Asianet Suvarna News Asianet Suvarna News

70ರ ಅಜ್ಜಿಗೆ ಪಾಕಿಸ್ತಾನಿ ಯುವಕನ ಮೇಲೆ ಲವ್! ಕೊನೆಗೇನಾಯ್ತು?

ಪ್ರೀತಿಸಿ ಮದುವೆ ಆಗುವುದು ಈಗಿನ ದಿನಗಳಲ್ಲಿ ಸಾಮಾನ್ಯ. ಕೆಲವೊಂದು ಮದುವೆ ನೋಡಿದ್ರೆ ವಿಚಿತ್ರವೆನ್ನಿಸುತ್ತದೆ. ಇದ್ರ ಹಿಂದೆ ನಿಜವಾದ ಪ್ರೀತಿ ಇದ್ಯಾ, ದುರುದ್ದೇಶವಿದ್ಯಾ ಎನ್ನುವ ಅನುಮಾನ ಕೂಡ ಹುಟ್ಟಿಕೊಳ್ಳುತ್ತದೆ. 
 

Love Story Pakistani Man Thirty Five Married With Seventy Year Old Canadian Woman roo
Author
First Published Sep 22, 2023, 2:05 PM IST

ಪ್ರೀತಿಗೆ ದೇಶ, ಭಾಷೆಯ ಮಿತಿಯಿಲ್ಲ. ವಯಸ್ಸಿನ ಅಂತರವೂ ಇದಕ್ಕಿಲ್ಲ. ಭಾಷೆ ಬರದ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಅನೇಕರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೀಮಾ ಹೈದರ್ ನಂತಹ ಪ್ರೇಮ ಪ್ರಕರಣಗಳು ಹೆಚ್ಚಾಗ್ತಿದೆ. ಪಾಕಿಸ್ತಾನದ ಸೀಮಾ ಹೈದರ್, ಭಾರತದ ಪ್ರೇಮಿಗಾಗಿ ಪಾಕಿಸ್ತಾನ ತೊರೆದಿದ್ದರೆ, ಅಂಜು ತನ್ನ ಪಾಕಿಸ್ತಾನಿ ಪ್ರೇಮಿಗಾಗಿ ಭಾರತ ಬಿಟ್ಟಿದ್ದಾಳೆ. ಈಗ ಇಂಥಹದ್ದೇ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ. ಇದು ಮತ್ತಷ್ಟು ಭಿನ್ನವಾಗಿದೆ. ಇಲ್ಲಿ ದೇಶ ಒಂದೇ ಅಲ್ಲ ವಯಸ್ಸು ಕೂಡ ಪ್ರೀತಿ ಮುಂದೆ ಸೋತಿದೆ. ಪಾಕಿಸ್ತಾನದ ವ್ಯಕ್ತಿಯೊಬ್ಬ ಕೆನಡಾ ಮಹಿಳೆ ಪ್ರೀತಿಗೆ ಬಿದ್ದಿದ್ದಲ್ಲದೆ ಆಕೆಯನ್ನು ಮದುವೆಯಾಗಿದ್ದಾನೆ. ಇಬ್ಬರ ಮಧ್ಯೆ ಇರುವ ವಯಸ್ಸಿನ ಅಂತರ ಇಲ್ಲಿ ಗಮನ ಸೆಳೆದಿದೆ. 32 ವರ್ಷದ ಪಾಕಿಸ್ತಾನಿ ವ್ಯಕ್ತಿ 70 ವರ್ಷದ ಕೆನಡಾ ಮಹಿಳೆ ಕೈ ಹಿಡಿದಿದ್ದಾನೆ. 

