಿವಾಹಿತರು ತುಂಬಾನೆ ಒತ್ತಡ ಅನುಭವಿಸುತ್ತಾರೆ. ನಿಮ್ದೂ ಇದೇ ಸಮಸ್ಯೆನಾ ?

Marrying Only To Satisfy Parents, Chinese Bride Breaks Down At Her Wedding Vin
Author
First Published Jan 13, 2023, 11:00 AM IST

ಭಾರತೀಯ ಸಂಸ್ಕೃತಿಯಲ್ಲಿ ಮದುವೆಯೆಂಬ ಸಂಬಂಧಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಬೀಜವೊಂದು ಮೊಳಕೆಯೊಡೆದು ಗಿಡವಾಗಿ, ಮರವಾಗಿ ಹೂ ಬಿಡುವಂತೆ ಮನುಷ್ಯನೂ ಮದುವೆಯಾಗಿ ಮಕ್ಕಳಾದರೆ ಜೀವನ ಸಾರ್ಥಕ ಎಂದು ಹೇಳುತ್ತಾರೆ. ಹೀಗಾಗಿಯೇ ಭಾರತದಲ್ಲಿ ಕಾಲೇಜು ಮುಗಿದ ತಕ್ಷಣ ಹುಡುಗಯರು, ಹುಡುಗರು ಮದುವೆಯಾಗೋ ಎಂಬ ಒತ್ತಡವನ್ನು ಅನುಭವಿಸುತ್ತಾನೆ ಇರುತ್ತಾರೆ. ನೀನು ಮದುವೆಯ ವಯಸ್ಸಿನವಳು, 'ನೋಡು, ಅವಳಿಗೆ ಮದುವೆಯಾಗಿದೆ, ಆದರೆ ನೀನು? ಇನ್ನೂ ಮದ್ವೆ ಆಗಿಲ್ಲ. ನೀನು ಯಾವಾಗ ಮದುವೆಯಾಗುತ್ತೀಯಾ?" ಇದನ್ನೆಲ್ಲಾ ಕೇಳಿ ಕೇಳಿ ಈ ಅವಿವಾಹಿತರು ತುಂಬಾನೆ ಕಿರಿಕಿರಿಗೆ ಒಳಗಾಗುತ್ತಾರೆ. ಹೋದಲ್ಲಿ ಬಂದಲ್ಲಿ ಜನರು ಮದುವೆ ಯಾವಾಗ ಎಂದು ಕೇಳುವುದು ತಪ್ಪಲ್ಲ. ಹೀಗಾಗಿಯೇ ಜನರ ಮಾತಿನಿಂದ ತಪ್ಪಿಸಿಕೊಳ್ಳಲೆಂದೇ ಕೆಲವೊಬ್ಬರು ಬೇಗನೇ ಮದುವೆಯಾಗಿ ಬಿಡುತ್ತಾರೆ. 

ಮದುವೆ (Marriage)ಯೆಂಬುದು ಒಂದು ಸುಂದರವಾದ ಸಂಬಂಧವಾದರೂ ದಾಂಪತ್ಯ ಜೀವನಕ್ಕೆ ಕಾಲಿಡಲು ಅವಸರ ಪಡಬಾರದು. ಕೆಲವೊಬ್ಬರು ಚಿಕ್ಕವಯಸ್ಸಿನಲ್ಲೇ ಮದುವೆಯಾದರೆ ಇನ್ನು ಕೆಲವರು ಮೂವತ್ತು ಕಳೆದು ಲೈಫ್‌ನಲ್ಲಿ ಸೆಟಲ್ ಆದ ಬಳಿಕ ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಯಾವುದು ಸಹ ತಪ್ಪಲ್ಲ. ಮದುವೆಯೆಂಬ ಆಯ್ಕೆ ಅವರಿವರ ಇಷ್ಟಕಷ್ಟಕ್ಕೆ ಬಿಟ್ಟಿದ್ದು. ಯಾವಾಗ ಮದುವೆಯಾಗಬೇಕು ಅನಿಸುತ್ತದೆಯೋ ಅದುವೇ ಮದ್ವೆಯಾಗಲು ಸೂಕ್ತವಾದ ಸಮಯ. ಬದಲಿಗೆ ಯಾರ್ಯಾರದೋ ಒತ್ತಾಯಕ್ಕೆ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡಬಾರದು. ಆದರೆ ವಿಪರ್ಯಾಸವೆಂದರೆ ಭಾರತದಲ್ಲಿ ಹೆಚ್ಚಿನ ಮದುವೆಗಳು ಅವರಿವರ ಒತ್ತಾಯಕ್ಕೇ ನಡೆಯುತ್ತವೆ. 

