ಮಡದಿಯಿಂದ ವಂಚಿತನಾದ ವ್ಯಕ್ತಿಗೆ ಸಿಕ್ತು ಭರಪೂರ ಪ್ರೀತಿ, ಈಗ ಲೈಫ್ ಸೂಪರ್!
ದಾಂಪತ್ಯದಲ್ಲಿ ಮೋಸವಾದ್ರೆ ಸಹಿಸೋದು ಕಷ್ಟ. ನಿಜವಾದ ಪ್ರೀತಿಯನ್ನು, ಪ್ರಾಮಾಣಿಕ ಸಂಗಾತಿಯನ್ನು ಎಲ್ಲರೂ ಬಯಸ್ತಾರೆ. ಅದು ಸಿಗದೆ ಹೋದಾಗ ಸಂಸಾರದ ಹಾದಿ ತಪ್ಪುತ್ತದೆ. ಆದ್ರೆ ಈ ಮಹಿಳೆಗೆ, ಪತಿಯ ಹಳೆ ದಾಂಪತ್ಯ ಹಳಿ ತಪ್ಪಿದ್ದೇ ಪ್ಲಸ್ ಪಾಯಿಂಟ್ ಆಗಿದೆ.
ನಿಜವಾದ ಪ್ರೀತಿ ಸಿಗೋದು ಈಗಿನ ದಿನಗಳಲ್ಲಿ ಬಹಳ ಕಷ್ಟ. ಸೌಂದರ್ಯ ನೋಡದೆ ಪ್ರೀತಿ, ಗೌರವ ನೀಡುವ ಸಂಗಾತಿ ಸಿಕ್ಕಿದ್ರೆ ಜೀವನ ಸುಖಕರವಾಗಿ ನಡೆಯುತ್ತದೆ. ದಾಂಪತ್ಯದಲ್ಲಿ ಪ್ರಾಮಾಣಿಕತೆ ಕೂಡ ಮುಖ್ಯ. ಅದೃಷ್ಟವಿಲ್ಲ ಎಂದುಕೊಂಡಿದ್ದ ಮಹಿಳೆ ಬಾಳಲ್ಲಿ ಆ ಕ್ಷಣ ಎಲ್ಲವೂ ಬದಲಾಗಿತ್ತು. ಆಕೆ ಬಯಸಿದ ವ್ಯಕ್ತಿಯೇ ಆಕೆಗೆ ಸಿಕ್ಕಿದ್ದ. ಅಷ್ಟಕ್ಕೂ ಆಕೆ ಜೀವನದಲ್ಲಿ ಆಗಿದ್ದೇನು ಎಂಬುದನ್ನು ನಾವಿಂದು ಹೇಳ್ತೆವೆ.
ವ್ಯಕ್ತಿಗೆ ಎಲ್ಲವೂ ಅದೃಷ್ಟ (Good Luck) ದಿಂದ ಸಿಗುತ್ತದೆ ಎನ್ನುವ ಮಾತೊಂದಿದೆ. ಆದ್ರೆ ಈ ಮಾತನ್ನು ಈ ಮಹಿಳೆ (Woman) ಆರಂಭದಲ್ಲಿ ಒಪ್ಪುತ್ತಿರಲಿಲ್ಲ. ಕಾಲೇಜಿನಿಂದ ಹಿಡಿದು ಕೆಲಸದವರೆಗೆ ಎಲ್ಲಿಯೂ ಆಕೆಗೆ ಅದೃಷ್ಟ ಕೈ ಹಿಡಿಯಲಿಲ್ಲ. ಇದಕ್ಕೆ ದುಃಖ ಪಡದೆ ಆಕೆ ಕಷ್ಟಪಟ್ಟು ತನಗೆ ಬೇಕಾಗಿದ್ದನ್ನು ಪಡೆದಿದ್ದಳು. ಆದ್ರೆ ಪ್ರೀತಿ (Love) ವಿಷ್ಯದಲ್ಲಿ ಮಾತ್ರ ಅದೃಷ್ಟ ಆಕೆ ಕೈ ಹಿಡಿದಂತಿದೆ. ಆಕೆ ಪ್ರೀತಿಸುತ್ತಿದ್ದ ವ್ಯಕ್ತಿಗೆ ಮದುವೆಯಾಗಿದ್ರೂ ಈಕೆ ಪ್ರೀತಿಗೆ ಧಕ್ಕೆಯಾಗ್ಲಿಲ್ಲ. ಈ ಮಹಿಳೆ ಬಯಸಿದ ವ್ಯಕ್ತಿಯೇ ಪತಿಯಾಗಿ ಸಿಕ್ಕಿದ್ದಾನೆ. ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ವೇಳೆ ಆರು ವರ್ಷಗಳ ಹಿಂದೆ, ಮ್ಯಾನೇಜರ್ ಒಬ್ಬ ವ್ಯಕ್ತಿಯನ್ನು ಮಹಿಳೆಗೆ ಪರಿಚಯ ಮಾಡಿಸಿದ್ದರಂತೆ. ಆ ವ್ಯಕ್ತಿ ಮಹಿಳೆ ಟೀಂನಲ್ಲಿ ಕೆಲಸ ಮಾಡ್ತಿದ್ದನಂತೆ. ಮೊದಲ ಬಾರಿಯೇ ಮಹಿಳೆ ಮುಖ ನೋಡಿ ನಕ್ಕಿದ್ದ ವ್ಯಕ್ತಿ ಆಪ್ತನೆನ್ನಿಸಿದ್ದನಂತೆ.
