ಅಯ್ಯೋ ಕರ್ಮವೇ! ಹುಡುಗಿ ಚೆನಾಗಿದಾಳೆ ಅಂತ ಲೈವ್‌ ಚಾಟ್‌ಲಿ ಬೆತ್ತಲಾದ, ಪಾಪ ಆಮೇಲಾಗಿದ್ದೇ ಬೇರೆ

Online Dating App Fraud: ಈ ಕತೆ ಕೇಳಿದ್ರೆ ನಗು ಬರಬಹುದು, ಆದರೆ ಆತ ಅನುಭವಿಸಿದ ಹಿಂಸೆ ಮಾತ್ರ ಪಾಪ ಅನ್ನಿಸುವಂತೆ ಮಾಡಲಿದೆ. ೨೪ ವರ್ಷದ ಯುವಕನ ಆನ್‌ಲೈನ್‌ ಪ್ರೇಮ ಪುರಾಣದ ಕತೆ ಇಲ್ಲಿದೆ. 

Beware while using dating apps here is a man who got cheated from girl ssr

Dating App Fraud: ಸಾಮಾಜಿಕ ಜಾಲತಾಣಗಳ ಅಬ್ಬರದ ಈ ದಿನಗಳಲ್ಲಿ ಜನ ಆನ್‌ಲೈನ್‌ ಡೇಟಿಂಗ್‌ (Online Dating Apps), ಚಾಟಿಂಗ್‌, ಫ್ಲರ್ಟಿಂಗ್‌ ಅದೂ ಇದು ಅಂತ ಕಾಲ ಕಳೀತಾರೆ. ಎಷ್ಟೋ ಮಂದಿ ಇದರಿಂದಲೇ ಉತ್ತಮ ಬಾಳ ಸಂಗಾತಿಗಳನ್ನೂ ಕಂಡುಕೊಂಡಿದ್ದಾರೆ, ಆದರೆ ಕೆಲವರು ಮೂರ್ಖರಾಗಿದ್ದಾರೆ. ಅಂತದ್ದೇ ಒಬ್ಬ 24 ವರ್ಷದ ವ್ಯಕ್ತಿಯ ಕತೆ ಇಲ್ಲಿದೆ. ಈ ಕತೆ ಕೇಳಿದ್ರೆ ನಗು ಬರಬಹುದು, ಆದರೆ ಆತ ಅನುಭವಿಸಿದ ಹಿಂಸೆ ಮಾತ್ರ ಪಾಪ ಅನ್ನಿಸುವಂತೆ ಮಾಡಲಿದೆ. ೨೪ ವರ್ಷದ ಯುವಕನ ಆನ್‌ಲೈನ್‌ ಪ್ರೇಮ ಪುರಾಣದ ಕತೆ ಇಲ್ಲಿದೆ (Online Love Story). 

ಈ ಕತೆಯಲ್ಲಿ ಮೋಸಹೋದ ಹುಡುಗ ಎಂಬಿಎ ವಿದ್ಯಾರ್ಥಿ. ಮುಂಬೈನ ಅಂಧೇರಿಯಲ್ಲಿ ಈತ ವಾಸಿಸುತ್ತಿದ್ದಾನೆ. ಆನ್‌ಲೈನ್‌ ಡೇಟಿಂಗ್‌ ಆಪ್‌ ಒಂದರಲ್ಲಿ ಯುವತಿಯ ಪರಿಚಯವಾಗಿದೆ. ಯುವತಿಯ ಜೊತೆ ಹಲವು ದಿನಗಳ ಕಾಲ ಚಾಟಿಂಗ್‌ ಮಾಡಿದ್ದಾನೆ. ಅದಾದ ನಂತರ ಯುವತಿಯ ಪ್ರೇಮದ ಬಲೆಗೆ ಬಿದ್ದಿದ್ದಾನೆ. ಅದಾದ ನಂತರ ವಿಡಿಯೋ ಕಾಲ್‌ನಲ್ಲಿ ಬೆತ್ತಲೆಯಾಗಿ ಮಾತನಾಡಿದ್ದಾನೆ. ಆಕೆ ಇದನ್ನು ರೆಕಾರ್ಡ್‌ ಮಾಡಿಕೊಂಡು ಹಣಕ್ಕಾಗಿ ಬ್ಲಾಕ್‌ಮೇಲ್‌ ಮಾಡಲು ಆರಂಭಿಸಿದ್ದಾಳೆ. 

