ಮದ್ವೆಗೆ ನಿರಾಕರಣೆ: ಬಾಯ್‌ಫ್ರೆಂಡ್‌ಗೆ 13 ಕಡೆ ಫ್ರಾಕ್ಚರ್ 17 ದಿನ ಆಸ್ಪತ್ರೆ ವಾಸ

Synopsis
ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಬಾಯ್‌ಫ್ರೆಂಡ್‌ಗೆ ಥಳಿಸಿದ ಪರಿಣಾಮವಾಗಿ ಆತನ ದೇಹದಲ್ಲಿ 13 ಮೂಳೆಗಳು ಮುರಿದಿವೆ. ಗುಲ್ಶನ್ ಎಂಬ ಯುವಕನಿಗೆ ಈ ಸ್ಥಿತಿ ಎದುರಾಗಿದ್ದು, ಆತ 17 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.
ಜೊತೆಗೆ ತಿರುಗಾಡಿ ಮದುವೆಯಾಗಲು ನಿರಾಕರಿಸಿದ ಬಾಯ್‌ಫ್ರೆಂಡ್‌ಗೆ ಮಹಿಳೆಯೊಬ್ಬಳು ಸರಿಯಾಗಿ ಹೊಡೆಸಿದ್ದಾಳೆ. ಪರಿಣಾಮ ಆತನ ದೇಹದಲ್ಲಿ 13 ಕಡೆ ಮೂಳೆ ಮುರಿದಿದ್ದು, 17 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಗುಲ್ಶನ್ ಹಲ್ಲೆಗೊಳಗಾದ ಯುವಕ. ಇವರಿಬ್ಬರಿಗೂ ಈಗಾಗಲೇ ಒಂದೊಂದು ಮದುವೆಯಾಗಿದ್ದು, ಇಬ್ಬರೂ ತಮ್ಮ ಪತಿ/ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿಲ್ಲ. ಗುಲ್ಶನ್ ಪತ್ನಿಯಿಂದ ದೂರಾಗಿ ವಾಸ ಮಾಡುತ್ತಿದ್ದಾನೆ. 2019ರಲ್ಲಿ ಈ ವಿವಾಹಿತರ ಪ್ರೇಮ ಸಂಬಂಧ ಶುರುವಾಗಿದೆ. ಮೊಬೈಲ್ ಶಾಪ್ ಹೊಂದಿದ್ದ ಗುಲ್ಶನ್ ಅಂಗಡಿಗೆ ಮಹಿಳೆ ಆಗಾಗ ಭೇಟಿ ನೀಡಿದ ನಂತರ ಪರಿಚಯವಾಗಿ ಈ ಪ್ರೇಮ ಸಂಬಂಧ ಶುರುವಾಗಿದೆ.
ಘಟನೆಯ ಹಿನ್ನೆಲೆ
ಅಂದಹಾಗೆ ಈ ಆಘಾತಕಾರಿ ಘಟನೆ ನಡೆದಿರುವುದು ಹರ್ಯಾಣದ ಫರಿದಾಬಾದ್‌ನಲ್ಲಿ. ವರದಿಗಳ ಪ್ರಕಾರ, ಮಹಿಳೆಗೆ ಗುಲ್ಶನ್ ಈ ಹಿಂದೆ ನೀಡಿದ್ದ ₹21.5 ಲಕ್ಷ ರೂಪಾಯಿಯನ್ನು ಹಿಂದಿರುಗಿಸುತ್ತೇನೆ ಎಂದು ಹೇಳಿ ತನ್ನ ಮನೆಗೆ ಕರೆಸಿಕೊಂಡಿದ್ದಾರೆ. ಆದರೆ ಆತ ಮನೆಗೆ ಬಂದ ಕೂಡಲೇ ಆಕೆಯ ಕುಟುಂಬ ಸದಸ್ಯರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗುಲ್ಶನ್ ಹೇಳಿಕೊಂಡಿದ್ದಾನೆ. ಆ ಮಹಿಳೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದು, ಇದನ್ನು ಗುಲ್ಶನ್ ನಿರಾಕರಿಸಿದಾಗ ಆಕೆ ಹಾಗೂ ಆಕೆಯ ಮನೆಯವರು ಸೇರಿ ಆತನಿಗೆ ಥಳಿಸಿದ್ದಾರೆ ಎಂದು ಗುಲ್ಶನ್ ಆರೋಪಿಸಿದ್ದಾನೆ.
ಕೇರಳದಲ್ಲಿ ಕಂದಕಕ್ಕೆ ಉರುಳಿದ ಬಸ್: ಬಾಲಕಿ ಸಾವು
ಮಹಿಳೆಯ ಕಡೆಯವರು ಮಾಡಿದ ಮಾರಕ ದಾಳಿಯಿಂದ ಯುವಕನ ದೇಹದ 13 ಕಡೆ ಮೂಳೆ ಮುರಿದಿದ್ದು, ಫರಿದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹಿಂದಿ ಮಾಧ್ಯಮ ದೈನಿಕ್ ಭಾಸ್ಕರ್ ವರದಿ ಮಾಡಿದೆ.ಗುಲ್ಶನ್ ಪತ್ನಿಯಿಂದ ದೂರಾಗಿ ವಾಸ ಮಾಡ್ತಿದ್ರೆ, ಇತ್ತ ಈ ಮಹಿಳೆ ಪತಿಯಿಂದ ವಿಚ್ಛೇದನಕ್ಕಾಗಿ ಕಾನೂನು ಪ್ರಕ್ರಿಯೆ ನಡೆಸುತ್ತಿದ್ದಾಳೆ. ನವ ಭಾರತ್ ಟೈಮ್ಸ್‌ನ ವರದಿಯ ಪ್ರಕಾರ ಮಹಿಳೆಗೆ 10 ವರ್ಷದ ಮಗಳೊಬ್ಬಳಿದ್ದಾಳೆ, ಹಾಗೆಯೇ ಹಲ್ಲೆಗೊಳಗಾದ ಆಕೆಯ ಬಾಯ್‌ಫ್ರೆಂಡ್‌ಗೆ ಈಗಾಗಲೇ ಮೂರು ಮಕ್ಕಳಿದ್ದಾರೆ.
