Asianet Suvarna News Asianet Suvarna News

ರುಕ್ಮಿಣಿ ವಸಂತ್‌ ಎಂಗೇಜ್ಡ್, ಮತ್ತೆ ಯಾಮಾರ್ಬೇಡ ಗುರೂ; ರಕ್ಷಿತ್‌ ಶೆಟ್ಟಿಗೆ ಎಚ್ಚರಿಸಿದ ಫ್ಯಾನ್ಸ್‌!

ಸಪ್ತಸಾಗರದಾಚೆ ಎಲ್ಲೋ ಸಿನಿಮಾ ನಂತರ ಎಲ್ರೂ ರಕ್ಷಿತ್, ರುಕ್ಮಿಣಿ ಕ್ಯೂಟ್ ಕಪಲ್ ಬಗ್ಗೆ ಮಾತಾಡೋರೆ. ಆದರೇನು ಮಾಡಾಣ, ರುಕ್ಮಿಣಿಗೆ ಈಗಾಗ್ಲೇ ಬಾಯ್ ಫ್ರೆಂಡ್ ಇದ್ದಾರಂತೆ, ಯಾರದು?

 

Rumours about sapta sagaradache ello  actress Rukmini Vasanth boyfriend bni
Author
First Published Sep 11, 2023, 11:04 AM IST

ಸಪ್ತಸಾಗರದಾಚೆ ಎಲ್ಲೋ ಸೈಡ್ 1 ಬಂದ ಮೇಲೆ ರುಕ್ಮಿಣಿ ವಸಂತ್ ಅನ್ನೋ ನ್ಯಾಚುರಲ್ ಬ್ಯೂಟಿ ಕರ್ನಾಟಕದ ಮನೆಮಾತಾಗಿಬಿಟ್ಟಿದ್ದಾರೆ. ಆಕೆ ಎಲ್ಲೇ ಓಡಾಡ್ಲಿ ಎಲ್ಲರೂ ಪುಟ್ಟಿ ಅಂತ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಪಾತ್ರ ಮೂಲಕ ಕೂಗಿ ಕರೀತಾರೆ. ಆದರೆ ಈಗ ಸೋಷಿಯಲ್ ಮೀಡಿಯಾದಲ್ಲೆಲ್ಲ ಈಕೆಯ ಬಾಯ್‌ ಫ್ರೆಂಡ್‌ದೇ ಸುದ್ದಿ. ಎಸ್‌ಎಸ್‌ಇ ನಲ್ಲಿ ರಕ್ಷಿತ್ ಜೊತೆ ಅಷ್ಟು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ರಲ್ಲಾ, ಸೋ ರಕ್ಷಿತ್‌ ಇರಬೇಕು ಬಾಯ್‌ಫ್ರೆಂಡ್ ಅಂತ ಬಹಳ ಮಂದಿ ಅಂದುಕೊಂಡಿದ್ದರು. ಆದರೆ ಈಗ ಅವರಿಗೆ ಮತ್ತೊಬ್ಬರು ಬಾಯ್‌ಫ್ರೆಂಡ್ ಇದ್ದಾರೆ ಅನ್ನೋದನ್ನು ಸೋಷಿಯಲ್ ಮೀಡಿಯಾ ಮಂದಿ ಭೂತಗನ್ನಡಿಯಲ್ಲಿ ಹುಡುಕಿದ್ದಾರೆ. ಅಷ್ಟಕ್ಕೂ ಈಕೆಯ ಬಾಯ್‌ಫ್ರೆಂಡ್ ಯಾರು, ಆತ ಮತ್ತು ಈಕೆಯ ನಡುವೆ ಏನ್ ರಿಲೇಶನ್‌ಶಿಪ್ ಇದೆ ಅನ್ನೋದಕ್ಕೂ ಉತ್ತರ ಸಿಕ್ಕಿದೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ತನ್ನ ಮುಗ್ದ ಪ್ರೀತಿ ಹಾಗೂ ಅದ್ಭುತ ಅಭಿನಯದಿಂದ ರುಕ್ಮಿಣಿ ವಸಂತ್ ಅಭಿಮಾನಿಗಳ ಮನಗೆದ್ದಿದ್ದಾರೆ. ಈ ಮೂಲಕ ನಟಿ ರುಕ್ಮಿಣಿ ಇದೀಗ ಕರುನಾಡ ಕ್ರಶ್ (Karnataka Crush) ಆಗಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅಭಿನಯಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಜೋಡಿ ಮೋಡಿ ಮಾಡುತ್ತಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಜೋಡಿ ಸಿಕ್ಕಂತಾಗಿದೆ.

