ಕನ್ಯತ್ವ ಇಟ್ಕೊಂಡೇ ಸಾಯ್ತಿದ್ಲು, ಅವಳ ಕಡೆ ಆಸೆ ಕೇಳಿ ಇವನು ದಂಗು!

ಆಪ್ತರು, ಸ್ನೇಹಿತರ ಸಾವನ್ನು ಮರೆಯಲು ಸಾಧ್ಯವಿಲ್ಲ. ಹಾಗೆ ಅವರು ಕೊನೆ ದಿನಗಳನ್ನು ಕಳೆಯುತ್ತಿದ್ದಾರೆ ಎಂಬ ಸತ್ಯ ಗೊತ್ತಾದಾಗ ಅವರ ಆಸೆ ಈಡೇರಿಸಲು ಎಲ್ಲರೂ ಪ್ರಯತ್ನ ನಡೆಸ್ತಾರೆ. ಈ ವ್ಯಕ್ತಿ ಕೂಡ ತನ್ನ ಸ್ನೇಹಿತೆ ಕೊನೆ ಆಸೆ ಈಡೇರಿಸಿದ್ದಾನೆ. ಅದೇನು ಅನ್ನೋದರ ವಿವರ ಇಲ್ಲಿದೆ.
 

Man Fulfills Dying Girl Friend Wish Who Was Virgin

ಆಸೆಗೆ ಮಿತಿಯಿಲ್ಲ. ಕೆಲವು ಆಸೆಗಳು ನಮ್ಮ ಗಡಿ ತಾಟಿರುತ್ತವೆ. ಆದ್ರೆ ಆಸೆಗಳಿಲ್ಲದೆ ಬದುಕುವುದು ಕಷ್ಟ. ಆಸೆ – ಆಕಾಂಕ್ಷೆಗಳೇ ನಮ್ಮನ್ನು ಸಾಧನೆ ಹಾದಿಗೆ ಕರೆದುಕೊಂಡು ಹೋಗುತ್ತದೆ. ನಮ್ಮ ಆಸೆ ಬೇರೆಯವರಿಗೆ ವಿಚಿತ್ರವೆನ್ನಿಸಬಹುದು. ನಮ್ಮ ಆಸೆಗೆ ಅವರಿಗೆ ಮಹತ್ವವೆನ್ನಿಸದೆ ಇರಬಹುದು. ಮನುಷ್ಯ, ಕೊನೆ ಕ್ಷಣವನ್ನು ಎದುರಿಸುತ್ತಿರುವಾಗ ಆತನ ಆಸೆ ಮಹತ್ವ ಪಡೆಯುತ್ತದೆ. ಜೀವನದ ಕೊನೆ ದಿನಗಳನ್ನು ಎಣೆಸುತ್ತಿರುವ ವ್ಯಕ್ತಿ, ಏನು ಆಸೆ ಪಟ್ಟರೂ ಕುಟುಂಬಸ್ಥರು, ಆಪ್ತರು ಅದನ್ನು ಈಡೇರಿಸುವ ಪ್ರಯತ್ನ ಮಾಡ್ತಾರೆ. ಪೂರ್ಣ ಪ್ರಮಾಣದಲ್ಲಿ ಬಯಕೆ ಈಡೇರಿಸಲು ಸಾಧ್ಯವಾಗಿಲ್ಲವೆಂದ್ರೂ ಕೈಲಾದ ಮಟ್ಟಿಗೆ ಸಹಾಯ ಮಾಡ್ತಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಕಥೆ ಹೇಳಿಕೊಂಡ ವ್ಯಕ್ತಿ ಕೂಡ ಇಕ್ಕಟ್ಟಿನಲ್ಲಿ ಸಿಲುಕಿದ್ದ. ಕ್ಯಾನ್ಸರ್ ಪೀಡಿತ ತನ್ನ ಸ್ನೇಹಿತೆ ಆಸೆಯನ್ನು ಕೊನೆ ಕ್ಷಣದಲ್ಲಿ ಹೇಗೆ ಈಡೇರಿಸಿದೆ ಎಂಬುದನ್ನು ಆತ ಬರೆದುಕೊಂಡಿದ್ದಾನೆ. ವಿಚಿತ್ರ ಪರಿಸ್ಥಿತಿಯಲ್ಲಿದ್ದ ನಾನು ಕೊನೆಗೂ ಆಕೆ ಆಸೆ ಈಡೇರಿಸುವಲ್ಲಿ ಯಶಸ್ಸಿಯಾದೆ ಎಂದು ಆತ ಬರೆದಿದ್ದಾನೆ. ವರ್ಜಿನ್ ಆಗಿದ್ದ ಆ ಮಹಿಳೆ, ತಾನು ಭರವಸೆ ಹೊಂದಿರುವ ವ್ಯಕ್ತಿ ಜೊತೆ ಸಾಯುವ ಮೊದಲು, ಶಾರೀರಿಕ ಸಂಬಂಧ ಬೆಳೆಸಲು ನಿರ್ಧರಿಸಿದ್ದಳಂತೆ. 

