ಕೇರಳದಲ್ಲಿ ಕಂದಕಕ್ಕೆ ಉರುಳಿದ ಬಸ್: ಬಾಲಕಿ ಸಾವು
ಎರ್ನಾಕುಲಂನಲ್ಲಿ KSRTC ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 14 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ, ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಎರ್ನಾಕುಲಂ: ಕೇರಳ ರಾಜ್ಯ ಸಾರಿಗೆಯ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ದಾರುಣ ಘಟನೆ ಎರ್ನಾಕುಲಂನ ನೇರ್ಯಮಂಗಲಂ ಮಣಿಯಾಂಪಾರದಲ್ಲಿ ನಡೆದಿದೆ. ಇಡುಕ್ಕಿ ಕೀರಿತೋಡ್ ಮೂಲದ ಅನಿಂಟಾ ಬೆನ್ನಿ ಮೃತಪಟ್ಟ ಬಾಲಕಿ ಘಟನೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಇಂದು ಬೆಳಗ್ಗೆ ಕಟ್ಟಪ್ಪನದಿಂದ ಎರ್ನಾಕುಲಂಗೆ ಬರುತ್ತಿದ್ದ ಕೇರಳ ಸಾರಿಗೆ ಇಲಾಖೆಗೆ ಸೇರಿದ ನಿಗದಿತ ನಿಲುಗಡೆಯ ಬಸ್ ಅಪಘಾತಕ್ಕೀಗಿ. ರಸ್ತೆ ಪಕ್ಕದ ಸುಮಾರು 10 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ.
ಬಸ್ ನಿಯಂತ್ರಣ ತಪ್ಪಿ ಉರುಳಿದಾಗ ಹೊರಗೆ ಎಸೆಯಲ್ಪಟ್ಟ ಬಾಲಕಿ ಬಸ್ಸಿನಡಿ ಸಿಲುಕಿದ ಪರಿಣಾಮ ಬಾಲಕಿಯ ಜೀವ ಹೋಗಿದೆ. ಕ್ರೇನ್ ಮೂಲಕ ಬಸ್ಸನ್ನು ಮೇಲಕ್ಕೆತ್ತಿ ಕೂಡಲೇ ಬಾಲಕಿ ಅನಿಂಟಾ ಬೆನ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಿಕೊಳ್ಳಲಾಗಲಿಲ್ಲ, ಬಸ್ಸಿನಲ್ಲಿ ಸಿಲುಕಿದ್ದ ಇತರ ಪ್ರಯಾಣಿಕರನ್ನು ಕೂಡಲೇ ಹೊರತೆಗೆಯಲಾಯಿತು. ಅಗ್ನಿಶಾಮಕ ದಳ ಸೇರಿದಂತೆ ಹಲವು ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು. ಬಸ್ಸಿನಲ್ಲಿ ಹಲವಾರು ಪ್ರಯಾಣಿಕರಿದ್ದರು. ನೇರ್ಯಮಂಗಲಂನಿಂದ ಇಡುಕ್ಕಿಗೆ ಹೋಗುವ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ರಸ್ತೆಬದಿಯ ಕ್ರ್ಯಾಶ್ ಬ್ಯಾರಿಯರ್ ಗೆ ಡಿಕ್ಕಿ ಹೊಡೆದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ ಎಂದು ತಿಳಿದು ಬಂದಿದೆ.
ಮನಕಲುಕುವ ವಿಡಿಯೋ, ಅನಾರೋಗ್ಯ ಪೀಡಿತ ತಂದೆಯನ್ನು ತಳ್ಳೋ ಗಾಡಿಯಲ್ಲಿ ಆಸ್ಪತ್ರೆಗೆ ಕರೆತಂದ ಬಾಲಕ
ಕಸ ಸಂಗ್ರಹಗಾರರ ಪ್ರತಿಭಟನೆ: ಕೊಳೆತು ನಾರುತ್ತಿರುವ ಯುಕೆಯ ಬರ್ಮಿಂಗ್ ಹ್ಯಾಮ್
