Asianet Suvarna News Asianet Suvarna News

ಸೆಕ್ಸ್ ವೇಳೆ ಸಂಗಾತಿಯ ಪರಚೋದೂ ಒಂದು ಕಲೆಯಂತೆ! ವಾತ್ಸಾಯನ ಏನ್ ಹೇಳ್ತಾನೆ ನೋಡಿ

ಸೆಕ್ಸ್‌ನಲ್ಲಿ ತೊಡಗಿದ ಸಂಗಾತಿ ಭಾವೋದ್ರೇಕವು ತೀವ್ರಗೊಂಡಾಗ, ಅಪ್ಪಿಕೊಂಡ ದೇಹದ ಮೇಲೆ ಉಗುರುಗಳನ್ನು ಒತ್ತುವುದು ಅಥವಾ ಅವುಗಳನ್ನು ಪರಚುವುದು ಸಾಮಾನ್ಯ. ಕಾಮಸೂತ್ರದಲ್ಲಿ ಈ ನಖಕ್ಷತದ ಬಗ್ಗೆ ವಾತ್ಸ್ಯಾಯನ ಉಲ್ಲೇಖಿಸಿರುವ ಕೆಲವು ರೋಚಕ ಅಂಶಗಳು ಇಲ್ಲಿವೆ.

Exploring Ancient Art of Foreplay Insights from Kama Sutra of Vatsyayana  bni
Author
First Published Sep 11, 2023, 12:03 PM IST

ಲೈಂಗಿಕ ಕ್ರಿಯೆಯ ಸಮಯದಲ್ಲಿ ಪ್ರೇಮಿಯ ಮೈಮೇಲೆ ತುಸುವೇ ಪರಚಿ ಕಲೆ ಮಾಡುವ ಅಭ್ಯಾಸ ಕೆಲವರಿಗೆ ಇರುತ್ತೆ. ಇದನ್ನು ಸರಿಯಾಗಿ ಬಳಸಿಕೊಂಡರೆ ನೋವಿಗಿಂತಲೂ ಹೆಚ್ಚು ಆನಂದದಾಯಕವಾಗಿರುತ್ತದೆ. ಪ್ರಾಚೀನ ಗ್ರಂಥ ಕಾಮಸೂತ್ರವನ್ನು ಬರೆದ ವಾತ್ಸ್ಯಾಯನ, ಈ ಪರಚುವಿಕೆಯನ್ನು ಒಂದು ಕಲೆಯ ಎತ್ತರಕ್ಕೆ ಒಯ್ಯುತ್ತಾನೆ. ಇದನ್ನು ಅವನು ನಖಕ್ಷತ ಎಂದು ಕರೆಯುತ್ತಾನೆ. ಸೆಕ್ಸ್‌ನಲ್ಲಿ ತೊಡಗಿದ ಸಂಗಾತಿ ಭಾವೋದ್ರೇಕವು ತೀವ್ರಗೊಂಡಾಗ, ಅಪ್ಪಿಕೊಂಡ ದೇಹದ ಮೇಲೆ ಉಗುರುಗಳನ್ನು ಒತ್ತುವುದು ಅಥವಾ ಅವುಗಳನ್ನು ಪರಚುವುದು ಸಾಮಾನ್ಯ. ಆದರೆ ವಾತ್ಸಾಯನನ ಪ್ರಕಾರ ಅದಕ್ಕೂ ಕೆಲವು ಮಾದರಿ, ರೀತಿ ಇದೆ. ಕಾಮಸೂತ್ರದಲ್ಲಿ ಈ ನಖಕ್ಷತದ ಬಗ್ಗೆ ವಾತ್ಸ್ಯಾಯನ ಉಲ್ಲೇಖಿಸಿರುವ ಕೆಲವು ರೋಚಕ ಅಂಶಗಳು ಇಲ್ಲಿವೆ.

1. ಇದಕ್ಕೆ ಕೆಲವು ಷರತ್ತುಗಳಿವೆ
ಗುರು ವಾತ್ಸ್ಯಾಯನನ ಪ್ರಕಾರ, ನಿಮ್ಮ ಪ್ರೇಮಿಯ ಮೇಲೆ ಉಗುರುಗಳಿಂದ ಗುರುತು ಮಾಡುವುದು ನೀವು ಮೊದಲ ಬಾರಿಗೆ ಒಟ್ಟಿಗೆ ಇರುವಾಗ, ಪ್ರಯಾಣದಿಂದ ಹಿಂದಿರುಗಿದಾಗ, ಕೋಪಗೊಂಡಾಗ ಅಥವಾ ಮದ್ಯ ಸೇವಿಸಿದ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ. 