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆ ಈಗಿಲ್ಲ. ಕ್ಯಾನ್ಸರ್ ಗೆ ಕಿಮೋಥೆರಪಿ ಚಿಕಿತ್ಸೆ ಪಡೆದು ನೋವು ಅನುಭವಿಸುವ ಬದಲು ಕೊನೆ ದಿನಗಳನ್ನು ಸಂತೋಷದಿಂದ ಕಳೆಯಬೇಕೆಂಬ ಬಯಕೆಯನ್ನು ಸ್ನೇಹಿತೆ ಹೊಂದಿದ್ದಳಂತೆ. ಆಕೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎನ್ನುವ ಈತನಿಗೆ ಆಕೆ 6 ವರ್ಷಗಳಿಂದ ಸ್ನೇಹಿತೆಯಾಗಿದ್ದಳಂತೆ.

ಕೆಲ ವರ್ಷಗಳ ಹಿಂದೆಯೇ ಆಕೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಳಂತೆ. ಚಿಕಿತ್ಸೆ ನಂತ್ರ ಕ್ಯಾನ್ಸರ್ ಗುಣಮುಖವಾಗಿತ್ತಂತೆ. ಆದ್ರೆ ಆಕೆ ಸಂತೋಷ ಸ್ವಲ್ಪ ದಿನ ಮಾತ್ರವಿತ್ತು. ಯಾಕೆಂದ್ರೆ ಕ್ಯಾನ್ಸರ್ ಮತ್ತೆ ಮರುಕಳಿಸಿತ್ತು ಎನ್ನುತ್ತಾನೆ ಈ ವ್ಯಕ್ತಿ. ಮಹಿಳೆಗೆ ಕಡಿಮೆ ಸ್ನೇಹಿತರಿದ್ದರು. ಆಕೆ ನನಗೆ ಆಪ್ತಳಾಗಿದ್ದಳು. ಮತ್ತೆ ಕಿಮೋಥೆರಪಿ ಪಡೆದು ನೋವು ತಿನ್ನುವ ಬದಲು ಕೊನೆ ದಿನಗಳನ್ನು ಖುಷಿಯಿಂದ ಕಳೆಯುವ ನಿರ್ಧಾರ ಮಾಡಿದ್ದಳು. ಆಕೆಗೆ ನಾನು ಸಂಪೂರ್ಣ ಬೆಂಬಲ ನೀಡಿದ್ದೆ ಎನ್ನುತ್ತಾರೆ ಈತ. 

