ಗಂಡನಿಲ್ಲದಾಗ ಬಾಡಿಗೆಗೆ ಬಂದ ಯವಕನ ಜೊತೆ ಸರಸ, ಅಡ್ಡಿಯಾದ ಅತ್ತೆ ಕತೆ ಮುಗಿಸಿದ ಸೊಸೆ, ಗಂಡ ಕೆಲಸದ ಕಾರಣದಿಂದ ಪ್ರತಿ ದಿನ ಮನೆಗೆ ಬರಲು ಸಾಧ್ಯವಾಗತ್ತಿರಲಿಲ್ಲ. ಹೀಗಾಗಿ ಪ್ರತಿ ದಿನ ಯುವಕನ ಜೊತೆ ಮಂಚದಾಟ ನೆಡೆಯುತ್ತಲೇ ಇತ್ತು.
ಲಖನೌ (ಮಾ.23) ಅಕ್ರಮ ಸಂಬಂಧಗಳು ಅಂತ್ಯಗೊಂಡಿದ್ದು ಬಹುತೇಕ ಹತ್ಯೆಯಲ್ಲಿ. ಗಂಡ, ಹೆಂಡತಿ, ಅತ್ತೆ, ಪೋಷಕರು, ರಕ್ತ ಸಂಬಂಧಿಗಳು ಹೀಗೆ ಅಕ್ರಮ ಸಂಬಂಧಕ್ಕೆ ಹಲವರು ಬಲಿಯಾಗಿದ್ದಾರೆ. ಹೀಗೆ ಇದೀಗ ಅತ್ಯಂತ ಕ್ರೂರ ಘಟನೆಯೊಂದು ನಡೆದಿದೆ. ಮೂವರು ಮಕ್ಕಳ ಜೊತೆಗಿನ ಸುಂದರ ಸಂಸಾರ. ಮಕ್ಕಳ ಜವಾಬ್ದಾರಿ, ಉತ್ತಮ ಜೀವನಕ್ಕಾಗಿ ಪತಿ ಹಗಳಿರುಳು ಕೆಲಸ ಮಾಡುತ್ತಿದ್ದ. ಹೀಗಾಗಿ ಪ್ರತಿ ದಿನ ಮನೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಎರಡು ಮಹಡಿಯ ಮನೆಯಲ್ಲಿ ಒಂದು ಮಹಡಿ ಬಾಡಿಗೆಗೂ ನೀಡಲಾಗಿತ್ತು. ಪತಿ ಇಲ್ಲದಾಗ ಬಾಡಿಗೆ ಮನೆಯ ಯುವಕನ ಜೊತೆಗೆ ಈಕೆ ಸರಸ ಶುರುಮಾಡಿದ್ದಾಳೆ. ಪ್ರತಿ ದಿನ ಯುವಕನ ಜೊತೆ ಮಂಚದಾಟ ಸಾಮಾನ್ಯವಾಗಿತ್ತು. ಇದು ಅರಿತ ಗಂಡನ ತಾಯಿ ಇವರ ಅಕ್ರಮ ಸಂಬಂಧವನ್ನು ಮಾತುಕತೆ ಮೂಲಕ ಬಗೆ ಹರಿಸಿ ಮಗನ ಸಂಸಾರ ಸರಿದಾರಿಗೆ ತರಲು ಮುಂದಾಗಿದ್ದಾರೆ. ಅತ್ತೆಗೆ ಗೊತ್ತಾಗಿದ್ದೆ ತಡ, ಆಕೆಯ ಕತೆಯನ್ನೇ ಸೊಸೆ ಹಾಗೂ ಆಕೆಯ ಲವರ್ ಮುಗಿಸಿದ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ.
ಬಾಡಿಗೆ ಬಂದ ಯುವಕನ ಜೊತೆ ಅಕ್ರಮ ಸಂಬಂಧ
ತ್ರಿದೇಶ್ ಹಾಗೂ ರಂಜನಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇವರ ಜೊತೆ ತ್ರಿದೇಶ್ ತಾಯಿ 69 ವರ್ಷದ ನಿರ್ಮಲಾ ದೇವಿ ಕೂಡ ವಾಸವಾಗಿದ್ದರು. ಲಖನೌದಲ್ಲಿ ಎರಡು ಮಹಡಿಯ ಮನೆ ಇದೆ. ನೆಲ ಮಹಡಿಯಲ್ಲಿ ಈ ಕುಟುಂಬ ವಾಸವಾಗಿದ್ದರೆ, ಮೇಲಿನ ಮಹಡಿಯನ್ನು ಬಾಡಿಗೆ ನೀಡಲಾಗಿತ್ತು. ಇದರ ಆದಾಯವೂ ಜೀವನ ನಿರ್ವಹಣೆಗೆ ಮುಖ್ಯವಾಗಿತ್ತು. ತ್ರಿದೇಶ್ ಕೆಲಸದ ನಿಮಿತ್ತ ಪ್ರತಿ ದಿನ ಮನೆಗೆ ಮರಳು ಸಾಧ್ಯವಾಗುತ್ತಿರಲಿಲ್ಲ. ಇದನ್ನೇ ಬಂಡಡವಾಳ ಮಾಡಿಕೊಂಡ ತ್ರಿದೇಶ್ ಪತ್ನಿ ರಂಜನಾ ಬಾಡಿಗೆಗೆ ಬಂದ ಯುವಕನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ. ತನಗಿಂತ ಹಲವು ವರ್ಷಗಳ ಕಿರಿಯ ಯುವಕನೊಂದಿಗೆ ಅಕ್ರಮ ಸಂಬಂಧ ತೀವ್ರಗೊಂಡಿದೆ.