Kisses in Kamasutra: ಆಹಾ, ಎಂಥೆಂಥಾ ಚುಂಬನ! ಕಾಮಸೂತ್ರ ವರ್ಣಿಸುವ ಬಗೆ ಬಗೆ ಕಿಸ್!

2. ಇದು ಎಲ್ಲರಿಗೂ ಅಥವಾ ಎಲ್ಲಾ ಸಂದರ್ಭಗಳಲ್ಲಿ ಅಲ್ಲ
ಲೈಂಗಿಕ ಸಮಯದಲ್ಲಿ ಪರಚುವಿಕೆ ಎಲ್ಲರಿಗೂ ಸಲ್ಲದು. ಕಾಮಸೂತ್ರದ ಪ್ರಕಾರ ವಿಶೇಷ ಸಂದರ್ಭಗಳಲ್ಲಿ ಮಾತ್ರ ಇದನ್ನು ಬಳಸಲಾಗುತ್ತದೆ. ತೀವ್ರವಾದ ಲೈಂಗಿಕ ಶಕ್ತಿಯಿಲ್ಲದವರು ಮತ್ತು ಅದನ್ನು ತಾಳಿಕೊಳ್ಳಲು ಸಾಧ್ಯವಿಲ್ಲದ ಸಂಗಾತಿಗಳಿಗೆ ನಖಕ್ಷತ ಮಾಡಬಾರದು. ನಖಕ್ಷತ ಮಾಡುವುದು ಲೈಂಗಿಕ ಉದ್ರೇಕವನ್ನು ಹೆಚ್ಚಿಸಬೇಕೇ ಹೊರತು ತಗ್ಗಿಸುವಂತೆ ಆಗಬಾರದು. ಸಂಗಾತಿ ನೋವಿನಿಂದ ಪ್ರಣಯದಿಂದ ವಿಮುಖವಾಗುವಂತೆ ಆಗಬಾರದು ಎಂದು ವಾತ್ಸ್ಯಾಯನ ಹೇಳುತ್ತಾರೆ.

3. ಉಗುರು ಗುರುತುಗಳಲ್ಲಿ ಎಂಟು ವಿಧ
ಲೈಂಗಿಕತೆಯ ಸಮಯದಲ್ಲಿ ಉಗುರು ಗುರುತುಗಳನ್ನು ಅವುಗಳ ಆಕಾರಗಳ ಆಧಾರದ ಮೇಲೆ ಎಂಟು ವಿಧವಾಗಿ ವರ್ಗೀಕರಿಸಬಹುದು: ಅರ್ಧ ಚಂದ್ರ, ವೃತ್ತ, ರೇಖೆ, ಹುಲಿಯ ಉಗುರು, ನವಿಲಿನ ಕಾಲು, ಮೊಲದ ಕುಣಿತ ಮತ್ತು ಕಮಲದ ಎಲೆ.

4. ಎಲ್ಲಿ ಮಾಡಬೇಕು? ಎಲ್ಲಿ ಮಾಡಬಾರದು? 
ಮಿಲನದ ಸಮಯದಲ್ಲಿ ಪ್ರೇಮಿಗಳು ಏನೇನು ಮಾಡುತ್ತಾರೋ ಹೇಳಲು ಸಾಧ್ಯವಿಲ್ಲ. ಅಂದರೆ ಎಲ್ಲಿ ಉಗುರಿನ ಗುರುತು ಮಾಡುತ್ತಾರೋ ಗೊತ್ತಾಗಲೂ ಸಾಧ್ಯವಿಲ್ಲ. ಆದರೆ ಕೆಲವು ಕಡೆ ಕೊಂಚ ಹುಷಾರಾಗಿರಬೇಕು. ಉದಾಹರಣೆಗೆ ನಿಮ್ಮ ಪ್ರೇಮಿಯ ಕಣ್ಣುಗಳ ಹತ್ತಿರ ಅಥವಾ ಅಂಥ ಬೇರೆ ಸೂಕ್ಷ್ಮ ಸ್ಥಳಗಳಲ್ಲಿ ಉಗುರು ತಾಗಿಸಬಾರದು. ಕಂಕುಳು, ಸ್ತನಗಳು, ಗಂಟಲು, ಬೆನ್ನು, ಜನನಾಂಗದ ಪ್ರದೇಶ ಮತ್ತು ತೊಡೆಗಳು ಪರಚಿದ ಗುರುತು ಮಾಡಲು ಅಗ್ರಸ್ಥಾನಗಳು! ಆದರೆ ಎಚ್ಚರಿಕೆಯಿರಲಿ. ಸ್ತನ ತೊಟ್ಟುಗಳು, ಯೋನಿಯ ಒಳಭಾಗ, ಶಿಶ್ನದ ತುದಿ ಉಗುರು ತಾಗಿಸಲು ಸರಿಯಾದ ಜಾಗವಲ್ಲ. 