ಏನು ಮಾಯೆಯೋ.. 19ರ ತರುಣಿ ಮದ್ವೆ ಆಗಿ ರೋಮ್ಯಾನ್ಸ್‌ಗೆ ವಯಸ್ಸು ಮುಖ್ಯವಲ್ಲ ಎಂದ 70ರ ತಾತ

ಪೋಷಕರ ಒತ್ತಾಯಕ್ಕೆ ಮದುವೆಯಾಗ್ತಿದ್ದೇನೆ ಎಂದು ಕಣ್ಣೀರು ಹಾಕಿದ ವಧು
ಹೀಗೆ ಚೀನಾದಲ್ಲೊಬ್ಬ ವಧು ತಾನು ಪೋಷಕರ (Parents) ಒತ್ತಾಯದಿಂದ ಮದುವೆಯಾಗಿರುವುದಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾಳೆ. 20 ವರ್ಷದ ಈ  ವಧುವಿನ (Bride) ವಿಡಿಯೋ ವೈರಲ್ ಆಗಿದೆ. ಮದುವೆಯ ದಿನದಂದೇ ಯುವತಿ, 'ನಾನು ವರನನ್ನು ಇಷ್ಟಪಡುತ್ತಿಲ್ಲ. ಕೇವಲ ಪೋಷಕರ ಒತ್ತಾಯಕ್ಕೆ ಮದುವೆಯಾಗುತ್ತಿದ್ದೇನೆ' ಎಂದು ಹೇಳಿ ಮದುವೆಯನ್ನು ರದ್ದುಗೊಳಿಸಿದ್ದಾಳೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ವಧು ನೈಋತ್ಯ ಚೀನಾದ ಗ್ಯುಝೌ ಪ್ರಾಂತ್ಯದ ಯಾನ್ ಎಂಬಾಕೆಯಾಗಿದ್ದು, ಮದುವೆ ಮಂಟಪದಲ್ಲಿ ಪೋಷಕರ ನಿರೀಕ್ಷೆಗಳು ಮತ್ತು ಸಾಂಸ್ಕೃತಿಕ ರೂಢಿಗಳಿಂದಾಗಿ ತಾನು ಮದುವೆಯಾಗುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ.

'ನನ್ನ ಹೆತ್ತವರಿಗೆ ವಯಸ್ಸಾಗಿದೆ. ಹೀಗಾಗಿ ಅವರು ನಾನು ಬೇಗ ಮದುವೆಯಾಗಬೇಕೆಂದು ಬಯಸುತ್ತಾರೆ. ಹೀಗಾಗಿ ನಾನು ಮದುವೆಗೆ ಒಪ್ಪಿಕೊಂಡೆ. ನನ್ನ ಸಂಬಂಧಿಕರು (Relatives) ಸಹ ಮದುವೆಗೆ ಒತ್ತಾಯಿಸುತ್ತಿದ್ದಾರೆ. ನೆರೆಹೊರೆಯವರು ನನ್ನ ಬಗ್ಗೆ ಗಾಸಿಪ್ ಮಾಡುತ್ತಾರೆ' ಎಂದು ಯುವತಿ ಹೇಳಿದ್ದಾಳೆ. 'ಮದುವೆಯಾಗುವುದು ನನ್ನ ಹೆತ್ತವರಿಗೆ ಸಮಾಧಾನ ತರಬಹುದು. ಆದರೆ ನನಗೆ ಭವಿಷ್ಯವಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಯುವತಿ ತಿಳಿಸಿದ್ದಾಳೆ. ಮಂಟಪದಲ್ಲೇ ವಧು ಕಣ್ಣೀರು ಹಾಕಿ ಮದ್ವೆ ಕ್ಯಾನ್ಸಲ್ ಮಾಡಿರೋ ವೀಡಿಯೋ ವೈರಲ್ ಆಗಿದೆ. 11,000ಕ್ಕೂ ಹೆಚ್ಚು ಮಂದಿ ಈ ವೀಡಿಯೋಗೆ ಕಾಮೆಂಟ್‌ ಮಾಡಿದ್ದಾರೆ.

ಕಂಕಣ ಭಾಗ್ಯ ಬಂದಿಲ್ಲವೆಂದರೆ ಮಹಿಳೆಯರ ಟೆನ್ಷನ್ ಹೆಚ್ಚಾಗುತ್ತಾ?

ಆಕೆಯ ಕಥೆಯು ಚೀನಾದ ಸಾಮಾಜಿಕ ಮಾಧ್ಯಮದಲ್ಲಿ 11,000ಕ್ಕೂ ಹೆಚ್ಚು ಕಾಮೆಂಟ್‌ಗಳೊಂದಿಗೆ ವೈರಲ್ ಆಗಿದೆ. SCMP ಪ್ರಕಾರ, ಕೆಲವು ಇಂಟರ್ನೆಟ್ ಬಳಕೆದಾರರು ಅವಳ ಮದುವೆಯಲ್ಲಿ ಸಂತೋಷವಾಗಿರುವುದಿಲ್ಲ ಎಂದು ಹೇಳಿದರು, ಆದರೆ ಇತರರು ಅವಳು ಸಂತೋಷವಾಗಬೇಕೆಂದು ಆಶಿಸಿದರು.

ಬಳಕೆದಾರರೊಬ್ಬರು 'ಬಲವಂತದ ಮದುವೆ ನೋವಿನಿಂದ ಕೂಡಿದೆ'  ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, "'ಜೀವನವು ಚಿಕ್ಕದಾಗಿದೆ. ಇತರ ಜನರನ್ನು ಸಂತೋಷಪಡಿಸಲು ನಮ್ಮ ಜೀವನವನ್ನು ಯಾಕೆ ತ್ಯಾಗ ಮಾಡಬೇಕು' ಎಂದು ಪ್ರಶ್ನಿಸಿದ್ದಾರೆ. ಮೂರನೇ ಬಳಕೆದಾರರು ಬರೆದಿದ್ದಾರೆ, 'ಅವಳು ತುಂಬಾ ದುಃಖಿತಳಾಗಿ ಕಾಣುತ್ತಾಳೆ, ಆದರೆ ಅವಳು ಅವನನ್ನು ಪ್ರೀತಿಸಲು ಸಾಧ್ಯವಾಗದಿದ್ದರೆ ಇಬ್ಬರ ಜೀವನ ಸಹ ಹಾಳಾಗುತ್ತದೆ' ಎಂದಿದ್ದಾರೆ.

Follow Us:
Download App:
  • android
  • ios