Asianet Suvarna News Asianet Suvarna News

ಬಾಲಿವುಡ್‌ನ ಈ ಟಾಪ್‌ ಹೀರೋಯಿನ್, ಭೂಗತಪಾತಕಿ ದಾವೂದ್ ಇಬ್ರಾಹಿಂ ಗರ್ಲ್‌ಫ್ರೆಂಡ್ ಆಗಿದ್ಲು!

ಬಾಲಿವುಡ್‌ನ ಟಾಪ್‌ ಹೀರೋಯಿನ್ ಆಗಿದ್ದ ನಟಿಯಾಕೆ. ಒಂದು ಕಾಲದಲ್ಲಿ ಎಲ್ಲಾ ಬಾಲಿವುಡ್ ನಟರ ಜೊತೆ ರೋಮ್ಯಾಂಟಿಕ್ ಸಿನಿಮಾಗಳನ್ನು ಮಾಡಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ಲು. ಅದ್ರೆ ಈಕೆ ಇವೆಲ್ಲಕ್ಕಿಂತ ಮುಖ್ಯವಾಗಿ ಅಂಡರ್‌ವರ್ಲ್ಡ್ ಡಾನ್‌  ದಾವೂದ್ ಗೆಳತಿ ಎಂದು ಗುರುತಿಸಲ್ಪಟ್ಟಿದ್ದಳು. ಯಾರಾಕೆ?

Once Dev Anands heroine, This actress was called Dawoods girlfriend Vin
Author
First Published Sep 22, 2023, 9:21 AM IST

ಬಾಲಿವುಡ್‌ನ ಟಾಪ್‌ ಹೀರೋಯಿನ್ ಆಗಿದ್ದ ನಟಿಯಾಕೆ. ಒಂದು ಕಾಲದಲ್ಲಿ ಎಲ್ಲಾ ಬಾಲಿವುಡ್ ನಟರ ಜೊತೆ ರೋಮ್ಯಾಂಟಿಕ್ ಸಿನಿಮಾಗಳನ್ನು ಮಾಡಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ಲು. ಆಗಿನ ಫೇಮಸ್ ನಟ ದೇವ್ ಆನಂದ್ ಅವರ ಹೀರೋಯಿನ್ ಎಂದೇ ಜನರು ಈಕೆಯನ್ನು ಗುರುತಿಸುತ್ತಿದ್ದರು. ಅಷ್ಟೇ ಅಲ್ಲ ಈಕೆ ಇವೆಲ್ಲಕ್ಕಿಂತ ಮುಖ್ಯವಾಗಿ ಅಂಡರ್‌ವರ್ಲ್ಡ್ ಡಾನ್‌  ದಾವೂದ್ ಗೆಳತಿ ಎಂದು ಗುರುತಿಸಲ್ಪಟ್ಟಿದ್ದಳು. 

ಪಾಕಿಸ್ತಾನದ ಗೂಢಚಾರಿಣಿ ಎಂದೇ ಗುರುತಿಸಿಕೊಂಡಿದ್ದ ನಟಿ
80 ಮತ್ತು 90ರ ದಶಕದಲ್ಲಿ, ಚಲನಚಿತ್ರೋದ್ಯಮದಲ್ಲಿ ಭೂಗತ ಜಗತ್ತಿನ ಹಸ್ತಕ್ಷೇಪ ಹೆಚ್ಚಾಗಿತ್ತು.  ಬಾಲಿವುಡ್ ತಾರೆಗಳು (Bollywood actress) ಮಾಫಿಯಾ ಡಾನ್‌ಗಳೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ ಎಂಬ ಹಲವಾರು ವದಂತಿಗಳು (Rumors) ಹಬ್ಬಿದ್ದವು. ಅವುಗಳಲ್ಲಿ ಕೆಲವೇ ಕೆಲವು ಮಾತ್ರ ಸಾಬೀತಾಗಿವೆ. ಅದರಲ್ಲೊಂದು ಈ ನಟಿಯ ಬಗ್ಗೆಯಿದ್ದ ಸುದ್ದಿ. ಆಕೆ ಮತ್ಯಾರೂ ಅಲ್ಲ ಪಾಕಿಸ್ತಾನಿ ನಟಿ ಅನಿತಾ ಅಯೂಬ್. 1993ರಲ್ಲಿ ದೇವ್ ಆನಂದ್ ನಿರ್ದೇಶಿಸಿದ ಪ್ಯಾರ್ ಕಾ ತರಾನಾ ಚಿತ್ರದ ಮೂಲಕ ಹಿಂದಿ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿದರು. ಇದಕ್ಕೂ ಮೊದಲು, ಅವರು ಪಾಕಿಸ್ತಾನಿ ಟಿವಿ ಸರಣಿ ದೂಸ್ರಾ ರಾಸ್ತಾ ಮತ್ತು ಗಾರ್ಡಿಶ್‌ನಲ್ಲಿ ಕೆಲಸ ಮಾಡಿದ್ದರು. ಮುಂದಿನ ವರ್ಷ, ದೇವ್ ಆನಂದ್ ಚಿತ್ರ ಗ್ಯಾಂಗ್‌ಸ್ಟರ್‌ನಲ್ಲಿ ನಟಿಸಿದರು.