ಪೊಲೀಸರ ಮಾಹಿತಿ ಪ್ರಕಾರ ಈ ಘಟನೆ ಮಾರ್ಚ್‌ 31ರಂದು ನಡೆದಿದೆ. ಮಾರ್ಚ್‌ 31ರಂದು ಯುವತಿ ವಿಡಿಯೋ ಕಾಲ್‌ ಮಾಡುವಂತೆ ಹೇಳಿದ್ದಾಳೆ. ಅಲ್ಲಿಯವರೆಗೂ ಆಕೆಯನ್ನು ಲೈವ್‌ ಕಾಲ್‌ನಲ್ಲಿ ನೋಡದ ಹುಡುಗ, ಸಿಕ್ಕಿದ್ದೇ ಚಾನ್ಸ್‌ ಅಂತ ವಿಡಿಯೋ ಕಾಲ್‌ ಮಾಡಿದ್ದಾನೆ. ಆ ವೇಳೆ ಯುವತಿ ಬೆತ್ತಲೆಯಾಗಿರುವುದು ಕಂಡಿದೆ. ಇದನ್ನು ನೋಡಿದ ತಕ್ಷಣ, ಯುವಕ ತಾನೂ ಬಟ್ಟೆ ಬಿಚ್ಚಿ ಬೆತ್ತಲಾಗಿದ್ದಾನೆ. ಸುಮಾರು ನಿಮಿಷಗಳ ಕಾಲ ಆನ್‌ಲೈನ್‌ ಸರಸ (Online Romance) ನಡೆದಿದೆ. 

ಹುಡುಗಿ ವಿಡಿಯೋ ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದಾಳೆ ಎಂಬ ಅರಿವು ಹುಡುಗನಿಗೆ ಇರಲಿಲ್ಲ. ಎಷ್ಟಂದರೂ ಪ್ರೀತಿಯಾಗಿತ್ತು, ನಂಬಿಕೆ ಗಾಢವಾಗಿತ್ತು. ಹುಡುಗಿ ತನ್ನ ಹೆಸರನ್ನು ಸೋನಿಯಾ ಎಂದು ಹೇಳಿಕೊಂಡಿದ್ದಳು. ಇದಾದ ನಂತರ ಹುಡುಗಿ ಹತ್ತು ಸಾವಿರ ಕೊಡು ಇಲ್ಲದಿದ್ದರೆ ಸಾಮಾಜಿಕ ಜಾಲತಾಣದಲ್ಲಿ (Videos goes viral on Social Media) ನಿನ್ನ ಬೆತ್ತಲೆ ವಿಡಿಯೋ ವೈರಲ್‌ ಮಾಡುತ್ತೇನೆ ಎಂದು ಧಮಕಿ ಹಾಕಿದ್ದಾಳೆ. ಒಂದೆಡೆ ಯುವಕನಿಗೆ ಪ್ರೀತಿಯ ಭ್ರಮನಿರಸನ, ಇನ್ನೊಂದೆಡೆ ಹತ್ತು ಸಾವಿರ ಕೊಡದಿದ್ದರೆ ವಿಡಿಯೋ ವೈರಲ್‌ ಆಗುವ ಭಯ. 

ಇದನ್ನೂ ಓದಿ: Dating Scams : ಸಂಗಾತಿ ಹುಡುಕುವ ಆತುರದಲ್ಲಿ ಯಡವಟ್ಟು ಮಾಡ್ಕೊಳ್ಬೇಡಿ

ನಂತರ ಧೈರ್ಯ ತಂದುಕೊಂಡು ಹುಡುಗ ಪೊಲೀಸರಿಗೆ ದೂರು ನೀಡಿದ್ದಾನೆ. ಸೋನಿಯಾ ಹಣ ಹಾಕಲು ಗೂಗಲ್‌ ಪೇ ನಂಬರ್‌ ಒಂದನ್ನು ಕೊಟ್ಟಿದ್ದಳು, ಆ ನಂಬರ್‌ ಎಲ್ಲಿದೆ ಎಂಬ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. 