ಶಾರ್ಟ್‌ ಸ್ಕರ್ಟ್ ಹಾಕ್ಕೊಂಡು ಹುಡುಗರ ಹಾರ್ಟ್‌ಬೀಟ್ ಹೆಚ್ಚಿಸಿದ ಸೋನುಗೌಡ, ಬೋಲ್ಡ್‌ ಫೋಟೋಸ್‌ ವೈರಲ್

ಈ ನಡುವೆ ನಟಿ ರುಕ್ಮಿಣಿ ವಸಂತ್ ಬಾಯ್‌ಫ್ರೆಂಡ್ ಜೊತೆಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿದೆ. ರುಕ್ಮಿಣಿ ವಸಂತ್ ಜೊತೆಗಿರುವ ಈ ಸ್ಮಾರ್ಟ್ ಹುಡುಗ ಯಾರು ಎಂದು ನೆಟ್ಟಿಗರು ಕೇಳ್ತಿದ್ದಾರೆ. ಅಷ್ಟೇ ಅಲ್ಲದೇ ಫೋಟೋದಲ್ಲಿ ರುಕ್ಮಿಣಿ ಹುಡುಗನ ಕೈ ಹಿಡಿದುಕೊಂಡು ತುಂಬಾ ಕ್ಲೋಸ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದು, ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ. ನಟಿ ಈ ಜೋಡಿ ಫೋಟೋ ಇದೀಗ ಸಖತ್ ಟ್ರೋಲ್ (Troll)  ಆಗಿದೆ. ನಟಿ ರುಕ್ಮಿಣಿ ವಸಂತ್ ಈ ಫೋಟೋಗೆ ಕಮೆಂಟ್ ಕೂಡ ಮಾಡಿದ್ದಾರೆ. ಐ ಲವ್ ಯೂ (I love you) ಎಂದು ನಟಿ ಕಮೆಂಟ್ ಮಾಡಿದ್ದು, ರುಕ್ಮಿಣಿ ಜೊತೆಗಿರುವುದು ಆಕೆಯ ಬಾಯ್ ಫ್ರೆಂಡ್ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.

ಹುಡುಗನ ಜೊತೆಗಿರುವ ರುಕ್ಮಿಣಿ ಫೋಟೋ ನೋಡಿದ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಶಾಕ್ ಆಗಿದ್ದು, ಯಾಕೆ ಪ್ರಿಯಾ ಮನುಗೆ ಮೋಸ ಮಾಡ್ತೀಯಾ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ರಕ್ಷಿತ್ ಹಾಗೂ ರುಕ್ಮಿಣಿ ಜೋಡಿಯೇ ಚೆಂದ ಎಂದಿದ್ದಾರೆ.