ಮಾರ್ಚ್29 ರಂದು ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಗುಲ್ಶನ್ ಮಹಿಳೆಗೆ ನೀಡಿದ್ದ ಹಣವನ್ನು ವಾಪಸ್ ಕೇಳಲು ಹೋದಾಗ ಹಲ್ಲೆ ನಡೆದಿದೆ. ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಬರಬೇಕಾಯ್ತು ಎಂದು ಆತ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಕಪಲ್ಸ್ ವಯಸ್ಸಿನ ಅಂತರ ಹೆಚ್ಚಿದ್ದರೆ ಅನುಕೂಲಗಳು & ಅನಾನುಕೂಲಗಳು?
ದಾವಣಗೆರೆಯಲ್ಲಿ ತಾಲಿಬಾನ್ ಸ್ಟೈಲ್ ದಾದಾಗಿರಿ
ಬೆಂಗಳೂರು/ದಾವಣಗೆರೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ವಿರುದ್ಧ ಮಸೀದಿಯಲ್ಲಿ ಗಂಡ ದೂರು ನೀಡಿದ ನಂತರ ಯುವಕರ ಗುಂಪೊಂದು ಆತನ ಪತ್ನಿ ಮೇಲೆ ಅಮಾನವೀಯವಾಗಿ ದೊಣ್ಣೆಯಿಂದ ಹಲ್ಲೆ ನಡೆಸಿದ ಅಮಾನವೀಯ ಘಟನೆ ಕರ್ನಾಟಕದ ದಾವಣಗೆರೆಯಲ್ಲಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕಳೆದ ವಾರ ದಾವಣಗೆರೆಯಲ್ಲಿ ಈ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 38 ವರ್ಷದ ಮಹಿಳೆಯ ಮೇಲೆ ಪತಿ ದೂರು ನೀಡಿದ್ದ ಇದಾದ ನಂತರ ಈ ಮಸೀದಿ ಮುಂದೆಯೇ ಈ ಹಲ್ಲೆ ನಡೆದಿದೆ. ಶಬೀನಾ ಬಾನು ಹಲ್ಲೆಗೊಳಗಾದ ಮಹಿಳೆ.
ಮನೆ ಕೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದ ಶಬೀನಾ ಬಾನು ಏಪ್ರಿಲ್ 7 ರಂದು ಮನೆಯಲ್ಲಿದ್ದಾಗ ಆಕೆಯ ಸಂಬಂಧಿಯಾಗಿದ್ದ ನಸ್ರೀನ್ ಹಾಗೂ ಆಕೆಯ ಗಂಡ ಫಯಾಜ್ ಆಕೆಯನ್ನು ಭೇಟಿಯಾಗಲು ಬಂದಿದ್ದಾರೆ. ಇದಾದ ನಂತರ ಮೂವರು ಜೊತೆಯಾಗಿ ಬುಕ್ಕಂಬುಡಿ ಎಂಬಲ್ಲಿರುವ ಹಿಲ್ ಸ್ಟೇಷನ್‌ಗೆ ಹೋಗಿದ್ದಾರೆ. ನಂತರ ವಾಪಸ್ ಮೂವರು ಶಬೀನಾಳ ಮನೆಗೆ ಬಂದಿದ್ದಾರೆ. ಇವರು ಮನೆಗೆ ಮರಳಿ ಬಂದ ನಂತರ ಶಬೀನಾಳ ಗಂಡ ಜಮೀಲ್ ಅಹ್ಮದ್ ಕೂಡ ಮನೆಗೆ ಬಂದಿದ್ದಾನೆ. ಮನೆಗೆ ಬಂದವನೇ ಮನೆಯಲ್ಲಿ ಶಬೀನಾಳ ಸಂಬಂಧಿಕರು ಇರುವುದು ನೋಡಿ ಕೋಪಗೊಂಡಿದ್ದಾನೆ. ಅಲ್ಲದೇ ಈತ ಅಲ್ಲಿನ ಸ್ಥಳೀಯ ಮಸೀದಿಯಲ್ಲಿ ದೂರು ನೀಡಿದ್ದಾನೆ. ಇದಾಗಿ 2 ದಿನದ ನಂತರ ಏಪ್ರಿಲ್ 9 ರಂದು ಮೂವರಿಗೂ ಮಸೀದಿಯಿಂದ ಸಮನ್ಸ್ ಬಂದಿದೆ. ಇವರು ಮಸೀದಿಯನ್ನು ತಲುಪುತ್ತಿದ್ದಂತೆ ಅಲ್ಲಿದ್ದ ಆರು ಜನರ ಗುಂಪು ಪೈಪು ಹಾಗೂ ಕೋಲುಗಳಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಲ್ಲೆಯಿಂದ ಶಬೀನಾ ಗಂಭೀರ ಗಾಯಗೊಂಡಿದ್ದಾರೆ. ಈಗ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.