ಮದುವೆಗೂ ಮುನ್ನ ಈ ಆಕ್ಟರ್ ಜೊತೆ ಒನ್ ನೈಟ್ ಸ್ಟ್ಯಾಂಡ್, ಶಾಕ್ ನೀಡಿದ ಸಂಜಯ್ ಕಪೂರ್ ಪತ್ನಿ!
ಕಪೂರ್ ಕಾಂದಾನ್ ಸೊಸೆ ಮಹೀಪ್ ಕಪೂರ್ ಅಚ್ಚರಿ ವಿಷ್ಯವೊಂದನ್ನು ಹೇಳಿದ್ದಾರೆ. ಮದುವೆಗೂ ಮುನ್ನ ಆಕ್ಟರ್ ಜೊತೆ ಒನ್ ನೈಟ್ ಸ್ಟ್ಯಾಂಡ್ ಹೊಂದಿದ್ದೆ ಎಂದು ಸಂಜಯ್ ಕಪೂರ್ ಪತ್ನಿ ಹೇಳಿದ್ದಾರೆ.
ಬಾಲಿವುಡ್ ಪ್ರಸಿದ್ಧ ಜೋಡಿಗಳಲ್ಲಿ ನಟ ಸಂಜಯ್ ಕಪೂರ್ ಹಾಗೂ ಮಹೀಪ್ ಕಪೂರ್ (Bollywood famous couples Actor Sanjay Kapoor and Maheep Kapoor) ಕೂಡ ಒಂದು. ಕಪೂರ್ ಕಾಂದಾನ್ ಸೊಸೆ ಮಹೀಪ್ ಕಪೂರ್ ತಮ್ಮ ಲೈಫ್ ನ ಅತ್ಯಂತ ಗುಟ್ಟಿನ ವಿಷ್ಯವೊಂದನ್ನು ಈಗ ಬಹಿರಂಗಪಡಿಸಿದ್ದಾರೆ. ಮದುವೆಗೂ ಮುನ್ನ ಒನ್ ನೈಟ್ ಸ್ಟ್ಯಾಂಡ್ ಭಾಗವಾಗಿರೋದಾಗಿ ಮಹೀಪ್ ಕಪೂರ್ ಹೇಳಿದ್ದಾರೆ. ಅವ್ರು ಯಾರ ಜೊತೆ ರಾತ್ರಿ ಕಳೆದಿದ್ರು, ಅಲ್ಲಿ ಆಗಿದ್ದೇನು ಎಂಬ ವಿವರ ಇಲ್ಲಿದೆ.
ಒನ್ ನೈಟ್ ಸ್ಟ್ಯಾಂಡ್ (one night stand), ಈಗಿನ ಯುವಕರಲ್ಲಿ ಕಾಮನ್, ಮೊದಲೆಲ್ಲ ಇರ್ಲಿಲ್ಲ ಅಂತ ಹಿರಿಕರು ಹೇಳ್ತಾರೆ. ಆದ್ರೆ ಭಾರತದ ಸೆಲೆಬ್ರಿಟಿ ಲೈಫ್ ನಲ್ಲಿ ಓನ್ ನೈಟ್ ಸ್ಟ್ಯಾಂಡ್ ಆಗ್ಲೂ ನಡೀತಿತ್ತು. ಅನೇಕ ನಟ – ನಟಿಯರು ಈ ಒನ್ ನೈಟ್ ಸ್ಟ್ಯಾಂಡ್ ಮಾಡಿದ್ದಿದೆ. ಅದ್ರಲ್ಲಿ ಮಹೀಪ್ ಕಪೂರ್ ಕೂಡ ಸೇರಿದ್ದಾರೆ. ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಮಹೀಪ್ ಕಪೂರ್, ಇದ್ರ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.
ಬಿಗ್‌ಬಾಸ್ ಮನೆಯ ಹೇಳಬಾರದ ದೊಡ್ಡ ಗುಟ್ಟನ್ನು ಬಾಯ್ತಪ್ಪಿ ಹೇಳಿ ತಗ್ಲಾಕ್ಕೊಂಡ ತುಕಾಲಿ! ವಿಡಿಯೋ ವೈರಲ್
ಫ್ಯಾಬುಲಸ್ ಲೈವ್ಸ್ Vs ಬಾಲಿವುಡ್ ವೈವ್ಸ್ನಲ್ಲಿ ಕಾಣಿಸಿಕೊಂಡಿದ್ದ ಮಹೀಪ್ ಕಪೂರ್, ಮೊದಲ ಭೇಟಿಯಲ್ಲೇ ಒಬ್ಬ ಆಕ್ಟರ್ ಜೊತೆ ನಾನು ಒನ್ ನೈಟ್ ಸ್ಟ್ಯಾಂಡ್ ಗೆ ಒಪ್ಪಿದ್ದೆ ಎನ್ನುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಸಂಜಯ್ ಕಪೂರ್ ಜೊತೆ ಮದುವೆ ಆಗುವ ಮುನ್ನವೇ ಓನ್ ನೈಟ್ ಸ್ಟ್ಯಾಂಡ್ ಮಾಡಿದ್ದರು ಮಹೀಪ್. ನೀವೆಲ್ಲ ಬೇರೆ ಯಾವುದೋ ನಟನ ಹೆಸರನ್ನು ಕಲ್ಪಸಿಕೊಳ್ಳುವ ಮೊದಲೇ ನಾನು ಆ ಆಕ್ಟರ್ ಹೆಸರು ಹೇಳ್ತೇನೆ ಎಂದ ಮಹೀಪ್ ಕಪೂರ್, ಅವರು ಮತ್ತ್ಯಾರೂ ಅಲ್ಲ ಸಂಜಯ್ ಕಪೂರ್ ಎಂದಿದ್ದಾರೆ.
