Relationship Tips : ಎಲ್ಲರ ಮುಂದೆ ಕಿರುಚಾಡಿ ಅವಮಾನ ಮಾಡ್ತಾಳೆ ನನ್ನ ಹೆಂಡ್ತಿ

Relationship Tips in Kannada: ಸಾರ್ವಜನಿಕ ಸ್ಥಳವೇ ಬೇರೆ, ಮನೆಯೇ ಬೇರೆ. ಮನೆಯಲ್ಲಿ ನಿಮ್ಮ ಮನಸ್ಸಿಗೆ ಬಂದಂತೆ ಇರ್ಬಹುದು. ಆದ್ರೆ ಪಬ್ಲಿಕ್ ಪ್ಲೇಸ್ ನಲ್ಲಿ ಹಾಗಲ್ಲ. ಪತಿ – ಪತ್ನಿ ಮಧ್ಯೆ ಏನೇ ಇರಲಿ ಅದು ನಾಲ್ಕು ಗೋಡೆ ಮಧ್ಯೆ ಇದ್ದರೆ ಚೆಂದ. ಸಾರ್ವಜನಿಕ ಪ್ರದೇಶದಲ್ಲಿ ಪತ್ನಿ ಧ್ವನಿ ಜೋರಾದ್ರೆ ಸಂಬಂಧದ ಸೂತ್ರ ಹರಿದು ಬೀಳೋದು ಗ್ಯಾರಂಟಿ
 

how to handle your wife when she is angry publicly

ಎಷ್ಟು ಹಿಡಿದಿಟ್ಟುಕೊಂಡ್ರೂ ಒಮ್ಮೊಮ್ಮೆ ಕೋಪ (Anger) ಸ್ಫೋಟಗೊಳ್ಳುತ್ತದೆ. ಒಂದಲ್ಲ ಒಂದು ಕಾರಣಕ್ಕೆ ಎಲ್ಲರಿಗೂ ಕೋಪ ಬರುವುದು ಮಾಮೂಲಿ. ಆದ್ರೆ ಈ ಕೋಪವು ನಿಮ್ಮ ಸ್ವಭಾವದ ಭಾಗವಾದ್ರೆ ಅದು ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದ್ರಲ್ಲೂ ಗಂಡ – ಹೆಂಡತಿ ಮಧ್ಯೆ ಪದೇ ಪದೇ ಬರುವ ಕೋಪ ಸಂಬಂಧ (Relationship) ವನ್ನು ಹಾಳು ಮಾಡುತ್ತದೆ. ಕಾರಣವಿಲ್ಲದ ಕೋಪ, ಸಂಗಾತಿ ಮೇಲೆ ಅಸಮಾಧಾನ ಹಾಗೂ ಎಲ್ಲವನ್ನೂ ನಕಾರಾತ್ಮಕ (Negative) ವಾಗಿ ತೆಗೆದುಕೊಳ್ಳುವುದರಿಂದ ಪತಿ-ಪತ್ನಿಯ ನಡುವಿನ ಸಂಬಂಧ ಹಾಳಾಗುತ್ತದೆ. ಇದು ಮಿತಿ ಮೀರಿದಾಗ ಪರಸ್ಪರ ಗೌರವಿಸುವುದನ್ನು ದಂಪತಿ ಮರೆತುಬಿಡ್ತಾರೆ. ಮನುಷ್ಯನಾದ್ಮೇಲೆ ಕೋಪ ಬರೋದು ಸಹಜ ನಿಜ. ಆದ್ರೆ ಪತಿಗಿಂತ ಪತ್ನಿ ಗರಂ ಆದ್ರೆ ಅದು ಸವಾಲಿನ ಸಂಗತಿ. ಆಕೆಯನ್ನು ಸಂಭಾಳಿಸುವುದು ಸುಲಭವಲ್ಲ. ಅದರಲ್ಲೂ ಆಕೆ ಸಾರ್ವಜನಿಕ (Public) ಸ್ಥಳ (Place) ದಲ್ಲಿ ಪತಿ ಮೇಲೆ ಕೂಗಾಡಲು ಶುರು ಮಾಡಿದ್ರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಪತ್ನಿ ಮೇಲಿದ್ದ ಪ್ರೀತಿ, ಭರವಸೆ ಕಡಿಮೆಯಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಾದ ಅವಮಾನವನ್ನು ಪತಿ ಮರೆಯುವುದಿಲ್ಲ. ಮತ್ತೆ ಮೊದಲಿನಂತೆ ಆತ ಪತ್ನಿಯನ್ನು ನೋಡುವುದಿಲ್ಲ. ಅನೇಕ ಮಹಿಳೆಯರು ಈ ತಪ್ಪನ್ನು ಮಾಡ್ತಾರೆ. ಎಲ್ಲೆಂದರಲ್ಲಿ ಗಂಡನ ಮೇಲೆ ಮುನಿಸಿಕೊಂಡು ಚೀರಾಡಲು ಶುರು ಮಾಡ್ತಾರೆ. ನಿಮ್ಮ ಪತ್ನಿಯೂ ಇದೇ ಸ್ವಭಾವದವಳಾಗಿದ್ದರೆ ಅವಳನ್ನು ಹೇಗೆ ಸಂಭಾಳಿಸ್ಬೇಕು ಗೊತ್ತಾ?

