ವಿಜಯ್ ಮಲ್ಯ ಎಂದರೆ ಹಣವಿರಲೀ, ಇಲ್ಲದಿರಲೀ, ಮದ್ಯ ಹಾಗೂ ಮಾದಕ ಯುವತಿಯರ ನಡುವೆ ಇರುವ ರಸಿಕ. ಭಾರತದ ಬ್ಯಾಂಕುಗಳಿಗೆ 9000 ಕೋಟಿ ರುಪಾಯಿಗಳ ವಂಚನೆಯನ್ನು ಮಾಡಿಯೂ ಪ್ರೀತಿ, ಪ್ರಣಯ ಹಾಗೂ ತನ್ನ ಐಶಾರಾಮಿ ಜೀವನಕ್ಕೆ ಕೊರತೆ ಮಾಡಿಕೊಳ್ಳದ ಚಿರಯುವಕ. ಒಂದು ಕಾಲದಲ್ಲಿ 'ವರ್ಕ್ ಹಾರ್ಡ್, ಪಾರ್ಟಿ ಹಾರ್ಡರ್' ಎಂಬುದಕ್ಕೆ ಉದಾಹರಣೆಯಾಗಿ ನಿಂತಿದ್ದ ಮಲ್ಯ ಈಗ ಸಾಲಗಳ ಸುಳಿಯಲ್ಲಿ ಸಿಲುಕಿದ್ದಾರೆ. ಹಾಗಿದ್ದರೂ ಅವರ ಶ್ರೀಮಂತ ಜೀವನಶೈಲಿಗೇನೂ ಕೊರತೆಯಿಲ್ಲ. 

ವಿವಾಹದ ವಯಸ್ಸಿನ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದರೂ ವಿಜಯ್ ಮಲ್ಯನ ವೈಯಕ್ತಿಕ ಬದುಕು ಮಾತ್ರ ಇನ್ನು ಇಪ್ಪತ್ತರ ಹರೆಯದಲ್ಲೇ ಓಡುತ್ತಿದೆ. ಹೌದು, ಕಳೆದ ವರ್ಷವಷ್ಟೇ ಮಲ್ಯ ಮೂರನೇ ವಿವಾಹವಾಗಿದ್ದಾರೆ. 

ಮಲ್ಯ ಮದುವೆ
ಏರ್ ಇಂಡಿಯಾದಲ್ಲಿ ಏರ್ ಹಾಸ್ಟೆಸ್ ಆಗಿದ್ದ ಸಮೀರಾ ತ್ಯಾಬ್ಜಿಗೂ ಬಿಸ್ನೆಸ್ ನಿಮಿತ್ತ ಅಮೆರಿಕಕ್ಕೆ ಹಾರುತ್ತಿದ್ದ ವಿಜಯ್ ಮಲ್ಯಗೂ ಆಗಿದ್ದು ಲವ್ ಅಟ್ ಫಸ್ಟ್ ಸೈಟ್. 1986ರಲ್ಲಿ ವಿಜಯ್ ಮಲ್ಯ ತನ್ನ ತಂದೆ ವಿಠಲ್ ಮಲ್ಯರ ಇಚ್ಛೆಯ ವಿರುದ್ಧವಾಗಿ ಸಮೀರಾಳೊಂದಿಗೆ ವಿವಾಹವಾದರು. ದುರದೃಷ್ಟವೆಂದರೆ ಒಂದೇ ವರ್ಷದಲ್ಲಿ ಈ ವಿವಾಹ ಮುರಿದು ಬಿತ್ತು. ಆದರೆ, ಅಷ್ಟರಲ್ಲಾಗಲೇ ಸಿದ್ಧಾರ್ಥ್ ಮಲ್ಯ ಜನಿಸಿದ್ದ. 

