ಸಜ್ಜನರ ಸಂಗ ಹೆಜ್ಜೇನು ಸವಿದಂತೆ... ರಾಜಕಾರಣಿಗಳ ಸಂಗ? ಡಾ.ಮಂಜುನಾಥ್ ಮಾತಿಗೆ ನಗುವಿನ ಅಲೆ!
ರಾಜಕಾರಣಿಗಳ ಸಂಗ ಮಾಡಿದ್ರೆ ಏನಾಗುತ್ತದೆ? ಸ್ವಯಂ ರಾಜಕಾರಣಿಯೂ ಆಗಿರುವ ಡಾ.ಮಂಜುನಾಥ್ ಅವರ ಮಾತಿಗೆ ಬಿದ್ದೂ ಬಿದ್ದೂ ನಕ್ಕ ಜನರು!
ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ!! ದುರ್ಜನರ ಸಂಗದೊಡನಾಟ ಬಚ್ಚಲಿನ ರೊಚ್ಚಿನಂತಿಕ್ಕು ಸರ್ವಜ್ಞ ಎನ್ನುವ ಮಾತಿದೆ. ಅಂದರೆ ನಾವು ಸದಾ ಒಳ್ಳೆಯವ ಸಂಗದಲ್ಲಿಯೇ ಇರಬೇಕು ಎನ್ನುವುದು ಈ ಮಾತಿನ ತಾತ್ಪರ್ಯ. ಇದನ್ನೇ ಈಗ ರಾಜಕಾರಣಿಯೂ ಆಗಿರುವ ಖ್ಯಾತ ಹೃದ್ರೋಗ ತಜ್ಞ ಡಾ.ಮಂಜುನಾಥ್ ಅವರು ಹೇಳಿದ್ದು, ಇದರಲ್ಲಿ ಯಾರ್ಯಾರ ಸಂಗ ಏನು ಎನ್ನುವ ಬಗ್ಗೆ ಅವರು ಮಾರ್ಮಿಕವಾಗಿ ನುಡಿದಿದ್ದಾರೆ. ಯಾರ ಜೊತೆ ನಾವು ಬೆಳೆಯುತ್ತೆವೆಯೋ, ಯಾರ ಜೊತೆ ಸಂಗ ಮಾಡುತ್ತೇವೆಯೋ ಹಾಗೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ತಿಳಿಸಿರುವ ಡಾ. ಸಿ.ಎನ್. ಮಂಜುನಾಥ್ ಅವರು ಇದಕ್ಕೆ ಕೆಲವೊಂದು ಉದಾಹರಣೆಗಳನ್ನು ಕೊಟ್ಟಿದ್ದಾರೆ.
ನೋಡಿ ನಾವು ಶಿಕ್ಷಕರ ಜೊತೆಯೇ ಸಂವಾದ ಮಾಡ್ತಾ ಇದ್ರೆ ವಿದ್ಯಾರ್ಥಿಯಾಗಬೇಕು ಎನಿಸತ್ತೆ... ವಿಜ್ಞಾನಿಗಳ ಜೊತೆ ಸಂವಾದ ಮಾಡುತ್ತಿದ್ದರೆ ನಾವು ಸಂಶೋಧಕರಾಗಬೇಕು ಎನ್ನಿಸುತ್ತದೆ. ಕುಡುಕರ ಜೊತೆ ತುಂಬಾ ಸಂಬಂಧ ಇಟ್ಟುಕೊಂಡ್ರೆ ಅಥ್ವಾ ಅವರ ಜೊತೆ ಸಂವಾದ ಮಾಡುತ್ತಿದ್ದರೆ ಪ್ರಪಂಚದಲ್ಲಿ ಏನೂ ಸಮಸ್ಯೆನೇ ಇಲ್ಲ, ಪ್ರಪಂಚ ತುಂಬಾ ಸುಲಭ ಎನಿಸುತ್ತದೆ. ಅಧಿಕಾರಿಗಳ ಜೊತೆನೇ ಇದ್ದರೆ ಪ್ರಪಂಚ ಇನ್ನೂ ನಿಧಾನ ಎನಿಸುತ್ತದೆ ಎಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ಇಷ್ಟು ಹೇಳುವವರೆಗೆ ಅಲ್ಲಿದ್ದವರೆಲ್ಲಾ ತಾಳ್ಮೆಯಿಂದ ಮಾತನ್ನು ಕೇಳುತ್ತಿದ್ದರು.
ಮುಸ್ಲಿಂ ಟೋಪಿ, ಕ್ರೈಸ್ತರ ಕ್ರಾಸ್, ಹಿಂದೂಗಳ ತಿಲಕ... ಬೇಕಿತ್ತಾ ಕಂಗನಾಗೆ ಇದೆಲ್ಲಾ! ಈಗೇನಾಯ್ತು ನೋಡಿ...