ಸಾರ್ವಜನಿಕ ಸ್ಥಳದಲ್ಲಿ ಕೋಪ ಇಬ್ಬರಿಗೂ ಒಳ್ಳೆಯದಲ್ಲ : ಪತಿ ಇರಲಿ ಇಲ್ಲ ಪತ್ನಿಯಾಗಿರಲಿ, ಪರಸ್ಪರ ಗೌರವ ನೀಡಬೇಕು. ಸಾರ್ವಜನಿಕ ಸ್ಥಳದಲ್ಲಿ ಸಂಗಾತಿ ಮೇಲೆ ಕೂಗಾಡುವುದು, ಚೀರಾಡುವುದು  ಸಂಬಂಧಕ್ಕೆ ಒಳ್ಳೆಯದಲ್ಲ. ಇದು ನಿಮ್ಮಿಬ್ಬರ ಸಂಬಂಧವನ್ನು ಹಾಳು ಮಾಡುತ್ತದೆ. ಇಬ್ಬರನ್ನು ಇದು ಬೇರ್ಪಡಿಸುತ್ತದೆ. ಒಂದು ವೇಳೆ ಸಾರ್ವಜನಿಕ ಪ್ರದೇಶದಲ್ಲಿ ಸಂಗಾತಿ ಮೇಲೆ ಕೂಗಾಡಿದ್ರೆ ಅಥವಾ ಪದೇ ಪದೇ ಚೀರಾಡುವ ಅಭ್ಯಾಸ ನಿಮಗಿದ್ದರೆ ಅದನ್ನು ಆದಷ್ಟು ಬೇಗ ಸುಧಾರಿಸಿಕೊಳ್ಳಿ. 

ಜೀವನ ಸಂಗಾತಿಯಾಗಿರಲಿ ಇಲ್ಲ ನಿಮ್ಮ ಮಕ್ಕಳೇ ಆಗಿರಲಿ, ಸಾರ್ವಜನಿಕವಾಗಿ ಅವರ ಮೇಲೆ ಕೂಗುವುದು ತುಂಬಾ ತಪ್ಪು. ಬೇರೆಯವರನ್ನು ಅವಮಾನಿಸುವ ಹಕ್ಕು ನಿನಗೆ ಇಲ್ಲ. ಒಂದು ವೇಳೆ ಪತ್ನಿಯಾದವಳು ನಿಮ್ಮನ್ನು ಅವಮಾನಿಸುತ್ತಿದ್ದರೆ ಮೊದಲು ಆಕೆಗೆ ತಿಳಿ ಹೇಳಿ. ಅದ್ರಿಂದಾಗುವ ಪರಿಣಾಮಗಳ ಬಗ್ಗೆ ಹೇಳಿದ್ರೂ ಪತ್ನಿ ಸುಧಾರಿಸಿಕೊಂಡಿಲ್ಲವೆಂದ್ರೆ ಅವರಿಂದ ಸ್ವಲ್ಪ ದೂರವಿರಿ. ಸಾರ್ವಜನಿಕ ಸ್ಥಳದಲ್ಲಿಯೇ ಪತ್ನಿ ಮೇಲೆ ನೀವೂ ಕೂಗಾಡಲು ಹೋಗ್ಬೇಡಿ. ಇದ್ರಿಂದ ಸಮಸ್ಯೆ ಮತ್ತಷ್ಟು ದೊಡ್ಡದಾಗುತ್ತದೆ. ಹಾಗಾಗಿ ಮನೆಗೆ ಬಂದ ನಂತ್ರ ಪತ್ನಿಗೆ ವಿವರಿಸಿ. ಅಲ್ಲಿ ಆಕೆಯ ವರ್ತನೆ ನಿಮಗೆ ಎಷ್ಟು ಮುಜುಗರ ತಂದಿದೆ ಎಂಬುದನ್ನು ವಿವರಿಸಿ. 