ಬ್ರೇಕಪ್ ಆಗಿ ಖಿನ್ನತೆಗೆ ಜಾರಿದ್ದ ಈ ಮುದ್ದು ಮುಖದ ನಟಿ, ಯಶ್ ಮುಂದಿನ ಸಿನಿಮಾದ ನಾಯಕಿ

ಇದರ ಮಧ್ಯೆ, ನಟಿ 1993ರ ಬಾಂಬೆ ಸ್ಫೋಟದ ನಂತರ ಇತ್ತೀಚೆಗೆ ಭಾರತದಿಂದ ಪಲಾಯನ ಮಾಡಿದ ಕುಖ್ಯಾತ ಭೂಗತ ಡಾನ್ ದಾವೂದ್ ಇಬ್ರಾಹಿಂ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ವದಂತಿಗಳು ಹೊರಹೊಮ್ಮಿದವು. ಈ ನಟಿ ಚಿತ್ರರಂಗದಲ್ಲಿ ದಾವೂದ್ ಗೆಳತಿ ಎಂದೇ ಗುರುತಿಸಿಕೊಂಡಿದ್ದಳು. ಮಾತ್ರವಲ್ಲ ಪಾಕಿಸ್ತಾನಿ ಗೂಢಚಾರಣಿ (Spy) ಎಂದೇ ಕರೆಯಲಾಗುತ್ತಿತ್ತು. ಆಕೆಯನ್ನು ತಿರಸ್ಕರಿಸಿದ ನಿರ್ಮಾಪಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. 

ಅನಿತಾ ಅಯೂಬ್‌ಗೆ ನಟಿಸಲು ಅವಕಾಶ ನೀಡದ್ದಕ್ಕೆ  ನಿರ್ಮಾಪಕನ ಗುಂಡಿಕ್ಕಿ ಹತ್ಯೆ
ದಾವೂದ್‌ಗೆ ಹತ್ತಿರವಾಗಿದ್ದಾರೆ ಎಂಬ ವದಂತಿಗಳನ್ನು ಅನಿತಾ ಎಂದಿಗೂ ಒಪ್ಪಿಕೊಳ್ಳದಿದ್ದರೂ, ಉದ್ಯಮದ ಅನೇಕರು ಅದನ್ನು ಸತ್ಯವೆಂದು ಪರಿಗಣಿಸಿದ್ದಾರೆ. 1995ರಲ್ಲಿ, ಚಲನಚಿತ್ರ ನಿರ್ಮಾಪಕ ಜಾವೇದ್ ಸಿದ್ದಿಕ್ ತನ್ನ ಮುಂದಿನ ಬಾಲಿವುಡ್ ಸಾಹಸದಲ್ಲಿ ನಟಿಯನ್ನು ನಟಿಸಲು ನಿರಾಕರಿಸಿದರು. ದಾವೂದ್‌ನ ವ್ಯಕ್ತಿಗಳು ಪ್ರತೀಕಾರವಾಗಿ ಸಿದ್ದಿಕ್‌ನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನ ಮೂಲದ ನಿಯತಕಾಲಿಕೆ ಫ್ಯಾಶನ್ ಸೆಂಟ್ರಲ್ 90ರ ದಶಕದಲ್ಲಿ ಅಯೂಬ್‌ನ್ನು ಪಾಕಿಸ್ತಾನಿ ಗೂಢಚಾರಣಿ ಎಂದು ಉಲ್ಲೇಖಿಸಿತು. ಆದ್ದರಿಂದ ಆಕೆಯನ್ನು ಬಹಿಷ್ಕರಿಸಲಾಯಿತು. ಅನಿತಾ ಅಯೂಬ್‌ ವೃತ್ತಿಜೀವನವು 90ರ ದಶಕದ ಅಂತ್ಯದಲ್ಲಿ ಕೊನೆಗೊಂಡಿತು.

ಮೊದಲ ಸಿನಿಮಾಗೆ ಜಸ್ಟ್‌ 100 ರೂ. ಪಡೆದಿದ್ದ ನಟ; ಈಗ ಪ್ರತಿ ಚಿತ್ರಕ್ಕೆ ಭರ್ತಿ 100 ಕೋಟಿ ಸಂಭಾವನೆ!

1990ರ ದಶಕದ ಅಂತ್ಯದಲ್ಲಿ, ಅನಿತಾ ಭಾರತೀಯ ಉದ್ಯಮಿ ಸೌಮಿಲ್ ಪಟೇಲ್ ಅವರನ್ನು ವಿವಾಹವಾಗಿ ನ್ಯೂಯಾರ್ಕ್‌ಗೆ ತೆರಳಿದರು. ಅವರಿಗೆ ಶಾಜರ್ ಎಂಬ ಮಗನೂ ಇದ್ದಾನೆ. ಆದರೆ, ದಂಪತಿ ಕೆಲವು ವರ್ಷಗಳ ನಂತರ ಬೇರ್ಪಟ್ಟರು. ಅಯೂಬ್ ನಂತರ ಪಾಕಿಸ್ತಾನದ ಉದ್ಯಮಿ ಸುಬಾಕ್ ಮಜೀದ್ ಅವರನ್ನು ವಿವಾಹವಾದರು. ಅವರು ಭಾರತ ಮತ್ತು ಪಾಕಿಸ್ತಾನ ಇವೆರಡನ್ನೂ ಬಿಟ್ಟು ವಿದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios