Sologamy Marriage: ತನ್ನನ್ನು ತಾನು ಮದುವೆಯಾಗ್ತಿರೋ ಹುಡುಗಿ ಹನಿಮೂನ್ ಎಲ್ಲಿ?
ಮದುವೆ ಅಂದ್ಮೇಲೆ ಹುಡುಗ – ಹುಡುಗಿ ಇರ್ಲೇಬೇಕು. ಇತ್ತೀಚಿನ ದಿನಗಳಲ್ಲಿ ಹುಡುಗಿ- ಹುಡುಗಿ, ಹುಡುಗ – ಹುಡುಗನ ಮದುವೆ ಕೂಡ ಪ್ರಸಿದ್ಧಿ ಪಡೆಯುತ್ತಿದೆ. ಕೆಲವರು ನಾಯಿ, ಬೆಕ್ಕು ಅಂತಾ ತಮ್ಮಿಷ್ಟದ ಪ್ರಾಣಿ ಕೂಡ ಮದುವೆಯಾಗ್ತಾರೆ. ಆದ್ರೆ ಈ ಹುಡುಗಿ ಮದುವೆ ಭಿನ್ನವಾಗಿದೆ.
ಮದುವೆ (Wedding) ಫಿಕ್ಸ್ ಆದ್ಮೇಲೆ ತಯಾರಿ ಜೋರಾಗುತ್ತೆ. ಅದ್ರಲ್ಲೂ ಹುಡುಗಿಯರು ಅಲಂಕಾರ (Decoration) ಕ್ಕೆ ಹೆಚ್ಚು ಮಹತ್ವ ನೀಡೋದ್ರಿಂದ ಅವರ ಖರೀದಿ ದುಪ್ಪಟ್ಟಾಗುತ್ತೆ. ಚೆಂದದ ಮದುವೆ ಬಟ್ಟೆಗೆ ಲಕ್ಷಾಂತ ರೂಪಾಯಿ ಖರ್ಚು ಮಾಡುವವರಿದ್ದಾರೆ. ಅದ್ರಲ್ಲಿ 24 ವರ್ಷದ ಕ್ಷಮಾ (Kshama) ಬಿಂದು ಕೂಡ ಒಬ್ಬಳು. ಕ್ಷಮಾ ಮದುವೆ ನಿಗದಿಯಾಗಿದೆ. ಇದೇ ಜೂನ್ 11 ರಂದು ಕ್ಷಮಾ ಹಸೆಮಣೆ ಏರಲಿದ್ದಾಳೆ. ಕ್ಷಮಾ ಮದುವೆಗೆ ತಯಾರಿ ಜೋರಾಗಿ ನಡೆದಿದೆ. ಕ್ಷಮಾ ತನಗಾಗಿ ಲೆಹೆಂಗಾ (Lehenga), ಆಭರಣಗಳನ್ನು ಖರೀದಿಸುತ್ತಿದ್ದಾಳೆ. ಪಾರ್ಲರ್ (Parlor) ಕೂಡ ಬುಕ್ ಆಗಿದೆ. ವಧುವಾಗಿ ಮಂಟಪದಲ್ಲಿ ಕೂರಲು ಸಿದ್ಧಳಾಗಿದ್ದಾಳೆ. ಆದರೆ, ಕ್ಷಮಾ ಕೈ ಹಿಡಿದು ಸಪ್ತಪದಿ ತುಳಿಯಲು ವರ ಇರೋದಿಲ್ಲ. ವರ (Groom) ಇಲ್ಲದಿದ್ದರೆ ಕ್ಷಮಾ ಯಾರೊಂದಿಗೆ ಮದುವೆಯಾಗ್ತಾಳೆ ಎಂದು ನಿಮಗೆ ಆಶ್ಚರ್ಯವಾಗಬಹುದು. ವಾಸ್ತವವಾಗಿ, ಕ್ಷಮಾ ಯಾವುದೇ ಯುವಕ ಅಥವಾ ಯಾವುದೇ ಪ್ರಾಣಿ ಜೊತೆ ಮದುವೆಯಾಗ್ತಿಲ್ಲ. ತನ್ನನ್ನು ತಾನು ಮದುವೆಯಾಗ್ತಿದ್ದಾಳೆ.
ಯಸ್. ನೀವು ನಂಬಿ, ಬಿಡಿ. ಇದು ಸತ್ಯ. ಇತ್ತೀಚಿನ ದಿನಗಳಲ್ಲಿ ಜನರ ಆಲೋಚನೆಗಳು ಬದಲಾಗಿವೆ. ತಮ್ಮ ಸ್ವತಂತ್ರ (Freedom) ಕ್ಕೆ ಮಹಿಳೆಯರು ಹೆಚ್ಚು ಮಹತ್ವ ನೀಡ್ತಿದ್ದಾರೆ. ತನ್ನ ಮನಸ್ಸಿನ ಭಾವನೆಗೆ ಬೆಲೆ ಕೊಡಲು ಕ್ಷಮಾ ಮುಂದಾಗಿದ್ದಾಳೆ.
ಸಂಪ್ರದಾಯದಂತೆ ಮದುವೆ : ಮದುವೆಯಲ್ಲಿ ಎಲ್ಲ ಸಂಪ್ರದಾಯಗಳು ನಡೆಯಲಿವೆ. ಕ್ಷಮಾ, ಸಿಂಧೂರವನ್ನಿಟ್ಟುಕೊಳ್ಳಲಿದ್ದಾಳೆ. ಹಾಗೆಯೇ ಸಪ್ತಪದಿ ತುಳಿಯಲಿದ್ದಾಳೆ. ಆದ್ರೆ ಮದುವೆಯಲ್ಲಿ ವರನಿರುವುದಿಲ್ಲ. ಜೊತೆಗೆ ವರನ ಮೆರವಣಿಗೆಯಿರೋದಿಲ್ಲ. ಗುಜರಾತಿನ ಮೊದಲ ಕ್ಷಮಾ ಸ್ವ-ವಿವಾಹ ಅಥವಾ ಏಕಪತ್ನಿತ್ವ ನಿರ್ಧಾರ ತೆಗೆದುಕೊಂಡಿದ್ದಾಳೆ.
40ರ ನಂತರ ಸಾರಿ ಸ್ಟೈಲಿಂಗ್ ಹೇಗಿರಬೇಕು ? ಬಾಲಿವುಡ್ ನಟಿ ವಿದ್ಯಾ ಬಾಲನ್ ಟಿಪ್ಸ್
ವಧುವಾಗಲು ಬಯಸಿದ್ದಳು ಆದರೆ ಮದುವೆಯಲ್ಲ : ಕ್ಷಮಿಸಿ, 'ನಾನು ಎಂದಿಗೂ ಮದುವೆಯಾಗಲು ಬಯಸಲಿಲ್ಲ. ಆದರೆ ನಾನು ವಧು ಆಗಬೇಕೆಂದು ಬಯಸಿದ್ದೆ. ಹಾಗಾಗಿ ನನ್ನನ್ನು ನಾನೇ ಮದುವೆಯಾಗಲು ನಿರ್ಧರಿಸಿದೆ. ದೇಶದಲ್ಲಿ ಯಾವುದಾದ್ರೂ ಮಹಿಳೆ ತನ್ನನ್ನು ತಾನು ಮದುವೆಯಾಗಿದ್ದಾಳೆಯೇ ಎಂದು ನಾನು ಹುಡುಕುವ ಪ್ರಯತ್ನ ನಡೆಸಿದೆ. ಆದ್ರೆ ಯಾವುದೇ ಮಹಿಳೆ ಈ ಕೆಲಸಕ್ಕೆ ಕೈ ಹಾಕಿದ್ದು ನನಗೆ ಕಾಣಿಸಿಲಿಲ್ಲ. ಹಾಗಾಗಿ ಸ್ವಯಂ ಮದುವೆಯಾಗ್ತಿರುವ ಭಾರತದ ಮೊದಲ ಮಹಿಳೆ ನಾನು ಎಂದಿದ್ದಾಳೆ ಕ್ಷಮಾ.