ಕೆನಡಾ (Canada) ಮಹಿಳೆ ಕೈ ಹಿಡಿದ ಪಾಕಿಸ್ತಾನಿ : ಪಾಕಿಸ್ತಾನಿ ಮಾಧ್ಯಮಗಳ ವರದಿ ಪ್ರಕಾರ ಈ ಪಾಕಿಸ್ತಾನಿ (Pakistani) ಪ್ರೇಮಿ ಹೆಸರು ನಹೀಮ್. ಈತ ತನಗಿಂತ 35 ವರ್ಷ ಹಿರಿಯ ಮಹಿಳೆ ಕೈ ಹಿಡಿದಿರುವ ಬಗ್ಗೆ ಅನೇಕರು ತಮ್ಮದೇ ದಾಟಿಯಲ್ಲಿ ಮಾತನಾಡ್ತಿದ್ದಾರೆ. ಪ್ರೀತಿ (Love)ಗಾಗಿ ಆತ 70 ವರ್ಷದ ಮಹಿಳೆ ಮದುವೆಯಾಗಿಲ್ಲ. ಇದ್ರ ಹಿಂದೆ ಬೇರೆ ಎನೋ ಉದ್ದೇಶವಿದೆ ಎಂದು ಜನರು ಮಾತನಾಡಿಕೊಳ್ತಿದ್ದಾರೆ. ನಹೀಮ್ ನನ್ನು ಜನರು ಗೋಲ್ಡ್ ಡಿಗ್ಗರ್ ಎಂದು ಕರೆಯುತ್ತಿದ್ದಾರೆ.

ಜಪಾನೀಯರು ಅಷ್ಟು ಹಣ ಉಳಿಸೋದು ಹೇಗೆ? ಇದೇ ʼಅರಿಗಾತೊʼ ಸೀಕ್ರೆಟ್!‌

ಸ್ನೇಹ (Friendship) ಚಿಗುರಲು ಕಾರಣವಾಯ್ತು ಫೇಸ್ಬುಕ್ (Facebook) : ಪಾಕಿಸ್ತಾನಿ ವೆಬ್ಸೈಟ್ ಒಂದರ ಜೊತೆ ಮಾತನಾಡಿದ ನಹೀಮ್, ಈ ಎಲ್ಲ ಆರೋಪವನ್ನು ತಳ್ಳಿ ಹಾಕಿದ್ದಾನೆ. ಒಂದು ದಶಕದ ಹಿಂದಿನಿಂದಲೇ ನಾವಿಬ್ಬರು ಪರಿಚಿತರು ಎಂದಿದ್ದಾನೆ. ಇಬ್ಬರ ಪರಿಚಯ ಫೇಸ್ಬುಕ್ ಮೂಲಕ ಆಗಿತ್ತು. ಅಲ್ಲಿಯೇ ಚಾಟ್ ಶುರು ಮಾಡಿದ್ದ ಇಬ್ಬರು ಒಳ್ಳೆ ಸ್ನೇಹಿತರಾದ್ರು. 2017ರಲ್ಲಿ ಇಬ್ಬರು ಮದುವೆಯಾಗುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು. ಅದು ಕೊನೆಗೂ ಈಡೇರಿದೆ. 

ಆರಂಭದಲ್ಲಿ ಸ್ನೇಹಿತರಾಗಿದ್ದವರಿಗೆ ಇದು ಪ್ರೀತಿಯಾಗಿ ಹೇಗೆ ಬದಲಾಯ್ತು ಎನ್ನುವುದೇ ತಿಳಿಯಲಿಲ್ಲ. ಇಬ್ಬರ ಮಧ್ಯೆ ಇಷ್ಟೊಂದು ವಯಸ್ಸಿನ ಅಂತರವಿರುವ ಕಾರಣ ಕೆಲವರು ಇವರ ಸಂಬಂಧ ದೀರ್ಘಕಾಲ ನಿಲ್ಲೋದು ಕಷ್ಟವೆಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್‌ನ ಈ ಟಾಪ್‌ ಹೀರೋಯಿನ್, ಭೂಗತಪಾತಕಿ ದಾವೂದ್ ಇಬ್ರಾಹಿಂ ಗರ್ಲ್‌ಫ್ರೆಂಡ್ ಆಗಿದ್ಲು!

