ದಾಂಪತ್ಯದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕೆಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಮತ್ತೆ ಕೆಲವನ್ನು ಬಹಿರಂಗವಾಗಿ ಹೇಳಲೂ ಸಾಧ್ಯವಾಗುವುದಿಲ್ಲ. ಗಂಡನ ಮೇಲೆ ಆಕರ್ಷಣೆ ಕಳೆದುಕೊಂಡ ಮಹಿಳೆಯೊಬ್ಬಳು ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾಳೆ. 

ಎರಡೂ ಕೈ ತಟ್ಟಿದ್ರೆ ಮಾತ್ರ ಚಪ್ಪಾಳೆ (Clap) ಯಾಗಲು ಸಾಧ್ಯ. ಹಾಗೆ ಇಬ್ಬರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಾಗಲೇ ಪ್ರೀತಿ (Love) ಗಟ್ಟಿಯಾಗಲು ಸಾಧ್ಯ. ಎರಡೂ ಕಡೆಯಿಂದ ಸಮನಾದ ಪ್ರೀತಿ, ಕಾಳಜಿ, ಆಸಕ್ತಿ, ಗೌರವದ ಅಗತ್ಯವಿರುತ್ತದೆ. ಅನೇಕ ಬಾರಿ ಯಾವುದೋ ಕಾರಣಕ್ಕೆ ಸಂಗಾತಿ (Partner ) ಮೇಲೆ ಆಸಕ್ತಿ ಹೋಗಿರುತ್ತದೆ. ಇದು ದಾಂಪತ್ಯವನ್ನು ಹಾಳು ಮಾಡಲು ದಾರಿಯಾಗುತ್ತದೆ. ಸಂಗಾತಿ ಮೇಲೆ ಪ್ರೀತಿಯಿಲ್ಲದ ಮಹಿಳೆಯೊಬ್ಬಳು ತನ್ನ ಉಭಯ ಸಂಕಟವನ್ನು ಹೇಳಿಕೊಂಡಿದ್ದಾಳೆ. ಪತಿ ಮೇಲೆ ಪ್ರೀತಿಯಿಲ್ಲ ಆದ್ರೆ ಬೇರೆ ಪುರುಷ (Male) ರನ್ನು ನೋಡಿದ್ರೆ ಆಸಕ್ತಿ ಹೆಚ್ಚಾಗುತ್ತದೆ ಎನ್ನುವ ಮಹಿಳೆಗೆ ತಜ್ಞರು (Experts) ಏನು ಸಲಹೆ ನೀಡಿದ್ದಾರೆ ಎಂಬುದನ್ನು ನೋಡೋಣ.

ಗಂಡ (Husband) ನ ಮೇಲಿಲ್ಲ ಆಸಕ್ತಿ : ಆಕೆಗೆ 26 ವರ್ಷ. ಮದುವೆಯಾಗಿ ನಾಲ್ಕು ವರ್ಷ ಕಳೆದಿದೆ. ಪತಿ ಮೇಲೆ ಆಕೆಗೆ ಎಳ್ಳಷ್ಟೂ ಪ್ರೀತಿ ಇಲ್ಲವಂತೆ. ಆತ ಹತ್ತಿರ ಬಂದ್ರೆ ದೂರ ಹೋಗಬೇಕೆನ್ನಿಸುತ್ತದೆಯಂತೆ. ಪತಿ ಜೊತೆ ಶಾರೀರಿಕ ಸಂಬಂಧ ಬೆಳೆಸಲು ನನಗೆ ಇಷ್ಟವಿಲ್ಲ. ಆತನ ಮೇಲೆ ಸಂಪೂರ್ಣ ಆಸಕ್ತಿ ಕಳೆದುಕೊಂಡಿದ್ದೇನೆ ಎನ್ನುತ್ತಾಳೆ ಮಹಿಳೆ.

ಗರ್ಭಿಣಿ ಶಾರೀರಿಕ ಸಂಬಂಧದಿಂದ ದೂರವಿರೋದು ಯಾಕೆ ?

ಪರ ಪುರುಷರ ಮೇಲೆ ಕಣ್ಣು : ವಿಷ್ಯ ಇಷ್ಟೇ ಆದ್ರೆ ಪರವಾಗಿರಲಿಲ್ಲ, ಪತಿ ಮೇಲೆ ಪ್ರೀತಿಯಿಲ್ಲದ ಮಹಿಳೆ, ಪರ ಪುರುಷರನ್ನು ನೋಡಿದ್ರೆ ಆಕರ್ಷಿತಳಾಗ್ತಾಳಂತೆ. ಬರೀ ಶಾರೀರಿಕ ಸಂಬಂಧ ಬೆಳೆಸಬೇಕೆಂಬ ಆಸೆ ಬರುವುದು ಮಾತ್ರವಲ್ಲ ಪರ ಪುರುಷರ ಜೊತೆ ಮಾತನಾಡುವುದು, ಅವರ ಜೊತೆ ಸಮಯ ಕಳೆಯುವುದು ಆಕೆಗೆ ಇಷ್ಟವಂತೆ. ಪತಿಯ ಬಗ್ಗೆ ಸ್ವಲ್ಪವೂ ಫೀಲಿಂಗ್ಸ್ ಹೊಂದಿರದ ಮಹಿಳೆಗೆ ಏನ್ಮಾಡ್ಬೇಕು ಎಂಬುದು ತಿಳಿಯುತ್ತಿಲ್ಲವಂತೆ.