ನಾನು ನನ್ನನ್ನು ಪ್ರೀತಿಸುತ್ತೇನೆ ಅದಕ್ಕಾಗಿಯೇ ನಾನು ನನ್ನನ್ನು ಮದುವೆಯಾಗುತ್ತೇನೆ : ಗುಜರಾತು ಮೂಲದ ಕ್ಷಮಾ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳ. ಕ್ಷಮಾ ತನ್ನ ಈ ಮದುವೆ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾಳೆ. ಸ್ವಯಂ ವಿವಾಹ ಅಂದ್ರೆ ನನ್ನನ್ನು ನಾನು ಬೇಷರತ್ತಾದ ಪ್ರೀತಿಸುವುದಾಗಿದೆ. ಜನರು ಪ್ರೀತಿಸುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ ಮತ್ತು ಅದಕ್ಕಾಗಿಯೇ ನಾನು ನನ್ನನ್ನು ಮದುವೆಯಾಗುತ್ತಿದ್ದೇನೆ ಎನ್ನುತ್ತಾಳೆ ಕ್ಷಮಾ.
ಅತ್ತೆ-ಸೊಸೆ ಅಂದ್ರೆ ಎಣ್ಣೆ-ಸೀಗೆಕಾಯಂತೇ ಇರ್ಬೇಕಾ ? ಸುಧಾಮೂರ್ತಿ ಮಾತು ಕೇಳಿಯೊಮ್ಮೆ
ಈ ಮದುವೆಗಿದೆ ಪೋಷಕರ ಒಪ್ಪಿಗೆ : ಸ್ವಯಂ ವಿವಾಹವನ್ನು ಎಲ್ಲರೂ ಸ್ವೀಕರಿಸುವುದಿಲ್ಲ. ಅದನ್ನು ಅಪ್ರಸ್ತುತವೆನ್ನುತ್ತಾರೆ. ಆದ್ರೆ ಮಹಿಳೆ ಏನು ಬಯಸುತ್ತಾಳೆ ಎಂಬುದನ್ನು ಬಿಂಬಿಸುವ ಪ್ರಯತ್ನ ನಾನು ಮಾಡ್ತಿದ್ದೇನೆ ಎನ್ನುತ್ತಾಳೆ ಕ್ಷಮ. ನನ್ನ ಈ ನಿರ್ಧಾರಕ್ಕೆ ತಂದೆ – ತಾಯಿಯ ಆಶೀರ್ವಾದವಿದೆ. ಅವರಿಬ್ಬರೂ ಮುಕ್ತ ಮನಸ್ಸಿನಿಂದ ಆಶೀರ್ವಾದ ಮಾಡಿದ್ದಾರೆ ಎಂದಿದ್ದಾಳೆ ಕ್ಷಮಾ.
ದೇವಸ್ಥಾನದಲ್ಲಿ ನಡೆಯಲಿದೆ ಕ್ಷಮಾ ಮದುವೆ : ಕ್ಷಮಾ ಮದುವೆಗೆ ಗೋತ್ರಿಯ ದೇವಸ್ಥಾನವನ್ನು ಆರಿಸಿಕೊಂಡಿದ್ದಾಳೆ. ಮದುವೆ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಐದು ಪ್ರತಿಜ್ಞೆಗಳನ್ನು ಅವಳೇ ಬರೆದಿದ್ದಾಳೆ.
ಮದುವೆ ನಂತ್ರ ಹನಿಮೂನ್ ಗೆ ಕ್ಷಮಾ : ಅಷ್ಟೆ ಅಲ್ಲ, ಮದುವೆಯ ನಂತರ ಹನಿಮೂನ್‌ಗೂ ಕ್ಷಮಾ ಹೋಗಲಿದ್ದಾಳೆ. ಹನಿಮೂನ್ ಗೆ ಗೋವಾ ಆಯ್ಕೆ ಮಾಡಿಕೊಂಡಿರುವ ಕ್ಷಮಾ ಎರಡು ವಾರಗಳ ಕಾಲ ಗೋವಾದಲ್ಲಿ ಹನಿಮೂನ್ ಎಂಜಾಯ್ ಮಾಡಲಿದ್ದಾಳೆ.