ದಾಂಪತ್ಯದಲ್ಲಿ ಸಾಮರಸ್ಯವಿದ್ದರಷ್ಟೇ ಎಲ್ಲವೂ ಚೆಂದ ಇಲ್ಲದಿದ್ದರೆ, ಗಂಡ ಪೂರ್ವ ಹೆಂಡತಿ ಪಶ್ಚಿಮ ಎಂಬಂತಿದ್ದರೆ ಅದನ್ನು ದಾಂಪತ್ಯ ಎನ್ನುವ ಬದಲು ಭಾರತ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಎನ್ನುವುದೇ ವಾಸಿ.
ದಾಂಪತ್ಯದಲ್ಲಿ ಸಾಮರಸ್ಯವಿದ್ದರಷ್ಟೇ ಎಲ್ಲವೂ ಚೆಂದ ಇಲ್ಲದಿದ್ದರೆ, ಗಂಡ ಪೂರ್ವ ಹೆಂಡತಿ ಪಶ್ಚಿಮ ಎಂಬಂತಿದ್ದರೆ ಅದನ್ನು ದಾಂಪತ್ಯ ಎನ್ನುವ ಬದಲು ಭಾರತ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಎನ್ನುವುದೇ ವಾಸಿ. ಹೊಂದಾಣಿಕೆ ಇಲ್ಲದ ದಾಂಪತ್ಯ ಅಷ್ಟು ಕಷ್ಟಕರ. ಆದರೆ ಇಲೊಬ್ಬ ಪತಿ ಮಹಾಶಯ ತಮಾಷೆಗೆ ಮಾಡಿದ್ದನ್ನೋ ಅಥವಾ ಹೆಂಡತಿ ಮೇಲೆ ಸೇಡು ತೀರಿಸಲು ಈ ಕಿತಾಪತಿ ಮಾಡಿದ್ದಾನೋ ಎಂಬುವುದು ಮಾತ್ರ ತಿಳಿಯದು. ಆದರೆ ಆತ ಮಾಡಿದ ಕಿತಾಪತಿಯ ವಿಡಿಯೋ ಮಾತ್ರ ಬಿದ್ದು ಬಿದ್ದು ನಗುವಂತೆ ಮಾಡುತ್ತಿರುವುದು ಮಾತ್ರ ಸುಳ್ಳಲ್ಲ.
ಮದುವೆಯಾದ ಮೇಲೆ ಗಂಡಸರೆಲ್ಲಾ ಹೆಂಡತಿ ಮಾತೇ ಕೇಳುತ್ತಾರೆ ಹೆಂಡ್ತಿಗೆ ಹೆದರುತ್ತಾರೆ ಎಂಬ ಮಾತು ಎಲ್ಲವೂ ನಿಜವಲ್ಲವಾದರೂ ಇದು ಪ್ರಪಂಚದಲ್ಲಿ ಗಂಡ ಹೆಂಡತಿ ಇರುವವರೆಗೆ ಪ್ರಚಲಿತದಲ್ಲಿರುವ ಹಾಸ್ಯ. ಬಹುತೇಕ ಗಂಡಸರು ಜವಾಬ್ದಾರಿ ಮರೆತು ಹಾಯಾಗಿ ಇನ್ನು ನವ ತರುಣರಂತೆ ಇರಲು ಬಯಸಿದಾಗ ಹೆಂಡತಿಗೆ ರೇಗಲು ಶುರುವಾಗಿ ದಾಂಪತ್ಯದ ಸಾಮರಸ್ಯದ ಬದಲು ತಾಳ ಮದ್ದಲೆ ಶುರುವಾಗುತ್ತದೆ. ಆದರೆ ದಾಂಪತ್ಯದ ಖುಷಿ ಹೆಚ್ಚಲು ಒಬ್ಬರಿಗಾದರೂ ಹಾಸ್ಯ ಪ್ರಜ್ಞೆ ಬೇಕು. ಬಹುಶಃ ಈ ಪತಿ ಮಹಾಶಯ ಮಾಡಿದ ಹಾಸ್ಯವನ್ನು ಪತ್ನಿ ಹಾಸ್ಯವಾಗಿಯೇ ತೆಗೆದುಕೊಂಡಲ್ಲಿ ತೊಂದರೆಯಾಗದು. ಆದರೆ ಹೆಂಡತಿ ಸೇಡಿಗೆ ಇಳಿದರೆ ಕತೆ ಗೋವಿಂದ.
