Asianet Suvarna News Asianet Suvarna News

ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ! ಜಿಲ್ಲಾಧಿಕಾರಿ ಕಚೇರಿಗೆ ಯುವಕರ ಕುದುರೆ ಪರೇಡ್‌

ರಾಷ್ಟ್ರದಾದ್ಯಂತ ಪುರುಷ-ಮಹಿಳೆಯರ ಅನುಪಾತವು ಸರಿಯಾಗಿಲ್ಲದಿರುವುದು ದೇಶದ ಹೆಚ್ಚಿನ ಭಾಗಗಳಲ್ಲಿ ಯುವಕರಿಗೆ ಹುಡುಗಿ ಸಿಗದಿರುವುದಕ್ಕೆ ಕಾರಣವಾಗುತ್ತಿದೆ. ಹೀಗಿರುವಾಗ ಮಹಾರಾಷ್ಟ್ರದ ಅವಿವಾಹಿತ ಯುವಕರ ಗುಂಪೊಂದು ತಮ್ಮ ಜೀವನದಲ್ಲಿ  ಕಾಡುತ್ತಿರುವ ಸಮಸ್ಯೆಯನ್ನು ಎದುರಿಸಲು ವಿಚಿತ್ರವಾದ ಕೆಲಸ ಮಾಡಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Maharashtra Bachelors stage march to collectors office seeking brides Vin
Author
First Published Dec 23, 2022, 3:11 PM IST

ಪುಣೆ: ಇತ್ತೀಚಿನ ದಿನಗಳಲ್ಲಿ ಮದುವೆ (Marriage)ಯಾಗಲು ಹುಡುಗಿ ಸಿಗುತ್ತಿಲ್ಲ ಅನ್ನೋದು ಹಲವರನ್ನು ಕಾಡುತ್ತಿರುವ ಸಮಸ್ಯೆ. ಹೀಗಾಗಿಯೇ ಹಲವು ಆನ್‌ಲೈನ್ ಫ್ಲಾಟ್‌ಫಾರ್ಮ್‌ಗಳು ಮ್ಯಾಚ್‌ ಮೇಕಿಂಗ್ ಮಾಡುತ್ತವೆ. ವಧು (Bride)ವನ್ನು ಹುಡುಕುವಲ್ಲಿನ ತೊಂದರೆಯ ಬಗ್ಗೆ ಬ್ಯಾಚುಲರ್‌ಗಳು ದೂರುವುದು ಸಾಮಾನ್ಯ ದೃಶ್ಯವಲ್ಲ. ರಾಷ್ಟ್ರದಾದ್ಯಂತ ಪುರುಷ-ಮಹಿಳೆಯರ (Men-woman) ಅನುಪಾತವು ಸರಿಯಾಗಿಲ್ಲದಿರುವುದು ದೇಶದ ಹೆಚ್ಚಿನ ಭಾಗಗಳಲ್ಲಿ ಯುವಕರಿಗೆ ಹುಡುಗಿ ಸಿಗದಿರುವುದಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಮಹಾರಾಷ್ಟ್ರದ ಅವಿವಾಹಿತ ಯುವಕರ ಗುಂಪೊಂದು ತಮ್ಮ ಜೀವನವನ್ನು ಕಾಡುತ್ತಿರುವ ಸಮಸ್ಯೆಯನ್ನು ಎದುರಿಸಲು ವಿಚಿತ್ರವಾದ ಕೆಲಸವನ್ನು ಮಾಡಿದ್ದಾರೆ.

ಮದುವೆಯಾಗದಿರುವ ಸಮಸ್ಯೆಗಾಗಿ ಅವರು ಸಮಿತಿಯನ್ನು ರಚಿಸಲು ಮತ್ತು ಮೆರವಣಿಗೆಯನ್ನು ಆಯೋಜಿಸಲು ನಿರ್ಧರಿಸಿದರು. ಸೊಲ್ಲಾಪುರ ಜಿಲ್ಲೆಯಲ್ಲಿ ಮದುಮಗ ಮೋರ್ಚಾವನ್ನು ರಚಿಸಲಾಯಿತು, ಅಲ್ಲಿ ಬ್ಯಾಚುಲರ್ಸ್‌ ಮೆರವಣಿಗೆಯಲ್ಲಿ ತೆರಳಿದರು. ಸುಮಾರು 50 ಯುವಕರು ಮದುವೆ ಗಂಡಿನಂತೆ ವೇಷಧರಿಸಿ, ಕುದುರೆ (Horse) ಮೇಲೆ ಕುಳಿತುಕೊಂಡು ಜಿಲ್ಲಾಧಿಕಾರಿ (collector) ಕಚೇರಿವರೆಗೆ ಮೆರವಣಿಗೆ ನಡೆಸಿ ವಧು ಹುಡುಕಿಕೊಡಿ ಎಂದು ಕೇಳಿದ ವಿಚಿತ್ರ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದಿದೆ.

