ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿದೆ. ಕೆಲವರು ಫೇಮಸ್ ಆಗಲು ಅಪಾಯಕಾರಿ ರೀಲ್ಸ್ ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ರೀಲ್ಸ್‌ಗಿಂತ ಅಶ್ಲೀಲ ರೀಲ್ಸ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಇಂತಹ ರೀಲ್ಸ್ ಮಾಡುವವರನ್ನು ಟ್ರೋಲ್ ಮಾಡುತ್ತಾ ನೋಡುವವರೇ ಹೆಚ್ಚು. ಲೈಕ್ಸ್ ಗಾಗಿ ಕೆಲವರು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿ ತೊಂದರೆ ಅನುಭವಿಸುತ್ತಿದ್ದಾರೆ.

ಇಂದು ರೀಲ್ಸ್‌ ಎನ್ನುವ ಹುಚ್ಚು ಬಹುತೇಕರನ್ನು ಆವರಿಸಿಕೊಂಡು ಬಿಟ್ಟಿದೆ. ದಿಢೀರ್‍‌ ಎಂದು ಫೇಮಸ್‌ ಆಗಲು ಕಾಣುವ ಮಾರ್ಗ ಇದೊಂದೇ. ರೀಲ್ಸ್‌ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಕಾಂಪಿಟೇಷನ್‌ ಕೂಡ ಜಾಸ್ತಿಯಾಗುತ್ತಿದೆ. ಅದಕ್ಕಾಗಿಯೇ ಕೆಲವರು ವಿಭಿನ್ನ ರೀತಿಯಲ್ಲಿ ರೀಲ್ಸ್‌ ಮಾಡುವ ತವಕದಲ್ಲಿ ಇರುತ್ತಾರೆ. ಇದೇ ಕಾರಣಕ್ಕೆ ಎಷ್ಟೋ ಮಂದಿ ಅಪಾಯಕಾರಿ ಎನ್ನುವ ರೀಲ್ಸ್‌ ಮಾಡಿ ಜೀವ ಕಳೆದುಕೊಂಡವರಿದ್ದಾರೆ, ಕೈ-ಕಾಲು ಮುರಿದುಕೊಂಡು ನರಳುತ್ತಿರುವವರೂ ಇದ್ದಾರೆ. ಇಂಥವರ ಬಗ್ಗೆ ಪ್ರತಿನಿತ್ಯ ಸುದ್ದಿಯಾಗುತ್ತಲೇ ಇರುತ್ತದೆ. ರೈಲು ಹಳಿಗಳ ಮೇಲೆ ನಿಲ್ಲುವುದು, ಬೆಟ್ಟದ ತುದಿಯಲ್ಲಿ ಹೋಗುವುದು... ಹೀಗೆ ರೀಲ್ಸ್ ಹುಚ್ಚಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವವರು ಒಂದೆಡೆಯಾದರೆ, ಚಿತ್ರ-ವಿಚಿತ್ರವಾಗಿ ರೀಲ್ಸ್‌ ಮಾಡಲು ಹೋಗಿ ಥಳಿತಕ್ಕೆ ಒಳಗಾಗುವವರೂ ಇದ್ದಾರೆ.