ನಂತರ ವಿಜಯ್ ಮಲ್ಯ ತಮ್ಮ ಶಾಲಾ ದಿನಗಳ ಗೆಳತಿ ರೇಖಾಳೊಂದಿಗೆ ಪ್ರೀತಿಗೆ ಬಿದ್ದರು. ಆದರೆ ಇದಕ್ಕೆ ಕೂಡಾ ತಂದೆ ವಿರೋಧ ವ್ಯಕ್ತಪಡಿಸಿದ್ದರಿಂದ ಆಕೆಯಿಂದ ದೂರ ಉಳಿದರು. ರೇಖಾ ಬೇರೆ ಇಬ್ಬರನ್ನು ವಿವಾಹವಾದರೂ ಎರಡೂ ಬಾರಿಯೂ ವಿಚ್ಛೇದನದಲ್ಲಿ ಮದುವೆ ಮುರಿಯಿತು. ಈ ಎರಡು ವಿವಾಹಗಳಿಂದ ರೇಖಾಗೆ ಇಬ್ಬರು ಮಕ್ಕಳಿದ್ದಾರೆ. ತದನಂತರದಲ್ಲಿ 1993ರಲ್ಲಿ ವಿಜಯ್ ಮಲ್ಯ ಆಕೆಯನ್ನು ವಿವಾಹವಾದರು. ಆಕೆಗದು ಮೂರನೇ ವಿವಾಹ. ಈ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ- ಲಿಯೆನ್ನಾ ಹಾಗೂ ತಾನ್ಯಾ ಎಂದು. 

ಇದಾಗಿ ಇಪ್ಪತ್ತು ವರ್ಷಗಳ ಬಳಿಕ ಅಂದರೆ, 2011ರಲ್ಲಿ ವಿಜಯ್ ಮಲ್ಯಗೆ ಮೂರನೇ ಪತ್ನಿಯಾಗುವವಳ ಮೊದಲ ಭೇಟಿಯಾಯಿತು. ಆಕೆಯೇ ಪಿಂಕಿ ಲಾಲ್ವಾನಿ. 

ಕಿಂಗ್‌ಫಿಶರ್‌ಗೆ ಸೇರಿ ಮಲ್ಯಳ ಕ್ವೀನ್ ಆದ ಪಿಂಕಿ
2011ರಲ್ಲಿ ಪಿಂಕಿ ಲಾಲ್ವಾನಿ ವಿಜಯ್ ಮಲ್ಯ ಅವರ ಕಿಂಗ್‌ಫಿಶರ್ ಏರ್‌ಲೈನ್ಸ್‌ನಲ್ಲಿ ಏರ್ ಹಾಸ್ಟೆಸ್ ಆಗಿ ಸೇರಿದರು. ಆಗ ಆಕೆಗೆ 33 ವರ್ಷ. ಹೀಗೆ ಉದ್ಯೋಗ ಅರಸಿ ಬಂದಾಕೆ ಉದ್ಯಮಿಯ ಜೊತೆ ಪ್ರೀತಿಗೆ ಬಿದ್ದಳು. ಅವರಿಬ್ಬರೂ ಡೇಟಿಂಗ್ ಆರಂಭಿಸಿದರು. 2016ರಲ್ಲಿ ಮಲ್ಯ ಭಾರತದಿಂದ ಪಲಾಯನ ಮಾಡಿದ ಸಮಯದಲ್ಲೇ ಪಿಂಕಿಯೂ ಭಾರತದಿಂದ ಲಂಡನ್‌ಗೆ ಹಾರಿದರು. ಸುಮಾರು ಮೂರು ವರ್ಷಗಳ ಡೇಟಿಂಗ್ ಬಳಿಕ ಪಿಂಕಿ ವಿಜಯ್ ಮಲ್ಯರ ಲಂಡನ್‌‌ನ ಹರ್ಟ್‌ಫೋರ್ಡ್‌ಶೈರ್‌ನಲ್ಲಿರುವ ಬಂಗಲೆಯಲ್ಲಿ ಅವರ ಜೊತೆಗೇ ವಾಸವಿರತೊಡಗಿದರು. 60ರ ಆಸುಪಾಸಿನಲ್ಲಿದ್ದ ಮಲ್ಯರ ಜೊತೆ ಪಿಂಕಿ ಅದೆಷ್ಟು ಗಾಢವಾಗಿ ಪ್ರೀತಿಗೆ ಬಿದ್ದಳೆಂದರೆ, ಮಲ್ಯ ಭಾರತದ ಬ್ಯಾಂಕುಗಳಿಗೆ ದೊಡ್ಡ ಮೊತ್ತವನ್ನು ವಂಚಿಸಿ ದೇಶ ಬಿಟ್ಟು ಓಡಿ ಹೋದರೂ ಪಿಂಕಿ ಅವರನ್ನು ಬಿಡಲಿಲ್ಲ. ಪಾಪರ್ ಆದರೂ ಪಕ್ಕವೇ ನಿಂತರು. ಅರೆಸ್ಟ್ ಆಗುತ್ತಾರೆ ಎಂದಾಗಲೂ ಜೊತೆ ನಿಂತು ಫೋಟೋಗೆ ಪೋಸ್ ನೀಡಿದರು. ಜಗತ್ತೇ ಮಲ್ಯರನ್ನು ಮೋಸಗಾರ ಎಂದು ನೋಡುವಾಗಲೂ ಪಿಂಕಿ ಜೊತೆಗೇ ನಿಂತರು. ಅಷ್ಟೇ ಏಕೆ, ಈ ವಂಚನೆ ಪ್ರಕರಣದ ವಿಚಾರಣೆಗಾಗಿ ಮಲ್ಯ ಲಂಡನ್‌ನ ಕೋರ್ಟ್‌ಗಳಿಗೆ ಅಲೆಯುವಾಗಲೂ ಪಿಂಕಿ ಅವರ ಜೊತೆಗೂಡಿದರು. ಈ ಕಾರಣಕ್ಕೆ ಪಿಂಕಿ ಗುಡ್ ಲವರ್ ಆಗಿ ಗುರುತಿಸಿಕೊಂಡರು. 

