ಗರ್ಲ್‌ಫ್ರೆಂಡ್‌ಗೆ ಡಿಫರೆಂಟ್‌ ಆಗಿ ಪ್ರಪೋಸ್ ಮಾಡ್ಬೇಕು ಅನ್ನೋ ಚಕ್ಕರ್‌ನಲ್ಲಿ ಆಗೋ ಅವಾಂತರ ಒಂದೆರಡಲ್ಲ. ಆದ್ರೆ ಇಲ್ಲೊಬ್ಬ ಮಾತ್ರ ತನ್ನ ಮನೆಯನ್ನೇ ಸುಟ್ಟುಕೊಂಡಿದ್ದಾನೆ. ಇದೆಂತಾ ಅವಾಂತರ..? ಇಲ್ಲಿ ಓದಿ

ಗರ್ಲ್‌ಫ್ರೆಂಡ್‌ಗೆ ಡಿಫರೆಂಟ್‌ ಆಗಿ ಪ್ರಪೋಸ್ ಮಾಡ್ಬೇಕು ಅನ್ನೋ ಚಕ್ಕರ್‌ನಲ್ಲಿ ಆಗೋ ಅವಾಂತರ ಒಂದೆರಡಲ್ಲ. ಆದ್ರೆ ಇಲ್ಲೊಬ್ಬ ಮಾತ್ರ ತನ್ನ ಮನೆಯನ್ನೇ ಸುಟ್ಟುಕೊಂಡಿದ್ದಾನೆ. ಬೇಕಿತ್ತಾ ಇದೆಲ್ಲಾ ಅಂತ ಕೇಳೋ ಹಾಗಾಗಿದೆ ಘಟನೆ.

ಮದುವೆ: ಒಂದು ಪ್ರೇಮಮಯ ಜಗತ್ತು

ಇಲ್ಲೊಬ್ಬ ಭಾರೀ ಡಿಫರೆಂಟ್‌ ಆಗಿ ಹುಡುಗಿಗೆ ಪ್ರಪೋಸ್ ಮಾಡ್ಬೇಕು ಎಂದು ಕೇಕ್ ತೆಗೆದುಕೊಂಡು ಮನೆಗೆ ಬಂದಿದ್ದ. ಆದರೆ ಹುಡುಗನ ರೊಮ್ಯಾಂಟಿಕ್ ಐಡಿಯಾ ಸುಟ್ಟು ಭಸ್ಮವಾಗಿದೆ.

ಬ್ರಿಟಿಷ್ ಯುವಕನೊಬ್ಬ ಭಾರೀ ಉತ್ಸಾಹದಲ್ಲಿ ತನ್ನದೇ ರೂಂ ಮೇಟ್‌ಗೆ ಪ್ರಪೋಸ್ ಮಾಡೋಕೆ ಎಂದು ಭಾರೀ ಕ್ಯಾಂಡಲ್‌ಗಳನ್ನು ಉರಿಸಿಟ್ಟು ರೊಮ್ಯಾಂಟಿಕ್ ಸನ್ನಿವೇಶ ಸೃಷ್ಟಿ ಮಾಡಿದ್ದ. ಅಲ್ಲಿ ನೂರಾರು ಟೀ ಲೈಟ್‌ಗಳೂ, ಬಲೂನ್‌ಗಳೂ, ವೈನ್‌ ಗ್ಲಾಸ್‌ಗಳೂ ಇದ್ದವು.

ಅರೇಂಜ್ಡ್ ಮ್ಯಾರೇಜ್‌ನ ಸಾಮಾನ್ಯ ಸಮಸ್ಯೆಗಳಿವು

ಇನ್ನೇನು ಗರ್ಲ್‌ಫ್ರೆಂಡ್‌ನ ಕರೆ ತಂದು ಪ್ರಪೋಸ್ ಮಾಡಬೇಕೆನ್ನುವಷ್ಟರಲ್ಲಿ ಕ್ಯಾಂಡಲ್ ಬೆಂಕಿ ಇಡೀ ಅಪಾರ್ಟ್‌ಮೆಂಟ್‌ಗೆ ತಗುಲಿದೆ. ಸೌತ್ ಯಾಕ್‌ಶಯರ್‌ನ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಮಿಸಿ ಬೆಂಕಿ ನಂದಿಸಲು ಯತ್ನಿಸಿದರೂ ಅಪಾರ್ಟ್‌ಮೆಂಟ್ ಆಗಲೇ ಸುಟ್ಟು ಹೋಗಿತ್ತು.

ಫೈರ್‌ ಡಿಪಾರ್ಟ್‌ಮೆಂಟ್ ಘಟನೆಯ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಇದೀಗ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.