ಕಷ್ಟಪಟ್ಟು ವಿಷಯಗಳನ್ನು ಕಲೆ ಹಾಕಿ ಒಳ್ಳೊಳ್ಳೆ ವಿಷಯಗಳನ್ನು ಕೊಟ್ಟು ರೀಲ್ಸ್​ ಮಾಡಿದರೆ ಅಥವಾ ಸುದ್ದಿ ಬರೆದರೆ, ಸಂದರ್ಶನ ಮಾಡಿದರೆ ಅದರತ್ತ ಕಣ್ಣೆತ್ತಿಯೂ ನೋಡದ ದೊಡ್ಡ ವರ್ಗವೇ ಇದೆ. ಜನರ ಕಾಲಿಗೆ ಬಿದ್ದು ಇದನ್ನು ನೋಡಿ ಎಂದು ಹೇಳುವ ಸ್ಥಿತಿ ಇದೆ. ಆದರೆ ಅಸಭ್ಯ, ಅಶ್ಲೀಲ ಎನ್ನುವಂಥ ರೀಲ್ಸ್​ಗಳಿಗೆ ಸಕತ್​ ಡಿಮಾಂಡ್​. ಅದರಲ್ಲಿಯೂ ಮಹಿಳೆಯರು ಒಂದು ಹಂತಕ್ಕೆ ಮುಂದೆ ಹೋಗಿದ್ದಾರೆ! ವಯಸ್ಸಿನ ಮಿತಿ ಇಲ್ಲದೇ ಇಂಥ ರೀಲ್ಸ್​ಗಳನ್ನು ಮಾಡುತ್ತಿದ್ದಾರೆ! ಎಲ್ಲಾ ಹಂತಗಳನ್ನೂ ದಾಟಿ ಯಾವ ಹೇಸಿಗೆಯೂ ಇಲ್ಲದೇ ಅವರು ರೀಲ್ಸ್​ ಮಾಡಿದರೆ, ಅವರನ್ನು ಟ್ರೋಲ್​ ಮಾಡುತ್ತಾ, ಅಸಭ್ಯ ಶಬ್ದಗಳಿಂದ ಬೈಯುತ್ತಾ ಜೊಲ್ಲು ಸುರಿಸಿಕೊಂಡು ನೋಡುವ ದೊಡ್ಡ ವರ್ಗವೇ ಇದೆ ಎನ್ನುವುದೂ ಸುಳ್ಳಲ್ಲ. ಸಮಾಜಕ್ಕೆ ಉತ್ತಮ ಸಂದೇಶ ನೀಡಬಾರದೇ ಎಂದು ಕಮೆಂಟ್​ ಮಾಡುವ ಬಹಳಷ್ಟು ಕಮೆಂಟಿಗರಿಗೆ ತಾವು ನೋಡ್ತಿರೋ ಈ ಅಸಭ್ಯ ರೀಲ್ಸ್​ ಪಕ್ಕದಲ್ಲಿಯೇ ಇನ್ನೊಂದು ಒಳ್ಳೆಯ ವಿಷಯ ಇರುವ ಬಗ್ಗೆ ತಿಳಿದಿರುವುದೇ ಇಲ್ಲ! ಏಕೆಂದರೆ ಅದು ಯಾರಿಗೂ ಬೇಡ. ಇದೇ ಕಾರಣಕ್ಕೆ ಇಂದು ವ್ಯೂಸ್​, ಶೇರ್​, ಕಮೆಂಟ್ಸ್​, ಲೈಕ್ಸ್​, ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸಿಕೊಂಡವರಲ್ಲಿ ಒಂದೋ ಸೆಲೆಬ್ರಿಟಿಗಳು ಇಲ್ಲವೇ ಈ ರೀತಿಯ ಅಶ್ಲೀಲತೆಯನ್ನೇ ವಿಜೃಂಭಿಸಿ ರೀಲ್ಸ್​ ಮಾಡುವವರೇ ಆಗಿದ್ದಾರೆ!

ಶ್ರೀರಸ್ತು ಶುಭಮಸ್ತು ಪೂರ್ಣಿಯ ಈ ವಿಡಿಯೋ ನೋಡಿ ನಿಮ್ಮ ಹೆಂಡ್ತಿ ನೆನಪಾದ್ರೆ ನಾವೇನೂ ಮಾಡೋಕೆ ಆಗಲ್ಲ ಬಿಡಿ!

ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಇದರಲ್ಲಿ ಯುವತಿಯರಿಬ್ಬರು ಬಿಳಿಯ ಟವಲ್​ ಒಂದನ್ನು ಸುತ್ತಿಕೊಂಡು ಮೆರೆ ಕಾಬೋಮೆ ಹಾಡಿಗೆ ರೀಲ್ಸ್​ ಮಾಡಿದೆ. ಇದನ್ನು ನೋಡಿದರೆ ಅವರು ಒಳಗೆ ಬಟ್ಟೆ ಇಲ್ಲದೆಯೇ ರೀಲ್ಸ್​ ಮಾಡಿದಂತೆ ಕಾಣಿಸುತ್ತಿದೆ. ಆದರೆ ಅಸಲಿಗೆ ಅವರು ಒಳಗಡೆ ಬಟ್ಟೆ ಹಾಕಿಕೊಂಡಿದ್ದಾರೆ. ಆ ಬಟ್ಟೆಯೂ ಕಾಣಿಸುತ್ತಿದೆ. ಆದರೆ, ತಾವು ಯಾವುದೇ ಒಳ ಉಡುಪು ಇಲ್ಲದೆಯೇ ನೃತ್ಯ ಮಾಡುತ್ತಿರುವುದಾಗಿ ತೋರಿಸುವ ಉದ್ದೇಶವನ್ನು ಈ ಯುವತಿಯರು ಹೊಂದಿದಂತಿದೆ. ಯಥಾ ಪ್ರಕಾರ, ಇವರ ವಿರುದ್ಧ ಇಲ್ಲಸಲ್ಲದ ಕಮೆಂಟ್​ ಮಾಡಿ ಸಂಪೂರ್ಣ ರೀಲ್ಸ್ ಅನ್ನು ನೋಡಿದವರೇ ಹೆಚ್ಚೆಂದು ವ್ಯೂವ್ಸ್​ನಿಂದಲೇ ತಿಳಿಯುತ್ತಿದೆ. ಇವರ ಹೆಸರನ್ನು ಮಿಸ್ ಫುಲ್ಟುಸಿ ಮತ್ತು ಅಂತರಾ ಎಂದು ಬರೆಯಲಾಗಿದೆ. ಒಟ್ಟಿನಲ್ಲಿ ಒಂದೊಳ್ಳೆ ಉದ್ದೇಶದಿಂದ ಆರಂಭಗೊಂಡಿರುವ ಸೋಷಿಯಲ್​ ಮೀಡಿಯಾ ಎನ್ನುವುದು ಇಂಥವರಿಂದಲೇ ತುಂಬಿ ಹೋಗಿದೆ!

ಕೆಲವು ತಿಂಗಳ ಹಿಂದೆ, ಹರಿಯಾಣದ ಪಾಣಿಪತ್‌ನಲ್ಲಿ ಲೈಕ್ಸ್​ ಹುಚ್ಚಿಗಾಗಿ ಜನಜಂಗುಳಿ ಇರುವ ಮಾರ್ಕೆಟ್‌ನಲ್ಲಿ ಯುವಕನೊಬ್ಬ ಮಾಡಬಾರದ್ದು ಮಾಡಿ ಒದೆ ತಿಂದಿದ್ದ. ಈತ ಮಾಡಿದ್ದು ಏನೆಂದರೆ, ಮಹಿಳೆಯರ ಒಳಉಡುಪು ಧರಿಸಿ ರೀಲ್ಸ್ ಮಾಡುತ್ತಿದ್ದ! ಆರಂಭದಲ್ಲಿ ಈತ ಒಬ್ಬ ಹುಚ್ಚ ಎಂದುಕೊಂಡರು ಜನರು. ಬಳಿಕ ರೀಲ್ಸ್‌ ಮಾಡುತ್ತಿರುವುದು ತಿಳಿಯಿತು. ಈತನನ್ನು ನೋಡಿ ಮಹಿಳೆಯರು ಮುಜುಗರ ಪಟ್ಟುಕೊಂಡಿದ್ದಾರೆ. ಜನರಿಗೂ ಅಶ್ಲೀಲ ಎನ್ನಿಸಿದೆ. ಅಷ್ಟಕ್ಕೆಸುಮ್ಮನಾಗದ ಜನರು, ಈತನ ಸುತ್ತುವರೆದು ಹಿಗ್ಗಾಮುಗ್ಗ ಥಳಿಸಿದ್ದರು. ಆತನ ರೀಲ್ಸ್‌ ವೈರಲ್‌ ಆಯ್ತೋ ಇಲ್ವೋ ಗೊತ್ತಿಲ್ಲ. ಆದರೆ ಯುವಕನನ್ನು ಥಳಿಸಿದ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಆ್ಯಂಕರ್​ ಅನುಶ್ರೀ ಮದ್ವೆ ರಿವೀಲ್​ ಮಾಡಿಯೇ ಬಿಟ್ರು ಕ್ರೇಜಿಸ್ಟಾರ್​ ರವಿಚಂದ್ರನ್​! ಹುಡುಗ ಯಾರು?

View post on Instagram