ಒಂದು ದಿನ ಮದ್ಯಪಾನ ಮಾಡ್ತಿದ್ದ ವೇಳೆ ಸ್ನೇಹಿತೆ, ತಾನಿನ್ನು ವರ್ಜಿನ್ ಎಂಬ ಸಂಗತಿಯನ್ನು ಹೇಳಿದ್ದಳಂತೆ. ಹಾಗೆಯೇ ಯಾವುದೋ ಅಪರಿಚಿತ ವ್ಯಕ್ತಿ ಜೊತೆ ಸಂಬಂಧ ಬೆಳೆಸಲು ನನಗೆ ಇಷ್ಟವಿಲ್ಲ. ನಾನು ಹೆಚ್ಚು ನಂಬುವ ವ್ಯಕ್ತಿ ಜೊತೆ ಸಂಬಂಧ ಬೆಳೆಸ್ತೇನೆ ಎಂದಿದ್ದಳಂತೆ. ಆಕೆ ಭರವಸೆ ಹೊಂದಿದ್ದ ವ್ಯಕ್ತಿ ಮತ್ತ್ಯಾರೂ ಅಲ್ಲ ನಾನು. ಸ್ನೇಹಿತೆ ಇದಕ್ಕೆ ಎಂದೂ ಒತ್ತಡ ಹೇರಲಿಲ್ಲ. ನನಗೆ ಇಷ್ಟವಿಲ್ಲವೆಂದ್ರೆ ಮತ್ತೆ ಈ ವಿಷ್ಯ ಮಾತನಾಡುವುದಿಲ್ಲ ಎಂದಿದ್ದಳು. ಆದ್ರೆ ಆಕೆ ಅಂತಿಮ ಆಸೆ ಈಡೇರಿಸಲು ನಾನು ಸಿದ್ಧನಾದೆ ಎನ್ನುತ್ತಾನೆ ವ್ಯಕ್ತಿ. 

ಸಂಗಾತಿ ಬಗ್ಗೆ ವಿಪರೀತ ಡೌಟ್‌, ಇಂಥಾ ಭಾವನೆ ಹೋಗಲಾಡಿಸೋದು ಹೇಗೆ ?

ಇಬ್ಬರೂ ಆ ದಿನವನ್ನು ಸ್ಪೇಷಲ್ ಆಗಿಸಲು ಪ್ರಯತ್ನಿಸಿದ್ದರಂತೆ. ಕೋಣೆ ತುಂಬ ಮೊಂಬತ್ತಿ ಬೆಳಗಿಸಿದ್ದರಂತೆ. ಇದೊಂದು ಭಾವನಾತ್ಮಕ ಅನುಭವವಾಗಿತ್ತು. ನನಗೆ ಈಗ್ಲೂ ಆಕೆ ಮೇಲೆ ಗೌರವವಿದೆ. ಅನುಕಂಪವಿದೆ. ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಿದ ಆಕೆ ತುಂಬಾ ಖುಷಿಯಲ್ಲಿದ್ದಳು. ತನ್ನಿಷ್ಟದ ವ್ಯಕ್ತಿ ಜೊತೆ ಸಂಬಂಧ ಬೆಳೆಸಿದ್ದು ಆಕೆಗೆ ಮತ್ತಷ್ಟು ಸಂತೋಷ ನೀಡಿತ್ತು. ಆಕೆ ಕೊನೆ ಆಸೆ ಈಡೇರಿಸಿದ ನೆಮ್ಮದಿ ನನಗಿತ್ತು. ನಾನು ಈಗ್ಲೂ ಆಕೆಯನ್ನು ನೆನಪು ಮಾಡಿಕೊಳ್ತೇನೆ ಎನ್ನುತ್ತಾನೆ ವ್ಯಕ್ತಿ. 

ಅಮ್ಮ ನೀನೂ ಸ್ವಲ್ಪ ಸ್ವಾರ್ಥಿಯಾಗು, ಜೀವನ ಪ್ರೀತಿ ಉಳಿಸಿಕೋ!

ಸಾಮಾಜಿಕ ಜಾಲತಾಣದಲ್ಲಿ (Social Media) ಈತನ ಸ್ಟೋರಿ ಓದಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ನೇಹಿತೆ ನೆಮ್ಮದಿಯಿಂದ ಸಾವನ್ನಪ್ಪಿದ್ದಾಳೆ ಎಂದು ಬಳಕೆದಾರನೊಬ್ಬ ಬರೆದ್ರೆ ನೀವು ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಮತ್ತೊಬ್ಬರು ಬರೆದಿದ್ದಾರೆ.   

Latest Videos
Follow Us:
Download App:
  • android
  • ios