Kerala Couple: ಭಾರತೀಯ ಸೇನೆಗೆ ಲಗ್ನಪತ್ರಿಕೆ ಕಳಿಸಿದ ಕೇರಳದ ವಧುವರರು

ಮದುಮಗನಂತೆ ವೇಷ ಧರಿಸಿ, ವಾದ್ಯ ವೃಂದದೊಂದಿಗೆ ಮೆರವಣಿಗೆ
ಮಹಾರಾಷ್ಟ್ರದಲ್ಲಿ ಪುರುಷ ಮತ್ತು ಮಹಿಳೆಯರ ನಡುವೆ ಇರುವ ಕಡಿಮೆ ಅನುಪಾತದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ಮೆರವಣಿಗೆ (Rally) ನಡೆಸಲಾಗಿದೆ. ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ರಾಜ್ಯದಲ್ಲಿ ಗಂಡು-ಹೆಣ್ಣು ಅನುಪಾತವನ್ನು ಹೆಚ್ಚು ಮಾಡಲು ಪ್ರಸವ ಪೂರ್ವ ಜಾಗೃತಿ ಮತ್ತು ಪ್ರಸವಪೂರ್ವ ರೋಗ ನಿರ್ಣಯ ತಂತ್ರಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಮನವಿ ಮಾಡಲಾಯಿತು. ಅಲ್ಲದೇ ಈ ಮೆರವಣಿಗೆಯಲ್ಲಿ ಭಾಗಿಯಾದವರಿಗೆ ವಿವಾಹವಾಗಲು ವಧು ಹುಡುಕಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಎಲ್ಲರೂ ಮದುವೆ ಧಿರಿಸು ಧರಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಕೆಲವರು ಕುದುರೆ ಏರಿ ಬಂದಿದ್ದರು. ಮೆರವಣೀಗೆ ವೇಳೆ ವಾದ್ಯವೃಂದದೊಂದಿಗೆ ಬಂದಿದ್ದು ವಿಶೇಷವಾಗಿತ್ತು.

ಮೆರವಣಿಗೆಯಲ್ಲಿ ತೆರಳಿದ ಯುವಕರು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಉದ್ದೇಶಿಸಿ ಜ್ಞಾಪಕ ಪತ್ರವನ್ನು ಸಹ ಸಲ್ಲಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ರಾಜ್ಯ ಸರ್ಕಾರವು ವಧುವನ್ನು ಕಂಡುಹಿಡಿಯಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ. 2022ರ ಮಾಹಿತಿಯ ಪ್ರಕಾರ, ಭಾರತದ ಲಿಂಗ ಅನುಪಾತವು 1000 ಪುರುಷರಿಗೆ 1020 ಮಹಿಳೆಯರು. ಗ್ರಾಮೀಣ ಪ್ರದೇಶಗಳಲ್ಲಿ, ಅನುಪಾತವು 1037 ಆಗಿದೆ; ಏತನ್ಮಧ್ಯೆ, ನಗರ ಪ್ರದೇಶಗಳಲ್ಲಿ, ಇದು 985 ಮಹಿಳೆಯರು ಮತ್ತು 1000 ಪುರುಷರನ್ನು ಹೊಂದಿದೆ.

43 ವರ್ಷದಲ್ಲಿ 53 ಮದ್ವೆಯಾದ ಸೌದಿಯ ಅಬ್ದುಲ್ಲಾ: ಕಾರಣ ಕೇಳಿ ಬೆಚ್ಚಿದ ಸಿಂಗಲ್ಸ್!

ಮೆರವಣಿಗೆಯಲ್ಲಿ ಭಾಗವಹಿಸಿದ 37 ವರ್ಷದ ವ್ಯಕ್ತಿಯೊಬ್ಬರು ಮದುವೆಯಾಗಲು ಹುಡುಗಿ ಸಿಗದ ಕಾರಣ ಖಿನ್ನತೆಯ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ಹೇಳಿದರು. 'ನಾನು ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದು, ಎರಡು ವರ್ಷಗಳ ಹಿಂದೆ ತಕ್ಕಮಟ್ಟಿಗೆ ಸಂಬಳದ ಕೆಲಸ ಮಾಡುತ್ತಿದ್ದೆ. ಆದರೆ ನನಗೆ ಜೀವನ ಸಂಗಾತಿ ಸಿಗಲಿಲ್ಲ. ನನ್ನ ಖಿನ್ನತೆಯು ಈಗ ವೈದ್ಯಕೀಯ ಸಮಸ್ಯೆಯಾಗಿ ಮಾರ್ಪಟ್ಟಿದೆ ಮತ್ತು ಕಳೆದ ಎರಡು ವರ್ಷಗಳಿಂದ ನಾನು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಸೂಕ್ತ ವಧುವನ್ನು ಹುಡುಕಲು ಸಾಧ್ಯವಾಗದಿರುವುದು ಕೆಲಸ ಕಳೆದುಕೊಳ್ಳಲು ಕಾರಣ ಎಂದು' ಅವರು ಹೇಳಿದರು

ಮೆರವಣಿಗೆಯಲ್ಲಿ ಭಾಗವಹಿಸಿದ ಮತ್ತೊಬ್ಬರು, 'ನನ್ನ ತಂದೆ ಹೃದಯಾಘಾತದಿಂದ ತೀರಿಕೊಂಡರು. ನನ್ನ ಮದುವೆಯ ಬಗ್ಗೆ ನಿರಂತರ ಕಾಳಜಿಯಿಂದ ಅವರು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು' ಎಂದು ತಿಳಿಸಿದರು. ಜ್ಯೋತಿ ಕ್ರಾಂತಿ ಪರಿಷತ್ತಿನ ಮುಖ್ಯಸ್ಥ ರಮೇಶ್ ಬರಸ್ಕರ್ ಮಾತನಾಡಿ, 'ವಧುಗಳನ್ನು ಹುಡುಕಲು ಸಹಾಯ ಕೋರಿ ಯುವಕರಿಂದ ಹಲವಾರು ಕರೆಗಳು ಬರುತ್ತಿವೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಸಂಘಟನೆಯು ವಿಲಕ್ಷಣ ರ್ಯಾಲಿಯನ್ನು ಆಯೋಜಿಸಿದೆ' ಎಂದರು. 

Follow Us:
Download App:
  • android
  • ios