Asianet Suvarna News Asianet Suvarna News

100 ಹುಡುಗಿಯರ ಜೊತೆ ಡೇಟ್ ಮಾಡಿದ್ರೂ `ಅದು’ ಸಿಗಲಿಲ್ಲವಂತೆ?!

ಡೇಟ್ ಮಾಡೋಕೆ ಹುಡುಗಿ ಸಿಗ್ಬಹುದು.. ಹಾಗಂತ ಸಿಕ್ಕ ಹುಡುಗಿಯರಲ್ಲ ಬಾಳ ಸಂಗಾತಿ ಆಗೋಕೆ ಸೂಕ್ತವಾಗಿರೋದಿಲ್ಲ. ಎಲ್ಲರಲ್ಲೂ ಗುಣ ವ್ಯತ್ಯಾಸಗಳಿರುವ ಕಾರಣ ಈ ಹುಡುಗನಿಗೆ ಹುಡುಗಿ ಹುಡುಕೋದೆ ತಲೆಬಿಸಿ ಆಗಿದೆ. 
 

Man Has Date Fifty States Hundred Girls But Not Found True Love  roo
Author
First Published Sep 11, 2023, 3:46 PM IST

ನಿಜವಾದ ಪ್ರೀತಿ ಸಿಗೋದು ಸುಲಭವಲ್ಲ. ಕೆಲ ಅದೃಷ್ಟವಂತರಿಗೆ ಮಾತ್ರ ಮೊದಲ ಡೇಟ್ ನಲ್ಲೇ ಪ್ರೀತಿ ಸಿಕ್ಕಿರುತ್ತೆ. ಬಹುತೇಕರು ಮೂರ್ನಾಲ್ಕು ಹುಡುಗ –ಹುಡುಗಿ ಜೊತೆ ಡೇಟಿಂಗ್ ಮಾಡಿದ್ಮೇಲೆ ತಮ್ಮನ್ನು ಪ್ರೀತಿಸುವ ವ್ಯಕ್ತಿಯನ್ನು ಬಾಳ ಸಂಗಾತಿಯಾಗಿ ಪಡೆಯುತ್ತಾರೆ. ಪ್ರೀತಿ – ಆಕರ್ಷಣೆ ಮಧ್ಯೆ ಅಂತರ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಆಕರ್ಷಣೆಗೊಳಗಾಗಿ ಅದೇ ಪ್ರೀತಿಯೆಂದು ನಂಬಿ ಅವರ ಜೊತೆ ಜೀವನ ನಡೆಸುತ್ತೇನೆಂದು ಹೋದ ಅನೇಕರು ತಮ್ಮ ಬಾಳು ಹಾಳು ಮಾಡಿಕೊಂಡಿದ್ದಾರೆ. ಪರಸ್ಪರ ಸುತ್ತಾಡೋದು, ಸಿನಿಮಾ, ಮಾಲ್, ಪಾರ್ಕ್ ಅಂತಾ ಕೈ ಕೈ ಹಿಡಿದು ನಡೆಯೋದು, ಒಂದಿಷ್ಟು ಶಾಪಿಂಗ್, ಒಂದಿಷ್ಟು ಟಾಕಿಂಗ್ ಎಂದಿಗೂ ಪ್ರೀತಿಯಾಗಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಸದಾ ನಮ್ಮ ಜೊತೆಗಿರಬಲ್ಲ, ನಮ್ಮ ಜೀವನದಲ್ಲಿ ಸುಖ ತರಬಲ್ಲ, ಕಷ್ಟ- ಸುಖವನ್ನು ಹಂಚಿ ನಡೆಯಬಲ್ಲ ಎಂಬುದು ಅಂತರಾಳದಿಂದ ಬರಬೇಕು. ಎರಡು ದೇಹ ಮಾತ್ರವಲ್ಲ ಮನಸ್ಸು ಒಂದಾದ ಭಾವನೆ ಮೂಡಬೇಕು. ಅವರಿಲ್ಲದೆ ನಾವಿಲ್ಲ ಎಂದು ಮನಸ್ಸು ಒತ್ತಿ ಒತ್ತಿ ಹೇಳಬೇಕು. ಆಗ್ಲೇ ನಿಮಗೆ ನಿಜ ಪ್ರೀತಿ ಧಕ್ಕಿದೆ ಎಂದರ್ಥ. 