ಸ್ಯಾಂಡಲ್​​ವುಡ್​ಗೆ ಚಂದದ ಹುಡುಗಿ ರುಕ್ಮಿಣಿ ವಸಂತ್ ಎಂಟ್ರಿ ಕೊಟ್ಟಾಗಿದೆ. ಮೊದಲ ಸಿನಿಮಾ ಬೀರ್​ಬಲ್ ಚಿತ್ರದಲ್ಲಿ ಗಮನ ಸೆಳೆದ ರುಕ್ಮಿಣಿ ಸಾಲು ಸಾಲು ಸಿನಿಮಾ (cinema) ಒಪ್ಪಿದ್ದಾರೆ. ಲಂಡನ್​​ನ ರಾಯಲ್ ಅಕಾಡೆಮಿ ಆಫ್ ಡ್ರಾಮ್ಯಾಟಿಕ್ ಆರ್ಟ್ಸ್ ನಲ್ಲಿ ಅಭ್ಯಾಸ ಮಾಡಿರೋ ರುಕ್ಮಿಣಿ ಕನ್ನಡದ ಟಾಪ್ ಸ್ಟಾರ್​​ಗಳ ಚಿತ್ರಗಳನ್ನ ನಟಿಸುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನದಾರಿಯಲ್ಲಿ ಸಿನಿಮಾದಲ್ಲೂ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ಈ ಚಿತ್ರ ಕೂಡ ಈಗ ರಿಲೀಸ್​​ಗ ರೆಡಿ ಇದೆ. ರುಕ್ಮಿಣಿ ವಸಂತ್ ಬೆಂಗಳೂರು ಮೂಲದವರೆ ಆಗಿದ್ದಾರೆ. ಆದರೆ ಆರ್ಮಿ ಸ್ಕೂಲ್​ಲ್ಲಿ ಓದಿರೋದು ವಿಶೇಷ. ತಂದೆ ವಸಂತ್ ವೇಣುಗೋಪಾಲ್ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿ ಉರಿ ದಾಳಿಯಲ್ಲಿ ಹುತಾತ್ಮರಾದವರು. ಕರ್ನಾಟಕದ ಮೊದಲ ಪರಮವೀರ ಚಕ್ರ ಪಡೆದ ಹೆಗ್ಗಳಿಕೆ ಇವರದು.

ಕಡಲ ಕಿನಾರೆಯಲ್ಲಿ ಮಕ್ಕಳೊಂದಿಗೆ ಎಂಜಾಯ್‌ ಮಾಡ್ತಿರೋ ರಾಕಿಂಗ್‌ ಸ್ಟಾರ್‌ ಯಶ್‌ ದಂಪತಿ

ಒಂದು ಕಡೆ ರಕ್ಷಿತ್ ಹಾಗೂ ರುಕ್ಮಿಣಿ ಸಂದರ್ಶನಗಳಲ್ಲಿ ಸಖತ್ ಕ್ಲೋಸ್ ಆಗಿರುವ ಫೋಟೋಗಳು ವೈರಲ್ (viral) ಆಗ್ತಿದ್ರೆ ಇನ್ನೊಂದು ಕಡೆ ಈ ಬಾಯ್‌ಫ್ರೆಂಡ್ ಸಂಗತಿಯೂ ಎಲ್ಲೆಡೆ ಹಬ್ಬುತ್ತಿದೆ. ರಕ್ಷಿತ್ ಶೆಟ್ಟಿ ರುಕ್ಮಿಣಿ ಜೊತೆಗೆ ಕ್ಲೋಸ್ ಆಗಿರೋದನ್ನು ನೋಡಿ ಅವರ ಫ್ಯಾನ್ಸ್, 'ಮತ್ತೆ ಯಾಮಾರ್ಬೇಡ ಗುರೂ, ಅವಳಾಗ್ಲೇ ಎಂಗೇಜ್ಡ್' ಅಂತ ಎಚ್ಚರಿಕೆ ನೀಡ್ತಿದ್ದಾರೆ.

ಆದರೆ, ಆ ಹುಡುಗ ರುಕ್ಮಿಣಿ ಕಸಿನ್ ಅಂತಿದ್ದಾರೆ. ಆ ಹುಡುಗನ ಬಗ್ಗೆ ಹೆಚ್ಚಿನ ವಿವರ ಲಭ್ಯವಿಲ್ಲ. 

 

 

 
 
 
 
 
 
 
 
 
 
 
 
 
 
 

A post shared by Madhu (@dhruvathaare)

Follow Us:
Download App:
  • android
  • ios