ಇತ್ತೀಚಿನ ದಿನಗಳಲ್ಲಿ ಬೈಕ್ ಚಲಾಯಿಸುತ್ತಲೇ ಪ್ರೇಮ ಪ್ರದರ್ಶನ ಹೆಚ್ಚಾಗಿದೆ. ರೀಲ್ಸ್ ಹುಚ್ಚಿನಿಂದಾಗಿ ಯುವಕರು ಅಪಾಯಕಾರಿ ಸಾಹಸಗಳಿಗೆ ಮುಂದಾಗುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಇಂತಹ ವಿಡಿಯೋಗಳು ವೈರಲ್ ಆಗುತ್ತಿದ್ದು, ಕೆಲವರು ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸರು ಕಠಿಣ ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆಗಳು ಹೆಚ್ಚುತ್ತಿವೆ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಪ್ರೇಮದ ಅಮಲೋ, ರೀಲ್ಸ್ ಹುಚ್ಚೋ ಗೊತ್ತಿಲ್ಲ. ಒಟ್ಟಿನಲ್ಲಿ ಬೈಕ್ ಚಲಾಯಿಸುತ್ತಲೇ ರೊಮಾನ್ಸ್ ಮಾಡುವುದು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇಂಥ ಪೋಕರಿ ಹುಡುಗರ ಕಂಡರೆ ಹೆಣ್ಣುಮಕ್ಕಳೂ ಸುಲಭದಲ್ಲಿ ಬೀಳುವ ಕಾರಣ, ಯುವಕರಿಗೋ ಖುಷಿಯೋ ಖುಷಿ. ಭರ್ಜರಿ ಬೈಕ್ ತಂದು ಪೋಸ್ ಕೊಟ್ಟರೆ ಸಾಕು, ಯುವತಿಯರು ಸುಲಭದಲ್ಲಿ ಬಿದ್ದು ಬೀಳ್ತಾರೆ, ಆಮೇಲೆ ಏನು ಬೇಕೋ ಹಾಗೆ ಮಾಡಿದರಾಯ್ತು ಎಂದುಕೊಳ್ಳುತ್ತಿರುವುದಕ್ಕೇ ಇಂದು ಹಿಂದು ಮುಂದು ನೋಡದೇ ಪ್ರೀತಿಯಲ್ಲಿ ಬಿದ್ದ ಯುವತಿಯರ ಸ್ಥಿತಿ ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಒಳ್ಳೊಳ್ಳೆ ಉದ್ಯೋಗದಲ್ಲಿ ಇರುವ ಹುಡುಗನನ್ನು ರಿಜೆಕ್ಟ್ ಮಾಡುವ ಯುವತಿಯರು ಕೊನೆಗೆ ಇಂಥವರ ಕೈಸೇರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇದೆ. ದುಬಾರಿ ಬೈಕ್ ಮೇಲೆ ಒಂದಿಷ್ಟು ಸ್ಟಂಟ್ ಮಾಡಿಕೊಂಡು ಹೋದರೆ, ಆ ಬಲೆಯಲ್ಲಿ ಸಿಲುಕುವ ಯುವತಿರಿಗೇನೂ ಕಮ್ಮಿ ಇಲ್ಲ.
ಅಂಥದ್ದೇ ಮತ್ತೊಂದು ವಿಡಿಯೋ ಈಗ ವೈರಲ್ ಆಗಿದೆ. ಇದು ರೀಲ್ಸ್ ಹುಚ್ಚಿಗಾಗಿ ಮಾಡಿರುವ ವಿಡಿಯೋ ಎಂದು ಕಾಣಿಸುತ್ತದೆ. ಇದರಲ್ಲಿ ಯುವಕನೊಬ್ಬ ಬೈಕ್ ಚಲಾಯಿಸುತ್ತಿದ್ದು, ಹಿಂದೆ ಯುವತಿ ಕುಳಿತಿದ್ದಾಳೆ. ರಸ್ತೆಯ ಮೇಲೆಯೇ ಈ ಜೋಡಿ ಮೈಮರೆತಿದೆ. ಲಿಪ್ಲಾಕ್ ಮಾಡಿಕೊಂಡಿದ್ದಾರೆ, ಅದೂ ಬೈಕ್ ಚಲಾಯಿಸುತ್ತಲೇ! ಎದುರಿಗೆ ಏನಾದರೂ ಗಾಡಿಯೋ, ಹಂಪ್ಸ್ ಬಂದರೆ ಇವರು ಸಾಯುವುದು ಅಲ್ಲದೇ ಉಳಿದವರೂ ಸಾಯುವುದೋ ಇಲ್ಲವೇ ಅಪಘಾತ ಆಗುವುದೋ ಗ್ಯಾರೆಂಟಿ. ಅಷ್ಟೇ ಅಲ್ಲದೇ ಇಂಥ ರೊಮಾನ್ಸ್ ಅನ್ನು ಕದ್ದು ಕದ್ದು ನೋಡಲು ಹೋಗಿ ಅಕ್ಕ ಪಕ್ಕದ ವಾಹನ ಸವಾರರೂ ಅಪಘಾತ ಮಾಡಿಕೊಳ್ಳುವ ಸಾಧ್ಯತೆ ಇದೆ.