ನಿಜ ಪ್ರೀತಿ (Love) ಹುಡುಕಾಟಕ್ಕೆ ಸಾಕಷ್ಟು ಪ್ರಯತ್ನಪಡಬೇಕು. ಅದಕ್ಕೆ ಈ ಹುಡುಗ ಸಾಕ್ಷಿ ಎನ್ನಬಹುದು. ಈಗಿನ ದಿನಗಳಲ್ಲಿ ಡೇಟಿಂಗ್ (Dating ) ಸಾಮಾನ್ಯವಾಗಿರುವ ಕಾರಣ ಮೊದಲು ಭೇಟಿ, ಮಾತುಕತೆ..ಇಷ್ಟವಾದ್ರೆ ಮದುವೆ ಎನ್ನುವ ರೂಲ್ಸ್ ಇದೆ. ಅದಕ್ಕೆ ಜನರು ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ (Application) ಮೊರ ಹೋಗೋದಿದೆ. ಅಲ್ಲಿ ನಾಲ್ಕೈದು ಹುಡುಗಿಯರ ಜೊತೆ ಡೇಟ್ ಮಾಡಿ ಒಬ್ಬರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡೋರನ್ನು ನೀವು ನೋಡಿಬಹುದು. ಆದ್ರೆ ಈ ಹುಡುಗ ಹತ್ತಿಪ್ಪತ್ತಲ್ಲ ಬರೋಬ್ಬರಿ 100 ಹುಡುಗಿಯರ ಜೊತೆ  ಡೇಟ್ ಮಾಡಿದ್ದಾನೆ. ಆದ್ರೂ ಈತನಿಗೆ ನಿಜವಾದ ಪ್ರೀತಿ ಸಿಕ್ಕಿಲ್ಲ. ಅಚ್ಚರಿ ಎನ್ನಿಸಿದ್ರೂ ಇದು ಸತ್ಯ. 

ಸೆಕ್ಸ್ ವೇಳೆ ಸಂಗಾತಿಯ ಪರಚೋದೂ ಒಂದು ಕಲೆಯಂತೆ! ವಾತ್ಸಾಯನ ಏನ್ ಹೇಳ್ತಾನೆ ನೋಡಿ

ಅಮೆರಿಕ (America) ದ ಮೊಂಟಾನಾ ನಿವಾಸಿ ಮ್ಯಾಥ್ಯೂ ವಾರಿಂಗ್‌ಗೆ ಎಷ್ಟೇ ಪ್ರಯತ್ನಿಸಿದ್ರೂ ಪರಿಪೂರ್ಣ ಜೀವನ ಸಂಗಾತಿ ಸಿಗುತ್ತಿಲ್ಲ. ಈತ  ಅಮೆರಿಕದ 50 ರಾಜ್ಯಗಳ 100ಕ್ಕೂ ಹೆಚ್ಚು ಹುಡುಗಿಯರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಅದರ ನಂತರವೂ ಅವನಿಗೆ ನಿಜವಾದ ಪ್ರೀತಿ ಧಕ್ಕಿಲ್ಲ. 

ಕೊರೊನಾ ಸಮಯದಲ್ಲಿ ಶುರುವಾಯ್ತು ಡೇಟಿಂಗ್ : ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿದ್ದ ಮ್ಯಾಥ್ಯೂಗೆ ಮನೆಯಲ್ಲಿ ಬೋರ್ ಆಗ್ತಿತ್ತಂತೆ. ಅದಕ್ಕಾಗಿ ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿದ್ದಾನೆ. ಅಲ್ಲಿಂದ ಈತನ ಡೇಟಿಂಗ್ ಶುರುವಾಗಿದೆ. ಅಮೆರಿಕಾದ 50 ನಗರಗಳ 100 ಹುಡುಗಿಯರ ಜೊತೆ ನಾನು ಡೇಟ್ ಮಾಡಿದ್ದೇನೆ. ಆದ್ರೂ  ಬ್ಯಾಚುಲರ್ ಆಗಿ ಉಳಿದಿದ್ದೇನೆ ಎನ್ನುತ್ತಾರೆ ಮ್ಯಾಥ್ಯೂ.  

ರುಕ್ಮಿಣಿ ವಸಂತ್‌ ಎಂಗೇಜ್ಡ್, ಮತ್ತೆ ಯಾಮಾರ್ಬೇಡ ಗುರೂ! ರಕ್ಷಿತ್‌ಗೆ ಫ್ಯಾನ್ಸ್ ಎಚ್ಚರಿಸಿದ ರುಕ್ಮಿಣಿ ಬಾಯ್‌ಫ್ರೆಂಡ್?

ಪರಿಪೂರ್ಣ ಸಂಗಾತಿ ಹುಡುಕಾಟಕ್ಕಾಗಿ ಈ ಎಲ್ಲ ಕೆಲಸ ಮಾಡಿದ ಮ್ಯಾಥ್ಯೂ : ಮ್ಯಾಥ್ಯೂ ಬರೀ ಆನ್ಲೈನ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿ ಅದ್ರಲ್ಲಿ ಹುಡುಗಿಯರ ಹುಡುಕಾಟ ನಡೆಸಿಲ್ಲ. ಹುಡುಗಿಯರ ಜೊತೆ ಸುತ್ತಾಡಿದ್ದಾರೆ. ಅವರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಹೆಲಿಕಾಪ್ಟರ್ ರೈಡ್, ಕುದುರೆ ಸವಾರಿ, ಏರ್ ಬೋಟಿಂಗ್ ಸೇರಿದಂತೆ ಕೆಲ ಸಾಹಸವನ್ನೂ ಮಾಡಿದ್ದಾರೆ. ಅನೇಕ ಹುಡುಗಿಯರು ಮ್ಯಾಥ್ಯೂ ಜೊತೆ ಮಾತುಕತೆ ನಡೆಸಿದ್ದರಂತೆ. ಕೆಲ ಹುಡುಗಿಯರ ಮಾತುಕಥೆ ವಿಚಿತ್ರವಾಗಿತ್ತು ಎನ್ನುತ್ತಾರೆ ಮ್ಯಾಥ್ಯೂ. ಇವರ ಜೊತೆ ಮಾತನಾಡಲು ಬಂದ ಹುಡುಗಿಯರು, ಕೆಲಸಕ್ಕೆ ಇಂಟರ್ವ್ಯೂ ನೀಡಲು ಬಂದಾಗ ಮಾತನಾಡುವಂತೆ ಮಾತನಾಡ್ತಿದ್ದರಂತೆ. ಮ್ಯಾಥ್ಯೂ ಅಮೆರಿಕಾದ ಅಲಾಸ್ಕಾ ಮತ್ತು ಹವಾಯಿಗೆ ಮಾತ್ರ ಇನ್ನೂ ಹೋಗಿಲ್ಲ. ಉಳಿದೆಲ್ಲ ಪ್ರದೇಶಗಳನ್ನು ಸುತ್ತಾಡಿದ್ದಾರೆ. ಪರ್ಫೆಕ್ಟ್ ಸಂಗಾತಿಗಾಗಿ ಹುಡುಕಾಟ ನಡೆಸಿದ್ದಾರೆ. 

Follow Us:
Download App:
  • android
  • ios