ಆದರೆ ಸಿಕ್ಕಾಪಟ್ಟೆ ಚಪ್ಪಾಳೆ ಬಂದಿದ್ದು, ಡಾ.ಮಂಜುನಾಥ್ ಅವರು ರಾಜಕಾರಣಿಗಳ ಜೊತೆ ಸಂವಾದ ಮಾಡುತ್ತಿದ್ದರೆ, ಅವರ ಜೊತೆ ಸಂಪರ್ಕದಲ್ಲಿ ಇದ್ದರೆ.... ಎಂದು ಪ್ರಶ್ನೆ ಕೇಳುತ್ತಲೇ ಅವರು ಅದಕ್ಕೆ ಕೊಟ್ಟ ಉತ್ತರಕ್ಕೆ! ಈ ಉತ್ತರ ಕೇಳಿ ಅಲ್ಲಿದ್ದವರೆಲ್ಲಾ ಬಿದ್ದೂ ಬಿದ್ದೂ ನಕ್ಕರು. ಅಷ್ಟಕ್ಕೂ ಡಾ.ಮಂಜುನಾಥ್ ಅವರು ಹೇಳಿದ್ದೇನೆಂದರೆ, ರಾಜಕಾರಣಿಗಳ ಜೊತೆ ಸಂವಾದ ಮಾಡುತ್ತಿದ್ದರೆ ನಾವು ಓದಿದ್ದೆಲ್ಲಾ ವ್ಯರ್ಥ ಎನಿಸುತ್ತದೆ ಎಂದು! ಖುದ್ದು ರಾಜಕಾರಣಿಯೂ ಆಗಿರುವ ಡಾ.ಮಂಜುನಾಥ್ ಅವರ ಈ ಮಾತನ್ನು ಕೇಳಿ ಜನರು ಹೋ ಎಂದಿದ್ದಾರೆ. ಅದೇ ರೀತಿ ಇನ್ನೊಬ್ಬರ ಬಗ್ಗೆ ಹೇಳುವಾಗಲೂ ಪ್ರೇಕ್ಷಕರು ಸಾಕಷ್ಟು ನಕ್ಕಿದ್ದಾರೆ. ಅದೇನೆಂದರೆ ಡಾ.ಮಂಜುನಾಥ್ ಅವರು, ಎಲ್ಐಸಿ ಏಜೆಂಟ್ ಜೊತೆ ಸಂವಾದ ಮಾಡುತ್ತಿದ್ದರೆ.... ಎಂದು ಹೇಳುತ್ತಿದ್ದಂತೆಯೇ ನಗುವಿನ ಅಲೆ ಎದ್ದಿದೆ. ಇದಕ್ಕೆ ಉತ್ತರಿಸಿದ ಡಾ.ಮಂಜುನಾಥ್ ಅವರು, ಎಲ್ಐಸಿ ಏಜೆಂಟ್ ಜೊತೆ ಸಂವಾದ ಮಾಡುತ್ತಿದ್ದರೆ ಇರೋದೇ ವ್ಯರ್ಥ, ಬೇಗ ಹೋಗಿ ಬಿಡೋಣ ಎನ್ನಿಸುತ್ತದೆ ಎಂದಿದ್ದಾರೆ.
ಕೊನೆಯಲ್ಲಿ ದೇಶವನ್ನು ಆಳುವ ಯೋಧರ ಬಗ್ಗೆ ಡಾ.ಮಂಜುನಾಥ್ ಹೇಳಿದ್ದಾರೆ. ಅದೇನೆಂದರೆ, ಯೋಧರ ಜೊತೆ ಸಂವಾದ ಮಾಡುತ್ತಿದ್ದರೆ, ನಾವು ದೇಶಕ್ಕಾಗಿ ಮಾಡುತ್ತಿರುವುದು ಏನೂ ಅಲ್ಲ, ಅವರ ತ್ಯಾಗ, ಬಲಿದಾನದ ಮುಂದೆ ನಾವು ಏನೂ ಅಲ್ಲ ಎನ್ನುವುದು ಅರ್ಥವಾಗುತ್ತದೆ ಎನ್ನುತ್ತಲೇ ಯಾರ ಸಂಗ ಇಟ್ಟುಕೊಳ್ಳಬೇಕು, ಯಾರನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ಇದಕ್ಕೆ ಹಲವಾರು ಪ್ರತಿಕ್ರಿಯೆ ಬಂದಿದ್ದು, ಚಿತ್ರ ನಟರ ಸಂಗ ಮಾಡಿದ್ರೆ ಏನಾಗುತ್ತದೆ ಎಂದೂ ಹೇಳಬೇಕಿತ್ತು ಎನ್ನುತ್ತಿದ್ದಾರೆ. ಅಂದಹಾಗೆ ಮಂಜುನಾಥ್ ಅವರು, ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು, ಡಿ.ಕೆ.ಸುರೇಶ್ ಅವರ ಭದ್ರಕೋಟೆಯನ್ನು ಛೇದಿಸಿ ಗೆಲುವು ಸಾಧಿಸಿದ್ದಾರೆ.
ದುಬೈ ಶೇಖ್ಗೆ ಮಾರಲು ಹೊಂಚುಹಾಕಿದ್ರಂತೆ ತಾಪ್ಸಿ ಪನ್ನು ಪತಿ! ಆ ದಿನಗಳ ಕುರಿತು ನಟಿ ಹೇಳಿದ್ದೇನು?