Asianet Suvarna News Asianet Suvarna News

real story : ಅಳಿಯನ ಟೂತ್ ಪೇಸ್ಟ್ ಬಳಸಿದ ಅತ್ತೆ : ಡಿವೋರ್ಸ್ ಎನ್ನುತ್ತಿದ್ದಾನೆ ವ್ಯಕ್ತಿ…!

ಊಟ ಸರಿಯಿಲ್ಲ, ಚಿಕನ್ ಮಾಡಿಲ್ಲ ಅಂತ ಡಿವೋರ್ಸ್ ತೆಗೆದುಕೊಳ್ಳುವ ಜನರಿದ್ದಾರೆ. ಈಗ ಈ ವ್ಯಕ್ತಿ ಟೂತ್ ಪೇಸ್ಟ್ ವಿಷ್ಯಕ್ಕೆ ವಿಚ್ಛೇದನ ನೀಡುವ ತೀರ್ಮಾನಕ್ಕೆ ಬಂದಿದ್ದಾನೆ. ಅದೂ ಅಲ್ಲಿ ತಪ್ಪಾಗಿದ್ದು ಪತ್ನಿಯದ್ದಲ್ಲ, ಆಕೆ ಅಮ್ಮನದ್ದು. 
 

man abandoned his wife and family on venice vacation says his mother in law used his toothpaste roo
Author
First Published Aug 12, 2024, 3:02 PM IST | Last Updated Aug 12, 2024, 3:02 PM IST

ಡಿವೋರ್ಸ್ (Divorce) ಗೆ ಅನೇಕ ಕಾರಣ ಇರುತ್ತೆ. ಕೆಲವೊಂದು ಬಹಳ ಅಚ್ಚರಿ ಹುಟ್ಟಿಸುವಂತಿರುತ್ತವೆ. ಈ ಭೂಪ ಟೂತ್ ಪೇಸ್ಟ್ (toothpaste) ವಿಷ್ಯಕ್ಕೆ ಪತ್ನಿಗೆ ಡಿವೋರ್ಸ್ ನೀಡುವ ನಿರ್ಧಾರಕ್ಕೆ ಬರ್ತಿದ್ದಾನೆ. ಪತ್ನಿ – ಈತನ ಮಧ್ಯೆ ಬಂದಿದ್ದು ಪತ್ನಿಯ ಅಮ್ಮ. ಪ್ರವಾಸ (tour) ಕ್ಕೆ ಹೋಗಿದ್ವೇಲೆ ಪತ್ನಿ ಅಮ್ಮ ಅಂದ್ರೆ ಅತ್ತೆ ಮಾಡಿದ ಕೆಲಸಕ್ಕೆ ಕೋಪಗೊಂಡ ವ್ಯಕ್ತಿ, ಕುಟುಂಬವನ್ನು ಅಲ್ಲೇ ಬಿಟ್ಟು ಊರಿಗೆ ವಾಪಸ್ ಬಂದಿದ್ದಲ್ಲದೆ ವಿಚ್ಛೇದನ ನೀಡುವ ಆಲೋಚನೆ ಮಾಡ್ತಿದ್ದಾನೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಎಂಬ ವಿವರ ಇಲ್ಲಿದೆ. 

ತನ್ನ ಜೀವನದಲ್ಲಿ ನಡೆದ ಘಟನೆಯನ್ನು ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ. ಆತ ತನ್ನ 35 ವರ್ಷದ ಪತ್ನಿ ಜೊತೆ ಟ್ರಿಪ್ ಗೆ ಹೋಗುವ ಪ್ಲಾನ್ ಮಾಡಿದ್ದ. ಒಂದು ವರ್ಷದ ಮಗಳ ಜೊತೆ, ಪತ್ನಿಯ ಇಷ್ಟದ ಜಾಗ, ಇಟಲಿಯ ವೆನಿಸ್ ಗೆ ಪ್ಲಾನ್ ಮಾಡಿದ್ದ. ಅಲ್ಲಿ ಭೇಟಿ ನೀಡ್ಬೇಕು ಎನ್ನುವ ಪತ್ನಿಯ ಕನಸನ್ನು ನನಸು ಮಾಡಲು ಮುಂದಾಗಿದ್ದ ಪತಿಯ ಖುಷಿಯನ್ನು ಹಾಳ್ ಮಾಡಿದ್ದು ಅತ್ತೆ.