ಇದನ್ನೂ ಓದಿ: ಗಂಡ-ಹೆಂಡ್ತಿ ಮಧ್ಯೆ ಜಗಳ ಆಗೋದು ಇದೇ ಕಾರಣಕ್ಕೆ ! ನೀವೂ ಹೀಗೆ ಮಾಡ್ತಿದ್ದೀರಾ ನೋಡ್ಕೊಳ್ಳಿ

ಬದಲಾಗದ ಪತ್ನಿಯ ಸ್ವಭಾವಕ್ಕೆ ಕಾರಣವೇನು ? : ಮಾಡಿದ ತಪ್ಪನ್ನೇ ಪತ್ನಿ ಮತ್ತೆ ಮತ್ತೆ ಮಾಡ್ತಿದ್ದರೆ ಅದನ್ನು ಸುಧಾರಿಸುವ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ನೀವು ಮೊದಲು ತಿಳಿಯಬೇಕಾಗುತ್ತದೆ. ಆಕೆ ಮೂಡು ಏಕಾಏಕಿ ಬದಲಾಗಲು ಕಾರಣವೇನು ಎಂಬುದನ್ನು ಪತ್ತೆ ಮಾಡಿ. ಹೆಂಡತಿಗೆ ಯಾವಾಗ ಕೋಪ ಬರುತ್ತದೆ ಎಂಬುದನ್ನು ಪತ್ತೆ ಮಾಡಿ. ಆಕೆಯ ಕೋಪದ ಗುಟ್ಟು ನಿಮಗೆ ಗೊತ್ತಾದ್ರೆ ನೀವು ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಸಾರ್ವಜನಿಕ ಸ್ಥಳದಲ್ಲಿ ನಿಮಗೆ ಅವಮಾನವಾಗದಂತೆ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಅವರ ಕೋಪಕ್ಕೆ ನಿಮ್ಮ ಸ್ವಭಾವ ಕಾರಣವಾಗಿರಬಹುದು. ಆಗ ಅವರನ್ನು ದೂರಿ ಪ್ರಯೋಜನವಿಲ್ಲ. ನಿಮ್ಮ ಸ್ವಭಾವದಲ್ಲಿ ಸುಧಾರಣೆಯಾದ್ರೆ ಅವರೇ ಸರಿಯಾಗ್ತಾರೆ.

ಇದನ್ನೂ ಓದಿ: Sexual Wellness Tips : ಲೈಂಗಿಕ ಕ್ರಿಯೆ ವೇಳೆ ಈ ವಿಚಾರ ಪಾಲಿಸಿದ್ರೆ ಸ್ವರ್ಗಕ್ಕೆ ಮೂರೇ ಗೇಣು

ಶಾಂತವಾಗಲು ಸಮಯ ನೀಡಿ : ಮಾತು ಮನೆ ಕೆಡಿಸುತ್ತದೆ. ನಿಮ್ಮ ಮಾತು ಪತ್ನಿ ಕೋಪವನ್ನು ಹೆಚ್ಚು ಮಾಡ್ಬಹುದು. ಹಾಗಾಗಿ ಅಂಥ ಸಮಯದಲ್ಲಿ ಸುಮ್ಮನಿರಿ. ಪತ್ನಿ ಶಾಂತವಾಗಲು ಸಮಯ ನೀಡಿ. ಆಕೆ ಮನಸ್ಥಿತಿ ತಿಳಿಯಾದ್ಮೇಲೆ ಪರಿಸ್ಥಿತಿ ಅರ್ಥ ಮಾಡಿಸಿ. 

Latest Videos
Follow Us:
Download App:
  • android
  • ios