ಸೆಕ್ಸ್ ಸಂತೃಪ್ತಿ: ವಿಲ್ ಸ್ಮಿತ್ ಮತ್ತು ಜಡಾ ಸ್ಮಿತ್ ಜೋಡಿ ನೀಡಿದ ಟಿಪ್ಸ್ ನೋಡಿ
ಹಾಗೆಯೇ ಇಲ್ಲಿ ಪತಿಯೋರ್ವ ಕೋಣೆಯಲ್ಲಿ ಹಾಸಿಗೆ ಇದ್ದ ಜಾಗದಲ್ಲಿ ಬೇರೆಡೆ ಸಾಗಿಸಬಲ್ಲ ಹಾಸಿಗೆಯಾಕಾರದ ಪ್ಲಾಸ್ಟಿಕ್ ಸ್ವಿಮ್ಮಿಂಗ್ ಫೂಲ್ ಅನ್ನು ಹಾಸಿಗೆ ಇರುವ ಜಾಗದಲ್ಲಿ ಇರಿಸಿ ಅದಕ್ಕೆ ನೀರು ತುಂಬಿಸಿ ಮೇಲ್ಬಾಗಕ್ಕೆ ಬೆಡ್ ಕವರನ್ನು ಹಾಸಿ ಮೇಲ್ನೋಟಕ್ಕೆ ಹಾಸಿಗೆಯಂತೆ ಕಾಣುವಂತೆ ಸಿದ್ಧಪಡಿಸುತ್ತಾನೆ. ಆದರೆ ಇದನ್ನು ಗಮನಿಸದ ಪತ್ನಿ ಕೋಣೆಗೆ ಬಂದವಳೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಹಾಸಿಗೆ ಎಂದು ಭಾವಿಸಿ ಅದರ ಮೇಲೆ ಮಲಗಲು ಹೋಗಿ ನೀರಿಗೆ ಬೀಳುತ್ತಾಳೆ. ಸಿಟ್ಟು ಹಾಗೂ ಗಾಬರಿಯಿಂದ ಜೋರಾಗಿ ಕಿರುಚಿಕೊಳ್ಳುವ ಆಕೆ ಮೇಲೆಳಲಾಗದೆ ಅಲ್ಲೇ ಹೊರಳಾಡುತ್ತಾಳೆ. ಗಂಡ ಮಾತ್ರ ಮನಸೊಳಗೆ ನಗುತ್ತಾನೆ.
ಈ ವಿಡಿಯೋ ನೋಡುಗರ ಮೊಗದಲ್ಲಿ ನಗು ಉಕ್ಕಿಸುತ್ತಿದ್ದು, ಮುಂದೇನಾಗಿದೆಯೋ ತಿಳಿದಿಲ್ಲ. ಈ ವಿಡಿಯೋವನ್ನು ಒಂಭತ್ತು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಲ್ಲದೇ ಎಲ್ಲರೂ ನಗುವ ಇಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಫಿಗೆನ್ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವರು ಕ್ರೂರಿ ಗಂಡ ಎಂದು ಕಾಮೆಂಟ್ ಮಾಡಿದ್ದರೆ, ಈ ರೀತಿ ಹೆಂಡತಿಗೆ ಮಾಡಲು ನಿಜವಾಗಿಯೂ ಧೈರ್ಯಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಒಬ್ಬ ಲೆಜೆಂಡರಿ ಗಂಡ ಈತ ಎಂದು ಪ್ರತಿಕ್ರಿಯಿಸಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಲಿಂಗಕಾಮಿ ಜೋಡಿ; ಮದ್ವೆ ಸಮಾರಂಭ ಹೀಗಿತ್ತು ?
ಒಟ್ಟಿನಲ್ಲಿ ಹೆಂಡತಿ ಮೇಲೆ ಹೀಗೆ ಹಾಸ್ಯಮಯವಾಗಿ ಸೇಡು ತೀರಿಸಿಕೊಳ್ಳುವುದು ಕೂಡ ಒಂದು ಕಲೆ. ಹೊಡೆದರೆ ಬಡಿದರೆ ಜೈಲು ಕಂಬಿ ಎಣಿಸುವುದು ಗ್ಯಾರಂಟಿ. ಆದರೆ ಈ ರೀತಿ ಕಿತಾಪತಿ ಮಾಡಿದರೆ ಸುಲಭವಾಗಿ ಎಸ್ಕೇಪ್ ಆಗಬಹುದು. ಕನ್ನಡದಲ್ಲಿ ಗಣೇಶ್ ಹಾಗೂ ಅಮೂಲ್ಯ ಅಭಿನಯದ ಶ್ರಾವಣಿ ಸುಬ್ರಮಣ್ಯ ಸಿನಿಮಾದಲ್ಲಿ ಶ್ರಾವಣಿ ಸುಬ್ರಮಣ್ಯನ ಕಾಟ ತಾಳಲಾರದೇ ಆತನಿಗೆ ಹಿಂದಿನಿಂದ ಸರಿಯಾಗಿ ಬೈಯುತ್ತಾಳೆ. ಆಗಲು ಸಮಾಧಾನವಾಗದದಾಗ ಆಕೆ ಆತನ ಹಲ್ಲುಜ್ಜುವ ಬ್ರಶ್ ತೆಗೆದುಕೊಂಡು ಇಡೀ ಬಾತ್‌ರೂಮ್‌ನ್ನು ಅದರಿಂದ ಉಜ್ಜಿ ಉಜ್ಜಿ ಸ್ವಚ್ಛಗೊಳಿಸುತ್ತಾಳೆ. ಒಟ್ಟಿನಲ್ಲಿ ಇದು ಸಿಟ್ಟಿಗೆದ್ದ ಆತ್ಮವನ್ನು ಸಂತೃಪ್ತಿಗೊಳಿಸುವ ಸುಲಭ ವಿಧಾನ.