ಮದುವೆಗಾಗಿ ಪಾಕಿಸ್ತಾನಕ್ಕೆ ಬಂದ ವಧು : 70ನೇ ವಯಸ್ಸಿನಲ್ಲಿ ಪರದೇಶದ, ತನಗಿಂತ ವಯಸ್ಸಿನಲ್ಲಿ ಚಿಕ್ಕವನಾಗಿರುವ ವ್ಯಕ್ತಿ ಜೊತೆ ಮದುವೆಯಾಗಲು ವಧು, ಕೆನಡಾದಿಂದ ಪಾಕಿಸ್ತಾನಕ್ಕೆ ಬಂದಿದ್ದಳು. ಪತ್ನಿ ಜೊತೆ ಕೆನಡಾದಲ್ಲಿ ವಾಸಿಸುವ ಪ್ಲಾನ್ ನಲ್ಲಿ ನಹೀಮ್ ಇದ್ದಾನೆ. ಪತ್ನಿಗೆ ಅನಾರೋಗ್ಯವಿರುವ ಕಾರಣ ಆಕೆ ಕೆಲಸ ಮಾಡಲು ಬಯಸೋದಿಲ್ಲ. ಹಾಗಾಗಿ ಇಬ್ಬರು ಸೇರಿ ಯುಟ್ಯೂಬ್ ಚಾನೆಲ್ ಶುರು ಮಾಡಿ, ಅದ್ರ ಮೂಲಕ ಹಣ ಗಳಿಸುವ ಪ್ಲಾನ್ ಮಾಡ್ತಿದ್ದಾನೆ ನಹೀಮ್. ನಾನು ಗೋಲ್ಡ್ ಡಿಗ್ಗರ್ ಅಲ್ಲ ಎಂದು ನಹೀಮ್ ಹೇಳಿದ್ದಾನೆ. ಕೆನಡಾ ಮಹಿಳೆ ಹಣ ನೋಡಿ ನಾನು ಮದುವೆಯಾಗಿಲ್ಲ. ಆಕೆ ಶ್ರೀಮಂತೆಯಲ್ಲ. ಆಕೆಗೆ ಬರುವ ಪಿಂಚಣಿಯಲ್ಲಿ ಆಕೆ ಜೀವನ ನಡೆಸುತ್ತಾಳೆ ಎಂದು ನಹೀಮ್ ಹೇಳಿದ್ದಾನೆ. 

ಇದ್ರ ಹಿಂದಿದ್ಯಾ ಈ ಕಾರಣ? : ನಹೀಮ್ ಮಾತ್ರವಲ್ಲ ಅನೇಕ ಪುರುಷರು ತಮಗಿಂತ ಹೆಚ್ಚು ವಯಸ್ಸಾಗಿರುವ ಮಹಿಳೆಯರಿಗೆ ಆಕರ್ಷಿತರಾಗ್ತಾರೆ. ಆದ್ರೆ ಇದ್ರ ಹಿಂದೆ ಬೇರೆ ಬೇರೆ ಕಾರಣವಿರುತ್ತದೆ. ವಿದೇಶಿ ಮಹಿಳೆ ಅದ್ರಲ್ಲೂ ತನಗಿಂತ ಡಬಲ್ ವಯಸ್ಸಾಗಿರುವ ಮಹಿಳೆಯನ್ನು ಮದುವೆಯಾದ ಅನೇಕ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಬೇರೆ ದೇಶದ ನಾಗರೀಕತೆ ಪಡೆಯಲು ಅನೇಕರು ಅಲ್ಲಿನ ಮಹಿಳೆಯರನ್ನು ಮದುವೆಯಾಗ್ತಾರೆ.  
 

Follow Us:
Download App:
  • android
  • ios