ಇದನ್ನೂ ಓದಿ: Online Dating Fraud : ಆನ್ ಲೈನ್ ಮಾಯಾಂಗನೆ ವಿಡಿಯೋ ಚಾಟಿಂಗ್ ಮೋಹ, ಲಕ್ಷ ಲಕ್ಷ ಕಳಕೊಂಡ ಚಿಕ್ಕಮಗಳೂರು ಟೆಕ್ಕಿ!

ಹುಡುಗನ ದೂರಿನ ಪ್ರಕಾರ, ಹುಡುಗ ಹಿಂಜ್‌ (Hinge Dating App) ಎಂಬ ಡೇಟಿಂಗ್‌ ಆಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದ. ಅಲ್ಲಿ ಸೋನಿಯಾ ಪ್ರೊಫೈಲ್‌ ಮ್ಯಾಚ್‌ ಆಗಿತ್ತು, ಅಲ್ಲಿ ಆಕೆ ಹುಡುಗನಿಗೆ ಹತ್ತಿರವಾದಳು, ನಂತರ ಬೆತ್ತಲೆ ವಿಡಿಯೋ ಚಾಟ್‌, ಬ್ಲಾಕ್‌ಮೇಲಿಂಗ್‌ ನಡೆದಿದೆ. ಪೊಲೀಸ್‌ ಮೂಲಗಳ ಪ್ರಕಾರ ಸೋನಿಯಾ ಕೊಟ್ಟಿರುವ ಗೂಗಲ್‌ ಪೇ ನಂಬರ್‌ ಸೋನು ಕುಮಾರ್‌ ಎಂಬ ವ್ಯಕ್ತಿಯ ಹೆಸರಲ್ಲಿದ್ದು, ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿದೆ.

ತಂತ್ರಜ್ಞಾನ ಬಳಕೆಯಲ್ಲಿ ಎಚ್ಚರ:

ಈ ರೀತಿಯ ಡೇಟಿಂಗ್‌ ಆಪ್‌ಗಳನ್ನು ನೀವು ಬಳಸುತ್ತಿದ್ದರೆ ಎಚ್ಚರವಾಗಿರಿ. ಈ ತರದ ಹಲವಾರು ಪ್ರಕರಣಗಳು ಪ್ರತಿನಿತ್ಯ ದೇಶಾದ್ಯಂತ ಕೇಳಿಬರುತ್ತವೆ. ಆದರೆ ಅಜಾಗರೂಕತೆ ಮಾತ್ರ ಇನ್ನೂ ಮುಂದುವರೆಯುತ್ತಿದೆ. ಯಾವುದೇ ಪರಿಚಯವಿಲ್ಲ ವ್ಯಕ್ತಿಗೆ ಖಾಸಗಿ ಫೋಟೊ ಕಳಿಸುವುದು, ಬೆತ್ತಲಾಗಿ ವಿಡಿಯೋ ಚಾಟ್‌ ಮಾಡುವುದರಿಂದ ನೀವು ಅವರ ಸುಳಿಯಲ್ಲಿ ಬೀಳುವ ಸಾಧ್ಯತೆ ಹೆಚ್ಚು. ತಂತ್ರಜ್ಞಾನವನ್ನು ನಾವು ಯಾವ ರೀತಿ ಬಳಕೆ ಮಾಡಿಕೊಳ್ಳುತ್ತೀವಿ ಎಂಬುದರ ಮೇಲೆ ಎಲ್ಲವೂ ನಿಂತಿರುತ್ತದೆ. ಜಾಗರೂಕತೆಯಿಂದ ಸಾಮಾಜಿಕ ಜಾಲತಾಣಗಳನ್ನು ಬಳಸಿ ಎಂಬುದು ನಮ್ಮ ಕಳಕಳಿ.

Latest Videos
Follow Us:
Download App:
  • android
  • ios