10 ಸಾವಿರ ಕೋಟಿಗಳೊಂದಿಗೆ ಓಡಿಹೋದ ವಿಜಯ್ ಮಲ್ಯ ಈಗ ಹೇಗಿದ್ದಾರೆ ಗೊತ್ತಾ?

ಕಡೆಗೆ 61 ವರ್ಷದ ವಿಜಯ್ ಮಲ್ಯ 2018ರಲ್ಲಿ 39 ವಯಸ್ಸಿನ ಪಿಂಕಿಯ ಕೈ ಹಿಡಿದಿದ್ದಾರೆ. ಎರಡನೇ ಪತ್ನಿ ರೇಖಾಗೆ ವಿಚ್ಚೇದನ ನೀಡದಿದ್ದರೂ, ಪಿಂಕಿಯನ್ನೂ ವಿವಾಹವಾಗಿದ್ದಾರೆ. ಪಿಂಕಿಯು ಸಧ್ಯ ಹರ್ಟ್‌ಫೋರ್ಡ್‌ಶೈರ್‌ನಲ್ಲಿ ಮಲ್ಯರ ಜೊತೆಗೆ ವಾಸವಾಗಿದ್ದಾರೆ. ಅಚ್ಚರಿ ಎಂದರೆ ಇವರೊಂದಿಗೆ ಮಲ್ಯರ ತಾಯಿ ಲಲಿತ, ಮಕ್ಕಳು ಹಾಗೂ  ಎರಡನೇ ಪತ್ನಿ ರೇಖಾರೂ ಇದ್ದಾರೆನ್ನಲಾಗುತ್ತದೆ. 

ಪಿಂಕಿಯು ಲಂಡನ್‌ನಲ್ಲಿ ಹಲವು ಉದ್ಯಮಗಳನ್ನು ಹೊಂದಿದ್ದು ವಾರ್ಷಿಕ ಒಂದೂವರೆ ಕೋಟಿ ಆದಾಯ ಹೊಂದಿದ್ದಾರೆ. ಮಲ್ಯರ ಹಲವಾರು ಕಂಪನಿಗಳಲ್ಲಿ ಶೇರ್‌ಗಳನ್ನೂ, ನಿರ್ದೇಶಕಿ ಹುದ್ದೆಯನ್ನೂ ಹೊಂದಿದ್ದಾರೆ. 

ಹೂಸುವುದರ ಬಗ್ಗೆ ನಿಮಗೆ ತಿಳಿಯದ 10 ಸತ್ಯಗಳು