ದರ್ಶನ್​ ನೆನೆದು ಕಣ್ಣೀರಾದ ತರುಣ್​ ಸುಧೀರ್​: ಜೈಲಿಗೆ ಹೋಗ್ತೇವೆ ಎಂದ ಸೋನಲ್ ಹೇಳಿದ್ದೇನು?

ಪ್ರವಾಸಕ್ಕೆ ಹೋಗುವ ಮೊದಲೇ ಗಲಾಟೆ ಶುರುವಾಗಿತ್ತು ಎನ್ನುತ್ತಾನೆ ಆತ. ನಾನು ನನ್ನ ಪತ್ನಿ ಹಾಗೂ ಮಗು ಮಾತ್ರ ಟ್ರಿಪ್ ಪ್ಲಾನ್ ಮಾಡಿದ್ವಿ. ಆದ್ರೆ ಪತ್ನಿ ತನ್ನ ಅಮ್ಮನಿಗೆ ಈ ವಿಷ್ಯ ಹೇಳಿದ್ದಳು. ಅಲ್ಲದೆ ಆಕೆಯನ್ನು ಪ್ರವಾಸಕ್ಕೆ ಆಹ್ವಾನ ನೀಡಿದ್ಲು. ಅದಕ್ಕೆ ಒಪ್ಪಿದ್ದ ಅತ್ತೆ, ವೆನಿಸ್ ಗೆ ಹೊರಟು ನಿಂತಿದ್ದಳು. ಅತ್ತೆ ಪ್ರವಾಸಕ್ಕೆ ಬರೋದು ಈತನಿಗೆ ಸಮ್ಮತಿ ಇರ್ಲಿಲ್ಲ. ಈ ಮಧ್ಯೆ ರೂಮ್ ಬುಕ್ ಮಾಡಿದ್ದ ಪತ್ನಿ, ಈತನ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದ್ದಳು. ನಾಲ್ವರಿಗೂ ಒಂದೇ ರೂಮ್ ಬುಕ್ ಮಾಡಿದ್ದಳು.

ಎರಡು ಸಿಂಗಲ್ ಬೆಡ್ ಆದ್ರೆ ಒಂದು ಡಬಲ್ ಬೆಡ್ ಬುಕ್ ಮಾಡಿದ್ದ ಪತ್ನಿಯ ವರ್ತನೆ ಪತಿಗೆ ಮತ್ತಷ್ಟು ಅಸಮಾಧಾನ ಮಾಡಿತ್ತು. ಇಷ್ಟೆಕ್ಕೆ ನಿಲ್ಲಲಿಲ್ಲ, ಅತ್ತೆ ಕಿರಿಕಿರಿ ಮುಂದುವರೆದಿತ್ತು. ತನ್ನ ವಸ್ತುಗಳನ್ನು ಶೇರ್ ಮಾಡಿಕೊಳ್ಳಲು ಇಷ್ಟಪಡದ ಈ ವ್ಯಕ್ತಿ ಬೆಡ್ ಮೇಲೆ ಆಗಾಗ ಅತ್ತೆ ಕುಳಿತುಕೊಳ್ತಿದ್ದಳಂತೆ. ಇದು, ಅಳಿಯನಿಗೆ ಸಹಿಸೋಕೆ ಆಗ್ತಿರಲಿಲ್ಲ. ಆಗಾಗ ಈ ಬಗ್ಗೆ ಎಚ್ಚರಿಕೆ ನೀಡಿದ್ದನಂತೆ. 