ಮಹೀಪ್ ಕಪೂರ್ ಪ್ರಕಾರ, ಅವರು ಸಂಜಯ್ ಕಪೂರ್ ಏರ್ಪಡಿಸಿದ್ದ ಪಾರ್ಟಿಗೆ ಹೋಗಿದ್ರು. ಪಾರ್ಟಿಗೆ ಆಹ್ವಾನವಿಲ್ಲದೆ ಹೋಗಿದ್ದವರಲ್ಲಿ ಮಹೀಪ್ ಕಪೂರ್ ಒಬ್ಬರು. ಪಾರ್ಟಿಯಲ್ಲಿ ಸಿಕ್ಕಾಪಟ್ಟೆ ಡ್ರಿಂಕ್ಸ್ ಮಾಡಿದ್ರು. ಕುಡಿದ ಅಮಲಿನಲ್ಲಿಯೇ ಸಂಜಯ್ ಕಪೂರ್ ಫ್ಯಾಮಿಲಿಯನ್ನು ಭೇಟಿಯಾಗಿದ್ದರು. ಅನಿಲ್ ಕಪೂರ್, ಶ್ರೀದೇವಿ ಸೇರಿದಂತೆ ಎಲ್ಲರನ್ನು ಮದ್ಯದ ನಶೆಯಲ್ಲಿಯೇ ಮಾತನಾಡಿಸಿದ್ದರು. ಆದ್ರೆ ಒನ್ ನೈಟ್ ಸ್ಟ್ಯಾಂಡ್ ಗೆ ಹೋಗಿದ್ದ ಅದೇ ವ್ಯಕ್ತಿ ಜೊತೆ ಮದುವೆ ಆಗ್ತೇನೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಮಹೀಪ್ ಕಪೂರ್ ಹೇಳಿದ್ದಾರೆ.
ನನ್ನ ಒನ್ ನೈಟ್ ಸ್ಟ್ಯಾಂಡ್ ಬಗ್ಗೆ ತಿಳಿದೂ ಸಂಜಯ್ ನನ್ನನ್ನು ಸ್ವೀಕರಿಸಿದ್ದರು. ಸಂಜಯ್ ಕುಟುಂಬ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿತ್ತು. ನಮ್ಮ ದಾರಿ ತುಂಬಾ ಸರಳವಾಗಿತ್ತು. ಯಾರೂ ಪ್ರಪೋಸ್ ಮಾಡಲಿಲ್ಲ. ಸಂಜಯ್, ನಾನು ನಿನಗಿಂತ ದೊಡ್ಡವನು ಅಂದಿದ್ರು. ನನಗೆ ಸಂಜಯ್ ಇಷ್ಟವಾಗಿದ್ದ, ಆಗ ಇಂಟರ್ನೆಟ್ ಇರ್ಲಿಲ್ಲ, ನಮ್ಮ ಬಗ್ಗೆ ಮಾತನಾಡೋರು ಇರ್ಲಿಲ್ಲ. ದಿ ನೈಟ್ ಕ್ಲಬ್ ನಲ್ಲಿ ಪಾರ್ಟಿ ಮಾಡ್ತಿದ್ದ ವೇಳೆ, ಸರಿ ನಾವು ಮದುವೆ ಆಗ್ತಿದ್ದೇವೆ ಎಂದು ಸಂಜಯ್ ಹೇಳ್ತಿದ್ದಂತೆ ಟಕೀಲಾ ಎತ್ತಿ, ನಾನು ಸರಿ ಸರಿ ಎಂದಿದ್ದೆ ಎನ್ನುತ್ತ ಮಹೀಪ್ ತಮ್ಮ ಲವ್ ಸ್ಟೋರಿಯನ್ನು ಹೇಳಿಕೊಂಡಿದ್ದಾರೆ.
ಅಂದು ಬಾಲ್ ಬಾಯ್ ಸುದೀಪ್‌ಗೆ ಕ್ರಿಕೆಟರ್ ಸಿದ್ದು ಕೊಟ್ಟಿದ್ರು 'ಪವರ್' ಬ್ಯಾಟ್; ಈಗೇನಾಯ್ತು ನೋಡಿ!
ಮದುವೆ ಪ್ರಸ್ತಾಪದ ನಂತರ, ಮಹೀಪ್ ಮತ್ತು ಸಂಜಯ್ ಪರಸ್ಪರ 5 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಸಂಜಯ್ ಕಪೂರ್ ಮತ್ತು ಮಹೀಪ್ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. ದಂಪತಿ ಅನೇಕ ಕಾರ್ಯಕ್ರಮಗಳು ಮತ್ತು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿರುತ್ತಾರೆ. ಸಂಜಯ್ ದತ್ ಹಾಗೂ ಮಹೀಪ್, ಇಬ್ಬರು ಮಕ್ಕಳ ಪಾಲಕರು. ಮಹೀಪ್ ಕಪೂರ್ ಮಗಳು ಶನಯಾ ಕಪೂರ್ ಸಿನಿಮಾಗೆ ಎಂಟ್ರಿಯಾಗಲು ಸಿದ್ಧತೆ ನಡೆಸಿದ್ದಾರೆ. ಸಂಜಯ್ ಕಪೂರ್ ಕೂಡ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.