ಪ್ರತಿ ದಿನ ಯುವಕನ ಜೊತೆ ಸರಸ
ಕೆಲಸದ ಕಾರಣ ಬೇಗನೆ ಮನೆಯಿಂದ ತೆರಳುತ್ತಿದ್ದರು. ಹಲವು ಬಾರಿ ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದರು. ಇದೇ ಸಮಯದಲ್ಲಿ ಬಾಡಿಗೆ ಮನೆಯಲ್ಲಿದ್ದ ರಾಜನ್ ಅನ್ನೋ ಯುವಕನ ಜೊತೆ ಸರಸದಲ್ಲಿ ತೊಡಗಿದ್ದಾಳೆ. ಮಕ್ಕಳು ಶಾಲೆಗೆ ಹೋದ ಬಳಿಕ ರಂಜನಾ ನೇರವಾಗಿ ಬಾಡಿಗೆ ನೀಡಿದ್ದ ಮನೆಗೆ ತೆರಳಿ ಯುವಕನ ಜೊತೆ ಮಲಗುತ್ತಿದ್ದಳು. ಪ್ರತಿ ದಿನ ಮುಂದುವರಿದಿತ್ತು. ಈ ವಿಚಾರ ಅತ್ತೆ ನಿರ್ಮಾಲಾ ದೇವಿಗೆ ಗೊತ್ತಾಗಿದೆ. ಮಗನ ವೈವಾಹಿಕ ಜೀವನ, ಮಕ್ಕಳು ಎಲ್ಲವನ್ನೂ ಯೋಚನೆ ಮಾಡಿದ ನಿರ್ಮಲಾ ದೇವಿ ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾಳೆ. ತ್ರಿದೇಶ್‌ಗೆ ಈ ಕುರಿತು ಕೆಲ ಸೂಚನೆಗಳು ಸಿಕ್ಕಿತ್ತು. ನಿರ್ಮಾಲಾ ದೇವಿ ತಿಳಿಹೇಳಲು ಮುಂದಾಗಿದ್ದೇ ತಡ, ಸೊಸೆ ಹಾಗೂ ಆಕೆಯ ಅಕ್ರಮ ಸಂಬಂಧದ ಲವರ್ ಇಬ್ಬರು ಅತ್ತೆಯನ್ನೇ ಮುಗಿಸಿದ್ದಾರೆ.
ಕೈ ಕಾಲು ಕಟ್ಟಿ ಉಸಿರುಗಟ್ಟಿಸಿ ನಿರ್ಮಾಲಾ ದೇವಿಯನ್ನು ಹತ್ಯೆ ಮಾಡಿದ್ದಾರೆ. ಪರೀಕ್ಷೆ ಮುಗಿಸಿ ಬೇಗನೆ ಮನೆಗೆ ಬಂದಾಗ ಅಜ್ಜಿ ಕೈ ಕಾಲು ಕಟ್ಟಿ ಮನೆಯ ಕೋಣೆಯೊಳಗೆ ಬಿದ್ದಿರುವುದು ಗಮಿಸಿ ಆತಂಕಗೊಂಡಿದ್ದಾರೆ. ತಕ್ಷಣವೇ ತಂದೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ತ್ರಿದೇಶ್ ಪೊಲೀಸರಿಗೆ ಮಾಹಿತಿ ನೀಡಿ ಮನೆಯತ್ತ ಧಾವಿಸಿದ್ದಾರೆ. ಪೊಲೀಸರು ಆಗಮಿಸಿದ್ದಾರೆ. ತನ್ನ ಪತ್ನಿ ಹಾಗೂ ಮೇಲಿನ ಬಾಡಿಗೆ ಮನೆಯಾತ ಸೇರಿ ನನ್ನ ತಾಯಿಯನ್ನು ಹತ್ಯೆ ಮಾಡಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಾಯಿಯನ್ನು ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ದೂರಿನ ಬೆನ್ನಲ್ಲೇ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದಾಗ ಇವರ ಅಕ್ರಮ ಸಬಂಧ, ಕೊಲೆ ಪ್ರಕರಣ ಹಿಂದಿನ ಕ್ರೂರ ಘಟನೆ ಬೆಳಕಿಗೆ ಬಂದಿದೆ. ಅತ್ತೆಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವುದು ಬಯಲಾಗಿದೆ. ಅತ್ತೆ ಕೈ ಕಾಲು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿದ್ದಾರೆ, ಬಳಿಕ ಅತ್ತೆ ಮುಂದೆ ರೊಮ್ಯಾನ್ಸ್ ಮಾಡಿದ್ದಾರೆ. ಹಿಂಸೆ ನೀಡಿ ಅತ್ತೆಯನ್ನು ಹತ್ಯೆ ಮಾಡಿದ ಸೊಸೆ ಹಾಗೂ ಆಕೆಯ ಲವರ್ ಜೈಲು ಸೇರಿದ್ದಾರೆ.