ಇನ್ನೊಂದು ಸಿಟ್ಟು ಬರಿಸಿದ ಅತ್ತೆ ಕೆಲಸ ಅಂದ್ರೆ ಬ್ಯಾಗ್ ಚೆಕ್ ಮಾಡೋದು ಅಂತಾನೆ ವ್ಯಕ್ತಿ. ನಾನು ಮತ್ತೆ ನನ್ ಪತ್ನಿ ಹೊರಗೆ ಹೋದಾಗ ನಮ್ಮ ಬ್ಯಾಗ್ ಚೆಕ್ ಮಾಡ್ತಿದ್ಲು ಅತ್ತೆ. ಪತ್ನಿ ದುಬಾರಿ ವಸ್ತುಗಳನ್ನು ಕ್ಯಾರಿ ಮಾಡಿದ್ದಳು. ಹಾಗಾಗಿ ಹೊರಗೆ ಹೋಗ್ವಾಗ ಬ್ಯಾಗ್ ಲಾಕ್ ಮಾಡಿ ಹೋಗುವ ಸ್ಥಿತಿ ಬಂತು ಎನ್ನುತ್ತಾನೆ ಆತ.

ಸಜ್ಜನರ ಸಂಗ ಹೆಜ್ಜೇನು ಸವಿದಂತೆ... ರಾಜಕಾರಣಿಗಳ ಸಂಗ? ಡಾ.ಮಂಜುನಾಥ್​ ಮಾತಿಗೆ ನಗುವಿನ ಅಲೆ!

ಟೂತ್ ಪೇಸ್ಟ್ ಎಲ್ಲವನ್ನೂ ಹಾಳ್ಮಾಡ್ತು : ಇಷ್ಟರ ಮಧ್ಯೆ ಒಂದು ದಿನ, ತನ್ನ ಟೂತ್ ಪೇಸ್ಟನ್ನು ಅತ್ತೆ ಯೂಸ್ ಮಾಡ್ತಿದ್ದಾಳೆ ಎಂಬುದು ಅಳಿಯನಿಗೆ ಗೊತ್ತಾಗಿದೆ. ಇದು ಆತನನ್ನು ಅನಾರೋಗ್ಯಕ್ಕೀಡು ಮಾಡುವಷ್ಟು ಹಿಂಸೆ ನೀಡಿದೆ.  ಟೂತ್ ಪೇಸ್ಟ್ ಗೆ ಅತ್ತೆ ಟೂತ್ ಬ್ರಷ್ ಹತ್ತಿರ ಬರ್ತಿತ್ತು ಎಂಬುದನ್ನು ನೆನೆಸಿಕೊಂಡು ಅಳಿಯನ ಕೋಪ ನೆತ್ತಿಗೇರಿದೆ. ಅದೇ ಕ್ಷಣ ರಿಟನ್ ಟಿಕೆಟ್ ಬುಕ್ ಮಾಡಿದ ವ್ಯಕ್ತಿ ಮನೆಗೆ ಬಂದಿದ್ದಾನೆ. ಆದ್ರೆ ಅತ್ತೆ, ಪತ್ನಿ ಹಾಗೂ ಮಗಳು ವೆನಿಸ್ ನಲ್ಲಿದ್ದಾರೆ. 

ನನ್ನ ಟೂತ್ ಪೇಸ್ಟ್ ಅತ್ತೆ ಬಳಸ್ತಿದ್ದಾಳೆ ಎಂಬುದು ಗೊತ್ತಾಗ್ತಿದ್ದಂತೆ ನನಗೆ ಅಲ್ಲಿರಲು ಸಾಧ್ಯವಾಗ್ಲಿಲ್ಲ. ನನ್ನ ಪತ್ನಿ ಅನೇಕ ಬಾರಿ ಫೋನ್ ಮಾಡಿದ್ದಾಳೆ. ಆದ್ರೆ ನಾನು ರಿಸೀವ್ ಮಾಡಿಲ್ಲ ಎಂದು ವ್ಯಕ್ತಿ ಪೋಸ್ಟ್ ಹಾಕಿದ್ದಾನೆ. ಆತನ ಪೋಸ್ಟ್ ಗೆ ಅನೇಕರು ಕೆಂಡಕಾರಿದ್ದಾರೆ. 

Latest Videos
Follow Us:
Download App:
  • android
  • ios