5. ನಿಮ್ಮ ಉಗುರುಗಳನ್ನು ಚೂಪಾಗಿಸಿ
ನಿಮ್ಮ ಉಗುರುಗಳು ಚೂಪಾಗಿದ್ದಷ್ಟೂ ಈ ಕದನಕಲೆಗೆ ಹೆಚ್ಚು ಅಂಕ. ತೀವ್ರವಾದ ಲೈಂಗಿಕ ಶಕ್ತಿಯುಳ್ಳವರು ತಮ್ಮ ಎಡಗೈಯ ಉಗುರುಗಳನ್ನು 2-3 ಸ್ಥಳಗಳಲ್ಲಿ ಹರಿತಗೊಳಿಸುವಂತೆ ವಾತ್ಸ್ಯಾಯನ ಶಿಫಾರಸು ಮಾಡುತ್ತಾನೆ. ಸಂಗಾತಿಯ ಉಗುರಿನ ಹರಿತದ ಬಗ್ಗೆ ನಿಮಗಿಬ್ಬರಿಗೂ ಗೊತ್ತಿರಲಿ. ಆಗ ಪ್ರಣಯಕ್ಕೆ ಒಂದು ಆತಂಕಭರಿತವಾದ ಉನ್ಮಾದ ಬರುತ್ತದೆ. 

Vatsayana Kamasutra: ಹೆಣ್ಣನ್ನು ವರ್ಗೀಕರಿಸಿದ್ದು ಬುದ್ಧಿಯಿಂದಲೋ, ಬ್ಯೂಟಿಯಿಂದಲೋ?

6. ಉಗುರಿನ ಆರೋಗ್ಯ ಮುಖ್ಯ
ಉತ್ತಮ, ಆರೋಗ್ಯಕರ ಉಗುರುಗಳು ಇರಬೇಕು. ಇದು ಸಮ, ಸ್ವಚ್ಛ, ಸ್ಪಷ್ಟ, ಮುರಿಯದ, ಚೆನ್ನಾಗಿ ಬೆಳೆದ, ಮೃದು ಮತ್ತು ಹೊಳಪಾಗಿರಬೇಕು. ಪುರುಷರು ತಮ್ಮ ಉಗುರುಗಳಿಗೆ ವಿಶೇಷ ಗಮನ ನೀಡಬೇಕು. ಏಕೆಂದರೆ ಇದು ಮಹಿಳೆಯರ ಗಮನವನ್ನು ಸೆಳೆಯುತ್ತದೆ.

7. ನೀವು ಪ್ರಯಾಣಕ್ಕೆ ಹೊರಡುವ ಮೊದಲು ಸಂಗಾತಿಯನ್ನು ಪರಚಿ! 
ನಿಮ್ಮನ್ನು ನೆನಪಿಟ್ಟುಕೊಳ್ಳಲು ಆಕೆಗೆ ಏನನ್ನಾದರೂ ನೀಡಲು ಬಯಸುವಿರಾ? ವಾತ್ಸ್ಯಾಯನನು ಹೇಳುವ ಪ್ರಕಾರ, ಪ್ರಯಾಣಕ್ಕೆ ಹೊರಡುವ ಪುರುಷನು ತನ್ನ ಪ್ರೇಮಿಯ ತೊಡೆಯ ಮೇಲೆ ಮತ್ತು ಲೈಂಗಿಕ ಸಮಯದಲ್ಲಿ ಅವಳ ಸ್ತನದ ಮೇಲ್ಭಾಗದಲ್ಲಿ ಮೂರು ಅಥವಾ ನಾಲ್ಕು ಉಗುರಿನ ಗೆರೆಗಳನ್ನು ಬಿಡಬೇಕು. ಇದು ದೂರದಲ್ಲಿರುವ ಅವನ ಬಗ್ಗೆ ಅವಳು ಸದಾ ಕಾತರಳಾಗಿರುವಂತೆ ಮಾಡುತ್ತದೆ.

Kamasutra Tips: ಲಿಂಗದ ಗಾತ್ರಕ್ಕನುಸಾರ ಪುರುಷರಲ್ಲಿ ವೈವಿಧ್ಯ- ವಾತ್ಸಾಯನ ಹೇಳ್ತಾನೆ ಬಗೆಬಗೆ!

Follow Us:
Download App:
  • android
  • ios