ವಯಸ್ಸಾದಂತೆ ಲೈಂಗಿಕಾಸಕ್ತಿ ಕಡಿಮೆ ಆಗ್ತಿದ್ಯಾ? ಅಡುಗೆ ಮನೆಯಲ್ಲಿದೆ ಬೆಸ್ಟ್ ಔಷಧಿ
ಕೈ ಕುಲುಕಿ ಮಾತನಾಡಿದ್ದ ವ್ಯಕ್ತಿ ನನಗೆ ಇಷ್ಟವಾಗಿದ್ದ. ಇಬ್ಬರು ಒಟ್ಟಾಗಿ ಕೆಲಸ ಶುರು ಮಾಡಿದ್ದೆವು. ಕೆಲಸ ಮಾತ್ರವಲ್ಲ ವೈಯಕ್ತಿಕ ವಿಷ್ಯಗಳನ್ನು ಕೂಡ ಚರ್ಚೆ ಮಾಡ್ತಿದ್ದೆವು ಎನ್ನುವ ಮಹಿಳೆ ಆ ನಂತ್ರ ನಾವಿಬ್ಬರು ಒಳ್ಳೆ ಸ್ನೇಹಿತರಾದ್ವಿ. ಡಿನ್ನರ್ ನಿಂದ ಹಿಡಿದು ಬಾರ್ ವರೆಗೆ ಇಬ್ಬರು ಒಟ್ಟಿಗೆ ಹೋಗ್ತಿದ್ವಿ. ದಿನ ಕಳೆದಂತೆ ನಮ್ಮ ಮಾತು ಹೆಚ್ಚಾಯ್ತು. ನನಗೆ ಆತನ ಮೇಲೆ ಪ್ರೀತಿ ಹುಟ್ಟಿತ್ತು ಎನ್ನುತ್ತಾಳೆ ಮಹಿಳೆ. ಒಂದು ದಿನ ಮಾತನಾಡುವ ಸಂದರ್ಭದಲ್ಲಿ ಪ್ರೀತಿಸುತ್ತಿದ್ದ ವ್ಯಕ್ತಿಯ ಕೈನಲ್ಲಿ ಮದುವೆ ರಿಂಗ್ ನೋಡಿದಳಂತೆ ಮಹಿಳೆ. ಆ ತಕ್ಷಣ ತಮಾಷೆ ಎನ್ನುವಂತೆ ನಿನಗೆ ಮದುವೆಯಾಗಿದ್ಯಾ ಎಂದು ಕೇಳಿದ್ದಳಂತೆ. ಇದಕ್ಕೆ ತಲೆ ಅಲ್ಲಾಡಿಸುತ್ತ ವ್ಯಕ್ತಿ ಎಸ್ ಎಂದಿದ್ದನಂತೆ. ಈ ವಿಷ್ಯ ಕೇಳಿ ನಿಂತಿದ್ದ ನೆಲ ಕುಸಿದ ಅನುಭವವಾಗಿತ್ತಂತೆ. ಆದ್ರೆ ಮಾತು ಮುಂದುವರೆಸಿದ್ದ ವ್ಯಕ್ತಿ, ನಮ್ಮಿಬ್ಬರ ಸಂಬಂಧ ಸರಿಯಾಗಿಲ್ಲ. ಎರಡು ವರ್ಷಗಳಿಂದ ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ ಎಂದಿದ್ದನಂತೆ. ಪ್ರಾಮಾಣಿಕವಾಗಿ ಪ್ರೀತಿಸುವ ವ್ಯಕ್ತಿ ಬೇಕು ಎಂಬ ಸಂಕೇತ ನೀಡಿದ್ದ ವ್ಯಕ್ತಿಯನ್ನು ನಂಬೋದು ಸ್ವಲ್ಪ ಕಷ್ಟವೆನಿಸಿತ್ತು ಎನ್ನುತ್ತಾಳೆ ಮಹಿಳೆ.