ಉಫ್... ಲೈಕ್ಸ್ಗಾಗಿ ಇದೆಂಥ ಹುಚ್ಚು? ಟವಲ್ ಸುತ್ತಿಕೊಂಡು ಬಿಚ್ಚಿಬಿಚ್ಚಿ ತೋರಿಸಿದ ಯುವತಿಯರು!
ಅಷ್ಟಕ್ಕೂ, ಇಂದು ರೀಲ್ಸ್ ಎನ್ನುವ ಹುಚ್ಚು ಬಹುತೇಕರನ್ನು ಆವರಿಸಿಕೊಂಡು ಬಿಟ್ಟಿದೆ. ದಿಢೀರ್ ಎಂದು ಫೇಮಸ್ ಆಗಲು ಕಾಣುವ ಮಾರ್ಗ ಇದೊಂದೇ. ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಕಾಂಪಿಟೇಷನ್ ಕೂಡ ಜಾಸ್ತಿಯಾಗುತ್ತಿದೆ. ಅದಕ್ಕಾಗಿಯೇ ಕೆಲವರು ವಿಭಿನ್ನ ರೀತಿಯಲ್ಲಿ ರೀಲ್ಸ್ ಮಾಡುವ ತವಕದಲ್ಲಿ ಇರುತ್ತಾರೆ. ಇದೇ ಕಾರಣಕ್ಕೆ ಎಷ್ಟೋ ಮಂದಿ ಅಪಾಯಕಾರಿ ಎನ್ನುವ ರೀಲ್ಸ್ ಮಾಡಿ ಜೀವ ಕಳೆದುಕೊಂಡವರಿದ್ದಾರೆ, ಕೈ-ಕಾಲು ಮುರಿದುಕೊಂಡು ನರಳುತ್ತಿರುವವರೂ ಇದ್ದಾರೆ. ಇಂಥವರ ಬಗ್ಗೆ ಪ್ರತಿನಿತ್ಯ ಸುದ್ದಿಯಾಗುತ್ತಲೇ ಇರುತ್ತದೆ. ರೈಲು ಹಳಿಗಳ ಮೇಲೆ ನಿಲ್ಲುವುದು, ಬೆಟ್ಟದ ತುದಿಯಲ್ಲಿ ಹೋಗುವುದು... ಹೀಗೆ ರೀಲ್ಸ್ ಹುಚ್ಚಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವವರು ಒಂದೆಡೆಯಾದರೆ, ಚಿತ್ರ-ವಿಚಿತ್ರವಾಗಿ ರೀಲ್ಸ್ ಮಾಡಲು ಹೋಗಿ ಥಳಿತಕ್ಕೆ ಒಳಗಾಗುವವರೂ ಇದ್ದಾರೆ.
ಆದರೆ, ಇಂಥ ರೀಲ್ಸ್ಗಳನ್ನು ಮಾಡಿ ಬೇರೆಯವರ ಪ್ರಾಣ ತೆಗೆಯುತ್ತಾರೆ ಎನ್ನುವುದೇ ಆತಂಕದ ಸಂಗತಿಯಾಗಿದೆ. ಇಂಥ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಹಲವು ಘಟನೆಗಳಲ್ಲಿ ಬೈಕ್ಗಳ ಸಂಖ್ಯೆಯೂ ಕಾಣಿಸುತ್ತದೆ. ಅದರೆ ಎಷ್ಟು ಕೇಸ್ಗಳಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ತಾರೋ ಆ ದೇವರಿಗೇ ಗೊತ್ತು. ಇಂಥ ಹುಚ್ಚಾಟ ಮಾಡುವವರು ಒಂದೋ ಪ್ರಭಾವಿಗಳ ಮಕ್ಕಳಾಗಿರ್ತಾರೆ, ಇಲ್ಲವೇ ಪೊಲೀಸರೂ ಮುಟ್ಟಲು ಹೆದರುವವರಾಗಿರುತ್ತಾರೆ. ಅದಕ್ಕೇ ಪೊಲೀಸರು, ಕಾನೂನು ಯಾರ ಭಯವೂ ಇಲ್ಲದೇ ಇದು ನಿರಾತಂಕವಾಗಿ ನಡೆದುಕೊಂಡೇ ಹೋಗಿದೆ.
ಶ್ರೀರಸ್ತು ಶುಭಮಸ್ತು ಪೂರ್ಣಿಯ ಈ ವಿಡಿಯೋ ನೋಡಿ ನಿಮ್ಮ ಹೆಂಡ್ತಿ ನೆನಪಾದ್ರೆ ನಾವೇನೂ ಮಾಡೋಕೆ ಆಗಲ್ಲ ಬಿಡಿ!
