ಒಬ್ಬಾಕೆಗೆ 16 ಯುವಕರ ಮೇಲೆ ಪ್ರೀತಿ, ಎಲ್ಲರಿಗೂ ಮದುವೆಯಾಗುವ ಮಾತು ಕೊಟ್ಟು ಮೋಸ!

First Published Feb 5, 2021, 3:11 PM IST

ತಂತ್ರಜ್ಞಾನ ಆಧುನೀಕರಣಗೊಳ್ಳುತ್ತಿದ್ದಂತೆಯೇ ಮನುಷ್ಯರ ದೃಷ್ಟಿಕೋನ ಬದಲಾಗಿದೆ. ಹೀಗಿರುವಾಗ ಯುವಜನರು ಡೇಟಿಂಗ್ ಆಪ್ ಮೂಲಕ ಜೀವನ ಸಂಗಾತಿ ಹುಡುಕಲಾರಂಭಿಸಿದ್ದಾರೆ. ಆದರೆ ಅನೇಕ ಬಾರಿ ಜನರು ಈ ವಿಚಾರದಲ್ಲಿ ಅದೆಷ್ಟು ಮೋಸ ಹೋಗುತ್ತಾರೆಂದರೆ ಅವರ ಇಡೀ ಜೀವನವೇ ನಾಶವಾಗುತ್ತದೆ. ಯಾಕೆಂದರೆ ಕೆಲ ಮಂದಿ ಡೇಟಿಂಗ್ ಆಸೆಯಲ್ಲಿ ಅಪರಾಧ ಮಾಡುತ್ತಾರೆ. ಇಂತಹುದೇ ಒಂದು ಪ್ರಕರಣ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಇಲ್ಲೊಬ್ಬ ಈ ಡೇಟಿಂಗ್ ಆಪ್ ಮೂಲಕ ಹದಿನಾರು ಯುವಕರನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿದ್ದಾಳೆ. ಇದಾದ ಬಳಿಕ ಅವರೆಲ್ಲರ ಮನೆಗೆ ತೆರಳಿ ಲಕ್ಷಾಂತರ ರೂಪಾಯಿ ಹಣ ಕಳ್ಳತನ ಮಾಡಿದ್ದಾರೆ.