ಲಂಡನ್: ಪೌರ ಕಾರ್ಮಿಕರು ಅಥವಾ ಕಸ ಸಂಗ್ರಹಕಾರರು ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಒಂದು ದಿನ ಕೆಲಸ ಮಾಡದೇ ಹೋದರೂ ನಗರ ಗಬ್ಬೆದ್ದು ನಾರುವುದರಲ್ಲಿ ಯಾವುದೇ ಸಂಶಯವಿಲ್ಲ, ಇದಕ್ಕೊಂದು ಉದಾಹರಣೆ ಬರ್ಮಿಂಗ್‌ಹ್ಯಾಮ್‌ನ ಈ ದೃಶ್ಯಾವಳಿಗಳು. ಒಂದು ಕಾಲದಲ್ಲಿ ಇಡೀ ಪ್ರಪಂಚವನ್ನು ಆಳಿದ ಬ್ರಿಟಿಷ್ ರಾಜಮನೆತನದ ವೈಭವಕ್ಕೆ ಹೆಸರಾಗಿರುವ ಬರ್ಮಿಂಗ್ ಹ್ಯಾಮ್ ನಗರದಲ್ಲಿ ಈಗ ಜನ ಪ್ರವಾಸಿಗರು ಅಕ್ಷರಶಃ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಯುನೈಟೆಟ್ ಕಿಂಗ್ಡಮ್(UK)ಅಂದರೆ ಬ್ರಿಟನ್‌ನ ಬರ್ಮಿಂಗ್ ಹ್ಯಾಮ್‌ನಲ್ಲಿ ಕಸ ಸಂಗ್ರಹಕಾರರ ಪ್ರತಿಭಟನೆಯಿಂದಾಗಿ ಇಡೀ ನಗರ ಗಬ್ಬು ವಾಸನೆ ಹೊಡೆಯುತ್ತಿದೆ. ದಾರಿಬದಿಗಳಲ್ಲಿ ಎಸೆದ ಕಸವೂ ಇಲಿ ಹೆಗ್ಗಣಗಳಿಗೆ ಪೌಷ್ಠಿಕ ಆಹಾರದಂತಾಗಿದ್ದು, ಬೆಕ್ಕಿನ ಗಾತ್ರದ ಇಲ್ಲಿ ಹೆಗ್ಗಣಗಳು ರಸ್ತೆಗಳಲ್ಲಿ ಓಡಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಈ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ. ಅಲ್ಲದೇ ಹಲವು ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.
ಪೋಷಕರಿಗೆ ತಿಳಿಯದೇ ಕಾರು ಏರಿದ ಇಬ್ಬರು ಪುಟಾಣಿಗಳು ಉಸಿರುಕಟ್ಟಿ ಸಾವು
ಬರ್ಮಿಂಗ್ ಹ್ಯಾಮ್ ನಗರದಲ್ಲಿ ಸರಿಸುಮಾರು ಒಂದು ತಿಂಗಳಿನಿಂದಲೂ ಕಸ ಸಂಗ್ರಹಗಾರರು ಪ್ರತಿಭಟನೆ ನಡೆಸುತ್ತಿದ್ದಾರಂತೆ ಹಾಗಿದ್ದರೆ ಅಲ್ಲಿನ ಪರಿಸ್ಥಿತಿ ಹೇಗಿರಬಹುದು ನೀವೇ ಊಹಿಸಿ..! ಪರಿಣಾಮ ನಗರದ ರಸ್ತೆ ಬದಿಗಳಲ್ಲೆಲ್ಲಾ ರಾಶಿ ರಾಶಿ ಕಸದ ಚೀಲಗಳು ಬಿದ್ದಿವೆ. ಇವು ಇಲಿ ಹೆಗ್ಗಣಗಳಂತಹ ಸಸ್ತನಿಗಳಿಗೆ ಬೂರಿ ಭೋಜನ ನೀಡುತ್ತಿವೆ. ಹೀಗಾಗಿ ತಿಂದು ಕೊಬ್ಬಿದ ಬೆಕ್ಕಿನ ಗಾತ್ರದ ಇಲ್ಲಿ ಹೆಗ್ಗಣಗಳು ರೆಸ್ತೆಗಳಲ್ಲಿ ಓಡಾಡುತ್ತಾ ಜನರ ಕಣ್ಣಿಗೆ ಕಾಣಿಸಿಕೊಂಡು ಗಾಬರಿಗೊಳಿಸುತ್ತಿವೆ. ಹೀಗಾಗಿ ಇಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಇದರಿಂದ ಸಾಂಕ್ರಾಮಿಕ ಕಾಯಿಲೆಗಳನ್ನು ಹರಡುವ ಭೀತಿ ಎದುರಾಗಿದೆ. ಹೀಗಾಗಿ ಈಗ ಅಲ್ಲಿನ ಆಡಳಿತವೂ ಇಲಿಗಳನ್ನು ಓಡಿಸಿ ನಗರದ ಸ್ಥಿತಿಯನ್ನು ಮೊದಲಿನಂತೆ ನಿಭಾಯಿಸಲು ಮಿಲಿಟಿರಿ ಸಿಬ್ಬಂದಿಯನ್ನು ಕರೆಯುವುದಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಕಸದ ಸಂಗ್ರಹಣೆಯಿಂದಾಗುವ ಸಂಬಂಧಿತ ಸಾರ್ವಜನಿಕ ಆರೋಗ್ಯ ಅಪಾಯಗಳನ್ನು ಪರಿಹರಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಮಾಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ ಎಂದು ವರದಿಯಾಗಿದೆ. ಅದೇನೆ ಇರಲಿ ಕಸ ಆಯುವವರ ಒಂದು ತೀವ್ರವಾದ ಮುಷ್ಕರ ಆಡಳಿತವನ್ನು ಹೇಗೆ ಅಲುಗುವಂತೆ ಮಾಡಿದೆ ನೋಡಿ.