ವಿಚ್ಛೇದನ ಕಷ್ಟ : ಮದುವೆಯಾಗಿ ನಾಲ್ಕು ವರ್ಷ ಕಳೆದಿರುವ ಮಹಿಳೆಗೆ ಎರಡು ವರ್ಷದ ಮಗಳಿದ್ದಾಳೆ. ಹಾಗಾಗಿ ಪತಿಯಿಂದ ವಿಚ್ಛೇದನ ಪಡೆಯುವುದು ಆಕೆಗೆ ಕಷ್ಟವಾಗ್ತಿದೆ. ಆದ್ರೆ ಆತನ ಜೊತೆ ಸಂಸಾರ ನಡೆಸಲೂ ಸಾಧ್ಯವಾಗ್ತಿಲ್ಲ. ಮುಂದೇನು ಎಂಬ ಗೊಂದಲದಲ್ಲಿ ಮಹಿಳೆಯಿದ್ದಾಳೆ. ಪತಿ ಜೊತೆ ಜೀವನ ನಡೆಸಬೇಕಾ ಇಲ್ಲ ವಿಚ್ಛೇದನ ನೀಡಿ ದೂರವಾಗ್ಬೇಕಾ ಗೊತ್ತಾಗ್ತಿಲ್ಲ ಎನ್ನುತ್ತಾಳೆ ಮಹಿಳೆ.

ತಜ್ಞರ ಸಲಹೆ : ಮಹಿಳೆ ಸಮಸ್ಯೆಗೆ ತಜ್ಞರು ಉತ್ತರ ನೀಡಿದ್ದಾರೆ. ಪ್ರೀತಿ ಇಲ್ಲದ ಜಾಗದಲ್ಲಿ ಉಳಿಯುವುದು ಎಷ್ಟು ಕಷ್ಟ ಎಂಬುದು ಎಲ್ಲಿಗೂ ತಿಳಿದ ವಿಷ್ಯ. ಒತ್ತಾಯಕ್ಕೆ ಪ್ರೀತಿ ಹುಟ್ಟಲು ಸಾಧ್ಯವಿಲ್ಲ. ಮನಸ್ಸಿಲ್ಲದ ಮನಸ್ಸಿನಲ್ಲಿ ಸಂಸಾರ ನಡೆಸಿದ್ರೆ ಅದ್ರಿಂದ ಪ್ರಯೋಜನವಿಲ್ಲ. ಖುಷಿಯಿಲ್ಲ. ದಾಂಪತ್ಯದಲ್ಲಿ ನೆಮ್ಮದಿಯಿರುವುದಿಲ್ಲ. ಪತಿ – ಪತ್ನಿ ಮಧ್ಯೆ ಒಳ್ಳೆಯ ಬಾಂಧವ್ಯವಿಲ್ಲವೆಂದಾಗ ಕಿರಿಕಿರಿ, ಕೋಪ ಸಾಮಾನ್ಯವಾಗುತ್ತದೆ. ಇದ್ರಿಂದ ಸಂಬಂಧ ಮತ್ತಷ್ಟು ಹಾಳಾಗುತ್ತದೆ ಎನ್ನುತ್ತಾರೆ ತಜ್ಞರು. 
ಆದ್ರೆ ಇದೇ ಕಾರಣಕ್ಕೆ ಸಂಬಂಧ ಮುರಿದುಕೊಳ್ಳುವುದು ಮೂರ್ಖತನ. ಮದುವೆ ಮುರಿದು ಬೀಳುವುದು ದುಃಖದ ವಿಷ್ಯ. ನಿಮಗೆ ಈಗಾಗಲೇ ಎರಡು ವರ್ಷದ ಮಗುವಿಗೆ. ನಿಮ್ಮ ಸುಖಕ್ಕೆ ನೀವು ಪತಿಯಿಂದ ದೂರವಾಗ್ಬಹುದು. ಆದ್ರೆ ಮಗುವಿನ ಸ್ಥಿತಿ ಮುಂದೆ ಕಷ್ಟವಾಗುತ್ತದೆ ಎನ್ನುತ್ತಾರೆ ತಜ್ಞರು. 

Relationship Tips : ಬೆಡ್ ರೂಮಿನಲ್ಲಿದೆ ದಂಪತಿಯನ್ನು ಒಂದು ಮಾಡುವ ಗುಟ್ಟು

ಸೆಕ್ಸ್ ಆಕರ್ಷಣೆ ಸಾಮಾನ್ಯ : ಪರ ಪುರುಷರಿಗೆ ಆಕರ್ಷಿತರಾಗುವುದು ಸಾಮಾನ್ಯ. ಆದ್ರೆ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವ ತಾಳ್ಮೆ ಬೇಕು. ವಿವಾಹಿತ ಮಹಿಳೆ ಪರಪುರುಷನ ಜೊತೆ ಹೋದ್ರೆ ದಾಂಪತ್ಯ ಹಾಳಾಗುತ್ತದೆ. ಹಾಗಾಗಿ ಕೆಲ ವಿಷ್ಯಗಳನ್ನು ಪತಿ ಮುಂದೆ ಹೇಳುವುದು ಯೋಗ್ಯ. ಇದು ಪರಸ್ಪರ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ ಎನ್ನುತ್ತಾರೆ ತಜ್ಞರು.
ಪತಿಗೆ ನಿಮ್ಮ ಫೀಲಿಂಗ್ಸ್ ಹೇಳಲು ಸಾಧ್ಯವಿಲ್ಲವೆಂದಾದ್ರೆ ನೀವು ತಜ್ಞರಿಂದ ಕೌನ್ಸಿಲಿಂಗ್ ಪಡೆಯಬಹುದು. ಇದು ತಪ್ಪಲ್ಲ. ಇದರಿಂದ ನಿಮ್ಮ ಮನಸ್ಸು ಬದಲಾಗುತ್ತದೆ. ಜೊತೆಗೆ ದಾಂಪತ್ಯ ಉಳಿಯುತ್ತದೆ ಎನ್ನುತ್ತಾರೆ ತಜ್ಞರು.