ಈ ನೋವಿನಲ್ಲಿಯೇ ಮನೆಗೆ ಬಂದ ಮಹಿಳೆ ಮೊದಲು ಸಾಮಾಜಿಕ ಜಾಲತಾಣದಲ್ಲಿ ಆತನ ಪತ್ನಿಯನ್ನು ಹುಡುಕಿದ್ದಳಂತೆ. ಜೋಡಿ ಚೆನ್ನಾಗಿದೆ ಎಂದುಕೊಂಡವಳು ಬೇಸರದಲ್ಲಿ ಬಾರ್ ಗೆ ಹೋಗಿದ್ದಳಂತೆ. ಆದ್ರೆ ಅಲ್ಲಿ ಆಕೆ ಕಣ್ಣಿಗೆ ಬಿದ್ದಿದ್ದಳಂತೆ. ತಕ್ಷಣ ಫೋಟೋ ಕ್ಲಿಕ್ಕಿಸಿದ್ದಲ್ಲದೆ ಪ್ರೇಮಿಯನ್ನು ಆಹ್ವಾನಿಸಿದ್ದಳಂತೆ. ಆತ ಬಾರ್ ಗೆ ಬರುವ ಮೊದಲೇ ಆಕೆ ಅಲ್ಲಿಂದ ಹೋಗಿದ್ದಳು. ನಾನು ಬೇರೆ ಹುಡುಗನ ಜೊತೆಗಿದ್ದ ಅವನ ಪತ್ನಿ ಫೋಟೋ ತೋರಿಸಿದಾಗ ಆತ ಹೆಚ್ಚು ಪ್ರತಿಕ್ರಿಯೆ ನೀಡಲಿಲ್ಲ. ನನಗೆ ಮೊದಲೇ ತಿಳಿದಿತ್ತು ಎನ್ನುವ ರಿಯಾಕ್ಷನ್ ನೀಡಿದ್ದ ಎನ್ನುತ್ತಾಳೆ ಮಹಿಳೆ.
ಈರುಳ್ಳಿ, ಬೆಳ್ಳುಳ್ಳಿ ತಿಂದ್ರೆ ಲೈಂಗಿಕ ಬಯಕೆ ಹೆಚ್ಚುತ್ತೆ ಅಂತಾರೆ, ನಿಜಾನ?
ಘಟನೆ ನಡೆದ ಮರುದಿನ ವ್ಯಕ್ತಿ ಕಚೇರಿಗೆ ಬಂದಿರಲಿಲ್ಲವಂತೆ. ಇದು ಮಹಿಳೆಯನ್ನು ಗಿಲ್ಟಿಗೆ ನೂಕಿತ್ತಂತೆ. ಕೆಲ ದಿನಗಳ ನಂತ್ರ ಕೆಫೆಗೆ ಮಹಿಳೆಯನ್ನು ಕರೆದ ಪ್ರೇಮಿ, ಪತ್ನಿಗೆ ವಿಚ್ಛೇದನ (Divorce) ನೀಡ್ತಿದ್ದೇನೆ ಎಂದಿದ್ದಲ್ಲದೆ, ಮಹಿಳೆಗೆ ಪ್ರಪೋಸ್ ಮಾಡಿದ್ದನಂತೆ. ಇದ್ರಿಂದ ಖುಷಿಯಾದ ಮಹಿಳೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದಾಳೆ. ನಾವಿಬ್ಬರು ಸಂತೋಷವಾಗಿದ್ದೇವೆ ಎನ್ನತ್ತಾಳೆ.